ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏನ ಹೇಳಲಿ ನರಹರಿ | ಹಯವದನ | Ena helali Narahari | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಏನ ಹೇಳಲಿ ನರಹರಿ ನಿನ್ನ ಮಹಿಮೆಯ || ಪ ||

ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ || ಅಪ ||

ಸಚ್ಚಿದಾನಂದನ ಪಾದಾರವಿಂದವ
ಮೆಚ್ಚಿ ಹಸನಾಗಿ ಇರು ಎಂದಡೆ
ಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಲಿ
ಕಿಚ್ಚು ಕಂಗೊಂಡು ಎನ್ನ ಕಾಡುತಿದೆ ರಂಗ || ೧ ||

ವಾಸುದೇವನ ಗುಣಗಳ ಸ್ತುತಿಸದೆ ದು -
ರಾಸೆಯೊಳು ಬಿದ್ದು ಕಾಡುತಿದೆ
ಲೇಸಾಗಿ ನಾಯಿಬಾಲಕೆ ನಾರಾಯಣ ತೈಲ
ಏಸುಬಾರಿ ತೀಡಿದರೆ ನೀಟಾಗುವುದೊ || ೨ ||

ಸಾಧು ಸಜ್ಜನರ ಸಂಗವ ಮಾಡಲೊಲ್ಲದೆ
ಬಾಧಿಸುತಿದೆ ದುಷ್ಟ ಸಂಗದಿಂದ
ಮಾಧವ ಭಕ್ತವತ್ಸಲ ಹಯವದನನೆ
ನೀ ದಯಮಾಡಿ ನಿನ್ನಂತೆ ಮಾಡೆನ್ನ ಮನ || ೩ ||

Ena hELali narahari ninna mahimeya || pa ||

ninna dhyaana maaDEneMdare nillagoDadu mana || apa ||

saccidaanaMdana paadaaraviMdava
mecci hasanaagi iru eMdaDe
huccedda kapiyaMte viShayaveMbaDavili
kiccu kaMgoMDu enna kaaDutide raMga || 1 ||

vaasudEvana guNagaLa stutisade du -
raaseyoLu biddu kaaDutide
lEsaagi naayibaalake naaraayaNa taila
Esubaari tIDidare nITaaguvudo || 2 ||

saadhu sajjanara saMgava maaDalollade
baadhisutide duShTa saMgadiMda
maadhava bhaktavatsala hayavadanane
nI dayamaaDi ninnaMte maaDenna mana || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru