Posts

Showing posts from November, 2020

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗಾಡಿಕಾರ ಶ್ರೀಕೃಷ್ಣ | ಹಯವದನ | Gadikara Sri Krishna | Hayavadana

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಗಾಡಿಕಾರ ಶ್ರೀಕೃಷ್ಣ ರನ್ನ ಬಿಡದಿರೋ ಎನ್ನ || ಪ || ಬಡವರ ರಕ್ಷಿಪನ್ನ ಅಡಿಗೆರಗುವೆ ನಿನ್ನ || ಅಪ || ಕಡಲ ಮಗಳ ಗಂಡ ಒಡಲೊಳು ತೋರ್ದಜಾಂಡ ಪಿಡಿದ ದಂಡ ದೋರ್ದಂಡ ಬೇಡಿದಿಷ್ಟದಾನ ಶೌಂಡ || ೧ || ಶರಧಿ ಮಧ್ಯದಿ ಪುರವರ ನಿರ್ಮಿಸಿದ ಧೀರ ಈರೇಳು ಭುವನೋದ್ಧಾರ ನೀರದ ಶ್ಯಾಮಲಾಕಾರ || ೨ || ಮಂದಸ್ಮಿತ ಮುಖದಿಂದ ಬಂದು ಉಡುಪಿಲಿ ನಿಂದ ನಂದನ ಕಂದ ಮುಕುಂದ ವೃಂದಾರಕೇಂದ್ರ ಗೋವಿಂದ || ೩ || ಭಾವಗೊಲಿದ ಅಜೋದ್ಭವ ಭವ ಸಂಜಾತರ ಕಾವ ಭವಾಬ್ಧಿ ತಾರಕದೇವ ಭಾವಿಸುವರ ಸಂಜೀವ || ೪ || ಮಧ್ವಮುನಿಪನೊಡೆಯ ಶುದ್ಧಯತಿಗಣಪ್ರಿಯ ಶುದ್ಧವಾದ ಆಗಮಜ್ಞೇಯ ಮುದ್ದು ಹಯವದನರಾಯ || ೫ || gaaDikaara shrIkRuShNa ranna biDadirO enna || pa || baDavara rakShipanna aDigeraguve ninna || apa || kaDala magaLa gaMDa oDaloLu tOrdajaaMDa piDida daMDa dOrdaMDa bEDidiShTadaana shouMDa || 1 || sharadhi madhyadi puravara nirmisida dhIra IrELu bhuvanOddhaara nIrada shyaamalaakaara || 2 || maMdasmita muKadiMda baMdu uDupili niMda naMdana kaMda mukuMda vRuMdaarakEMdra gOviMda || 3 || bhaavagolida ajOdbhava bhava saMjaatara kaava bhavaabdhi taarakadEva bhaavisuvara saMjIva...

ಸೋಮ ಶಿವ | ಜಗನ್ನಾಥ ವಿಠಲ | Soma Shiva | Jagannatha Vittala

Image
  ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ಸೋಮ ಶಿವ | ಶರ್ವ ಭವ ಶ್ರೀಕಂಠ ನಿನ್ನ ಪದ |  ತಾಮರಸ ಯುಗ್ಮಗಳಿಗಾ ನಮಿಸುವೆ ||ಪ||  ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳು |  ವಿತ್ತ ಪತಿ ಸಖ ವಿನಾಯಕ ಜನಕ ||  ಭೃತ್ಯುವರ್ಗಕೆ ಪಾಪ ಮೃತ್ಯು ಪರಿಹರಿಸಿ | ಸಂಪತ್ತು ಪಾಲಿಪುದು ನಿವೃತ್ತಿ ಸಂಗಮವಾಸ ||೧||  ಭೋಪತಿ ಧ್ವಜ ಘೋರ ಪಾಪ ಸಂಹರಣ |  ಹರಿ ಪೋಪ ಲೋಪಮ ಕಂಠ ಹರ ಭೂಷಣ |  ಶ್ರೀಪತಿ ಶ್ರೀನಾಭಿ ಭೂಪ ಸಂಭೂತನಯ |    ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ ||೨||  ಭಸಿತ ಭೂಷಿತ ಹರನೇ ತ್ರಿಶೂಲ ಗೈಯನೇ ಶಂಭೋ |  ಪಿಸಲಯೋಪಮ ನವಿರ ಶಶಿಭೂಷಣ |  ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ ಬಿಸಜ  ಧ್ಯಾನವನೀಯು ಹಸನಾಗಿ ಕಾಯೋ ||೩||  sOma Siva | Sarva Bava SrIkaMTha ninna pada |  tAmarasa yugmagaLigA namisuve ||pa||    mRutyuMjaya mRugAMka kRuttivAsa kRupALu |  vitta pati saKa vinAyaka janaka ||  BRutyuvargake pApa mRutyu pariharisi |  saMpattu pAlipudu nivRutti saMgamavAsa ||1||    BOpati dhvaja GOra pApa saMharaNa |  hari pOpa lOpama kaMT...

ಬಾರಯ್ಯ ಬಾ ಬಾ | ಗೋಪಾಲ ದಾಸರು | Barayya Baa Baa | Gopala Vittala

Image
  ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala dasaru (Gopala vittala) ಬಾರಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ಮಾರ ಜನಕ ಮುಕುತರೊಡೆಯ ದೇವಯ್ಯ ಜೀಯ || ಪ || ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರಪ್ರಭಾವನೆ ವಾರಿಜಝಾಂಡದ ಕಾರಣ ದೊರೆಯೆ || ಅಪ || ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ ನಂದ ನಂದನ ಅರಿಮದಭಂಗ ಕಾರುಣ್ಯಪಾಂಗ ಸಿಂಧುಶಯನ ಸುಂದರಾಂಗ ಹೇ ನಾರಸಿಂಗ ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ ಸನಕ ಸನಂದನಾದಿ ಮುನಿ ವೃಂದ ಬಂದು ನಿಂದು ಧೀಂ ಧೀಂ ಧೀಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ || ೧ || ಜಗತ್‌ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ ಅಗಣಿತ ಮುನಿಗಣ ನಗ ಖಗ ಮೃಗ ಶಶಿ ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ ಪೊಗಳುತಲಿ ಬೇಗ ಜಿಗಿಜಿಗಿದಾಡಲು ಮುಗುಳುನಗೆಯ ಮಹೋರಗಗಿರಿವಾಸ || ೨ || ತಡಮಾಡ ಬೇಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ ದೇವ ಪರಾಕು  ಅಡಿಗಳನಿಡು ಭಕ್ತವತ್ಸಲ ಶ್ರೀ ಲಕುಮಿನಲ್ಲ ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ ಮಡದಿಗೆ ಹೇಳದೆ ದಡದಡನೆ ಬಂದು ಹಿಡಿದ ನಕ್ರನ ಬಾಯ ಕಡಿದು ಬಿಡಿಸಿದನೆ ಸಡಗರದಲಿ ರಮೆಪೊಡವಿಯೊಡನೆ ಬೇಗ || ೩ || bArayya bA bA Bakutara priya SrInivAsa rAya mAra janaka mukutaroDeya dEvayya jIya || ...

ಏನೋ ಈ ವೇಷ ವೇದವ್ಯಾಸ | ಮೋಹನ ವಿಠಲ | Eno I vesha Vedavyasa | Mohana Vithala

Image
  ಸಾಹಿತ್ಯ : ಶ್ರೀ ಮೋಹನ ವಿಠಲ Kruti: Sri Mohana Vithala ಏನೋ ಈ ವೇಷ ವೇದವ್ಯಾಸ ಏನೋ ಈ ವೇಷ || ಪ || ಭಾನುಕೋಟಿ ಪ್ರಕಾಶ ಬದರೀ ನಿವಾಸ || ಅಪ || ಮುತ್ತು ಮಾಣಿಕ್ಯ ನವರತ್ನ ಮುಕುಟವಿರೆ ನೆತ್ತಿಲಿ ಕೆಂಜೆಡೆ ಪೊತ್ತಿಕೊಂಡಿಹುದು || ೧ || ದ್ರೌಪದಿ ಕರೆಯಲು ಅಪಾರ ವಸ್ತ್ರವನಿತ್ತೆ ಕೌಪೀನ ಧರಿಸಿದ ಕೌತುಕ ಏನಯ್ಯ || ೨ || ವರವೈಕುಂಠವ ಬಿಟ್ಟು ಮೋಹನ ವಿಠ್ಠಲ ಬೋರೆಯ ಮರದಡಿ ಕುಳಿತಿರುವುದು || ೩ || EnO I vESha vEdavyaasa EnO I vESha || pa || bhaanukOTi prakaasha badarI nivAsa || apa || muttu maaNikya navaratna mukuTavire nettili keMjeDe pottikoMDihudu || 1 || droupadi kareyalu apaara vastravanitte koupIna dharisida koutuka Enayya || 2 || varavaikuMThava biTTu mOhana viThThala bOreya maradaDi kuLitiruvudu || 3 ||

ನಂಬಿ ನೆಚ್ಚದಿರೋ ನರಲೋಕ | ವಿಜಯ ವಿಠಲ | Nambi Nechchadiro | Vijaya Vittala

Image
  ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ನಂಬಿ ನೆಚ್ಚದಿರೋ ನರಲೋಕ ಸ್ಥಿರವೆಂಬೋ ಅಂಬಲಿ ಪರಮಾನ್ನ ||ಪ|| ಹಂಬಲಿಸುತಿರೋ ಹರಿ ಲೋಕಾನಂದವೆಂಬೋ ಪೀಯೂಷಪಾನ ||ಅಪ|| ದುರುಳ ಜನರ ಸಂಗವೆಂಬೋದೆ ಎಂದಿಗೂ ನೊಣ ಬೆರೆಸಿದ ಊಟ || ಪರಮ ಭಾಗವತರ ಪದಸಂಗ ಎಂಬೋದೆ ಮಸ್ತಕಮಣಿ ಮುಕುಟ || ಮರೆಮೋಸಗೊಳಿಸುವ ಸತಿಸುತರೆಂಬೋರೆ ಕೇವಲ ಯಮಕಾಟ || ಪರತತ್ವನಾದ ಶ್ರೀ ಹರಿಯನ್ನೇ ಭಜಿಸೋದೆ ವೈಕುಂಠಕೆ ಓಟ ||೧|| ಅಲ್ಪ ಆಯುಷ್ಯವೆ ಈ ಶರೀರವು ಗಾಳಿಗಿಕ್ಕಿದ ದೀಪ || ಅಲ್ಪ ಸಂತೋಷನಾಗು ಅದು ನಿನಗೆ ನೋಡೋ ಹಾಲು ಸಕ್ಕರೆ ತುಪ್ಪ || ಬಲುಪಂಥ ಮಾಡದಿರು ಜನುಮ ಜನುಮಗಳಲಿ ಬಿಡದೀ ಸಂತಾಪ || ಸ್ವಲ್ಪ ಕಾಲಾದರೂ ಮಧ್ವ ಮತವೇ ಪೊಂದು ಭವವೇ ನಿರ್ಲೇಪ ||೨|| ಭಾವ ವಿರಕುತೀಯ ಧರಿಸದಿದ್ದರೆ ನೋಡು ಆಗುವುದು ಖೇದ || ಸಾವಿರಕ್ಕೊಂದೇ ಮಾತು ಹರಿದಾಸನೆನಿಸೋದೆ ಪರಿಪರಿಯಲಿ ಸ್ವಾದ || ದೇವಕೀಸುತ ನಮ್ಮ ವಿಜಯ ವಿಠಲನಂಘ್ರಿ ತೀರ್ಥಪ್ರಸಾದ || ಸೇವಿಸದ ನರ ನಿತ್ಯ ನರಕವಾಸಿ ಎನ್ನುತಲಿದೆ ವೇದ ||೩|| naMbi nechchadirO naralOka sthiraveMbO aMbali paramAnna ||pa|| haMbalisutirO hari lOkAnaMdaveMbO pIyooShapaana ||apa|| duruLa janara saMgaveMbOde eMdigU noNa beresida UTa || parama BAgavatara padasaMga eMbOde mastakamaNi mukuTa || maremOsagoLisuva satisutareMbOre kEvala yamakATa || paratatva...

ಕಲ್ಯಾಣಂ ತುಳಸಿ | ಪುರಂದರ ವಿಠಲ | Tulasi Pooja | Kalyanam Tulasi

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಕಲ್ಯಾಣಂ ತುಳಸಿ ಕಲ್ಯಾಣಂ || ಪ ||  ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ  ಬಲ್ಲಿದ ಶ್ರೀ ವಾಸುದೇವನಿಗೆ ||ಅಪ||  ಅಂಗಳದೊಳಗೆಲ್ಲಾ ತುಳಸಿಯ ವನ ಮಾಡಿ  ಶೃಂಗಾರವ ಮಾಡಿ ಶೀಘ್ರದಿಂದ ||  ಕಂಗಳ ಪಾಪವ ಪರಿಹರಿಸುವ ಮುದ್ದು ರಂಗ  ಬಂದಲ್ಲಿ ತಾ ನೆಲೆಸಿದನು ||೧||  ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು  ತಂದ ಶ್ರೀ ಗಂಧಾಕ್ಷತೆಗಳಿಂದ ||  ಸಿಂಧು ಶಯನನ ವೃಂದಾವನದಿ ಪೂಜಿಸೆ  ಕುಂದದ ಭಾಗ್ಯವ ಕೊಡುತಿಹಳು ||೨||  ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿಟ್ಟು  ಲಕ್ಷ ಬತ್ತಿಯ ದೀಪವ ಹಚ್ಚಿ ||  ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ  ಸಾಕ್ಷಾತ್ ಮೋಕ್ಷವ ಕೊಡುತಿಹಳು ||೩||  ಉತ್ಥಾನ ದ್ವಾದಶಿ ದಿವಸದಲಿ ಕೃಷ್ಣ  ಉತ್ತಮ ತುಳಸಿಗೆ ವಿವಾಹವ ||  ಚಿತ್ತ ನಿರ್ಮಲರಾಗಿ ಮಾಡಿದವರಿಗೆ  ಉತ್ತಮ ಗತಿ ಈವ ಪುರಂದರ ವಿಠಲ ||೪|| kalyANaM tuLasi kalyANaM || pa ||  kalyANavE namma kRuShNa SrI tuLasige  ballida SrI vAsudEvanige ||apa||    aMgaLadoLagellA tuLasiya vana mADi  SRuMgArava mADi SIGradiMda ||  kaMgaLa pApava pariharisuva muddu raMga...

ದಾಸ ದಾಸ ದಾಸರ ಸಂಗ | ವಿಜಯವಿಠಲ | Dasa Dasa Dasara Sanga | Vijaya Vittala

Image
  ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ದಾಸ ದಾಸ ದಾಸರ ಸಂಗವ ಕೊಡು ದೋಷ ರಾಶಿಯಳಿದು ||ಪ|| ಶ್ರೀಶ ಸರ್ವೇಶ ಸುರೇಶ ಭಾಸುರ ಗುಣ ಗಣ ಭವ್ಯ ಶರೀರ ||ಅಪ|| ಚಿತ್ತ ನಿನ್ನ ಪಾದ ಸೇವೆಯೊಳಿರಲಿ ಚಿಂತೆ ಇತರ ಬಿಡಲಿ | ಅಂತರಂಗದಲ್ಲಾನಂದಿಸಲಿ ಅಹಂ ಕೃತಿಯನು ಬಿಡಲಿ || ಸಂತತ ನಿನ್ನ ಪದ ಪಂಕಜ ಭಕ್ತರ | ಪಂಥವ ಪಾಲಿಸೋ ಪರಮ ಪುರುಷ ಹರಿ ||೧|| ಅರಿಷಡ್ವರ್ಗಗಳಟವಿಯ ಖಂಡಿಸು ಆನಂದದಲ್ಲಿರಿಸು | ದುರುಳರ ಸಂಗವ ದೂರ ಮಾಡಿಸು | ದುರ್ಮತಿಯನು ಬಿಡಿಸೋ ಸರಸ ಸಂಭ್ರಮ ಸನ್ನುತ ಭಕುತರೊಳು | ನಿರುತವು ನಿಲ್ಲಿಸೋ ನೀರಜಾಕ್ಷ ಹರಿ ||೨|| ತ್ರಿಜಗನ್ಮೋಹನಾಕಾರ ತ್ರಿ ಗುಣಾತೀತ ತೀರ್ಥಪಾದ || ಭಕುತರ ಪಾವನ ಭವನುತ ಚರಣ ಋಜುಗಣನುತಾಭರಣ || ವಿಜಯ ವಿಠಲಾಧೀಶ ವಿಶ್ವೇಶ್ವರ ಕುಜನ ವಿಧಾರಣ ಕೋವಿದನುತ ಹರಿ ||೩|| dAsa dAsa dAsara saMgava koDu dOSha rASiyaLidu ||pa|| SrISa sarvESa surESa BAsura guNa gaNa Bavya SarIra ||apa|| citta ninna pAda sEveyoLirali ciMte itara biDali | aMtaraMgadallAnaMdisali ahaM kRutiyanu biDali || saMtata ninna pada paMkaja Baktara | paMthava pAlisO parama puruSha hari ||1|| ariShaDvargagaLaTaviya KaMDisu AnaMdadallirisu | duruLara saMgava dUra mADisu | durmatiyanu biDisO sarasa saMBrama sannuta Bakutaro...

ಏನು ಕಾರಣದಿಂದ ಮಲಗಿರುವೆಯೋ | ವಿಜಯ ವಿಠಲ | Enu Kaaranadinda | Vijaya Vithala

Image
  ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಏನು ಕಾರಣದಿಂದ ಮಲಗಿರುವೆಯೋ ||ಪ|| ಶ್ರೀನಾಥ ರಘುಕುಲೋದ್ಭವ ದರ್ಭಶಯನ ||ಅಪ|| ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೋ ಸೇತು ಕಟ್ಟುವುದು ಅಸಾಧ್ಯವೆಂದು ಮಲಗಿದೆಯೋ ಕೋತಿಗಳ ಕೈಲೆ ರಣಾಗದೆಂದು ಮಲಗಿದೆಯೋ ಜ್ಯೋತಿರ್ಮಯ ರೂಪ ಹೇ ದರ್ಭಶಯನ ||೧|| ವನವಾಸ ತಿರುಗಲಾರೆ ಎಂದು ನೀ ಮಲಗಿದೆಯೋ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೋ ದನುಜ ಬಲ್ಲಿದನೆಂಬೋ ವ್ಯಾಕುಲದಿ ಮಲಗಿದೆಯೋ ಹನುಮವಂದಿತ ಪಾದ ಶ್ರೀ ದರ್ಭಶಯನ ||೨|| ಅನಲಾಕ್ಷ ಹರನಿಗೆ ಕರುಣಿಸಿ ಮಲಗಿದೆಯೋ ವನಜ ಸಂಭವನಿಗೆ ಒಲಿದು ನೀ ಮಲಗಿದೆಯೋ ಮುನಿಗಳ ಸ್ತೋತ್ರಕ್ಕೆ ಹಿಗ್ಗಿ ನೀ ಮಲಗಿದೆಯೋ ಎನಗೊಲಿದ ವಿಜಯ ವಿಠಲ ದರ್ಭಶಯನ ||೩|| Enu kAraNadiMda malagiruveyO ||pa|| SrInAtha raGukulOdBava darBaSayana ||apa|| sIte pOdaLu eMdu ciMteyali malagideyO sEtu kaTTuvudu asAdhyaveMdu malagideyO kOtigaLa kaile raNAgadeMdu malagideyO jyOtirmaya rUpa hE darBaSayana ||1|| vanavAsa tirugalAre eMdu nI malagideyO vanadhISa mArgavanu koDaneMdu malagideyO danuja ballidaneMbO vyAkuladi malagideyO hanumavaMdita pAda SrI darBaSayana ||2|| analAkSha haranige karuNisi malagideyO vanaja saMBavanige olidu nI malagideyO muniga...

ವಿಜಯರಾಯರ ಪಾದ | ಮೋಹನ ವಿಠಲ | Vijaya Rayara Paada | Mohana Vithala

Image
  ಸಾಹಿತ್ಯ : ಶ್ರೀ ಮೋಹನ ದಾಸರು Kruti: Sri Mohana Dasaru ವಿಜಯ ರಾಯರ ಪಾದ ನಿಜವಾಗಿ ನಂಬಲು  ಅಜನಪಿತ ತಾನೆ ಒಲಿವಾ ||ಪ||  ದ್ವಿಜಕೇತನನ ಗುಣದ ವ್ರಜವ ಕೊಂಡಾಡುವ  ಸುಜನ ಮಂದಾರನೀತ ಪ್ರಖ್ಯಾತ ||ಅ.ಪ.|| ವಿ ಎಂದು ನುಡಿಯಲು, ವಿಷ್ಣು ದಾಸನಾಗುವನು,  ಜ ಎಂದು ನುಡಿಯಲು ಜನನ ಹಾನಿ  ಯ ಎಂದು ಕೊಂಡಾಡೆ ಯಮಭಟರು ಓಡುವರು  ರಾಯ ಎಂದೆನಲು ಹರಿಕಾವ ವರವೀವ ||೧||  ಇವರ ಸ್ಮರಣೆಯು ಸ್ನಾನ,  ಇವರ ಸ್ಮರಣೆಯು ಧ್ಯಾನ,  ಇವರ ಸ್ಮರಣೆಯು ಅಮೃತಪಾನ  ಇವರ ಸ್ಮರಣೆ ಮಾಡೆ ಯುವತಿಗಕ್ಷಯವಿತ್ತ,  ತ್ರಿವಿಕ್ರಮನೆ ಮುಂದೆ ನಿಲುವ ನಲಿವ ||೨||  ವಾರಣಾಸಿ ಯಾತ್ರೆ ಮೂರು ಬಾರಿ ಮಾಡಿ,  ಮಾರಪಿತನೊಲುಮೆಯನು ಪಡೆದು ||  ಮೂರಾವತಾರದ ಮಧ್ವಮುನಿರಾಯರ,  ಚಾರು ಚರಣವನು ಭಜಿಪ ಈ ಮುನಿಪ ||೩||  ಪುರಂದರ ದಾಸರ ಪರಮಾನುಗ್ರಹ ಪಾತ್ರ  ಗುರುವಿಜಯ ರಾಯನೀತಾ ||  ಸಿರಿ ವಿಜಯ ವಿಠಲನ ಶ್ರೀನಿವಾಸಾಚಾರ್ಯರು  ಹರಿಯಾಜ್ಞೆಯಿಂದ ಕೊಟ್ಟರು ದಿಟರು ||೪||  ದಾನಧರ್ಮದಿ ಮಹಾ ಔದಾರ್ಯ ಗುಣಶೀಲ ಶ್ರೀನಿವಾಸನ ಪ್ರೇಮ ಕುವರ ||  ಮಾನವಿ ಸೀಮೆಯ ಚೀಕಲಪರವಿಯ ವಾಸ,  ಮೋಹನ ವಿಠಲನ ನಿಜದಾಸ ಉಲ್ಲಾಸ ||೫||  vijaya rAyara pAda nijavAgi naMbalu  ajanapita tAne olivA ||pa||    dvijakEtanana guNa...

ವಿಜಯರಾಯರ ಕವಚ | ಸ್ಮರಿಸಿ ಬದುಕಿರೋ | ವ್ಯಾಸವಿಠಲ | Vijayarayara Kavacha | Smarisi Badukiro | Vyasa Vithala

Image
  ಸಾಹಿತ್ಯ : ಶ್ರೀ ವ್ಯಾಸವಿಠಲ  ದಾಸರು Kruti: Sri Vyasavittala Dasaru ವಿಜಯ ರಾಯರ ಕವಚ  ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ ||ಪ|| ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ||ಪ|| ದಾಸರಾಯನಾ ದಯವ ಸೂಸಿ ಪಡೆದನಾ,  ದೋಷರಹಿತನಾ, ಸಂತೋಷ ಭರಿತನಾ ||೧|| ಜ್ಞಾನವಂತನಾ ಬಲು ನಿಧಾನಿ ಶಾಂತನಾ,  ಮಾನವಂತನಾ ಮಹವದಾನ್ಯವಂತನಾ ||೨|| ಹರಿಯ ಭಜಿಸುವಾ ನರಹರಿಯ ಯಜಿಸುವಾ  ದುರಿತ ತ್ಯಜಿಸುವಾ ಜನಕೆ ಹರುಷ ಸುರಿಸುವಾ ||೩|| ಮೋದ ಭರಿತನಾ ಪಂಚಬೇಧವರಿತನಾ  ಸಾಧು ಚರಿತನಾ ಮನ ವಿಷಾದ ಮರೆತನಾ ||೪|| ಇವರ ನಂಬಿದಾ ಜನಕೆ ಭಯವಿದೆಂಬುದೂ,  ಹವಣವಾಗದೋ ನಮ್ಮವರ ಮತವಿದೂ ||೫|| ಪಾಪ ಕೋಟಿಯ ರಾಶಿ ಲೇಪವಾಗದೋ,  ತಾಪ ಕಳೆವನೂ ಬಲು ದಯಾಪಯೋನಿಧಿ ||೬|| ಕವನ ರೂಪದಿ ಹರಿಯ ಸ್ತವನ ಮಾಡಿದ  ಭುವನ ಬೇಡಿದ, ಮಾಧವನ ನೋಡಿದ ||೭|| ರಂಗನೆಂದನಾ ಭವವು ಹಿಂಗಿತೆಂದನಾ,  ಮಂಗಳಾಂಗನಾ, ಅಂತರಂಗವರಿತನಾ ||೮|| ಕಾಶಿ ನಗರದಲ್ಲಿದ್ದ ವ್ಯಾಸದೇವನಾ  ದಯವ ಸೂಸಿ ಪಡೆದನಾ ಉಲ್ಲಾಸತನದಲಿ ||೯|| ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ  ಶಾಂತಗುರುಗಳಾ ಪಾದವಾಂತು ನಂಬಿರೋ ||೧೦|| ಖೇದವಾಗದೋ ನಿಮಗೆ ಮೋದವಾಹುದೋ  ಆದಿದೇವನಾ ಸುಪ್ರಸಾದ ವಾಹುದೋ ||೧೧|| ತಾಪ ತಡೆವನೋ ಬಂದ ಪಾಪ ಕಡಿವನೂ  ಶ್ರೀಪತಿಯ ಪದ ಸಮೀಪವಿಡುವನು ||೧೨|| ಗಂಗೆ ಮಿಂದರೇ ಮಲವು ಹಿಂಗಿತಲ್ಲವೆ,  ರಂಗನೊ...

ತಂದೆ ವಿಜಯರಾಯ | ಮೋಹನ ವಿಠಲ | Tande Vijayaraya | Mohana Vithala

Image
  ಸಾಹಿತ್ಯ : ಶ್ರೀ ಮೋಹನ ದಾಸರು Kruti: Sri Mohana Dasaru ತಂದೆ ವಿಜಯರಾಯ ನೀ ವ್ಯಾಳ್ಯಗೆ  ಬಂದ್ಯೋ ವಿಜಯ ರಾಯ ||ಪ||  ಹಿಂದೇಸು ಜನುಮವೋ ಮುಂದೇಸು ಜನುಮವೋ,  ಒಂದು ತಿಳಿಯೆ ನಾ ಎಂದೆಂದಿಗೂ ಎನ್ನ ||ಅ.ಪ.||  ಸೂರ್ಯನ ಸುತನಂತೆ,  ಅಲ್ಲಿ ಮಹಾ ಶೌರ್ಯ ದೂತರಂತೆ ||  ಕಾರ್ಯಾಕಾರ್ಯವ ತಿಳಿಯದೆ ತಮ್ಮ  ಪರಿಚಾರ್ಯನೆಳೆಯುತಿರೆ ಭಾರ್ಯಳು ಮೊರೆಯಿಡೆ ||೧|| ಅದು ಧೈರ್ಯವ ನೋಡಿ,  ಸುದತಿ ತನ್ನ ಹೃದಯ ಬದ್ದ ಮಾಡಿ  ಮಧುಸೂದನನೇ ಮೋದ ತೀರ್ಥರೆಂದು  ಒದರಿದಳ್ ಒದರಿದಳ್ ವಿಜಯ ರಾಯರೆಂದು ||೨||  ಕರಗಳನೇ ಕಟ್ಟಿ ಎಳೆಯುತಿರೆ  ದೊರೆಗಳನೇ ಮುಟ್ಟಿ,  ಸಿರಿ ಮೋಹನ ವಿಠಲನ ಪಾದವ ತೋರಿ  ಧರೆಗೆ ತಂದುಬಿಟ್ಯೋ ಕರುಣಾಳುವೆ ಎನ್ನ ||೩|| taMde vijayarAya nI vyALyage  baMdyO vijaya rAya ||pa||  hiMdEsu janumavO muMdEsu janumavO,  oMdu tiLiye nA eMdeMdigU enna ||a.pa.||  sUryana sutanaMte,  alli mahA shaurya dootaraMte ||  kAryAkAryava tiLiyade tamma  paricAryaneLeyutire bhaaryaLu moreyiDe ||1|| adu dhairyava nODi,  sudati tanna hRudaya badda mADi  madhusUdananE mOda tIrthareMdu  odaridaL odaridaL vijaya ...

ಭಳಿರೆ ಭಳಿರೆ ನಾರಸಿಂಹ |ವಿಜಯದಾಸರು | Bhalire Bhalire Narasimha | Vijaya Vithala

Image
  ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಭಳಿರೆ ಭಳಿರೆ ನಾರಸಿಂಹ ಮಹಾಸಿಂಹ ||ಪ||  ಮಲಾಮಲಾ ಮಲತವರ ವೈರಿ ಉರಿಮಾರಿ ||ಅಪ|| ನಗ ನಗ ನಗಗಳಲ್ಲಾಡೆ ಚತುರ್ದಶ| ಜಗ ಜಗ ಜಗವೆಲ್ಲ ಕಂಪಿಸಿ ಕೆಂಪಾಗೆ |  ಹಗೆ ಹಗೆ ಹಗೆ ಬಲವ ದಶಗೆಡಿಸಿ ರೋಷಗಿಡಿ|  ಉಗು ಉಗು ಉಗುಳುತ್ತ ಬಂದ ನರಸಿಂಹ || ೧ || ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ|  ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ|  ನೆಗೆ ನೆಗೆ ನೆಗೆ ನೆಗೆದು ಕುಪ್ಪಳಿಸಿ ಅಸುರನ್ನ  ಮಗು ಮಗು ಮಗು ಬೇಡಿಕೊಂಡ ನರಸಿಂಹ || ೨ || ಉಗು ಉಗು ಉಗುರಿಂದ ಕ್ರೂರನ್ನ ಹೇರೊಡಲ |  ಬಗೆ ಬಗೆ ಬಗೆ ಬಗೆದು ರಕುತವನ್ನು |  ಉಗಿ ಉಗಿ ಉಗಿ ಉಗಿದು ಚೆಲ್ಲಿ ಕೊರಳಿಗೆ ಕರುಳ|  ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹ || ೩ || ಯುಗ ಯುಗ ಯುಗದೊಳಗೆ ಪ್ರಣತಾರ್ಥಿ ಹರನೆಂದು|  ಝಗ ಝಗ ಝಗ ಝಗಿಪ ಮಕುಟ ತೂಗೆ|  ನಗು ನಗು ನಗು ನಗುತ ಸುರರು ಗಗನದಿ ನೆರೆದು|  ಮಿಗಿ ಮಿಗಿ ಮಿಗಿಲೆನೆ ನಾರಸಿಂಹ || ೪ || ಒಂದೊಂದೊಂದೊಂದು ಮುನಿಗಳಿಗೆ ಒಲಿದು| ಅಂದಂದಂದಂದಿ ಗಾಯತ ಒಲಿದು  ಅಂದಂದವ ಕಾವ ಚೋಳಂಗಿರಿ  ಮಂದಿರನೆ ವಿಜಯ ವಿಠಲ ನಾರಸಿಂಹ || ೫ ||  BaLire BaLire nArasiMha mahAsiMha ||pa||  malAmalA malatavara vairi urimAri ||apa|| naga naga nagagaLallADe caturdaSa| jaga j...

ಲಿಂಗ ರಾಮಲಿಂಗ | ವಿಜಯ ವಿಠಲ | Linga Rama Linga | Vijaya Vittala

Image
  ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಲಿಂಗ ರಾಮಲಿಂಗ ಎನ್ನಂತರಂಗ || ಪ ||  ಮಂಗಳಾಂಗನೆ ಸರ್ವೋತ್ತುಂಗನೆ  ಲಿಂಗ ಅಂತರಂಗ ರಾಮಲಿಂಗ ಎನ್ನಂತರಂಗ ||ಅಪ||    ಮಂದಾಕಿನಿಧರಗೆ ಗಂಗಾಂಬುಮಜ್ಜನವೇ  ಚಂದ್ರಮೌಳಿಗೆ ಗಂಧಕುಸುಮಾರ್ಪಣೆಯೇ ||  ಇಂದುರವಿ ನೇತ್ರನಿಗೆ ಕರ್ಪೂರದಾರತಿಯೇ  ಕಂದರ್ಪಜಿತಗೆ ಮಿಗಿಲಾಪೇಕ್ಷೆಯೇ ||೧|| ಘನ ವಿದ್ಯಾತುರಗೆ ಮಂತ್ರ ಕಲಾಪವೇ,  ಧನಪತಿಯ ಸಖಗೆ ಕೈಕಾಣಿಕೆಯೇ ||  ಮನೆ ರಜತಪರ್ವತಗೆ ಫಣಿಯ ಆಭರಣವೇ,  ಮನೋ ನಿಯಾಮಕಗೆನ್ನ ಬಿನ್ನಹವೇ ||೨||    ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೇ,  ಗೌರಿಯ ರಮಣನಿಗೆ ಈ ಸ್ತೋತ್ರವೇ  ವೀರ ರಾಘವ ವಿಜಯ ವಿಠಲನ ನಿಜ ಹಸ್ತ ವಾರಿಜ ದಳದಿಂದ ಉದ್ಭವಿಸಿದ ||೩|| liMga rAmaliMga ennaMtaraMga || pa ||  maMgaLAMgane sarvOttuMgane  liMga aMtaraMga rAmaliMga ennaMtaraMga ||apa||    maMdAkinidharage gaMgAMbumajjanavE  caMdramauLige gaMdhakusumArpaNeyE ||  iMduravi nEtranige karpUradAratiyE  kaMdarpajitage migilApEkSheyE ||1|| Gana vidyAturage maMtra kalApavE,  dhanapatiya saKage kaikANikeyE ||  mane rajataparvatage PaNiya ABar...

ನಿನ್ನನಗಲಿ ಪೋಗಲಾರೆವೋ | ವಿಜಯ ವಿಠಲ | Ninnanagali Pogalarevo | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ |  ನಿನ್ನ ಸೇರಿ ಸುಖಿಸಬಂದೆವೋ ||ಪ|| ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ |  ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೋ ಕೃಷ್ಣ ||ಅಪ||    ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರ ಸನ್ನುತ |  ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರಮರಾದರೇನು  ನಿನ್ನ ಶರಣರಾದ ಮೇಲೆ ಬಿಡುವುದುಂಟೆ ||೧||  ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು |  ಎಂದಿಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ  ಸಿಂಧುಶಯನ ಎಮ್ಮನ್ಯಾಕೆ ಇಂದು ಹೋಗಿರೆಂಬೆ ನೀನು ||೨||    ಶಮದಮಾದಿ ಗುಣಗಳಿಂದಲಿ ಸಜ್ಜನರು ಕ್ರಮದಿ ನಿನ್ನ ಮೂರ್ತಿ ಮನದಲಿ |  ಮಮತೆಯಿಂದ ಪೂಜಿಸುತ್ತಾಗಮಿಸುವರೋ ನಿನ್ನ ಪುರಕೆ ನಮಗೆ ಮಾತ್ರ  ಪತಿಸುತಾದ್ಯ ರಮಿತ ಸುಖವ ಕೊಡುವರೇನೋ ||೩||    ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ ಪಕ್ಷ ವಹಿಸಿದಂತೆ ನಮ್ಮನು |  ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ ಲಕ್ಷ್ಮೀದೇವಿ  ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ ||೪||    ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ  ತನುವು ಮನವು ನಿನಗೆ ಅರ್ಪಿಸಿ |  ಜನನ ಮರಣದಿಂದ ಜನರು ದಣಿವರೇನೋ ಕಾಂತ  ನಮ್ಮ ಮನಸಿನಂತೆ ...

ಕೇಶವ ನಾಮ | ಗಾಳಿ ಬಂದ ಕೈಯಲ್ಲಿ | ಪುರಂದರ ವಿಠಲ | Keshava Nama | Gaali Banda Kaiyalli | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೋ || ಪ || ನಾಳೆಯನ್ನಬೇಡಿ ಇದೇ ವೇಳೆ ಬನ್ನಿರೋ || ಅಪ || ವಾಸವಾದಿವಿನುತ ವೈಕುಂಠದೊಡೆಯ  ನಮ್ಮ ಹೃದಯವಾಸನೆಂದು ಬಿಡದೇ ಕೇಶವನ್ನ ನೆನೆಯಿರೋ || ೧ || ಹೇಯ ಸಂಸಾರದ ಮರ್ಮ ಘಾಯವದು ಮಾಯುವಂತೆ ಬಾಯಿ ಮುಚ್ಚಿಕೊಳ್ಳದೆ ನಾರಾಯಣನನ್ನ ನೆನೆಯಿರೋ || ೨ || ಬೋಧೆಗಳಲ್ಲಿ ಸದ್ಗುರು ಬೋಧೆಯಿದು ಎಂದೆನ್ನುತ ಗಾದೆಗಳೆಲ್ಲನು ಬಿಟ್ಟು ಮಾಧವನ್ನ ನೆನೆಯಿರೋ || ೩ || ಇಂದಿನ ದಿನವೇ ಸುದಿನ ಇಂದಿನ ಸೊಲ್ಲೇ ಲೇಸೆಂದು ಇಂದಿರಾರಮಣ ಗೋವಿಂದನನ್ನ ನೆನೆಯಿರೋ || ೪ || ಘನ್ನ ದೇವರ್ಕಳಿಗಿನ್ನು ಘನ್ನ ಮಹಿಮನು ಹರಿ ಅನ್ಯವಿಲ್ಲವೆಂದು ಶ್ರೀ ವಿಷ್ಣುವನ್ನು ನೆನೆಯಿರೋ || ೫ || ಸಾಧನೆಯ ಭಕ್ತಿಯೊಳು ಶೋಧನೆಗೈಯುತ್ತ ಕಂಡೆ ವೀಧನವೆನುತ ಮಧುಸೂದನನ್ನ ನೆನೆಯಿರೋ || ೬ || ಶಕ್ರನಿಗೆ ಒಲಿದು ಜಗಚಕ್ರವನ್ನು ಅಳೆದು ಮತ್ತೆ ಶುಕ್ರಶಿಷ್ಯನ ಗೆಲಿದ ತ್ರಿವಿಕ್ರಮನ ನೆನೆಯಿರೋ || ೭ || ಒಮ್ಮೆ ನೆನೆಯಲು ಭಕ್ತಿ ಒಮ್ಮೆ ನೆನೆಯಲು ಮುಕ್ತಿ ಒಮ್ಮನಪೂರ್ವಕದಿಂದ ವಾಮನನ್ನ ನೆನೆಯಿರೋ || ೮ || ಈ ಧರೆರಮಣನೇ ನಮ್ಮ ಆಧಾರ ದೊರೆಯು ಬೇರೆ ಆಧಾರವ ಕಾಣೆನೆಂದು ಶ್ರೀಧರನ್ನ ನೆನೆಯಿರೋ || ೯ || ಕಾಸಿಗೆ ಕೈ ಚಾಚುವಂಥ ಆಶಾಪಾಶವನ್ನು ತೊರೆದು ಕಾಶಿವಾಸ ವಿನುತ ಹೃಷೀಕೇಶನನ್ನ ನೆನೆಯಿರೋ || ೧೦ || ಈ ಭವ ತಿಮಿರಕೆ ಕೋಟಿ ವಿಭಾವಸು ಸಂಕಾಶ ...

ದೇವತಾ ತಾರತಮ್ಯದ ಹಾಡು | ಶರಣು ಶರಣೂ | ವಾದಿರಾಜರು | Devata Taratamyada Haadu | Sharanu Sharanu| Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ದೇವತಾ ತಾರತಮ್ಯದ ಹಾಡು   ಶರಣು ಶರಣೂ || ಪ || ಮಹದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನು ಸಾಧುಮಾತೆಯ ಶಾಪವನ್ನು ಕೈಗೊಂಡು ಆದಿಪೂಜೆಗೆ ಅಭಿಮಾನಿದೇವತೆಯಾದಿ ಮಾಧವ ನಮ್ಮ ಹಯವದನನ್ನ ಪ್ರಿಯ || ೧ || ಹಿಮಗಿರಿಗೆ ಮಗಳಾಗಿ ಜನಿಸಿ ತಪವನುಗೈದು  ಕಮಲಸಂಭವಸುತನ ಒಲಿಸಬೇಕೆಂದು ರಮಣಿ ರಾಮಮಂತ್ರ ದಿನಸಹಸ್ರವು ಜಪಿಸೆ ಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ || ೨ || ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿ ಕಡು ಘೋರ ತಪಗೈಯೆ ಮನ್ಮಥನು ಬರಲು ಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿ ಕಡಲೊಡೆಯ ನಮ್ಮ ಹಯವದನನ್ನ ಪ್ರಿಯ || ೩ || ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲು ತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲು ಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರ ಅಚ್ಯುತ ನಮ್ಮ ಹಯವದನನ್ನ ಪ್ರಿಯೆ || ೪ || ಈರೇಳು ಲೋಕದ ಜನರ ನಾಲಿಗೆಯಲ್ಲಿ ಬೀಜವನು ಬಿತ್ತಿ ಅನ್ನವ ಕೊಡುವ ತಾಯೆ ವಾರಿಜ ಸಂಭವನ ಹಿರಿಯ ಪಟ್ಟದ ರಾಣಿ ನೀರಜಾಕ್ಷ ನಮ್ಮ ಹಯವದನನ್ನ ಪ್ರಿಯೆ || ೫ || ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನು ತ್ರೇತೆಯಲಿ ರಾಮರ ಸೇವೆಯನು ಮಾಡಿ ಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀ ಶ್ರೀಪತಿ ಹಯವದನ ದೂತ ಪ್ರಖ್ಯಾತ || ೬ || ಜನನಿ ಹುಟ್ಟಿದ ನಾಳದಲ್ಲಿ ಜನಿಸಿದಿ ನೀನು ಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದು ಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲು ವನಜಾಕ್ಷ ನಮ್ಮ ಹಯವ...

ನಿಮ್ಮ ಭಾಗ್ಯ ದೊಡ್ಡದೋ | ಪುರಂದರ ವಿಠಲ| Nimma Bhagya Doddado | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ || ಪ || ಸಮ್ಮತಿಂದ ನಾವೂ ನೀವೂ ಸಾಟಿಮಾಡಿ ನೋಡುವ ಬನ್ನಿ || ಅಪ || ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು ರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯಾ || ೧ || ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು ಅಡವಿ ತುಲಸೀಮಾಲೆಗಿನ್ನು ಆರ ಅಂಜಿಕೆಯುಂಟು || ೨ || ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು ಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯಾ || ೩ || ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು ಹರಿನಾಮಾಮೃತಕ್ಕೆ ಇನ್ನು ಯಾವ ಚಿಂತೆಯಿಲ್ಲವಯ್ಯಾ || ೪ || ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠ್ಠಲನು || ೫ || nimma bhaagya doDDadO namma bhaagya doDDadO || pa || sammatiMda naavU nIvU saaTimaaDi nODuva banni || apa || hEma honnu haNagaLige hEraLa bhayagaLuMTu raamanaama dravyakinnu yaara bhayavillavayyaa || 1 || kaDaga kaMThamaalegaLige kaLLara aMjikeyuMTu aDavi tulasImaaleginnu Ara aMjikeyuMTu || 2 || vyaapaara udyOgakinnu vyaakulada bhayavuMTu gOpaaLada vRuttiginnu goDave yaaradillavay...

ಶ್ರೀ ಲಘು ವಾಯು ಸ್ತುತಿ | ವಾದಿರಾಜರು | Sri Laghu Vaayu Stuti | Vadirajaru | Pranadevara Stotra

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀ ಮದ್ವಾದಿರಾಜ ತೀರ್ಥ ವಿರಚಿತ ಲಘು ವಾಯು ಸ್ತುತಿಃ   ಶ್ರೀಮದ್ವಿಷ್ಣ್ವಾಜ್ಞದಿಂದ ಜನಿಸಿ ಪವನನು ಕೇಸರೀ ಕ್ಷೇತ್ರದಲ್ಲಿ ಕಂಜಾಕ್ಷೀ ಸೀತೆಗಾಗಿ ಲವಣಜಲಧಿಯಂ ಲಂಘಿಸಿ ಲಂಕೆಯಲ್ಲಿ | ಇದ್ದಂಥಾ ರಾವಣನ್ನು ರಘುಪನ ಕರದಿ ನಿಂಗಿಸಿ ಭೂಮಿಯಿಂದ ಕೂಡಿದ್ದಾ ರಾಘವನ್ನು  ಭಜಿಸಿ ಮೆರೆದಿ ಕಿಂಪೂರುಷಾ ಖಂಡದಲ್ಲಿ   ||೧|| ಆ ವಾಯು ಭೀಮನಾಗಿ ಸುರವರ ಬಲದಿಂ ಕೊಬ್ಬಿದಾ ಮಾಗದನ್ನು  ಕಿರ್ಮೀರಂ ಕೀಚಕನ್ನು ಬಕಮುಖಖಲರಂ ದುಷ್ಟದುರ್ಯೋಧನನ್ನು | ಕೊಂದು ರಾಜಾಶ್ವಮೇಧ ಪ್ರಮುಖಮಖಗಳಂ ಮಾಡಿ ಕೃಷ್ಣಾರ್ಪಣೆಂದು  ರಾಜಾಧೀರಾಜನಾಗಿ ಸುಜನರಪತಿಯು ಮೆರದನು ಸಾಧು ಬಂಧು    ||೨|| ಪ್ರಾಗ್ ಜನ್ಮದ್ವೇಷದಿಂದ ಕಲಿಯಲಿ ಮಣಿಮಾನ್ ಸಂಕರಾಚಾರ್ಯನಾಗಿ ಬ್ರಹ್ಮಾಹಂ ನಿರ್ಗುಣೋಹಂ ವಿತಥ ವಚನದಿಂ ಎಲ್ಲರಂ ಕೆಡಿಸಲಾಗಿ | ಅಜ್ಞಾನಾಖ್ಯಾನದಿಂದ  ಸುಜನರ ಮತಿಯು ಮ್ಲಾನವಂ ಪೊಂದಿರಲ್ಲು ಶ್ರೀಶಾಜ್ಞಾ ಶಿರದಿ ವಹಿಸಿ ಕುರುಕುಲ ಪತಿಯೂ  ಆದನೂ ಮಧ್ವಸೂರ್ಯಾ  ||೩|| ಸರ್ವಜ್ಞ ಶ್ರೀಶನೇವೇ ವಿಧಿಭವಮುಖರು  ಶ್ರೀಹರಿ ದಾಸರೇವೇ ಸತ್ಯವೇ ಈಜಗತ್ತು ಜನವು ತ್ರಿವಿಧವು ನಿತ್ಯ ಪಂಚಪ್ರಭೇದ | ಈಶಾಧೀನೇವೇ ಸರ್ವಶ್ರುತಿಗಿದನುಗುಣಾ ಅಂದದೇವೇ ಪ್ರಮಾಣಾ   ಹೀಗೆಂದು ಮಧ್ವಸೂರ್ಯ ತಿಳಿಸಿ ಸುಜನಕೆ ಇತ್ತನು ದಿವ್ಯಮೋದಾ...

ವಿಠ್ಠಲಾ ಪಿಡಿ ಎನ್ನ ಕೈಯ್ಯಾ | ಪ್ರಸನ್ವೇಂಕಟ | Vithala Pidi Enna Kaiyya | Prasanvenkata|

Image
 ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು Kruti:Sri Prasanna Venkata Dasaru ಭಕ್ತವತ್ಸಲ ಪಂಢರೀರಾಯಾ ವಿಠ್ಠಲಾ ಹರಿ ವಿಠ್ಠಲಾ ವಿಠ್ಠಲಾ ಪಿಡಿ ಎನ್ನ ಕೈಯ್ಯಾ || ಪ || ದಿಟ್ಟ ಪುಂಡಲೀಕ ತನ್ನ ಪುಟ್ಟಿಸಿದವರ ಮನ ಮುಟ್ಟಿ ಭಜಿಸಲು ಚಿತ್ತಗೊಟ್ಟು ಬಂದೆಯಾ ವಿಠಲಾ || ೧ || ಕೊಟ್ಟ ಮಾತಿಗೆ ಭಕ್ತರ ಕಟ್ಟಿನೊಳು ಸಿಲುಕಿ ಕಂ ಗೆಟ್ಟೆಯ ಭವಾಬ್ಧಿಯಲ್ಲಿ ನಿನ್ನ ಗುಟ್ಟು ತೋರಯ್ಯ ವಿಠಲಾ || ೨ || ಬಿಟ್ಟು ಬರಲಾಗದೆ ನಿನಗೆ ಥಟ್ಟನೆ ನೀಡಲು ಚೆಲುವ ಇಟ್ಟಿಗೆಯ ಮೇಲೆ ಅಂಘ್ರಿಪದ್ಮ ಇಟ್ಟು ನಿಂತೆಯ ವಿಠಲಾ || ೩ || ನೆಟ್ಟನೆ ವೇದವ ತಂದು ಬೆಟ್ಟ ಎತ್ತಿ ಇಳೆಯ ಪೊತ್ತಿ ಸಿಟ್ಟು ತಾಳಿ ವಟುವೆ ಖಳರ ಸಿಟ್ಟಿಲ್ಯಳೆದೆಯಾ ವಿಠಲಾ || ೪ || ಕಟ್ಟಿ ಕಡಲಲಿ ಜಗಜಟ್ಟಿ ಗೋಪನಾಗಿ ಬುದ್ಧ  ದಿಟ್ಟ ಕಲ್ಕ್ಯಾವತಾರತಾಳಿ ಪ್ರಸನ್ವೇಂಕಟ ಕೃಷ್ಣ ವಿಠಲಾ || ೫ || bhaktavatsala paMDharIraayaa viThThalaa hari viThThalaa viThThalaa piDi enna kaiyyaa || pa || diTTa puMDalIka tanna puTTisidavara mana muTTi bhajisalu chittagoTTu baMdeyaa viThalaa || 1 || koTTa maatige bhaktara kaTTinoLu siluki kaM geTTeya bhavaabdhiyalli ninna guTTu tOrayya viThalaa || 2 || biTTu baralaagade ninage thaTTane nIDalu cheluva iTTigeya mEle aMghripadma iTTu niMteya viThalaa || 3 ||...

ವೃಂದಾವನ ದೇವಿ ನಮೋ | ಪುರಂದರ ವಿಠಲ | Vrundavana Devi Namo | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ವೃಂದಾವನ ದೇವಿ ನಮೋ ನಮೋ |  ಚೆಲ್ವ ಮಂದರಧರನ ಮನ ಪ್ರೀಯಳೇ ||ಪ||  ನಿನ್ನ ಸೇವಿಸಿ ಉದಕವನೆರೆಯಲು |  ಮುನ್ನ ಮಾಡಿದ ಪಾಪ ಹೋಗುವುದು ||  ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ |  ಉನ್ನತ ವೈಕುಂಠ ಪದವೀವಳೇ ||೧||  ಒಂದೊಂದು ದಳದಲ್ಲಿ ಒಂದೊಂದು ಮೂರುತಿ |  ಸಂದಣಿಸುತಿದೆ ಬಿಲು ಗುಪಿತದಲಿ ||  ಬಂದು ಕುಂಕುಮ ಶಂಖ ಚಕ್ರ ಧರಿಸಿದರೆ |  ತಂದೆ ನಾರಾಯಣ ಕರೆದೊಯ್ಯುವ ||೨||  ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ |  ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||  ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ |  ಹರಿ ತನ್ನವರೆಂದು ಕೈ ಪಿಡಿವ ||೩||  ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ |  ಉತ್ತಮ ವೈಕುಂಠ ಪದವೀವಳೆ ||  ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು |  ಕರ್ತೃ ನಾರಾಯಣ ಕರೆದೊಯ್ಯುವ ||೪||  ಆವಾವ ಪರಿಯಲ್ಲಿ ಸೇವೆಯ ಮಾಡಲು |  ಪಾವನ ವೈಕುಂಠ ಪದವೀವಳೇ ||  ದೇವ ಶ್ರೀ ಪುರಂದರ ವಿಠಲರಾಯನ  ದೇವಿ ನಿನ್ನ ಮುಟ್ಟಿ ತ್ರಾಹಿಯೆಂಬೆ ||೫||  vRuMdAvana dEvi namO namO |  celva maMdaradharana mana prIyaLE ||pa||    ninna sEvisi udakavanereyalu |...

ಮಹಾದೇವ ಕಾಯೋ ಮಹಾದೇವ | ಗುರುಪ್ರಾಣೇಶ ವಿಠಲ | Mahadeva Kayo Mahadeva | GuruPranesha Vithala

Image
  ಸಾಹಿತ್ಯ : ಶ್ರೀ ಗುರು ಪ್ರಾಣೇಶ ವಿಠಲ ದಾಸರು  Kruti:Sri Guru Pranesha Vithala Dasaru ಮಹದೇವ ಮಹದೇವ ಮಹದೇವ ಮಹದೇವ ಮಹದೇವ ಮಹದೇವ ಕಾಯೋ ಮಹದೇವ || ಪ || ಎನ್ನನು ನೀ ನೋಯಗೊಡದೆ ತ್ವರಪಾವನ ಮಾಡಿ ಮಹದೇವ ಮಹದೇವ ಮಹದೇವ ಮಹದೇವ || ಅಪ || ಅಸಮ ರಕ್ಕಸಗೆ | ವಶವಾಗಿವನನು ಬಿಸಜಾಕ್ಷಗೆ ಒಪ್ಪಿಸಿ ಕೊಲಿಸಿದನೆ || ೧ || ಮಹದೇವ ಮಹದೇವ ಮಹದೇವ ಮಹದೇವ ನಂಜುಂಡರಗಿಸಿ ಅಂಜನೆಕುವರ ಪ್ರಭಂಜನಸುತನ ನಂಬುವೆನೀಗ || ೨ || ಮಹದೇವ ಮಹದೇವ ಮಹದೇವ ಮಹದೇವ ಸೂಸುವ ಭವಶರ ದೀಸದೆ ಗುರು ಪ್ರಾಣೇಶ ವಿಠಲನ ದಾಸಾಮಣಿಯುವೆ || ೩ || ಮಹದೇವ ಮಹದೇವ ಮಹದೇವ ಮಹದೇವ mahadEva mahadEva mahadEva mahadEva mahadEva mahadEva kaayO mahadEva || pa || ennanu nI nOyagoDade tvarapaavana maaDi mahadEva mahadEva mahadEva mahadEva || apa || asama rakkasage | vashavaagivananu bisajaakShage oppisi kolisidane || 1 || mahadEva mahadEva mahadEva mahadEva naMjuMDaragisi aMjanekuvara prabhaMjanasutana naMbuvenIga || 2 || mahadEva mahadEva mahadEva mahadEva sUsuva bhavashara dIsade guru praaNEsha viThalana daasaamaNiyuve || 3 || mahadEva mahadEva mahadEva mahadEva

ಪಾಲಿಸೇ ಎನ್ನ ಶ್ರೀ ಮಹಾಲಕ್ಷ್ಮೀ | ಪುರಂದರ ವಿಠಲ | Palise enna Sri Mahalakshmi | Purandara Vithala

Image
 ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಪಾಲಿಸೇ ಎನ್ನ ಶ್ರೀ ಮಹಾಲಕ್ಷ್ಮೀ |  ಪಾಲಿಸೇ ಎನ್ನನು ಪಾಲಾಬ್ಧಿ ಸಂಜಾತೆ ||ಪ|| ಲಲಿತಾಂಗಿ ಶುಭೆ ದೇವೀ ಮಂಗಳೇ ದೇವಿ ||ಅಪ|| ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ | ಕಾದುಕೋ ನಿನ್ನಯ ಪಾದ ಸೇವಕರನ್ನು   ಆದಿಶಕ್ತಿ ಸರ್ವ ಆಧಾರೆ ಗುಣಪೂರ್ಣೆ ||೧|| ದಯದಿಂದ ನೋಡೇ ಭಜಿಪ ಭಕ್ತರಾ | ಭಯ ದೂರ ನೀ ಮಾಡೇ ||  ದಯವ ಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ | ಜಯದೇವಿ ಸುವ್ರತೆ ಹಯವದನನ ಪ್ರೀತೆ ||೨|| ನೀನಲ್ಲದನ್ಯ ರಕ್ಷಿಸುವರನು ಕಾಣೆ ನಾ ಮುನ್ನ  ದಾನವಾಂತಕ ಸಿರಿ ಪುರಂದರ ವಿಠಲನ |  ಧ್ಯಾನಿಪ ಭಕುತರ ಮಾನ ನಿನ್ನದು ತಾಯೇ ||೩|| pAlisE enna SrI mahaalakShmI |  pAlisE ennanu pAlAbdhi saMjAte ||pa|| lalitAMgi SuBe dEvI maMgaLE dEvi ||apa|| vEdABimAni sArasAkShi SrIdhara ramaNi | kAdukO ninnaya pAda sEvakarannu   AdiSakti sarva AdhAre guNapUrNe ||1|| dayadiMda nODE Bajipa BaktarA | Baya dUra nI mADE ||  dayava pAlise mAte trailOkya viKyAte | jayadEvi suvrate hayavadanana prIte ||2|| nInalladanya rakShisuvaranu kANe nA munna  dAnavAMtaka siri p...

ಹಕ್ಕಿಯ ಹೆಗಲೇರಿ ಬಂದವಗೆ | ಪ್ರಸನ್ನ ವೆಂಕಟ | Hakkiya Hegaleri Bandavage | Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು  Kruti:Sri Prasanna Venkata Dasaru ಹಕ್ಕಿಯ ಹೆಗಲೇರಿ ಬಂದವಗೆ ನೋ ಡಕ್ಕ ಮನಸೋತೆ ನಾನವಗೆ || ಪ || ಸತ್ರಾಜಿತನ ಮಗಳೆತ್ತಿದ ಉ ನ್ಮತ್ತ ನರಕನೊಳು ತಾ ಕಾದಿದ ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ || ೧ || ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ ಅದಿತಿಯ ಕುಂಡಲ ಕಳಸಿದಾ ಹರ ವಿಧಿಸುರ ನೃಪರನು ಸಲಹಿದ || ೨ || ಉತ್ತಮ ಪ್ರಾಗ್ಜೋತಿಷ ಪುರವ ಭಗ ದತ್ತಗೆ ಕೊಟ್ಟ ವರಾಭಯವ ಕರ್ತ ಕೃಷ್ಣಯ್ಯನ ನಂಬಿದೆ ಶ್ರೀ - ಮೂರ್ತಿಯ ಪಾದವ ಹೊಂದಿದೆ || ೩ || ನರಕ ಚತುರ್ದಶಿ ಪರ್ವದ ದಿನ  ಹರುಷಾದಿ ಪ್ರಕಟಾದನು ದೇವ ಶರಣಾಗತಜನ ವತ್ಸಲ ರಂಗ ಪರಮ ಭಾಗವತರ ಪ್ರತಿಪಾಲಾ || ೪ || ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ - ನಗರದ ಅರಸನ ಕೀರ್ತಿಯ ಜಗದೀಶ ಪ್ರಸನ್ವೆಂಕಟೇಶನ ಭಕ್ತ ರಘಹಾರಿ ರವಿಕೋಟಿ ಪ್ರಕಾಶನ || ೫ || hakkiya hegalEri baMdavage nO Dakka manasOte nAnavage || pa || satrAjitana magaLettida u nmatta narakanoLu tA kAdida matte keDahida avanaMgava satigittanu tA AliMganava || 1 || hadinAru sAvira nAriyara sere mudadiMda biDisi manOhara aditiya kuMDala kaLasidA hara vidhisura nRuparanu salahida || 2 || uttama prAgjOtiSha purava Baga dattage koTTa varABayava karta kRuShNa...

ಎನ್ನ ಬಿನ್ನಪ ಕೇಳೊ ಧನ್ವಂತ್ರಿ | ಗೋಪಾಲ ವಿಠಲ | Enna Binnapa Kelo Dhanvantri | Gopala Vithala

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala dasaru (Gopala vittala) ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊ ಸಣ್ಣವನು ಇವ ಕೇವಲ ಬನ್ನಬಡಿಸುವ ರೋಗವನ್ನು ಮೋಚನ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ || ಪ. || ಆರೋಗ್ಯ ಆಯುಷ್ಯ ಐಶ್ವರ್ಯವೆಂಬ ಈ ಮೂರುವಿಧ ವಸ್ತುಗಳು ನಾರಾಯಣನ ಭಜಕರಾದವರ ಸಾಧನಕೆ ಪೂರಣವಾಗಿಪ್ಪವೊ ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ  ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸೊ ಸ್ವಾಮಿ || ೧ || ವಸುಮತಿಯ ಮೇಲಿನ್ನು ಅಸುರ ಜನರೆ ಬಹಳ ವಶವಲ್ಲ ಕಲಿಯ ಬಾಧೆ  ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿಪ್ಪೆವೊ ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೆ ಸಲಹೋ ಸ್ವಾಮಿ || ೨ || ಅನ್ಯರನು ಭಜಿಸದಲೆ ನಿನ್ನನೆ ಸ್ಮರಿಸುತ್ತ ನಿನ್ನ ಚಿಹ್ನೆಗಳನ್ನೇ ಧರಿಸಿ  ನಿನ್ನ ನಾಮೋಚ್ಛರಿಸಿ ನಿನ್ನವರವನೆನಿಸಿ ನಿನ್ನಿಂದ ಉಪಜೀವಿಸಿ  ಅನ್ನ ಆರೋಗ್ಯವು ಅಲ್ಪವು ಆಗೆ ಅನ್ಯರಿಗೆ ಇನ್ನು ಆಲ್ಪರಿಯಬೇಕೇ ನಿನ್ನ ಸಂಕಲ್ಪ ಭಕುತರನ್ನು ಪೋಷಿಪೆನೆಂದು ಘನ್ನ ಬಿರುದನ್ನ ಉಳುಹೊ ಸ್ವಾಮಿ || ೩ || ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೆ ಔಷಧವು ನೀನೇ ಹೇ ದೇವ ನಿನ್ನ ಕರಕಮಲದಿಂ ಸುಧೆಗರೆದು ಸಾಧುಗಳ ಪಾಲಿಸುವ ನೀನೇ  ಮೋದ ಬಡಿಸುವಿ ನಿನ್ನ ಸಾಧಿಸು...

ನಿನ್ನ ಮಗನ ಘಾಳಿ | ಪುರಂದರ ವಿಠಲ | Ninna Magana Ghaali | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನಿನ್ನ ಮಗನ ಘಾಳಿ ಘನವಮ್ಮ ||ಪ||  ಕರೆದು ರಂಗಗೆ ಬುದ್ಧಿ ಪೇಳೇ ಗೋಪ್ಯಮ್ಮ ||ಅಪ||  ಹಾಲು ಕಾಯುವಲ್ಲಿ ಇವನ ಘಾಳಿ ಘನವಮ್ಮ,  ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ ||  ಕೋಲ ತಂದು ಕೊಲ್ಲ ಪೋದರೆ ಅಮ್ಮ ಲೀಲೆಯಿಂದ ಓಡಿ ಪೋದನಮ್ಮ ||೧||  ಮೊಸರು ಕಡೆವಲ್ಲಿ ಇವನ ಘಾಳಿ ಘನವಮ್ಮ,  ಶಿಶುವಿನ ಕೈಲಿ ಬೆಣ್ಣೆ ಉಳಿಯಗೊಡನಮ್ಮ ||  ಮೊಸರು ಮಾರುವರು, ಮೊರೆ ಇಡುವರಮ್ಮ ಶಶಿಮುಖಿಯರು ಹೀಗೆ ದೂರುವರಮ್ಮ ||೨||  ಊರೊಳು ಬರಲೀಸ ಕೇರಿಯೊಳು ಬರಲೀಸ ಈರೇಳು ಲೋಕಕೆ ಒಡೆಯ ತಾನಂತೆ ||  ಧೀರ ಶ್ರೀ ಪುರಂದರ ವಿಠಲರಾಯನ ಕೇರಿ ಬಸವನ ಮಾಡಿಬಿಟ್ಟೆ ಗೋಪ್ಯಮ್ಮ ||೩||  ninna magana GALi Ganavamma ||pa||  karedu raMgage buddhi pELE gOpyamma ||apa||  hAlu kAyuvalli ivana GALi Ganavamma,  kAlu taMdu kElinoLage addi pOdanamma ||  kOla taMdu kolla pOdare amma lIleyiMda ODi pOdanamma ||1||  mosaru kaDevalli ivana GALi Ganavamma,  SiSuvina kaili beNNe uLiyagoDanamma ||  mosaru mAruvaru, more iDuvaramma SaSimuKiyaru hIge dUruvaramma ||2||  UroLu ba...

ಬಾರೋ ಮುರಾರಿ | ಹಯವದನ | Baaro Murari | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಾರೋ ಮುರಾರಿ ಬಾಲಕ ಶೌರಿ|  ಸಾರ ವಿಚಾರಿ ಸಂತೋಷಕಾರಿ ||ಪ||  ಆಟ ಸಾಕೇಳೋ ಮೈಯಲ್ಲ ಧೂಳೋ|  ಊಟ ಮಾಡೇಳೋ ಕೃಷ್ಣ ಕೃಪಾಳೋ ||೧||  ಅರುಣಾಬ್ಜ ಚರಣ ಮಂಜುಳಾಭರಣ|  ಪರಮವಿತರಣ ಪನ್ನಗ ಶಯನ ||೨|| ಮನೆಗೆದ್ದು ಬಾರೋ ಕೊನೆಗೈಯ ತೋರೋ|  ಚಿನುಮಯ ಬಾರೋ ನಗೆಮೊಗ ತೋರೋ ||೩|| ವೆಂಕಟರಮಣ ಸಂಕಟಹರಣ|  ಕಿಂಕರಮರಗಣ ವಂದಿತ ಚರಣ ||೪|| ಅರವಿಂದ ನಯನ ಶರದೇಂದು ವದನ|  ವರಯದು ಸದನ ಸಿರಿ ಹಯವದನ ||೫|| bArO murAri bAlaka Sauri|  sAra vicAri saMtOShakAri ||pa||    ATa sAkELO maiyalla dhULO|  UTa mADELO kRuShNa kRupALO ||1||    aruNAbja caraNa maMjuLABaraNa|  paramavitaraNa pannaga Sayana ||2||   manegeddu bArO konegaiya tOrO|  cinumaya bArO nagemoga tOrO ||3||   veMkaTaramaNa saMkaTaharaNa|  kiMkaramaragaNa vaMdita caraNa ||4||   araviMda nayana SaradEMdu vadana|  varayadu sadana siri hayavadana ||5||

ಕೇಶವ ನಾಮ | ಈಶ ನಿನ್ನ ಚರಣ | ಕನಕದಾಸರು | Keshava Nama | Esha Ninna Charana | Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು (ಕಾಗಿನೆಲೆ ಆದಿಕೇಶವ) Kruti: Sri Kanakadasaru (Kaginele Adikeshava)  ಕೇಶವ ನಾಮ  ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು  ದೋಷರಾಶಿ ನಾಶಮಾಡು ಶ್ರೀಶ ಕೇಶವ ||ಪ||  ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ  ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||೧||  ಶೋಧಿಸೆನ್ನ ಭವದ ಕಲುಷ| ಭೋಧಿಸಯ್ಯ ಜ್ಞಾನವೆನಗೆ  ಬಾಧಿಸುವ ಯಮನಭಾದೆ ಬಿಡಿಸು ಮಾಧವ ||೨||  ಹಿಂದನೇಕ ಯೋನಿಗಳಲಿ ಬೆಂದು ಬಂದು ನೊಂದೆ ನಾನು ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||೩||  ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ|  ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ||೪||  ಮೊದಲು ನಿನ್ನ ಪಾದಪೂಜೆ ಮುದದಿ ಮಾಡುವೆನು  ನಾನು ಹೃದಯದಲ್ಲಿ ಅಡಗಿರಯ್ಯ ಮಧುಸೂದನ ||೫|| ಕವಿದುಕೊಂಡು ಇರುವ ಪಾಪ ಸವೆದು  ಹೋಗುವಂತೆ ಮಾಡಿ ಯಮನ ಬಾಧೆಯನ್ನು ಬಿಡಿಸೋ ತ್ರಿವಿಕ್ರಮ||೬||  ಕಾಮಜನಕ ನಿನ್ನ ನಾಮ ಪ್ರೇಮದಿಂದ  ಪಾಡುವಂತೆ ನೇಮ ಎನಗೆ ಪಾಲಿಸಯ್ಯ ಸ್ವಾಮಿ ವಾಮನ ||೭||  ಮದನನಯ್ಯ ನಿನ್ನ ಮಹಿಮೆ ವದನದಲ್ಲಿ  ಬರುವಂತೆ ಹೃದಯದಲ್ಲಿ ಸದನಮಾಡೋ ಮುದದಿ ಶ್ರೀಧರಾ ||೮||  ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ  ರಸಿಕನೆಂದು ಹುಸಿಗೆಹಾಕದಿರು ಎನ್ನ ಹೃಷಿಕೇಶನೇ ||೯||  ಅಬ್ಧಿಯೊಳಗೆ ಬಿದ್ದು ನಾನು ಒದ್ದು...

ಮಾಮಝ ಬಾಪುರೆ | ಪುರಂದರವಿಠಲ | Mamaja Bapure | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಮಾಮಝ ಬಾಪುರೆ ಭಳಿರೆ ಹನುಮಂತ ||ಪ||  ರಾಮಪದ ಸೇವಿಪ ವೀರ ಹನುಮಂತ ||ಅಪ||  ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ  ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||  ದಿಟ್ಟ ಹರಿದಾಡಿ ಮನಮುಟ್ಟಿ ಪೂಜಿಸಲವನ  ಪಟ್ಟಕನುವಾದ ಸಿರಿವಂತ ಹನುಮಂತ ||೧||  ಅಂಬರಕೆ ಪುಟನೆಗೆದು ಅಂಬುಧಿಯ ನೆರೆದಾಟಿ  ಕುಂಭಿನಿಯ ಮಗಳಿಗೆ ಉಂಗುರವನಿತ್ತೆ ||  ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ  ಗಂಭೀರ ವೀರಾಧಿವೀರ ಹನುಮಂತ ||೨||  ಅತಿ ದುರುಳ ರಕ್ಕಸನು ರಥದ ಮೇಲಿರಲು  ರಘುಪತಿಯ ಪಾದಚಾರಿಯಾಗಿ ನಿಂತಿರಲು  ಪೃಥುವಿ ಗಗನಕೆ ಬೆಳೆದು ರಥವಾಗಿ ಒಡೆಯನಿಗೆ  ಅತಿ ಭಯಂಕರ ಸತ್ವವಂತ ಹನುಮಂತ ||೩||  ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು  ದೃಢಭಕುತಿಯಿಂದ ಮೌನದಲಿ ಕುಳಿತು  ಎಡೆಯ ಕೊಂಡೆದ್ದೋಡಿ ಗಗನದಲಿ  ಸುರರಿಗೆ ಕೊಡುತ ಸವಿದುಂಡ ಗುಣವಂತ ಹನುಮಂತ ||೪||  ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮ  ತೃತೀಯದಲಿ ಗುರುಮಧ್ವ ಮುನಿಯೆನಿಸಿ  ಪ್ರತಿಯಿಲ್ಲದಲೆ ಮೆರೆದೆ ಪುರಂದರ ವಿಠಲನ  ಭಕ್ತ ನಿನಗಾರು ಸರಿ ವಿಜಯ ಹನುಮಂತ ||೫||  mAmaJa bApure BaLire hanumaMta ||pa||  rAmapada sEvipa vIra hanumaMt...

ಬಂಗಾರವಿಡಬಾರೇ | ಪುರಂದರ ವಿಠಲ | Bangaravidabaare | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಬಂಗಾರವಿಡಬಾರೇ ನಿನಗೊಪ್ಪುವ ಬಂಗಾರವಿಡಬಾರೇ || ಪ || ರಂಗನಾಥನ ದಿವ್ಯ ಮಂಗಳನಾಮವೆಂಬ ಬಂಗಾರವಿಡಬಾರೇ || ಅಪ || ಕಸ್ತೂರಿಯ ಬಟ್ಟನಿಡೇ | ನಿನ್ನ ಫಣೆಗೆ | ಕಸ್ತೂರಿಯ ಬಟ್ಟನಿಡೇ || ಹೆತ್ತವರ ಕುಲಕೆ | ಕುಂದು ಬಾರದ ಹಾಗೆ | ಮುತ್ತಿನ ಮೂಗುತಿಯನ್ನಿಡೇ || ಕರ್ತೃಪತಿಯ ಮಾತ ಮೀರಬಾರದು ಎಂಬ ಮುತ್ತಿನ್ವಾಲೆಕೊಪ್ಪನ್ನಿಡೇ | ನಿನ್ನ ಕಿವಿಗೆ ಮುತ್ತಿನ್ವಾಲೆಕೊಪ್ಪನ್ನಿಡೇ || ಹತ್ತು ಮಂದಿಯ ಕೈಯಲ್ಲಿ ಹೌದೌದೆನ್ನಿಸಿಕೊಂಬ ಮಸ್ತಕ ಮಕುಟವಿಡೇ || ೧ || ಅರೆಘಳಿಗೇ ಪತಿಯ | ಅಗಲಬಾರದು ಎಂಬ | ಅಚ್ಚ ಮಂಗಳಸೂತ್ರ ಕಟ್ಟೆ | ನಿನ್ನ ಕೊರಳಿಗೆ ಅಚ್ಚ ಮಂಗಳಸೂತ್ರ ಕಟ್ಟೇ | ಪರಮಪುರುಷನು ನಿನ್ನ ಪಡೆದ ತಂದೆಯೆಂಬ ಪದಕಸರವ ಹಾಕೇ || ಕರೆದೊಬ್ಬರಿಗೆ ಅನ್ನವಿಕ್ಕುವೆನೆಂತೆಂಬ ಹರಡಿ ಕಂಕಣವನಿಡೇ | ನಿನ್ನ ಕೈಗೆ ಹರಡಿ ಕಂಕಣವನಿಡೇ | ನೆರೆಹೊರೆಯವರೆಲ್ಲ ಸರಿಸರಿಯೆಂಬಂಥ ಬಿರುದಿನೊಡ್ಯಾಣವಿಡೇ || ೨ || ಮಾನ ಹೊರಗೆ ಬಿಚ್ಚೇನೆಂಬ ಕಂಭಾವತಿಯ | ನೇಮದ ಮಡಿಯನುಡೇ | ನಿನ್ನ ಮೈಗೆ | ನೇಮದ ಮಡಿಯನುಡೇ || ಹೀನಗುಣವ ಬಿಟ್ಟು ಹಿತದಲ್ಲಿದ್ದೇನೆಂಬ | ಹೆಚ್ಚಿನ ಕುಪ್ಪಸವ ತೊಡೇ || ಜ್ಞಾನನಿಧಿಗಳಾದ ಗುರುಗಳ ಪಾದಕ್ಕೆ ಆನತಳಾಗಿ ಬಾಳೇ | ಗುರುಗಳ ಪಾದಕ್ಕಾನತಳಾಗಿ ಬಾಳೇ || ಮೌನಿಗಳೊಡೆಯ ಶ್ರೀಪುರಂದರ ವಿಠಲನ ಪ್ರೇಮಶರಗೀಲಿ ಕಟ್ಟೆ || ೩ || baMgaaraviDabaarE...

ಇಂದು ನೋಡಿದೆ ನಂದತೀರ್ಥ| ಗುರುಜಗನ್ನಾಥ ವಿಠಲ | Indu Nodide Nandateertha | Guru Jagannatha Vittala

Image
ಸಾಹಿತ್ಯ : ಶ್ರೀ ಗುರು ಜಗನ್ನಾಥ ದಾಸರು (ಗುರು ಜಗನ್ನಾಥ ವಿಠಲ) Kruti:Sri Guru Jagannatha Dasaru (Guru Jagannatha vittala) ಇಂದು ನೋಡಿದೆ ನಂದತೀರ್ಥ ಮುನೀಂದ್ರ ವಂದಿತ ಚರಣನ ||ಪ|| ವಂದಿಸುವ ಭಕ್ತರಿಗೆ ನಿತ್ಯಾನಂದ ಫಲದ ಮುಕುಂದನ ||ಅಪ|| ತಮನ ವೈರಿಯ ಮಂದರಾದ್ರಿಯ ಕಮಠ ರೂಪದಿ ಪೊತ್ತನಾ |  ಕಮಲ ಸಂಭವ ಭವ ಹಿರಣ್ಯಕ ದಮನ ವಾಮನ ಮೂರ್ತಿಯಾ ||೧|| ಭೂಮಿ ಪರ ಸಂಹರಿಸಿ ದಶರಥ ರಾಮನಾಮದಿ ಮೆರೆದನಾ |  ಸೋಮ ಪಾದಿಪ ಸುತನಿಗೊಲಿದು ಸಂಗ್ರಾಮದೊಳು ರಕ್ಷಿಸಿದನಾ ||೨|| ಬುದ್ಧ ರೂಪದಿ ತ್ರಿಪುರ ಸತಿಯರ ಬುದ್ಧಿ ಭೇದನ ಮಾಡ್ದನಾ |  ಯುದ್ಧದಲಿ ಕಲಿಮುಖ್ಯ ದೈತ್ಯರ ಗೆದ್ದ ಗಾನ ವಿಲೋಲನಾ ||೩|| ದೇವಕಿ ವಸುದೇವ ತನಯನ ದೇವಗಣ ಸಂಸೇವ್ಯನಾ |  ಈ ವಸುಂಧರೆಯೊಳಗೆ ಮಧ್ವ ಸರೋವರ ನಿವಾಸನಾ ||೪|| ಪೋತವೇಶನ ವೀತ ಶೋಕನ | ಪೂತನಾದಿ ವಿಘಾತನಾ  ಮಾತರಿಶ್ವಪ್ರಿಯ ಗುರು ಜಗನ್ನಾಥ ವಿಠಲ ರಾಯನಾ ||೫|| iMdu nODide naMdatIrtha munIMdra vaMdita caraNana ||pa|| vaMdisuva Baktarige nityAnaMda Palada mukuMdana ||apa||   tamana vairiya maMdarAdriya kamaTha rUpadi pottanA |  kamala saMBava bhava hiraNyaka damana vAmana mUrtiyA ||1||   BUmi para saMharisi daSaratha rAmanAmadi meredanA |  sOma pAdipa sutanigolidu saMgrAmad...

ನಾರಾಯಣ ಸ್ತುತಿ | ದ್ವಾದಶ ಸ್ತೋತ್ರದ ಕನ್ನಡ ಅನುವಾದ | ಶ್ರೀ ಬನ್ನಂಜೆ ಗೋವಿಂದಾಚಾರ್ಯ | Kannada Dwadasha Stotra

Image
ರಚನೆ : ಶ್ರೀ ಬನ್ನಂಜೆ ಗೋವಿಂದಾಚಾರ್ಯ  Kannada Translation : Sri Bannanje Govindacharya ಪಾಂಚಜನ್ಯದ ಜತೆಗೆ ಕೈಯಲ್ಲಿ ಸುದರ್ಶನಂ ಗಧೆಯ-ಕಮಲವ-ಶಾರ್ಙ್ಗನಂದಕಗಳಂ ಧರಿಸಿ ಸತತವೂ ಜಗವನ್ನು ಪಾಲಿಸುವ ತಂದೆಯನು  ಶ್ರೀವಾಸುದೇವನನ್ನು ಸರ್ವದಾ ನಮಿಪೆಂ || ೧ || ಜಗದೆದೆಯೊಳವಿತಿರುವ ಎಲ್ಲೆಡೆಯು ತುಂಬಿರುವ ಸಚ್ಚಿದಾನಂದಗಳೆ ಮೈವೆತ್ತ ಮೂರುತಿಯ ತನ್ನೊಳಂತರವಿರದ ದೋಷಗಣದೂರನಾದ ಒಬ್ಬನೇ ಒಬ್ಬನನ್ನು ನಾನು ನಮಿಪೆಂ || ೨ || ಬಹುರೂಪಗಳ ಧರಿಸಿ ಎಲ್ಲ ರೂಪಗಳಲ್ಲೂ ಏಕರೂಪತೆಯಿಂದ ಮೆರೆವಂಥ ರೂಪಂ ತಿಳಿಯಾದ ಬಗೆಯಾಳದ ಅರಿವಿಗೆಟುಕುವ ತತ್ತ್ವ ಮೊದಲಿರದ ತುದಿಯಿರದ ನಿತ್ಯನಂ ನಮಿಪೆಂ || ೩ || ಕುಂದದೊಳು ಸುಂದರಂ ಚಂದದಲಿ ಚಂದಿರಂ ಅಮೃತದ ದ್ರವದಂತೆ ತಣ್ಪು ಮೈಬಣ್ಣ ಜ್ಞಾನ-ಪುಸ್ತಕ-ಚಕ್ರ-ಶಂಖ ಜಪಸರಯಿಂದ ಆಯುಧಗಳಂ ಹಿಡಿದ ವಿಭುವನು ನಮಿಪೆಂ || ೪ || ಎಣೆಯಿರದ ಕಾಂತಿಯವನ ಎಲ್ಲರಂತರ್ಯಾಮಿ ಸಾವಿರದ ಮುಪ್ಪಿರದ ಸುಖರೂಪನಾ ಸ್ವಾಮಿ ವಾಯುದೇವನ ತಂದೆ ಎಲ್ಲೆಡೆಯೂ ತುಂಬಿರುವ ಜಗದೊಡೆಯನನು ಸದಾ ನಮಿಸುತಿರುವೆಂ || ೫ || ತಾನು ತಾನೇ ಆಗಿ ತುಂಬಿ ತುಳುಕಾಡುತಿಹ ಸಂತಸದ ಸೆಲೆಯಿಂದ ಮೂಜಗಕೆ ಸುಖಕರಂ ಅಣುವಿಗಿಂತಣುತರಂ ನೀರಲ್ಲಿ ಪವಡಿಸಿದ ನಿತ್ಯಮೂರುತಿಯಾದ ದೇವನಂ ನಮಿಪೆಂ || ೬ || ಸೂರ್ಯಮಂಡಲದಲ್ಲಿ ನಡುವೆ ನೆಲೆನಿಂತವಗೆ ವರವನು ಅಭಯವನು ಕೈಗಳಿಂದೀವಗೆ ಸೂರ್ಯದೇವನ ಬಗೆಗೂ ನಿಲುಕದತಿತೇಜನಿಗೆ ಪಾಪ ಪರಿಹಾರ ನಾರಾಯಣಗೆ ನಮಿಪೆಂ || ೭ || ಎಲ್...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru