ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತಿರುಪತಿ ವೇಂಕಟರಮಣ | ಶ್ರೀ ಪುರಂದರ ದಾಸರ ಕೃತಿ | Tirupati Venkataramana | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ತಿರುಪತಿ ವೇಂಕಟರಮಣ ನಿನಗೇತಕೆ ಬಾರದು ಕರುಣ ||ಪ||
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣಾ ||ಅ ಪ||

ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನ ಗಿರಿಯಲಿ ನಿಂದ
ಕೊಳನೂದುವುದೇ ಚೆಂದ ನಮ್ಮ ಕುಂಡಲರಾಯ ಮುಕುಂದ ||೧||

ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ
ವೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ ||೨||

ಮೂಡಲ ಗಿರಿಯಲಿ ನಿಂತ ಮುದ್ದು ವೇಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತ ಈರೇಳು ಲೋಕಕೆ ಅನಂತ ||೩|| 

ಆಡಿದರೆ ಸ್ಥಿರವಪ್ಪ ಅಬದ್ದಗಳಾಡಲು ಒಪ್ಪ
ಬೇಡಿದ ವರಗಳನಿಪ್ಪ ನಮ್ಮ ಮೂಡಲ ಗಿರಿಯ ತಿಮ್ಮಪ್ಪ ||೪||
 
ಅಪ್ಪವು ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯರ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ ||೫||

ಬಗೆ ಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯಾನ್ನ
ಬಗೆ ಬಗೆ ಸೊಬಗು ಮೋಹನ್ನ ನಮ್ಮ ನಗೆಮುಖದ ಸುಪ್ರಸನ್ನ ||೬||

ಕಾಶೀ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದೇ ಚೆಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೇ ಚೆಂದ ||೭||

ಎಲ್ಲ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದವರಿಗೆ ಉದ್ದಂಡ ಶಿವ ಬಿಲ್ಲ ಮುರಿದ ಪ್ರಚಂಡಾ ||೮||

ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದೆ ಗಂಟು ಕಟ್ಟಿ
ದಾಸನೆಂದರೆ ಬಿಡಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ ||೯||  

ದಾಸರ ಕಂಡರೆ ಪ್ರಾಣ ತಾ ಧರೆಯೊಳಗಧಿಕ ಪ್ರವೀಣ
ದ್ವೇಷಿಯ ಗಂಟಲಗಾಣ ನಮ್ಮ ದೇವಗೆ ನಿತ್ಯ ಕಲ್ಯಾಣ ||೧೦||   

ಮೋಸ ಹೋಗುವವನಲ್ಲಯ್ಯಾ ಒಂದು ಕಾಸಿಗು ಒಡ್ಡುವ ಕೈಯ್ಯ     
ಏಸುಮಹಿಮೆಗಾರನಯ್ಯಾ ನಮ್ಮ ವಾಸುದೇವ ತಿಮ್ಮಯ್ಯಾ ||೧೧||

ಚಿತ್ತಾವಧಾನ ಪರಾಕು, ನಿನ್ನ ಚಿತ್ತದ ದಯವೊಂದೆ ಸಾಕು
ಸತ್ಯವಾಹಿನಿ ನಿನ್ನ ವಾಕು, ನೀನು ಸಕಲ ಜನರಿಗೆ ಬೇಕು ||೧೨||

ಅಲ್ಲಲ್ಲಿ ಪರಿಷೆಯ ಗುಂಪು, ಮತ್ತಲ್ಲಲ್ಲಿ ತೋಪಿನ ತಂಪು  
ಅಲ್ಲಲ್ಲಿ ಸೊಗಸಿನ ಸೊಂಪು, ಮತ್ತಲ್ಲಲ್ಲಿ ಪರಿಮಳದಿಂಪು ||೧೩||

ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ, ಮತ್ತಲ್ಲಿಂದ ಊರಿಗೆ ಓಟ ||೧೪||

ಪಾಪನಾಶಿನಿ ಸ್ನಾನ ಹರಿ ಪಾದೋದಕವೇ ಪಾನ
ಕೋಪ ತಾಪಗಳ ನಿಧನ ನಮ್ಮ ಪುರಂದರ ವಿಠಲನ ಧ್ಯಾನ ||೧೫||


tirupati vEMkaTaramaNa ninagEtake baaradu karuNa ||pa||
naMbide ninnaya caraNa paripaalisabEkO karuNaa ||a pa||

aLagiriyiMdali baMda svaami aMjana giriyali niMda
koLanUduvudE ceMda namma kuMDalaraaya mukuMda ||1||

bETeyaaDuta baMda svaami beTTada mEle niMda
vITugaara gOviMda alli jEnu sakkareyanu tiMda ||2||

mUDala giriyali niMta muddu vEMkaTapati balavaMta
IDilla ninage shrIkaaMta IrELu lOkake anaMta ||3||

ADidare sthiravappa abaddagaLaaDalu oppa
bEDida varagaLanippa namma mUDala giriya timmappa ||4||

appavu atirasa medda svaami asurara kaalali odda
satiyara kUDaaDutalidda svaami sakala durjanaranu gedda ||5||

bage bage bhakShya paramaanna naanaa bageya sakala shaalyaanna
bage bage sobagu mOhanna namma nagemuKada suprasanna ||6||

kaashI raamEshvaradiMda alli kaaNike baruvudE ceMda
daasara kUDe gOviMda alli daari naDevudE ceMda ||7||

ella dEvara gaMDa ava cillare daivada miMDa
ballidavarige uddaMDa shiva billa murida pracaMDaa ||8||

kaasu tappidare paTTi baDDi kaasu biDade gaMTu kaTTi
daasaneMdare biDagaTTi namma kEsakki timmappaseTTi ||9||

daasara kaMDare praaNa taa dhareyoLagadhika pravINa
dvEShiya gaMTalagaaNa namma dEvage nitya kalyaaNa ||10||

mOsa hOguvavanallayyaa oMdu kaasigu oDDuva kaiyya
Esumahimegaaranayyaa namma vAsudEva timmayyaa ||11||

cittaavadhaana paraaku, ninna cittada dayavoMde saaku
satyavaahini ninna vaaku, nInu sakala janarige bEku ||12||

allalli pariSheya guMpu, mattallalli tOpina taMpu
allalli sogasina soMpu, mattallalli parimaLadiMpu ||13||

allalli janagaLa kUTa mattallalli braahmaNarUTa
allalli piDida kOlaaTa, mattalliMda Urige OTa ||14||

paapanaashini snaana hari paadOdakavE paana
kOpa taapagaLa nidhana namma puraMdara viThalana dhyaana ||15||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru