ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕೋರಿ ಕರೆವೆ ಗುರು | ಶ್ರೀ ವಿಠಲೇಶ ದಾಸರ ಕೃತಿ | Kori Kareve Guru | Vithalesha Dasaru


ರಚನೆ : ಶ್ರೀ ವಿಠಲೇಶ ದಾಸರು
Kruti: Sri Vithalesha Dasaru


ಕೋರಿ ಕರೆವೆ ಗುರು ಶ್ರೀ ರಾಘವೇಂದ್ರನೆ 
ಬಾರೋ ಮಹಾಪ್ರಭುವೇ ||ಪ||

ಚಾರು ಚರಣಯುಗ ಸಾರಿ ನಮಿಪೆ ಬೇಗ
ಬಾರೋ ಹೃದಯ ಸುಖಸಾರ ರೂಪವ ತೋರೋ ||ಅಪ||

ಎಲ್ಲಿ ನೋಡಲು ಹರಿ ಅಲ್ಲೇ ಕಾಣುವನೆಂದು 
ಕ್ಷುಲ್ಲ ಕಂಭವನೊಡೆದು ನಿಲ್ಲದೆ ನರಹರಿ ಚೆಲ್ವಿಕೆ ತೋರಿದ, 
ಫುಲ್ಲಲೋಚನ ಶಿಶು, ಪ್ರಹ್ಲಾದನಾಗಿ ಬಾರೋ ||೧||

ದೋಷವ ಕಳೆದು ಸಿಂಹಾಸನವೇರಿದ, 
ದಾಸ ಕುಲವ ಪೊರೆವ ಶ್ರೀಶನರ್ಚಕನಾಗಿ ಪೋಷಿಸಿ ಹರಿಮತ, 
ವ್ಯಾಸತ್ರಯವಗೈದ ವೇಷ ತಳೆದು ಬಾರೋ ||೨||

ಮೂಜಗ ಮಾನಿತ ತೇಜೋ ವಿರಾಜಿತ 
ಮಾಜದ ಮಹಾ ಮಹಿಮ ಓಜೆಗೊಳಿಸಿ ಮತಿ ರಾಜೀವ ಬೋಧದಿ 
ಪೂಜೆಗೊಂಬುವ ಗುರುರಾಜ ರೂಪದಿ ಬಾರೋ ||೩||

ಮಂತ್ರ ಸದನದೊಳು ಸಂತ ಸುಜನರಿಗೆ 
ಸಂತೋಷ ಸಿರಿಗರೆದು ಕಂತುಪಿತನ ಪಾದ ಸಂತತ ಸೇವಿಪ 
ಶಾಂತ ಮೂರುತಿ ಎನ್ನ ಅಂತರಂಗದಿ ಬಾರೋ ||೪||

ಈ ಸಮಯದಿ ನನ್ನಾಸೆ ನಿನ್ನೊಳು ಬಲು 
ಸೂಸಿ ಹರಿಯುತಿಹುದು ಕೂಸಿಗೆ ಜನನಿ ನಿರಾಸೆಗೊಳಿಸುವಳೆ 
ದೋಷ ಕಳೆದು ವಿಠಲೇಶಾ ಹೃದಯದಿ ಬಾರೋ ||೫||

kOri kareve guru SrI rAGavEMdrane 
bArO mahApraBuvE ||pa||
 
cAru caraNayuga sAri namipe bEga
bArO hRudaya suKasAra rUpava tOrO ||apa||
 
elli nODalu hari allE kANuvaneMdu 
kShulla kaMBavanoDedu nillade narahari celvike tOrida, 
PullalOcana SiSu, prahlAdanAgi bArO ||1||
 
dOShava kaLedu siMhAsanavErida, 
dAsa kulava poreva SrISanarcakanAgi pOShisi harimata, 
vyAsatrayavagaida vESha taLedu bArO ||2||
 
mUjaga mAnita tEjO virAjita 
mAjada mahA mahima OjegoLisi mati rAjIva bOdhadi 
pUjegoMbuva gururAja rUpadi bArO ||3||
 
maMtra sadanadoLu saMta sujanarige 
saMtOSha sirigaredu kaMtupitana pAda saMtata sEvipa 
SAMta mUruti enna aMtaraMgadi bArO ||4||
 
I samayadi nannAse ninnoLu balu 
sUsi hariyutihudu kUsige janani nirAsegoLisuvaLe 
dOSha kaLedu viThalESA hRudayadi bArO ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru