ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ದಾಸೋಹಂ ತವ ದಾಸೋಹಂ | ಶ್ರೀ ಜಗನ್ನಾಥ ದಾಸರು | Dasoham Tava Dasaoham | Sri Jagannatha Dasaru


ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti: Sri Jagannatha Dasaru (Jagannatha vittala)


ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ
ವಾಸುದೇವ ವಿಗತಾಘ ಸಂಘ ತವ ದಾಸೋಹಂ ದಾಸೋಹಂ

ಜೀವಾಂತರ್ಗತ ಜೀವ ನಿಯಾಮಕ, ಜೀವ ವಿಲಕ್ಷಣ ಜೀವನದ ||
ಜೀವಾಧಾರಕ ಜೀವ ರೂಪ ರಾಜೀವ ಭವಜನಕ ಜೀವೇಶ್ವರ ತವ ||೧||

ಕಾಲಾಂತರ್ಗತ ಕಾಲ ನಿಯಾಮಕ ಕಾಲಾತೀತ ತ್ರಿಕಾಲಜ್ಞ ||
ಕಾಲ ಪ್ರವರ್ತಕ ಕಾಲ ನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨||

ಕರ್ಮಾಕರ್ಮ ಕೃತ ಕರ್ಮಕೃತಾಗಮ ಕರ್ಮಫಲಪ್ರದ ಕರ್ಮಜಿತ ||
ಕರ್ಮಬಂಧ ಮಹಾಕರ್ಮ ವಿಮೋಚಕ, ಕರ್ಮನಿಗ್ರಹ ಕರ್ಮ ಸಾಕ್ಷಿ ತವ ||೩||

ಧರ್ಮಯೂಪ ಮಹ ಧರ್ಮವಿವರ್ದನ ಧರ್ಮವಿದೋತ್ತಮ ಧರ್ಮನಿಧೇ ||
ಧರ್ಮಸೂಕ್ಷ್ಮ ಮಹಧರ್ಮಸಂರಕ್ಷಕ, ಧರ್ಮಸಾಕ್ಷಿ ಯಮಧರ್ಮಪುತ್ರ ತವ ||೪||

ಮಂತ್ರಯಂತ್ರ ಮಹ ಮಂತ್ರಬೀಜ ಮಹ ಮಂತ್ರ ರಾಜಗುರು ಮಂತ್ರಧೃತ ||
ಮಂತ್ರಮೇಯ ಮಹಾಮಂತ್ರನಿಯಾಮಕ  ಮಂತ್ರದೇವ ಜಗನ್ನಾಥ ವಿಠಲ ತವ ||೫||

dAsOhaM tava dAsOhaM tava dAsOhaM tava dAsOhaM
vAsudEva vigatAGa saMGa tava dAsOhaM dAsOhaM
 
jIvAMtargata jIva niyAmaka, jIva vilakShaNa jIvanada ||
jIvAdhAraka jIva rUpa rAjIva Bavajanaka jIvESvara tava ||1||
 
kAlAMtargata kAla niyAmaka kAlAtIta trikAlaj~ja ||
kAla pravartaka kAla nivartaka kAlOtpAdaka kAlamUrti tava ||2||
 
karmAkarma kRuta karmakRutAgama karmaPalaprada karmajita ||
karmabaMdha mahAkarma vimOcaka, karmanigraha karma sAkShi tava ||3||
 
dharmayUpa maha dharmavivardana dharmavidOttama dharmanidhE ||
dharmasUkShma mahadharmasaMrakShaka, dharmasAkShi yamadharmaputra tava ||4||

maMtrayaMtra maha maMtrabIja maha maMtra rAjaguru maMtradhRuta ||
maMtramEya mahAmaMtraniyaamaka  maMtradEva jagannAtha viThala tava ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru