ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಂಬಿದೆ ನಿನ್ನ ಪಾದ | ಶ್ರೀ ಗುರುವಿಜಯವಿಠಲ ದಾಸರ ಕೃತಿ | Nambide Ninna Pada | GuruVijayaVittala Dasaru


ರಚನೆ :  ಶ್ರೀ ಗುರುವಿಜಯವಿಠಲ ದಾಸರು 
Krithi : Sri GuruVijayavittala Dasaru


ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ||ಪ||
ನಂಬಿದೆ ನಿನ್ನ ಪಾದ ಡಂಬವ ತೊಲಗಿಸಿ |
ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ ||ಅಪ||

ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಮ ಹಂಸಮಂತರಾ
ತಪ್ಪದೆ ದಿನದಿನವಪ್ಪನಂದದಿ ಜಪಿಸಿ ತಪ್ಪಿಸೋ ಭವದ ಸಮೀಪದ ಜೀವಕೆ 
ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸೋ 
ಕಪ್ಪು ವರ್ಣನ ಕೂಡ ಒಪ್ಪಿಸಿ ಪಾಲಿಸೋ||೧||

ಹತ್ತೇಳು ಎರಡಾಯುತ ನಾಡಿಯೊಳು ಸುತ್ತಿ ಸುತ್ತುವ ಮಾರುತ
ಉತ್ತರ ಲಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯ ದ್ವಾರದಿಂದ 
ಎತ್ತ ಪೋಗಲೀಸದದೆ ತತ್ತುವರೊಳು ಜೀವೋತ್ತಮನೆ ಸತ್ 
ಚಿತ್ತ ಎನಗೆ ಕೊಡು ಉತ್ತರ ಲಾಲಿಸೋ ||೨||

ಅಂತರಂಗದ ಉಸಿರ ಹೊರಗೆ ಬಿಟ್ಟು 
ಅಂತರಂಗಕ್ಕೆ ಸೇರುವ ಪಂಥದಾಳು ನೀನೇ ಕಂತು ಜನಕನಲ್ಲಿ
ಮಂತ್ರಿಯೆಂದೆನಿಸಿ ಸರ್ವರಂತರ‍್ಯಾಮಿಯಾಗಿ ನಿಂತು ನಾನಾ ಬಗೆ 
ತಂತು ನಡೆಸುವ ಹೊಂತಕಾರಿ ಗುಣವಂತ ಬಲಾಢ್ಯ ||೩||

ಪಂಚಪ್ರಾಣ ರೂಪನೆ ಸತ್ವಕಾಯ ಪಂಚೇಂದ್ರಿಯಗಳಪ್ಪನೆ
ಮುಂಚಿನ ಪರಮೇಷ್ಟಿ ಸಂಚಿತಾಗಮಿ ಬಿಡಿಸಿ
ಕೊಂಚ ಮಾಡೋ ಪ್ರಾರಬ್ಧ ವಂಚನೆ ಗೈಸದೆ ಅಂಚಂಚಿಗೆ ಪರ
ಪಂಚಗಳೋಡಿಸಿ ಪಂಚ ವಕ್ತ್ರ ಹರಿಮಂಚದ ಗುರುವೇ ||೪||

ಯೋಗಾಸನದೊಳಿಪ್ಪ ಯಂತ್ರೋದ್ಧಾರ ಭಾಗವತರ ಅಪ್ಪ |
ಯೋಗಿಗಳೀಶ ವ್ಯಾಸಯೋಗಿಗೊಲಿದನ್ಯಾಸ ಶ್ರೀ 
ತುಂಗಭದ್ರ ನಿವಾಸ ಬಾಗುವೆ ಕೊಡು ಲೇಸಾ
ಶ್ರೀ ಗುರುವಿಜಯವಿಠಲನ ಪಾದಕೆ ಬಾಗುವೆ ಭವ ದೂರ ಜಾಗರ ಮೂರುತಿ ||೫||

naMbide ninna pAda guru muKyaprANa ||pa||
naMbide ninna pAda DaMbava tolagisi |
DiMbadoLage hariya biMba poLevaMte mADO ||apa||
 
ippattu oMdu sAvira aidoMdu nUru apratima haMsamaMtarA
tappade dinadinavappanaMdadi japisi tappisO Bavada samIpada jIvake 
appanaMdadi puNya bappaMte karuNisO 
kappu varNana kUDa oppisi pAlisO||1||
 
hattELu eraDAyuta nADiyoLu sutti suttuva mAruta
uttara lAlisO utkramaNadalli nettiya dvAradiMda 
etta pOgalIsadade tattuvaroLu jIvOttamane sat 
citta enage koDu uttara lAlisO ||2||
 
aMtaraMgada usira horage biTTu 
aMtaraMgakke sEruva paMthadALu nInE kaMtu janakanalli
maMtriyeMdenisi sarvaraMtar^yAmiyAgi niMtu nAnA bage 
taMtu naDesuva hoMtakAri guNavaMta balADhya ||3||
 
paMcaprANa rUpane satvakAya paMcEMdriyagaLappane
muMcina paramEShTi saMcitAgami biDisi
koMca mADO prArabdha vaMcane gaisade aMcaMcige para
paMcagaLODisi paMca vaktra harimaMcada guruvE ||4||
 
yOgAsanadoLippa yaMtrOddhAra BAgavatara appa |
yOgigaLISa vyAsayOgigolidanyAsa SrI 
tuMgaBadra nivAsa bAguve koDu lEsA
SrI guruvijayaviThalana pAdake bAguve Bava dUra jAgara mUruti ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru