ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬ್ರಹ್ಮಾದಿಗಳು ಕ್ಷೀರ | ಶ್ರೀ ರಾಮ | ಜೋಗುಳದ ಹಾಡು | ಪುರಂದರ ವಿಠಲ | Brahmadigalu Ksheera | Purandara Vithala


ರಚನೆ  : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಬ್ರಹ್ಮಾದಿಗಳು ಕ್ಷೀರ ಸಾಗರಕೆ ಪೋಗಿ
ಲಕ್ಷ್ಮೀನಾರಾಯಣರ ಚರಣಕ್ಕೆ ಎರಗಿ
ಭೂಭಾರ ಹರಣವನು ಮಾಡಬೇಕಾಗಿ
ಇಳೆಯೊಳು ಮನುಜರ ಕೂಡೆ ಅವತಾರವಾಗಿ

ಸೂರ್ಯವಂಶದ ರಾಜ ದಶರಥನು ತಾನು
ಸಂತಾನವಾಗಬೇಕೆಂದು ಚಿಂತಿಸಿದ
ಆಶ್ರಮದಿಂದ ವಸಿಷ್ಠರನೇ ಕರೆಸಿ
ಪುತ್ರಕಾಮೇಷ್ಠಿ ಎಂಬ ಯಜ್ಞ ಮಾಡಿಸಿದ

ಚೈತ್ರ ಶುದ್ಧ ನವಮಿ ಬುಧವಾರದಲ್ಲಿ
ಶ್ರೀ ರಾಮ ಜನಿಸಿದನು ಕೌಸಲ್ಯೆಯಲ್ಲಿ
ಆನಂದವಾಯಿತು ಅಯೋಧ್ಯೆಯಲ್ಲಿ
ಸುರರು ದುಂದುಭಿ ಭೇರಿ ಮೊಳಗಿದರಲ್ಲಿ

ನಾಮಕರಣವ ಮಾಡಿ ಸಂತೋಷ ಪಡುತ
ಶ್ರೀ ರಾಮಚಂದ್ರನೆಂಬ ಹೆಸರನ್ನ - ಇಡುತ
ನಾಲ್ಕು ವೇದಗಳೆಂಬ ಸರಪಣಿಯ ಹಿಡಿದು
ಪುರಂದರ ವಿಠಲನ ಪಾಡಿ ತೂಗಿದರು

brahmAdigaLu kShIra sAgarake pOgi
lakShmInArAyaNara caraNakke eragi
BUBAra haraNavanu mADabEkAgi
iLeyoLu manujara kUDe avatAravAgi
 
sUryavaMSada rAja daSarathanu tAnu
saMtAnavAgabEkeMdu ciMtisida
ASramadiMda vasiShTharanE karesi
putrakAmEShThi eMba yaj~ja mADisida
 
caitra Suddha navami budhavAradalli
SrI rAma janisidanu kausalyeyalli
AnaMdavAyitu ayOdhyeyalli
suraru duMduBi BEri moLagidaralli
 
nAmakaraNava mADi saMtOSha paDuta
SrI rAmacaMdraneMba hesaranna - iDuta
nAlku vEdagaLeMba sarapaNiya hiDidu
puraMdara viThalana pADi tUgidaru

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru