ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕೂಗೆಲೋ ಮನುಜ | ಶ್ರೀ ವಿಜಯದಾಸರ ಕೃತಿ | Koogelo Manuja | Sri Vijaya Dasara Kruti


ರಚನೆ : ಶ್ರೀ ವಿಜಯ ದಾಸರು
Kruti: Sri Vijaya Dasaru


ಕೂಗೆಲೋ ಮನುಜ ಕೂಗೆಲೋ ||ಪ||

ಸಾಗರಶಯನನೆ ಜಗಕೆ ದೈವವೆಂದು ||ಅಪ||

ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ
ಸಚ್ಚಿದಾನಂದೈಕ ಸರ್ವೋತ್ತಮ
ಸಚ್ಚರಿತ ರಂಗ ನಾರಾಯಣ ವೇದ
ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು ||೧||

ನರಹರಿ ಮುಕುಂದ ನಾರಾಯಣ ದೇವ
ಪರಮ ಪುರುಷ ಹರಿ ಹಯವದನ
ಸಿರಿಧರ ವಾಮನ ದಾಮೋದರ ಗಿರಿ
ಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು ||೨||

ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ
ವರದ ಅಪಾರ ಸದ್ಗುಣನಿಲಯ
ಮುರಮರ್ದನ ಮಂಜು ಭಾಷಣ ಕೇಶವ
ನಿರ್ಮಲ ದೇವ ಭೂವರಾಹಮೂರುತಿಯೆಂದು ||೩||

ನಿಗಮವಂದಿತ ವಾರಿಜನಾಭ ಅನಿರುದ್ಧ
ಅಘನಾಶ ಅಪ್ರಾಕೃತ ಶರೀರ
ಸುಗುಣ ಸಾಕಾರ ಜಗದತ್ಯಂತ ಭಿನ್ನ
ತ್ರಿಗುಣರಹಿತ ನರಮೃಗ ರೂಪಾನೆಂದು ||೪||

ವಟಪತ್ರಶಯನ ಜಗದಂತರ್ಯಾಮಿ
ಕಟಕ ಮುತ್ತಿನಹಾರ ಕೌಸ್ತುಭ ವಿಹಾರ
ತಟಿತ್ಕೋಟಿ ನಿಭಕಾಯ ಪೀತಾಂಬರಧರ
ನಿಟಿಲಲೋಚನ ಬಾಲವಟು ಮೂರುತಿಯೆಂದು ||೫||

ವಿಷ್ಣು ಸಂಕರುಷನ ಮಧುಸೂದನ ಶ್ರೀ
ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ
ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ
ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು ||೬||

ಇಭರಾಜ ಪರಿಪಾಲ ಇಂದಿರೆಯರಸ
ನಭ ಗಂಗಾಜನಕ ಜನಾರ್ದನನೆ
ವಿಭುವೇ ವಿಶ್ವರೂಪ ವಿಶ್ವನಾಟಕ
ಋಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು ||೭||

ವೈಕುಂಠ ವಾಮನ ವಾಸುದೇವ ರಂಗ
ಲೋಕೇಶ ನವನೀತ ಚೋರ ಜಾರ 
ಗೋಕುಲವಾಸಿ ಗೋವಳರಾಯ ಶ್ರೀಧರ
ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು ||೮||

ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ
ಅಸುರ ಭಂಜನ ತ್ರಿವಿಕ್ರಮ ಕಪಿಲ
ಕುಸುಮ ಶರನಯ್ಯ ಶಾರ್ಙಧರಾಚಕ್ರಿ
ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು || ೯ ||

ಸರ್ವನಾಮಕ ಸರ್ವಚೇಷ್ಟಕ ಸರ್ವೇಶ
ಸರ್ವಮಂಗಳ ಸರ್ವಸಾರಭೋಕ್ತ
ಸರ್ವಾಧಾರಕ ಸರ್ವ ಗುಣ ಪರಿಪೂರ್ಣ
ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು || ೧೦ ||

ಈ ಪರಿ ಕೂಗಲು ಆಪತ್ತು ಪರಿಹಾರ
ಅಪಾರ ಜನ್ಮ ಬೆಂಬಿಡದಲೆ ಸಪ್ತ
ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ
ಅಪವರ್ಗದಲ್ಲಿಟ್ಟು ಆನಂದಪಡಿಸುವ || ೧೧ ||

kUgelO manuja kUgelO ||pa||

saagaraSayanane jagake daivaveMdu ||apa||

achyutaanaMta gOviMda maadhava kRuShNa
saccidaanaMdaika sarvOttama
saccharita raMga naaraayaNa vEda
bacciTTavana koMda matsya mUrutiyeMdu ||1||

narahari mukuMda naaraayaNa dEva
parama puruSha hari hayavadana
siridhara vaamana daamOdara giri
dharisida surapaala kUrma mUrutiyeMdu ||2||

puruShOttama puNyaSlOka puMDarIka
varada apaara sadguNanilaya
muramardana maMju bhaaShaNa kESava
nirmala dEva bhUvaraahamUrutiyeMdu ||3||

nigamavaMdita vaarijanaabha aniruddha
aghanaaSa apraakRuta SarIra
suguNa saakaara jagadatyaMta bhinna
triguNarahita naramRuga rUpaaneMdu ||4||

vaTapatraSayana jagadaMtaryaami
kaTaka muttinahaara kaustubha vihaara
taTitkOTi nibhakaaya pItaaMbaradhara
niTilalOcana baalavaTu mUrutiyeMdu ||5||

viShNu saMkaruShana madhusUdana SrI
kRuShNa pradyumna prathama daivave
jiShNu saarathi raama acyutaadhOkShaja
sRuShTigoDeya bhaargava mUrutiyeMdu ||6||

ibharaaja paripaala iMdireyarasa
nabha gaMgaajanaka janaardanane
vibhuvE viSvarUpa viSvanaaTaka
RuShabha dattaatrEya SrI raamamUrutiyeMdu ||7||

vaikuMTha vaamana vaasudEva raMga
lOkESa navanIta cOra jaara 
gOkulavaasi gOvaLaraaya SrIdhara
EkamEva SrI kRuShNa mUrutiyeMdu ||8||

hRuShikESa paramaatma muktaamuktaaSraya
asura bhaMjana trivikrama kapila
kusuma Saranayya shaar~gadharaachakri
viShahara dhanvaMtri bouddha mUrutiyeMdu || 9 ||

sarvanaamaka sarvacEShTaka sarvEsha
sarvamaMgaLa sarvasaarabhOkta
sarvaadhaaraka sarva guNa paripUrNa
sarva mUlaadhaara kalki mUrutiyeMdu || 10 ||

I pari kUgalu Apattu parihaara
apaara janma beMbiDadale sapta
dvIpaadhipa namma vijayaviThThalarEya
apavargadalliTTu AnaMdapaDisuva || 11 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru