ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಮನ ನೋಡಿರೈ | ಶ್ರೀ ಜಗನ್ನಾಥ ವಿಠಲ | Ramana Nodirai | Sri Jagannatha Dasara Kruti


ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha Dasaru (Jagannatha vittala)


ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ
ತಾಮರಸಸಖಸುವಂಶಾಬ್ಧಿಶರತ್ಸೋಮ ಕಮಲಾಧಾಮ ||ಪ||

ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದ ಅಜ ಪೂಜಿಸಿದ
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ ಕಾಮಿತನೆರದ
ಭೂತಾಧಿಪನ ಭವನದೊಳಗರ್ಚನೆಗೊಂಡ ಧೃತಕೋದಂಡ
ಮಾತಂಗಾರಿವಿರೋಧಿಯ ಜನಕನ ಮೇಧಾಗಾರಕೆ ಪೋದ ||೧||

ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿಕೊಟ್ಟ ಜಗಕತಿದಿಟ್ಟ
ನಾಭಿಜನ್ಮನಿಹ ನಗರಸ್ಥಾನಕೆ ಬಂದ ಶುಭಗುಣವೃಂದ
ವೈಭವದಿಂದ ಅಯೋಧ್ಯಾನಗರದಿ ಮೆರೆದ ಕಾಮಿತಗರೆದ
ಸಾಭಿಮಾನದಲಿ ಸತಿಯಳಿಗಿತ್ತನು ವರವ ದೇವರದೇವ ||೨||

ಜಾಂಬವಂತನಿಗೆ ಜಾನಕಿರಮಣನು ಇತ್ತ ತನ್ನಯಧ್ಯಾತಾ
ಸಂಭ್ರಮದಿಂದಲಿ ವೇದಗರ್ಭನೊಡನಾಡ್ದ ಮುಕ್ತಿಯ ನೀಡ್ದ
ಕುಂಭಿನೀಶ್ವರನ ಕೋಶದಿ ಬಹುದಿನ ವಾಸವೆಸಗಿದನೀಶ
ನಂಬಿ ತುತಿಸುತಿಹ ನರಹರಿ ಮುನಿಪಗೆ ಒಲಿದ ಮೋದದಿ ನಲಿದ ||೩||

ಅಲವಬೋಧಮುನಿ ಅತಿ ಮೋದದಲರ್ಚಿಸಿದ ಸಲೆ ಮೆಚ್ಚಿಸಿದ
ಇಳೆಯೊಳು ಬಹುಯತಿಗಳ ಕರಪೂಜಿತನಾದ ಲೀಲಾವಿನೋದ
ಬಲು ನಂಬಿದ ಭಕುತರ ಕಲಿ-ಮಲಗಳ ಕಳೆದ ಮನದೊಳು ಪೊಳೆದ
ಸುಲಲಿತಗುಣನಿಧಿ ವಸುಧೇಂದ್ರಾರ್ಯರ ಪ್ರೀಯ ಕವಿಜನಗೇಯ ||೪||

ವಾರಿಧಿಬಂಧನ ವಾನರನಾಯಕರಾಳ್ದ ದೈತ್ಯರ ಸೀಳ್ದ
ನಾರದ ಮುಖ ಮುನಿನಮಿತಪದಾಂಬುಜನೀತ ತ್ರಿಗುಣಾತೀತ
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವ ದುರಿತವ ತಡೆವ
ನೀರಜಾಕ್ಷ ಜಗನ್ನಾಥವಿಠಲ ನಿಶ್ಚಿಂತ ಸೀತಾಕಾಂತ ||೫||

raamana nODirai nimmaya kaamita bEDirai
taamarasasakhasuvaMSaabdhiSaratsOma kamalaadhaama ||pa||

dhaatananuj~jadi dEvatvaShTra nirmisida aja pUjisida
jyOtirmaya jaabaali muniya tapavarida kaamitanerada
bhUtaadhipana bhavanadoLagarcanegoMDa dhRutakOdaMDa
maataMgaarivirOdhiya janakana mEdhaagaarake pOda ||1||

saubhari munipage sauKyava karuNisikoTTa jagakatidiTTa
naabhijanmaniha nagarasthaanake baMda SubhaguNavRuMda
vaibhavadiMda ayOdhyaanagaradi mereda kaamitagareda
saabhimaanadali satiyaLigittanu varava dEvaradEva ||2||

jaaMbavaMtanige jaanakiramaNanu itta tannayadhyaataa
saMbhramadiMdali vEdagarbhanoDanaaDda muktiya nIDda
kuMbhinISvarana kOSadi bahudina vaasavesagidanISa
naMbi tutisutiha narahari munipage olida mOdadi nalida ||3||

alavabOdhamuni ati mOdadalarcisida sale meccisida
iLeyoLu bahuyatigaLa karapUjitanaada lIlaavinOda
balu naMbida bhakutara kali-malagaLa kaLeda manadoLu poLeda
sulalitaguNanidhi vasudhEMdraaryara prIya kavijanagEya ||4||

vaaridhibaMdhana vaanaranaayakaraaLda daityara sILda
naarada mukha muninamitapadaaMbujanIta triguNaatIta
Araadhiparige akhiLaarthagaLanu koDuva duritava taDeva
nIrajaakSha jagannaathaviThala niSciMta sItaakaaMta ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru