ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಾರಾಯಣನ್ಯಾರೇ ಪೇಳೆ ಸಖಿ | ಶ್ರೀಪುರಂದರ ವಿಠಲ | Narayananyare Pele Sakhi | Sri Purandara Dasaru



ರಚನೆ :  ಶ್ರೀ ಪುರಂದರ ದಾಸರು 
Krithi : Sri Purandara Dasaru


ನಾರಾಯಣ ನಾರಾಯಣ ನಾರಾಯಣ ನಾರಾಯಣ 
ನಾರಾಯಣನ್ಯಾರೇ ಪೇಳೆ ಸಖಿ| ನಾರಾಯಣನ್ಯಾರೇ ಪೇಳೆ ಸಖಿ ||ಪ||

ಕ್ಷೀರಸಾಗರದಲ್ಲಿ ಶಯನವ ಮಾಡಿದ ಆದಿನಾರಾಯಣ ನೋಡೇ ಸಖಿ ||ಅಪ||

ಕಾಲಿಲ್ಲದಲೆ ಓಡಿ ಎವೆಯಿಕ್ಕದಲೆ ನೋಡಿ ಮಿಂಚಿನಂತ್ಹೊಳೆಯುವನ್ಯಾರೆ ಸಖಿ|
ವೇದವ ತಂದು ಸುರರಿಗೆ ಕೊಟ್ಟಂಥ ಮತ್ಸ್ಯಾವತಾರನ್ನ ನೋಡೆ ಸಖಿ ||೧||

ತಲೆಯ ತಗ್ಗಿಸುವನು ಕಡಲೊಳು ಆಡುವ| ಕಡೆದರೆ ಕಡಗೋಲನ್ಯಾರೆ ಸಖಿ|
ಸುರರು ದೈತ್ಯರು ಕೂಡಿ ಶರಧಿಯ ಮಥಿಸಲು ಕೂರ್ಮಾವತಾರನೆ ಇಂದುಮುಖಿ ||೨||

ಮಾರಿ ತಗ್ಗಿಸುವನು ಮಣ್ಣು ಚಿಮ್ಮಿ ಬಿಡುವ ಕೋರೆದಾಡೆಯವನ್ಯಾರೇ ಸಖಿ|
ದುರುಳನ್ನ ಕೊಂದು ಧರಣಿಯ ತಂದಂಥ ವರಾಹವತಾರನೇ ವಾರಿಜಾಕ್ಷಿ ||೩||

ಕಂಬದಿಂದಲಿ ಬಂದು ಕರುಳನ್ನ ಬಗೆದು ಕೊರಳೊಳು ಹಾಕಿದವನ್ಯಾರೆ ಸಖಿ|
ನರಮೃಗ ರೂಪದಿ ಉದರವ ಸೀಳಿದ ನಾರಸಿಂಹನ ರೂಪ ನೋಡೆ ಸಖಿ ||೪||

ಪುಟ್ಟ ಪಾದದಿಂದ ಸೃಷ್ಟಿಯನಳೆದ ದಿಟ್ಟ ಬ್ರಹ್ಮಚಾರಿ ಯಾರೇ ಸಖಿ|
ಕೊಟ್ಟಿದ್ದು ಸಾಲದೆ ಮೆಟ್ಟಿದ ಶಿರವನ್ನು ಪುಟ್ಟ ವಾಮನ ರೂಪ ನೋಡೇ ಸಖಿ ||೫||

ಕೋಪದಿಂದಲಿ ಬಂದು ಕೊಡಲಿಯನ್ನೆ ಪಿಡಿದು ಕುಲವನ್ನೆ ಸವರಿದವನ್ಯಾರೇ ಸಖಿ|
ರಕ್ತದೊಳಗೆ ಸ್ನಾನ ತರ್ಪಣ ಮಾಡಿದ ವಿಪ್ರ ಭಾರ್ಗವರಾಮ ನೋಡೆ ಸಖಿ ||೬||

ಶೀಘ್ರದಿಂದಲಿ ಬಂದು ಶಬರಿ ಎಂಜಲನುಂಡು ಸೇತುವೆ ಬಂಧನ ಯಾರೇ ಸಖಿ|
ದಶರಥನುದರದಿ ಶಿಶುವಾಗಿ ಜನಿಸಿದ ಕೌಸಲ್ಯಾರಾಮನ್ನ ನೋಡೇ ಸಖಿ ||೭||

ಬ್ರಹ್ಮಾಂಡದೊಳಗೆಲ್ಲಾ ಬಂಡಿಯ ಹೊಡೆದೋನು ಪಾರ್ಥ ಸಾರಥಿ ಇವನ್ಯಾರೇ ಸಖಿ|
ಮಥುರೆಯಲಿ ಹುಟ್ಟಿ ಗೋಕುಲದಿ ಬೆಳೆದ ಗೋಪಾಲಕೃಷ್ಣನ್ನ ನೋಡೇ ಸಖಿ ||೮||

ಮರದೊಳಗೆ ನಿಂತು ಮಾನವ ಕಾಯ್ದಂಥ ಮಾಧವ ಇವನ್ಯಾರೆ ಹೇಳೆ ಸಖಿ|
ತ್ರಿಪುರರ ಸತಿಯರ ವ್ರತಭಂಗ ಮಾಡಿದ ಬೌದ್ಧವತಾರನೇ ಚಂದ್ರಮುಖಿ ||೯||

ಹಯವನೇರಿ ಬಂದು ಧರಣಿಯಲ್ಲಾ ತಿರುಗಿ ಗಿರಿಯಲ್ಲಿ ನಿಂತವನ್ಯಾರೇ ಸಖಿ|
ವೇದಾಂತ ವೇದ್ಯ ಶ್ರೀಪುರಂದರ ವಿಠಲನ್ನ ಲಕ್ಷ್ಮೀರಮಣನ್ನ ನೋಡೇ ಸಖಿ ||೧೦||

nArAyaNa nArAyaNa nArAyaNa nArAyaNa 
nArAyaNanyArE pELe saKi| nArAyaNanyArE pELe saKi ||pa||

kShIrasAgaradalli Sayanava mADida AdinArAyaNa nODE saKi ||apa||
 
kAlilladale ODi eveyikkadale nODi miMcinaMt~hoLeyuvanyAre saKi|
vEdava taMdu surarige koTTaMtha matsyAvatAranna nODe saKi ||1||
 
taleya taggisuvanu kaDaloLu ADuva| kaDedare kaDagOlanyAre saKi|
suraru daityaru kUDi Saradhiya mathisalu kUrmAvatArane iMdumuKi ||2||
 
mAri taggisuvanu maNNu cimmi biDuva kOredADeyavanyArE saKi|
duruLanna koMdu dharaNiya taMdaMtha varAhavatAranE vArijAkShi ||3||
 
kaMbadiMdali baMdu karuLanna bagedu koraLoLu hAkidavanyAre saKi|
naramRuga rUpadi udarava sILida nArasiMhana rUpa nODe saKi ||4||
 
puTTa pAdadiMda sRuShTiyanaLeda diTTa brahmacAri yArE saKi|
koTTiddu sAlade meTTida Siravannu puTTa vAmana rUpa nODE saKi ||5||
 
kOpadiMdali baMdu koDaliyanne piDidu kulavanne savaridavanyArE saKi|
raktadoLage snAna tarpaNa mADida vipra BArgavarAma nODe saKi ||6||
 
SIGradiMdali baMdu Sabari eMjalanuMDu sEtuve baMdhana yArE saKi|
daSarathanudaradi SiSuvAgi janisida kausalyArAmanna nODE saKi ||7||
 
brahmAMDadoLagellA baMDiya hoDedOnu pArtha sArathi ivanyArE saKi|
mathureyali huTTi gOkuladi beLeda gOpAlakRuShNanna nODE saKi ||8||
 
maradoLage niMtu mAnava kAydaMtha mAdhava ivanyAre hELe saKi|
tripurara satiyara vrataBaMga mADida bauddhavatAranE caMdramuKi ||9||
 
hayavanEri baMdu dharaNiyallA tirugi giriyalli niMtavanyArE saKi|
vEdAMta vEdya SrIpuraMdara viThalanna lakShmIramaNanna nODE saKi ||10||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru