ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜಲದೊಳು ಮತ್ಸ್ಯಾವತಾರನಿಗೆ | ಶ್ರೀ ಪುರಂದರ ದಾಸರು | Jaladolu Matsya | Purandara Dasaru


ರಚನೆ : ಶ್ರೀ ಪುರಂದರ ದಾಸರು 
Krithi : Sri Purandara Dasaru


ಜಲದೊಳು ಮತ್ಸ್ಯಾವತಾರನಿಗೆ | ಗಿರಿಯ ಬೆನ್ನಲ್ಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಹಾವತಾರಗೆ | ಸಣ್ಣ ಮಗುವ ಕಾಯ್ದ ನರಸಿಂಹಗೆ
ಮಂಗಳಂ ಜಯ ಮಂಗಳಂ |  ಮಂಗಳಂ ನಿತ್ಯ ಶುಭಮಂಗಳಂ

ಭೂಮಿಯ ದಾನವ ಬೇಡಿದವಗೆ | ಆ ಮಹಾ ಅಸುರರ ಗೆಲಿದವಗೆ 
ರಾಮಚಂದ್ರನೆಂಬ ದಶರಥ ಪುತ್ರಗೆ | ಭಾಮೆಯರರಸ ಗೋಪಾಲನಿಗೆ 
ಮಂಗಳಂ ಜಯ ಮಂಗಳಂ ಮಂಗಳಂ ನಿತ್ಯ ಶುಭಮಂಗಳಂ

ಬತ್ತಲೆ ನಿಂದಿಹ ಬೌದ್ಧನಿಗೆ ಉತ್ತಮ ಹಯವೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹುವ ಕರ್ತೃ ಶ್ರೀಪುರಂದರ ವಿಠಲನಿಗೆ
ಮಂಗಳಂ ಜಯ ಮಂಗಳಂ ಮಂಗಳಂ ನಿತ್ಯ ಶುಭಮಂಗಳಂ

jaladoLu matsyAvatAranige | giriya bennalli potta kUrmanige
dhareyanuddharisida varahAvatArage | saNNa maguva kAyda narasiMhage
maMgaLaM jaya maMgaLaM |  maMgaLaM nitya SuBamaMgaLaM

BUmiya dAnava bEDidavage | A mahA asurara gelidavage 
rAmacaMdraneMba daSaratha putrage | BAmeyararasa gOpAlanige 
maMgaLaM jaya maMgaLaM maMgaLaM nitya SuBamaMgaLaM

battale niMdiha bauddhanige uttama hayavErida kalkige
hattavatAradi Baktara salahuva kartRu SrIpuraMdara viThalanige
maMgaLaM jaya maMgaLaM maMgaLaM nitya SuBamaMgaLaM

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru