ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿ | ಭೀಮೇಶಕೃಷ್ಣ | Nille Nille Kolhapura | Bhimesha Krishna


ಸಾಹಿತ್ಯ : ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ) 
Kruti: Harapanahalli Bhimavva (Bhimesha Krishna)


ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿ
ಇಲ್ಲೆ ಬಾರೆ ಗೆಜ್ಜೆ ಘಲ್ಲೆನುತ ||ಪ||

ಕರುಣಸಾಗರೆ ಹರಿತರುಣಿಯೆ ನೀ ಕೋಟಿ
ಅರುಣ ಕಿರಣ ರತ್ನಾಭರಣವಿಟ್ಟು
ಮಣಿಕೌಸ್ತುಭ ವಕ್ಷಸ್ಥಳದೊಳು ಒಪ್ಪುವ ಸು-
ಪರ್ಣವಾಹನೆ ಲಕ್ಷ್ಮಿ ಶರಣು ವಂದಿತಳೆ ||೧||

ಪಂಕಜಾಕ್ಷಿ ಪಂಕಜೋದ್ಭವನ ಜನನಿ
ಪಂಕಜಮುಖಿ ಪಾಲಿಸೆ ಎನ್ನ
ಪಂಕಜನಾಭನ ಅಂಕದಲ್ಲೊಪ್ಪುವ
ಪಂಕಜೆ ನಿನ್ನ ಪಾದಪಂಕಜಗೆರಗುವೆ ||೨||

ಮುಗುಳುನಗೆಯ ಮುತ್ತುಗಳ ಜಡಿತ ಕ-
ರ್ಣಗಳ ವಾಲೆಯು ಕದಪಿನೊಳು ಹೊಳೆಯೆ
ಬಗೆ ಬಗೆ ಸರ ಬಂಗಾರವನಿಟ್ಟು ಮೂ-
ರ್ಜಗವ ಮೋಹಿಸೊ ಜಗದಾದಿಪತಿಯ ರಾಣಿ ||೩||

ಸಾಗರದೊಳಗ್ಹುಟ್ಟ್ಯಾಗ ಶ್ರೀನಾಥನ
ಬೇಗ ನೋಡಿ ಪರಮೋತ್ಸವದಿ
ನಾಗಶಯನ ನಾಗಾರಿವಾಹನನ
ಅರ್ಧಾಂಗಿ ಎನಿಸಿದ ಅನಂತ ಮಹಿಮಳೆ ||೪||

ಶೇಷಗಿರಿಯ ಶ್ರೀನಿವಾಸನ ಎದೆಯಲಿ
ವಾಸವಾಗಿರಲತಿ ಪ್ರೇಮದಲಿ
ಈಶ ನಾರದ ಬ್ರಹ್ಮಾಸುರರೊಡೆಯ ಭೀ-
ಮೇಶಕೃಷ್ಣನ ನಿಜ ದಾಸರಿಗೆ ವರವನೀಡೆ ||೫||

nille nille kol~haapuradEvi
ille baare gejje Gallenuta ||pa||

karuNasaagare haritaruNiye nI kOTi
aruNa kiraNa ratnaabharaNaviTTu
maNikaustubha vakShasthaLadoLu oppuva su-
parNavaahane lakShmi SaraNu vaMditaLe ||1||

paMkajaakShi paMkajOdbhavana janani
paMkajamukhi paalise enna
paMkajanaabhana aMkadalloppuva
paMkaje ninna paadapaMkajageraguve ||2||

muguLunageya muttugaLa jaDita ka-
rNagaLa vaaleyu kadapinoLu hoLeye
bage bage sara baMgaaravaniTTu mU-
rjagava mOhiso jagadaadipatiya raaNi ||3||

saagaradoLag~huTTyAga SrInaathana
bEga nODi paramOtsavadi
naagaSayana naagaarivaahanana
ardhaaMgi enisida anaMta mahimaLe ||4||

SEShagiriya SrInivaasana edeyali
vaasavaagiralati prEmadali
ISa naarada brahmaasuraroDeya bhI-
mESakRuShNana nija daasarige varavanIDe ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru