ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪಾಲಿಸಮ್ಮ ಮುದ್ದು ಶಾರದೆ | ಶ್ರೀ ಪುರಂದರ ದಾಸರ ಕೃತಿ | Palisemma Muddu | Sri Purandara Dasaru


 ರಚನೆ :  ಶ್ರೀ ಪುರಂದರ ದಾಸರು 
Krithi : Sri Purandara Dasaru


ಪಾಲಿಸಮ್ಮ ಮುದ್ದು ಶಾರದೆ |
ಎನ್ನ ನಾಲಿಗೆಯಲ್ಲಿ ನಿಲ್ಲಬಾರದೆ ||ಪ||
ಲೋಲ ಲೋಚನೆ ತಾಯೇ ನಿರುತ ನಂಬಿದೆ ನಿನ್ನ ||ಅಪ||

ಅಕ್ಷರಕ್ಷರ ವಿವೇಕವ ನಿನ್ನ 
ಕುಕ್ಷಿಯೊಳೀರೇಳು ಲೋಕವ ||
ಸಾಕ್ಷಾತ್ ರೂಪದಿಂದ ಒಲಿದು ರಕ್ಷಿಸು ತಾಯೇ ||೧||

ಶೃಂಗಾರಪುರ ನೆಲೆ ವಾಸಿನೀ |ದೇವಿ 
ಸಂಗೀತ ಗಾನ ವಿಲಾಸಿನಿ ||
ಮಂಗಳ ಗಾತ್ರಳೇ ಭಳಿರೇ ಬ್ರಹ್ಮನ ರಾಣಿ ||೨||

ಸರ್ವಾಲಂಕಾರ ದಯ ಮೂರುತಿ ನಿನ್ನ 
ಚರಣವ ಸ್ಮರಿಸುವೆ ಕೀರುತಿ ||
ಗುರು ಮೂರ್ತಿ ಪುರಂದರ ವಿಠಲನ ಸ್ಮರಿಸುವೆ ||೩||

pAlisamma muddu SArade |
enna nAligeyalli nillabArade ||pa||
lOla lOcane tAyE niruta naMbide ninna ||apa||
 
akSharakShara vivEkava ninna 
kukShiyoLIrELu lOkava ||
sAkShAt rUpadiMda olidu rakShisu tAyE ||1||
 
SRuMgArapura nele vAsinI |dEvi 
saMgIta gAna vilAsini ||
maMgaLa gAtraLE BaLirE brahmana rANi ||2||
 
sarvAlaMkAra daya mUruti ninna 
caraNava smarisuve kIruti ||
guru mUrti puraMdara viThalana smarisuve ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru