ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಡೆದು ಬಾರಯ್ಯ ಕೃಷ್ಣ | ಭೀಮೇಶ ಕೃಷ್ಣ | Nadedu Barayya Krishna | Bhimesha Krishna


ರಚನೆ : ಶ್ರೀ ಹರಪನಹಳ್ಳಿ ಭೀಮವ್ವ 
Krithi : Sri Harapanahalli Bhimavva


ನಡೆದು ಬಾರಯ್ಯ ಕೃಷ್ಣ ನಡೆದು ಬಾರಯ್ಯ ಕೃಷ್ಣ ॥ ಪ  ॥

ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ 
ಕುಕ್ಷಿಯೊಳಗೆ  ಜಗ ರಕ್ಷಿಸುವಾತನೆಂದು 
ವಕ್ಷಸ್ಥಳದಿ ಶ್ರೀ ಮಾಲಕ್ಷ್ಮಿಧರಿಸಿ ಪಾಂಡು
ಪಕ್ಷನೆನಿಸಿ ನೀ ಪರೀಕ್ಷಕನುಳುಹಿದಂ-
-ತಕ್ಷದಿ ನೋಡುತ ಅಧೋಕ್ಷಜ ಹರಿಯೆ  ॥ ೧  ॥

ಗಜರಾಜ ವರದನೆ ತ್ರಿಜಗದೊಡೆಯ ನಿನ್ನ 
ಧ್ವಜ ವಜ್ರಾಂಕುಶ ಪಾದ ಭಜಕರೆನಿಸುವಂಥ
ಸುಜನರ್ ವಂದಿತನಾದ  ಕುಜನ ಕುಠಾರಿಯೇ ನೀ
ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ 
ನಿಜವಾಗಿ ನೊಡೆನ್ನ ರಜತಮ ಕಳೆಯುತ  ॥ ೨  ॥

ಕಡಲಶಯನನಾದ ಉಡುರಾಜ್ವದನ ಬಿಟ್ಟು
ಬಿಡಿಯ ಭೀಮೇಶ ಕೃಷ್ಣ ನಿನ್ನೊಡೆಯನೆನುತ ಬಂದ
ಬಡವ ಸುಧಾಮಗಿಟ್ಟ ಹಿಡಿ ಹಿಡೀಯೆಂದು ಭಾಗ್ಯ
ತಡೆಯದೆ ನಾ ನಿನ್ನಡಿಗಳಿಗೆರಗುವೆ 
ಕೊಡು ಕೊಡು ವರಗಳ ಪೊಡವಿ ಪಾಲಿಪನೆ  || ೩ ||


Nadedu baarayya krishna nadedu baarayya krishna  || pa ||

Pakshivaahana parapekshaarahitha ninna
Kukshiyolage jaga rakshisuvaathanendu
Vakshasthaladi shree malakshmidharisi paandu
Pakshanenisi nee pareekshakanuluhidan-
-thakshadi Nodutha adhokshaja hariye || 1 ||

Gajaraaja varadane trijagadodeya ninna
Dhwaja vajraankusha paada bhajakarenisuvantha
Sujanar vandithanaada kujana kutaariye nee
Ajamilagolidanthajaganendrana priya
Nijavaagi nodenna rajatama kaleyutha || 2 ||

Kadala shayananaada uduraajwadana bittu
Bidiya bheemesha krishna ninnodeyanenutha banda
Badava sudhaamagitta hidi hidiyendu bhaagya
Thadeyade naa ninnadigaligeraguve
Kodu kodu varagala podavi paalipane || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru