ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿದ್ರೆಮಾಡಿದ ರಂಗ | ಹಯವದನ | Nidre Madida Ranga | Sri Vadirajara Kruti


ರಚನೆ : ಶ್ರೀ ವಾದಿರಾಜರು (ಹಯವದನ)
Kruti: Sri Vadirajaru (Hayavadana)


ನಿದ್ರೆಮಾಡಿದ ರಂಗ ನಿದ್ರೆಮಾಡಿದ
ಭದ್ರಹಾಸಿಗೆ ಮೇಲೆ ಸಮುದ್ರರಾಜನ ಮಗಳ ಸಹಿತ ||ಪ||

ವೇದಕದ್ದ ಅಸುರನಿಗಾಗಿ ಆ ಮತ್ಸ್ಯರೂಪವ ಧರಿಸಿ
ಸಾಧಿಸಿ ಅಸುರನ ಕೊಂದ ವಾರಿಜಾಕ್ಷ ಬಳಲಿ ಬಂದು ||೧||

ತರಳ ಹಿರಣ್ಯಕಶ್ಯಪನ ಕರುಳ ಬಗೆದು ಕೊರಳೊಳಿಟ್ಟು
ನರಮೃಗ ರೂಪವ ತಾಳಿ ನರಸಿಂಹ ಬಳಲಿ ಬಂದು ||೨||

ಬಲಿಯ ದಾನವನ್ನೆ ಬೇಡಿ ನೆಲನ ಮೂರಡಿ ಮಾಡಿ
ಒಲಿದು ಬಾಗಿಲನ್ನೆ ಕಾಯ್ದ ವಾಮನನಾದ ಬಳಲಿ ಬಂದು ||೩||

ತಂದೆಯ ಮಾತನ್ನೆ ಕೇಳಿ ತಾಯಿ ಶಿರವನ್ನೆ ಅಳಿದು
ಏಳುಮೂರು ಬಾರಿ ಭೂಮಿಯ ಪ್ರದಕ್ಷಿಣೆ ಮಾಡಿ ||೪||

ಸೀತೆಗಾಗಿ ಪಡೆಯ ಸವರಿ ಸೇತುಬಂಧನವ ಮಾಡಿ
ದೂತರಾವಣನ್ನ ಕೊಂದು ಸೀತಾರಾಮ ಬಳಲಿ ಬಂದು ||೫||

ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆಲ್ಲ ಕಾಯ್ದು
ಗೋಪಸ್ತ್ರೀಯರ ಸೀರೆ ಸೆಳೆದು ಗೋಪಾಲಕೃಷ್ಣ ಬಳಲಿ ಬಂದು ||೬||

ಬತ್ತಲೆ ಕುದುರೆಯನೇರಿ ಮತ್ತೆ ತೇಜಿಯನ್ನೆ ನಡೆಸಿ
ಹತ್ತಾವತಾರವ ತಾಳಿ ಮತ್ತೆ ಕಲ್ಕಿರೂಪನಾಗಿ ||೭||

ಧರೆಯಳತ್ಯಧಿಕವಾದ ಶ್ರೀರಂಗಪಟ್ಟಣದಿ ನೆಲೆಸಿ
ಕರುಣದಿಂದ ಭಕ್ತರನ್ನು ಸಲಹಬೇಕು ಹಯವದನನೆ ||೮||

nidremaaDida raMga nidremaaDida
bhadrahaasige mEle samudraraajana magaLa sahita ||pa||

vEdakadda asuranigaagi A matsyarUpava dharisi
saadhisi asurana koMda vaarijaakSha baLali baMdu ||1||

taraLa hiraNyakaSyapana karuLa bagedu koraLoLiTTu
naramRuga rUpava taaLi narasiMha baLali baMdu ||2||

baliya daanavanne bEDi nelana mUraDi maaDi
olidu baagilanne kaayda vaamananaada baLali baMdu ||3||

taMdeya maatanne kELi taayi Siravanne aLidu
ELumUru baari bhUmiya pradakShiNe maaDi ||4||

sItegaagi paDeya savari sEtubaMdhanava maaDi
dUtaraavaNanna koMdu sItaaraama baLali baMdu ||5||

gOkuladalli huTTi gOvugaLannella kaaydu
gOpastrIyara sIre seLedu gOpaalakRuShNa baLali baMdu ||6||

battale kudureyanEri matte tEjiyanne naDesi
hattaavataarava taaLi matte kalkirUpanaagi ||7||

dhareyaLatyadhikavaada SrIraMgapaTTaNadi nelesi
karuNadiMda bhaktarannu salahabEku hayavadanane ||8||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru