ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿನ್ನ ದಾಸನು ನಾನು | ಶ್ರೀ ವಾದಿರಾಜರು | Ninna Dasanu Nanu | Sri Vadirajaru


ರಚನೆ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ನಿನ್ನ ದಾಸನು ನಾನು ಎಂತಾಹೆನಯ್ಯ
ಅನಂತ ಅಪರಾಧಕಾಕರಾದವನು ||ಪ||

ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದು
ಪೊರೆವ ನಿನ್ನಡಿಯ ಮರೆದು
ದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದು
ಮರಿಯಾದೆಗೆಟ್ಟು ತಿರಿದು
ಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯ
ಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ ||೧||

ಜಟ್ಟಿಗಳ ಮನೆಯ ನಾಯಂತೆ ಒಳ್ಳೆ ಬಟ್ಟೆಗಳ
ತೊಟ್ಟವರ ಹಿಂದೆ ತಿರುಗಿ
ಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರು
ಕೆಟ್ಟು ಮುರಿದುದನು ಪೇಳಿ
ಉಟ್ಟ ಅರಿವೆಯ ಕೋರಿ ಹೊಟ್ಟೆ ಬಾಯನೆ ತೋರಿ
ಕೊಟ್ಟುದಕೆ ತುಷ್ಟನಾಗದೆ ಅವರ ಬಯ್ವವನು ||೨||

ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-
ಕೃತ್ಯ ಶತಗಳನು ಮಾಡಿ
ಸತ್ಯ ಶೌಚಂಗಳ ಬಿಟ್ಟು ಶ್ರವಣಮನನಾದಿ ಪ್ರ-
ಸಕ್ತಿಗಳ ಹೋಗಲಾಡಿಸಿ
ಉತ್ತಮರು ತಾಯಿತಂದೆಗುರುಹಿರಿಯರುಗಳ
ಅರ್ಥಗಳನಪಹರಿಸಿ ಅವರ ನಿಂದಿಸುವನು ||೩||

ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿ
ಸರ್ವ ವಿಹಿತಗಳ ಮೀರಿ
ಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನ
ನಿರ್ವಾಹಗಳನೆ ತೋರಿ 
ದುರ್ವಿಚಾರದಿ ಸ್ವಲ್ಪ ಧನಕಾಗಿ ಎನ್ನೊಳಿಹ
ಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ ||೪||

ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯ
ಕುಲಸತಿಯ ಕೂಡೆ ಕಲಹ
ಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-
ಗಳ ಮುರಿವ ಪಾಪಚಿಂತೆ
ಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿ
ಸುಲಭ ಹಯವದನನ್ನ ಮರೆತ್ಹಾಳು ಹರಟೆಯವ ||೫||

ninna daasanu naanu eMtaahenayya
anaMta aparaadhakaakaraadavanu ||pa||

aruNOdayava jaridu aahnika karmava toredu
poreva ninnaDiya maredu
duruLarige bAyderedu dainyadali palgiridu
mariyaadegeTTu tiridu
iruLu hagalennade I vidhadi hoTTeya
horedu idu puNya idu paapaveMdariyadava ||1||

jaTTigaLa maneya naayaMte oLLe baTTegaLa
toTTavara hiMde tirugi
aTTuMDu baaLibadukida tamma hiriyaru
keTTu muridudanu pELi
uTTa ariveya kOri hoTTe baayane tOri
koTTudake tuShTanaagade avara bayvavanu ||2||

vRutti allada shUdra vRuttigaLananusarisi a-
kRutya shatagaLanu maaDi
satya shouchaMgaLa biTTu shravaNamananaadi pra-
saktigaLa hOgalaaDisi
uttamaru taayitaMdeguruhiriyarugaLa
arthagaLanapaharisi avara niMdisuvanu ||3||

parva uparaaga dwaadashi ayanagaLalli
sarva vihitagaLa mIri
urviyoLu uLLa yOgyaranella haLidenna
nirvaahagaLane tOri 
durvichaaradi swalpa dhanakaagi ennoLiha
pUrvasaMchitamaMtra tucCharige maaridava ||4||

Chala chaaDi DaMbha mithyaaj~jaana durviShaya
kulasatiya kUDe kalaha
kaLavu kaThiNOkti duShTaannabhOjana maduve-
gaLa muriva paapachiMte
haLiva harivaasara vratabhaMgadiMda naanaagi
sulabha hayavadananna maret~haaLu haraTeyava ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru