ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕರುಣಾನಿಧಿಯೇ ಈಶ | ಶ್ರೀ ಪುರಂದರ ವಿಠಲ | Karunanidhiye Isha | Sri Purandara Vithala


ರಚನೆ : ಶ್ರೀ ಪುರಂದರ ದಾಸರು 
Krithi : Sri Purandara Dasaru


ಕರುಣಾನಿಧಿಯೇ ಈಶ ಅರುಣಗಿರಿಯ ವಾಸ ||ಪ||
ಮುರನ ವೈರಿಯ ಚರಣದಾಸ 
ಅರುಣರವಿಯ ಕೋಟಿ ಪ್ರಕಾಶ ||ಅಪ||

ಭಸ್ಮಧೂಳಿತ ಸರ್ವಾಂಗ 
ಮತ್ತೆ ತಲೆಯೊಳಿಪ್ಪ ಗಂಗಾ
ವಸ್ತ್ರರಹಿತ ದಿಗಂಬರಲಿಂಗ 
ಕಸ್ತೂರಿರಂಗನ ಪಾದದ ಭೃಂಗ ||೧||

ಮತ್ತೆ ತ್ರಿಪುರ ಸಂಹಾರಿ 
ಚಿತ್ತಜನಯ್ಯನ ಸೇರಿ
ಹಸ್ತದಿ ಶೂಲ ಕಪಾಲಧಾರಿ 
ಕರ್ತೃ ಶ್ರೀ ಹರಿಗೆ ನಿಜವ ತೋರಿ ||೨||

ನಂದಿಗೆ ನರಗೆ ಬಾಹ್ವ 
ಚಂದ್ರನು ಶಿರದಲಿಪ್ಪ
ಇಂದ್ರನ ತೀರ್ಥದಡದಲ್ಲಿಪ್ಪ 
ಎಂದೆಂದಿಗೂ ನಮ್ಮನು ಪಾಲಿಸುತ್ತಿಪ್ಪ ||೩||

ಬೇಡಿದ ವರಗಳ ನೀವ ಮತ್ತೆ 
ಬೇಡಿದ ಭಕ್ತರ ಕಾವ 
ಜಡೆಯ ಮರಳ ಶಿರಳು ಭಾವ 
ಕೊಂಡಾಡುವರೊಳಗೆಲ್ಲ ಎನ್ನದು ಶಿವ ||೪||

ಪಾರ್ವತೀಪುರದ ನಾಥ 
ಕರುಣಿಸು ಸಂತತ ದಾತ
ನಾರದ ಪ್ರಿಯ ಪ್ರಖ್ಯಾತ 
ಪುರಂದರ ವಿಠ್ಠಲನ ದೂತ ||೫||

karuNaanidhiyE Isha aruNagiriya vaasa ||pa||
murana vairiya charaNadaasa 
aruNaraviya kOTi prakAsha ||apa||

BasmadhULita sarvaaMga 
matte taleyoLippa gaMgaa
vastrarahita digaMbaraliMga 
kastUriraMgana paadada BRuMga ||1||

matte tripura saMhaari 
chittajanayyana sEri
hastadi shUla kapaaladhaari 
kartRu shrI harige nijava tOri ||2||

naMdige narage baahva 
chaMdranu shiradalippa
iMdrana tIrthadaDadallippa 
eMdeMdigU nammanu paalisuttippa ||3||

bEDida varagaLa nIva matte 
bEDida bhaktara kaava 
jaDeya maraLa shiraLu bhaava 
koMDaaDuvaroLagella ennadu shiva ||4||

paarvatIpurada naatha 
karuNisu saMtata daata
naarada priya prakhyaata 
puraMdara viThThalana dUta ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru