ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕೇಳೇ ಕಮಲಾನನೆ ರಾಮನ | ಶ್ರೀ ಕಮಲೇಶ ವಿಠ್ಠಲ ದಾಸರು | Kele Kamalanane | Sri Kamalesha Vithala Dasaru


ರಚನೆ : ಶ್ರೀ ಕಮಲೇಶ ವಿಠಲ ದಾಸರು
Kruti: Sri Kamalesha Vithala Dasaru


ಕೇಳೇ ಕಮಲಾನನೆ ರಾಮನ ಕಥೆಯಾ | ಕೊಡುವನು ಸನ್ಮತಿಯಾ ||ಪ||

ಕೇಳು ದಶರಥನೃಪಾಲನುದರದಿ ಸುಲೀಲ ಕರುಣ ವರುಣಾಲಯನುದಿಸಿದ ||ಅಪ||

ಕೌಸಲ್ಯ ದೇವಿಯ ಗರ್ಭದಿಂದ | ಜನಿಸಿ ಮುನಿ ಕುಲೋತ್ತುಂಗನ ಮಖವ ಕಾಯಲು ಬಂದ |
ಬರುತಲೆ ತಾಟಕಿ ಹಿಂಸಾ ಮಾಡಿದ ಮುನಿ ಆಜ್ಞದಲಿಂದ ಕಾಯ್ದ ಸುರವೃಂದಾ |
ಸಂಸೇವಿತ ಮುನಿ ಹಂಸನ ಸತಿಯಘ ಧ್ವಂಸಗೈದ ಪದ ಪಾಂಸುವ ಮಹಿಮೆಯ ||೧||

ಸೀತೆಯ ಸಹಿತಾಯೋಧ್ಯೆಗೆ ಬಂದ | ಕಿರಿಯಮ್ಮಗಿತ್ತ ಮಾತು ಮನ್ನಿಸಲಾವನ ಕೈ ತಂದ |
ಶೂರ್ಪನಖ ಸಹಜಾತನಿಂದವಳನುಪಾಯದಲಿಂದ ಸನ್ಯಾಸಿಯು ಬಂದ |
ಪಾತಕ ಮಾರೀಚಾತಿಶಯ ಖಳವ್ರಾತವ ಘಾತಿಸಿದಾತನ ಮಹಿಮೆಯ ||೨||

ಕುಟಿಳಾಳಕಿ ಸೀತಾನ್ವೇಷಣೆಯಿಂದ | ಶ್ರೀ ರಾಮ ಪಂಪಾತಟಕೆ ತರಲು ಮಾರುತಿ ಬಂದ |
ಸುಗ್ರೀವಗೆ ಸಂಘಟಿಸಿದಾನಾಪ್ತಾನ್ವೇಷಣೆಯಿಂದ | ವಾಲಿಯ ಕೊಂದ ||
ಕಠಿಣ ಖಳರ ಕಪಿಕಟಕದಿಂದ ಅಸುಕುಟಿಸಿದ ಕಮಲೇಶ ವಿಠ್ಠಲನ ಮಹಿಮೆಯ ||೩||

kELE kamalAnane rAmana katheyA | koDuvanu sanmatiyA ||pa||
 
kELu daSarathanRupAlanudaradi sulIla karuNa varuNAlayanudisida ||apa||
 
kausalya dEviya garBadiMda | janisi muni kulOttuMgana maKava kAyalu baMda |
barutale tATaki hiMsA mADida muni Aj~jadaliMda kAyda suravRuMdA |
saMsEvita muni haMsana satiyaGa dhvaMsagaida pada pAMsuva mahimeya ||1||
 
sIteya sahitAyOdhyege baMda | kiriyammagitta mAtu mannisalAvana kai taMda |
SUrpanaKa sahajAtaniMdavaLanupAyadaliMda sanyAsiyu baMda |
pAtaka mArIcAtiSaya KaLavrAtava GAtisidAtana mahimeya ||2||
 
kuTiLALaki sItAnvEShaNeyiMda | SrI rAma paMpAtaTake taralu mAruti baMda |
sugrIvage saMGaTisidAnAptAnvEShaNeyiMda | vAliya koMda ||
kaThiNa KaLara kapikaTakadiMda asukuTisida kamalESa viThThalana mahimeya ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru