Posts

Showing posts from April, 2022

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಂಗನಾಥನೆ ನಿಮ್ಮ ಕಾಣದೆ | ಶ್ರೀ ವಾದಿರಾಜರ ಕೃತಿ | Ranganathane Nimma | Sri Vadirajaru

Image
ರಚನೆ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ರಂಗನಾಥನೆ ನಿಮ್ಮ ಕಾಣದೆ ಭಂಗ ಪಟ್ಟೆನು ಬಹುದಿನಾ   ||ಪ|| ಮಂಗಾಳಂಗ ನಿಮ್ಮ ಪಾದವ ಎನ್ನ ಕಂಗಳಿಗೇ ತೋರೋ ||ಅಪ|| ಕರಿಯ ಮೊರೆ ಲಾಲಿಸಿದಿ ಬೇಗನೆ ನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತೇ  ಅಡವಿಯಲಿ ಅಹಲ್ಯೆಯ ಸಲಹಿದಿ  ಮುಚುಕುಂದನ ರಕ್ಷಿಸಿದೀ ||೧|| ಪುಟ್ಟ ಪ್ರಹ್ಲಾದನ ಸಲಹಿದಿ  ಪಟ್ಟವನು ವಿಭೀಷಣನಿಗೆ ಸಲ್ಲಿಸಿದಿ  ದಟ್ಟ ಅಡವಿಲಿ ಬಂದ ಧ್ರುವನ ಆದರಿಸಿ ಕಾಯ್ದ ರಂಗನಾಥ ||೨|| ಎಷ್ಟು ಹೇಳಲಿ ನಿಮ್ಮ ಮಹಿಮೆಯ ಸೃಷ್ಠಿ ಸ್ಥಿತಿ ಲಯವನ್ನು ಅಳೆದೆ ರಂಗನಾಥ  ಈ ಪುಟ್ಟ ಪಾದವ ಎನ್ನ ಮನದಲಿ  ಇಟ್ಟು ದಯಮಾಡೊ ಕೃಷ್ಣಾ ||೩|| ದಕ್ಷಿಣ ಮುಖವಾಗಿ ಪವಡಿಸಿದೆ ನೀ ದೇವಶಿಖಾಮಣೀ ಏಳೈ ಬಂದ ಭಕ್ತರಿಗೆಲ್ಲಾಭಯ ಹಸ್ತವ  ಕೊಡುವಿ ರಾಜೀವನೇತ್ರ ಹಯವದನ ||೪||      raMganaathane nimma kaaNade bhaMga paTTenu bahudinaa   ||pa|| maMgaaLaMga nimma paadava enna kaMgaLigE tOrO ||apa|| kariya more laalisidi bEgane nereda sabheyali draupadige abhayavanittE  aDaviyali ahalyeya salahidi  mucukuMdana rakShisidI ||1|| puTTa prahlaadana salahidi  paTTavanu vibhIShaNanige sallisidi  daTTa aDavili b...

ನಡೆದು ಬಾರಯ್ಯ ಕೃಷ್ಣ | ಭೀಮೇಶ ಕೃಷ್ಣ | Nadedu Barayya Krishna | Bhimesha Krishna

Image
ರಚನೆ : ಶ್ರೀ ಹರಪನಹಳ್ಳಿ ಭೀಮವ್ವ  Krithi : Sri Harapanahalli Bhimavva ನಡೆದು ಬಾರಯ್ಯ ಕೃಷ್ಣ ನಡೆದು ಬಾರಯ್ಯ ಕೃಷ್ಣ ॥ ಪ  ॥ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ  ಕುಕ್ಷಿಯೊಳಗೆ  ಜಗ ರಕ್ಷಿಸುವಾತನೆಂದು  ವಕ್ಷಸ್ಥಳದಿ ಶ್ರೀ ಮಾಲಕ್ಷ್ಮಿಧರಿಸಿ ಪಾಂಡು ಪಕ್ಷನೆನಿಸಿ ನೀ ಪರೀಕ್ಷಕನುಳುಹಿದಂ- -ತಕ್ಷದಿ ನೋಡುತ ಅಧೋಕ್ಷಜ ಹರಿಯೆ  ॥ ೧  ॥ ಗಜರಾಜ ವರದನೆ ತ್ರಿಜಗದೊಡೆಯ ನಿನ್ನ  ಧ್ವಜ ವಜ್ರಾಂಕುಶ ಪಾದ ಭಜಕರೆನಿಸುವಂಥ ಸುಜನರ್ ವಂದಿತನಾದ  ಕುಜನ ಕುಠಾರಿಯೇ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ  ನಿಜವಾಗಿ ನೊಡೆನ್ನ ರಜತಮ ಕಳೆಯುತ  ॥ ೨  ॥ ಕಡಲಶಯನನಾದ ಉಡುರಾಜ್ವದನ ಬಿಟ್ಟು ಬಿಡಿಯ ಭೀಮೇಶ ಕೃಷ್ಣ ನಿನ್ನೊಡೆಯನೆನುತ ಬಂದ ಬಡವ ಸುಧಾಮಗಿಟ್ಟ ಹಿಡಿ ಹಿಡೀಯೆಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ  ಕೊಡು ಕೊಡು ವರಗಳ ಪೊಡವಿ ಪಾಲಿಪನೆ  || ೩ || Nadedu baarayya krishna nadedu baarayya krishna  || pa || Pakshivaahana parapekshaarahitha ninna Kukshiyolage jaga rakshisuvaathanendu Vakshasthaladi shree malakshmidharisi paandu Pakshanenisi nee pareekshakanuluhidan- -thakshadi Nodutha adhokshaja hariye || 1 || Gajaraaja varadane trijagadodeya ninna Dhwaja vajraank...

ಸುಳ್ಳು ನಮ್ಮಲ್ಲಿಲ್ಲವಯ್ಯ | ಶ್ರೀ ಪುರಂದರ ದಾಸರು | Sullu Nammallillavayya | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೆ ನಮ್ಮನಿ ದೇವರು ||ಪ|| ಇಲಿಯು ಒಲೆಯ ಚಾಚೋದು ಕಂಡೆ ಬೆಕ್ಕು ಬಕ್ಕರಿ ಮಾಡೋದು ಕಂಡೆ  ಮೆಕ್ಕೆ ಕಾಯಿ ಕಂಡೆನವ್ವ ತೆಕ್ಕೆ ಗಾತರ ||೧|| ಕಪ್ಪೆ ಪಾತರ ಕುಣಿಯೋದ ಕಂಡೆ ಏಡಿ ಮದ್ದಲೆ ಬಡಿವುದ ಕಂಡೆ ತೊಂಡೇಕಾಯಿ ಕಂಡೆನವ್ವ ಹಂಡೆ ಗಾತರ ||೨|| ಅರಿಶಿನ ಬಿತ್ತೋದು ಕಂಡೆ ಗಸಗಸೆ ಎಣಿಸೋದು ಕಂಡೆ ಪುರಂದರ ವಿಠಲನ ಪಾದವ ಕಂಡೆ ಪರ್ವತ ಗಾತರ ||೩|| suLLu nammallillavayya suLLe nammani dEvaru ||pa|| iliyu oleya chaacOdu kaMDe bekku bakkari maaDOdu kaMDe  mekke kaayi kaMDenavva tekke gaatara ||1|| kappe paatara kuNiyOda kaMDe EDi maddale baDivuda kaMDe toMDEkaayi kaMDenavva haMDe gaatara ||2|| arishina bittOdu kaMDe gasagase eNisOdu kaMDe puraMdara viThalana paadava kaMDe parvata gaatara ||3||

ನಿನ್ನ ದಾಸನು ನಾನು | ಶ್ರೀ ವಾದಿರಾಜರು | Ninna Dasanu Nanu | Sri Vadirajaru

Image
ರಚನೆ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಿನ್ನ ದಾಸನು ನಾನು ಎಂತಾಹೆನಯ್ಯ ಅನಂತ ಅಪರಾಧಕಾಕರಾದವನು ||ಪ|| ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದು ಪೊರೆವ ನಿನ್ನಡಿಯ ಮರೆದು ದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದು ಮರಿಯಾದೆಗೆಟ್ಟು ತಿರಿದು ಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯ ಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ ||೧|| ಜಟ್ಟಿಗಳ ಮನೆಯ ನಾಯಂತೆ ಒಳ್ಳೆ ಬಟ್ಟೆಗಳ ತೊಟ್ಟವರ ಹಿಂದೆ ತಿರುಗಿ ಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರು ಕೆಟ್ಟು ಮುರಿದುದನು ಪೇಳಿ ಉಟ್ಟ ಅರಿವೆಯ ಕೋರಿ ಹೊಟ್ಟೆ ಬಾಯನೆ ತೋರಿ ಕೊಟ್ಟುದಕೆ ತುಷ್ಟನಾಗದೆ ಅವರ ಬಯ್ವವನು ||೨|| ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ- ಕೃತ್ಯ ಶತಗಳನು ಮಾಡಿ ಸತ್ಯ ಶೌಚಂಗಳ ಬಿಟ್ಟು ಶ್ರವಣಮನನಾದಿ ಪ್ರ- ಸಕ್ತಿಗಳ ಹೋಗಲಾಡಿಸಿ ಉತ್ತಮರು ತಾಯಿತಂದೆಗುರುಹಿರಿಯರುಗಳ ಅರ್ಥಗಳನಪಹರಿಸಿ ಅವರ ನಿಂದಿಸುವನು ||೩|| ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿ ಸರ್ವ ವಿಹಿತಗಳ ಮೀರಿ ಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನ ನಿರ್ವಾಹಗಳನೆ ತೋರಿ  ದುರ್ವಿಚಾರದಿ ಸ್ವಲ್ಪ ಧನಕಾಗಿ ಎನ್ನೊಳಿಹ ಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ ||೪|| ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯ ಕುಲಸತಿಯ ಕೂಡೆ ಕಲಹ ಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ- ಗಳ ಮುರಿವ ಪಾಪಚಿಂತೆ ಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿ ಸುಲಭ ಹಯವದನನ್ನ ಮರೆತ...

ಹಿಗ್ಗುವೆ ಯಾಕೋ ಈ ದೇಹಕ್ಕೆ | ಶ್ರೀ ಪುರಂದರ ದಾಸರು | Higguve Yako | Sri Purandara Dasaru

Image
ರಚನೆ :  ಶ್ರೀ ಪುರಂದರ ದಾಸರು  Krithi : Sri Purandara Dasaru  ಹಿಗ್ಗುವೆ ಯಾಕೋ ಈ ದೇಹಕ್ಕೆ ಹಿಗ್ಗುವೆ ಯಾಕೋ ||ಪ|| ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ  ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ ||ಅಪ|| ಸತಿಪುರುಷರು ಕೂಡಿ ರತಿಕ್ರೀಡೆಗಳ ಮಾಡಿ ಪತನಾದ ಇಂದ್ರಿಯ ಪ್ರತಿಮೆಯ ದೇಹಕ್ಕೆ ||೧|| ಆಗದ ಭೋಗಗಳನ್ನು ಆಗುಮಾಡುತಲಿದ್ದು ರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ ||೨|| ಪರರ ಸೇವೆಯ ಮಾಡಿ ನರಕಭಾಜನನಾಗಿ ಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ ||೩|| ಸೋರುವುದೊಂಭತ್ತು ಬಾಗಿಲ ಮಲ ನೀರಿಲ್ಲದಿದ್ದರೆ ನಾರುವ ದೇಹಕ್ಕೆ ||೪|| ಪುರಂದರವಿಠಲನ ಚರಣಕಮಲಕ್ಕೆ ಎರಗದೆ ತಿರುಗುವ ಗರುವದ ದೇಹಕ್ಕೆ ||೫|| higguve yaakO I dEhakke higguve yaakO ||pa|| higguva tagguva mugguva kugguva  agniyoLage biddu dagdhavaaguva dEhakke ||apa|| satipuruSharu kUDi ratikrIDegaLa maaDi patanaada iMdriya pratimeya dEhakke ||1|| Agada bhOgagaLannu AgumaaDutaliddu rOga baMdare biddu hOguva dEhakke ||2|| parara sEveya maaDi narakabhaajananaagi maraLi maraLi biddu uruLuva dEhakke ||3|| sOruvudoMbhattu baagila mala nIrilladiddare naaruva dEhakke ||4|| puraMdaraviThalana caraNakamalakke eragade tiruguva g...

ಜಲದೊಳು ಮತ್ಸ್ಯಾವತಾರನಿಗೆ | ಶ್ರೀ ಪುರಂದರ ದಾಸರು | Jaladolu Matsya | Purandara Dasaru

Image
ರಚನೆ : ಶ್ರೀ ಪುರಂದರ ದಾಸರು  Krithi : Sri Purandara Dasaru ಜಲದೊಳು ಮತ್ಸ್ಯಾವತಾರನಿಗೆ | ಗಿರಿಯ ಬೆನ್ನಲ್ಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಹಾವತಾರಗೆ | ಸಣ್ಣ ಮಗುವ ಕಾಯ್ದ ನರಸಿಂಹಗೆ ಮಂಗಳಂ ಜಯ ಮಂಗಳಂ |  ಮಂಗಳಂ ನಿತ್ಯ ಶುಭಮಂಗಳಂ ಭೂಮಿಯ ದಾನವ ಬೇಡಿದವಗೆ | ಆ ಮಹಾ ಅಸುರರ ಗೆಲಿದವಗೆ  ರಾಮಚಂದ್ರನೆಂಬ ದಶರಥ ಪುತ್ರಗೆ | ಭಾಮೆಯರರಸ ಗೋಪಾಲನಿಗೆ  ಮಂಗಳಂ ಜಯ ಮಂಗಳಂ ಮಂಗಳಂ ನಿತ್ಯ ಶುಭಮಂಗಳಂ ಬತ್ತಲೆ ನಿಂದಿಹ ಬೌದ್ಧನಿಗೆ ಉತ್ತಮ ಹಯವೇರಿದ ಕಲ್ಕಿಗೆ ಹತ್ತವತಾರದಿ ಭಕ್ತರ ಸಲಹುವ ಕರ್ತೃ ಶ್ರೀಪುರಂದರ ವಿಠಲನಿಗೆ ಮಂಗಳಂ ಜಯ ಮಂಗಳಂ ಮಂಗಳಂ ನಿತ್ಯ ಶುಭಮಂಗಳಂ jaladoLu matsyAvatAranige | giriya bennalli potta kUrmanige dhareyanuddharisida varahAvatArage | saNNa maguva kAyda narasiMhage maMgaLaM jaya maMgaLaM |  maMgaLaM nitya SuBamaMgaLaM BUmiya dAnava bEDidavage | A mahA asurara gelidavage  rAmacaMdraneMba daSaratha putrage | BAmeyararasa gOpAlanige  maMgaLaM jaya maMgaLaM maMgaLaM nitya SuBamaMgaLaM battale niMdiha bauddhanige uttama hayavErida kalkige hattavatAradi Baktara salahuva kartRu SrIpuraMdara viThalanige maMgaLaM jaya maMgaLaM maMgaLaM nitya...

ಕರುಣಾನಿಧಿಯೇ ಈಶ | ಶ್ರೀ ಪುರಂದರ ವಿಠಲ | Karunanidhiye Isha | Sri Purandara Vithala

Image
ರಚನೆ : ಶ್ರೀ ಪುರಂದರ ದಾಸರು  Krithi : Sri Purandara Dasaru ಕರುಣಾನಿಧಿಯೇ ಈಶ ಅರುಣಗಿರಿಯ ವಾಸ ||ಪ|| ಮುರನ ವೈರಿಯ ಚರಣದಾಸ  ಅರುಣರವಿಯ ಕೋಟಿ ಪ್ರಕಾಶ ||ಅಪ|| ಭಸ್ಮಧೂಳಿತ ಸರ್ವಾಂಗ  ಮತ್ತೆ ತಲೆಯೊಳಿಪ್ಪ ಗಂಗಾ ವಸ್ತ್ರರಹಿತ ದಿಗಂಬರಲಿಂಗ  ಕಸ್ತೂರಿರಂಗನ ಪಾದದ ಭೃಂಗ ||೧|| ಮತ್ತೆ ತ್ರಿಪುರ ಸಂಹಾರಿ  ಚಿತ್ತಜನಯ್ಯನ ಸೇರಿ ಹಸ್ತದಿ ಶೂಲ ಕಪಾಲಧಾರಿ  ಕರ್ತೃ ಶ್ರೀ ಹರಿಗೆ ನಿಜವ ತೋರಿ ||೨|| ನಂದಿಗೆ ನರಗೆ ಬಾಹ್ವ  ಚಂದ್ರನು ಶಿರದಲಿಪ್ಪ ಇಂದ್ರನ ತೀರ್ಥದಡದಲ್ಲಿಪ್ಪ  ಎಂದೆಂದಿಗೂ ನಮ್ಮನು ಪಾಲಿಸುತ್ತಿಪ್ಪ ||೩|| ಬೇಡಿದ ವರಗಳ ನೀವ ಮತ್ತೆ  ಬೇಡಿದ ಭಕ್ತರ ಕಾವ  ಜಡೆಯ ಮರಳ ಶಿರಳು ಭಾವ  ಕೊಂಡಾಡುವರೊಳಗೆಲ್ಲ ಎನ್ನದು ಶಿವ ||೪|| ಪಾರ್ವತೀಪುರದ ನಾಥ  ಕರುಣಿಸು ಸಂತತ ದಾತ ನಾರದ ಪ್ರಿಯ ಪ್ರಖ್ಯಾತ  ಪುರಂದರ ವಿಠ್ಠಲನ ದೂತ ||೫|| karuNaanidhiyE Isha aruNagiriya vaasa ||pa|| murana vairiya charaNadaasa  aruNaraviya kOTi prakAsha ||apa|| BasmadhULita sarvaaMga  matte taleyoLippa gaMgaa vastrarahita digaMbaraliMga  kastUriraMgana paadada BRuMga ||1|| matte tripura saMhaari  chittajanayyana sEri hastadi shUla kapaaladhaari  kartRu shrI harige ni...

ನಾರಾಯಣನ್ಯಾರೇ ಪೇಳೆ ಸಖಿ | ಶ್ರೀಪುರಂದರ ವಿಠಲ | Narayananyare Pele Sakhi | Sri Purandara Dasaru

Image
ರಚನೆ :  ಶ್ರೀ ಪುರಂದರ ದಾಸರು  Krithi : Sri Purandara Dasaru ನಾರಾಯಣ ನಾರಾಯಣ ನಾರಾಯಣ ನಾರಾಯಣ  ನಾರಾಯಣನ್ಯಾರೇ ಪೇಳೆ ಸಖಿ| ನಾರಾಯಣನ್ಯಾರೇ ಪೇಳೆ ಸಖಿ ||ಪ|| ಕ್ಷೀರಸಾಗರದಲ್ಲಿ ಶಯನವ ಮಾಡಿದ ಆದಿನಾರಾಯಣ ನೋಡೇ ಸಖಿ ||ಅಪ|| ಕಾಲಿಲ್ಲದಲೆ ಓಡಿ ಎವೆಯಿಕ್ಕದಲೆ ನೋಡಿ ಮಿಂಚಿನಂತ್ಹೊಳೆಯುವನ್ಯಾರೆ ಸಖಿ| ವೇದವ ತಂದು ಸುರರಿಗೆ ಕೊಟ್ಟಂಥ ಮತ್ಸ್ಯಾವತಾರನ್ನ ನೋಡೆ ಸಖಿ ||೧|| ತಲೆಯ ತಗ್ಗಿಸುವನು ಕಡಲೊಳು ಆಡುವ| ಕಡೆದರೆ ಕಡಗೋಲನ್ಯಾರೆ ಸಖಿ| ಸುರರು ದೈತ್ಯರು ಕೂಡಿ ಶರಧಿಯ ಮಥಿಸಲು ಕೂರ್ಮಾವತಾರನೆ ಇಂದುಮುಖಿ ||೨|| ಮಾರಿ ತಗ್ಗಿಸುವನು ಮಣ್ಣು ಚಿಮ್ಮಿ ಬಿಡುವ ಕೋರೆದಾಡೆಯವನ್ಯಾರೇ ಸಖಿ| ದುರುಳನ್ನ ಕೊಂದು ಧರಣಿಯ ತಂದಂಥ ವರಾಹವತಾರನೇ ವಾರಿಜಾಕ್ಷಿ ||೩|| ಕಂಬದಿಂದಲಿ ಬಂದು ಕರುಳನ್ನ ಬಗೆದು ಕೊರಳೊಳು ಹಾಕಿದವನ್ಯಾರೆ ಸಖಿ| ನರಮೃಗ ರೂಪದಿ ಉದರವ ಸೀಳಿದ ನಾರಸಿಂಹನ ರೂಪ ನೋಡೆ ಸಖಿ ||೪|| ಪುಟ್ಟ ಪಾದದಿಂದ ಸೃಷ್ಟಿಯನಳೆದ ದಿಟ್ಟ ಬ್ರಹ್ಮಚಾರಿ ಯಾರೇ ಸಖಿ| ಕೊಟ್ಟಿದ್ದು ಸಾಲದೆ ಮೆಟ್ಟಿದ ಶಿರವನ್ನು ಪುಟ್ಟ ವಾಮನ ರೂಪ ನೋಡೇ ಸಖಿ ||೫|| ಕೋಪದಿಂದಲಿ ಬಂದು ಕೊಡಲಿಯನ್ನೆ ಪಿಡಿದು ಕುಲವನ್ನೆ ಸವರಿದವನ್ಯಾರೇ ಸಖಿ| ರಕ್ತದೊಳಗೆ ಸ್ನಾನ ತರ್ಪಣ ಮಾಡಿದ ವಿಪ್ರ ಭಾರ್ಗವರಾಮ ನೋಡೆ ಸಖಿ ||೬|| ಶೀಘ್ರದಿಂದಲಿ ಬಂದು ಶಬರಿ ಎಂಜಲನುಂಡು ಸೇತುವೆ ಬಂಧನ ಯಾರೇ ಸಖಿ| ದಶರಥನುದರದಿ ಶಿಶುವಾಗಿ ಜನಿಸಿದ ಕೌಸಲ್ಯಾರಾಮನ್ನ ನೋಡೇ ಸಖಿ ||೭|| ಬ್ರಹ...

ತಿರುಪತಿ ವೇಂಕಟರಮಣ | ಶ್ರೀ ಪುರಂದರ ದಾಸರ ಕೃತಿ | Tirupati Venkataramana | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ತಿರುಪತಿ ವೇಂಕಟರಮಣ ನಿನಗೇತಕೆ ಬಾರದು ಕರುಣ ||ಪ|| ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣಾ ||ಅ ಪ|| ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನ ಗಿರಿಯಲಿ ನಿಂದ ಕೊಳನೂದುವುದೇ ಚೆಂದ ನಮ್ಮ ಕುಂಡಲರಾಯ ಮುಕುಂದ ||೧|| ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ ವೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ ||೨|| ಮೂಡಲ ಗಿರಿಯಲಿ ನಿಂತ ಮುದ್ದು ವೇಂಕಟಪತಿ ಬಲವಂತ ಈಡಿಲ್ಲ ನಿನಗೆ ಶ್ರೀಕಾಂತ ಈರೇಳು ಲೋಕಕೆ ಅನಂತ ||೩||  ಆಡಿದರೆ ಸ್ಥಿರವಪ್ಪ ಅಬದ್ದಗಳಾಡಲು ಒಪ್ಪ ಬೇಡಿದ ವರಗಳನಿಪ್ಪ ನಮ್ಮ ಮೂಡಲ ಗಿರಿಯ ತಿಮ್ಮಪ್ಪ ||೪||   ಅಪ್ಪವು ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ ಸತಿಯರ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ ||೫|| ಬಗೆ ಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯಾನ್ನ ಬಗೆ ಬಗೆ ಸೊಬಗು ಮೋಹನ್ನ ನಮ್ಮ ನಗೆಮುಖದ ಸುಪ್ರಸನ್ನ ||೬|| ಕಾಶೀ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದೇ ಚೆಂದ ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೇ ಚೆಂದ ||೭|| ಎಲ್ಲ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ ಬಲ್ಲಿದವರಿಗೆ ಉದ್ದಂಡ ಶಿವ ಬಿಲ್ಲ ಮುರಿದ ಪ್ರಚಂಡಾ ||೮|| ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದೆ ಗಂಟು ಕಟ್ಟಿ ದಾಸನೆಂದರೆ ಬಿಡಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ ||೯|| ...

ಪಾಲಿಸಮ್ಮ ಮುದ್ದು ಶಾರದೆ | ಶ್ರೀ ಪುರಂದರ ದಾಸರ ಕೃತಿ | Palisemma Muddu | Sri Purandara Dasaru

Image
  ರಚನೆ :  ಶ್ರೀ ಪುರಂದರ ದಾಸರು  Krithi : Sri Purandara Dasaru ಪಾಲಿಸಮ್ಮ ಮುದ್ದು ಶಾರದೆ | ಎನ್ನ ನಾಲಿಗೆಯಲ್ಲಿ ನಿಲ್ಲಬಾರದೆ ||ಪ|| ಲೋಲ ಲೋಚನೆ ತಾಯೇ ನಿರುತ ನಂಬಿದೆ ನಿನ್ನ ||ಅಪ|| ಅಕ್ಷರಕ್ಷರ ವಿವೇಕವ ನಿನ್ನ  ಕುಕ್ಷಿಯೊಳೀರೇಳು ಲೋಕವ || ಸಾಕ್ಷಾತ್ ರೂಪದಿಂದ ಒಲಿದು ರಕ್ಷಿಸು ತಾಯೇ ||೧|| ಶೃಂಗಾರಪುರ ನೆಲೆ ವಾಸಿನೀ |ದೇವಿ  ಸಂಗೀತ ಗಾನ ವಿಲಾಸಿನಿ || ಮಂಗಳ ಗಾತ್ರಳೇ ಭಳಿರೇ ಬ್ರಹ್ಮನ ರಾಣಿ ||೨|| ಸರ್ವಾಲಂಕಾರ ದಯ ಮೂರುತಿ ನಿನ್ನ  ಚರಣವ ಸ್ಮರಿಸುವೆ ಕೀರುತಿ || ಗುರು ಮೂರ್ತಿ ಪುರಂದರ ವಿಠಲನ ಸ್ಮರಿಸುವೆ ||೩|| pAlisamma muddu SArade | enna nAligeyalli nillabArade ||pa|| lOla lOcane tAyE niruta naMbide ninna ||apa||   akSharakShara vivEkava ninna  kukShiyoLIrELu lOkava || sAkShAt rUpadiMda olidu rakShisu tAyE ||1||   SRuMgArapura nele vAsinI |dEvi  saMgIta gAna vilAsini || maMgaLa gAtraLE BaLirE brahmana rANi ||2||   sarvAlaMkAra daya mUruti ninna  caraNava smarisuve kIruti || guru mUrti puraMdara viThalana smarisuve ||3||

ನಂಬಿದೆ ನಿನ್ನ ಪಾದ | ಶ್ರೀ ಗುರುವಿಜಯವಿಠಲ ದಾಸರ ಕೃತಿ | Nambide Ninna Pada | GuruVijayaVittala Dasaru

Image
ರಚನೆ :  ಶ್ರೀ ಗುರುವಿಜಯವಿಠಲ ದಾಸರು  Krithi : Sri GuruVijayavittala Dasaru ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ||ಪ|| ನಂಬಿದೆ ನಿನ್ನ ಪಾದ ಡಂಬವ ತೊಲಗಿಸಿ | ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ ||ಅಪ|| ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಮ ಹಂಸಮಂತರಾ ತಪ್ಪದೆ ದಿನದಿನವಪ್ಪನಂದದಿ ಜಪಿಸಿ ತಪ್ಪಿಸೋ ಭವದ ಸಮೀಪದ ಜೀವಕೆ  ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸೋ  ಕಪ್ಪು ವರ್ಣನ ಕೂಡ ಒಪ್ಪಿಸಿ ಪಾಲಿಸೋ||೧|| ಹತ್ತೇಳು ಎರಡಾಯುತ ನಾಡಿಯೊಳು ಸುತ್ತಿ ಸುತ್ತುವ ಮಾರುತ ಉತ್ತರ ಲಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯ ದ್ವಾರದಿಂದ  ಎತ್ತ ಪೋಗಲೀಸದದೆ ತತ್ತುವರೊಳು ಜೀವೋತ್ತಮನೆ ಸತ್  ಚಿತ್ತ ಎನಗೆ ಕೊಡು ಉತ್ತರ ಲಾಲಿಸೋ ||೨|| ಅಂತರಂಗದ ಉಸಿರ ಹೊರಗೆ ಬಿಟ್ಟು  ಅಂತರಂಗಕ್ಕೆ ಸೇರುವ ಪಂಥದಾಳು ನೀನೇ ಕಂತು ಜನಕನಲ್ಲಿ ಮಂತ್ರಿಯೆಂದೆನಿಸಿ ಸರ್ವರಂತರ‍್ಯಾಮಿಯಾಗಿ ನಿಂತು ನಾನಾ ಬಗೆ  ತಂತು ನಡೆಸುವ ಹೊಂತಕಾರಿ ಗುಣವಂತ ಬಲಾಢ್ಯ ||೩|| ಪಂಚಪ್ರಾಣ ರೂಪನೆ ಸತ್ವಕಾಯ ಪಂಚೇಂದ್ರಿಯಗಳಪ್ಪನೆ ಮುಂಚಿನ ಪರಮೇಷ್ಟಿ ಸಂಚಿತಾಗಮಿ ಬಿಡಿಸಿ ಕೊಂಚ ಮಾಡೋ ಪ್ರಾರಬ್ಧ ವಂಚನೆ ಗೈಸದೆ ಅಂಚಂಚಿಗೆ ಪರ ಪಂಚಗಳೋಡಿಸಿ ಪಂಚ ವಕ್ತ್ರ ಹರಿಮಂಚದ ಗುರುವೇ ||೪|| ಯೋಗಾಸನದೊಳಿಪ್ಪ ಯಂತ್ರೋದ್ಧಾರ ಭಾಗವತರ ಅಪ್ಪ | ಯೋಗಿಗಳೀಶ ವ್ಯಾಸಯೋಗಿಗೊಲಿದನ್ಯಾಸ ಶ್ರೀ  ತುಂಗಭದ್ರ ನಿವಾಸ ಬಾಗುವೆ ಕೊಡು ಲೇಸಾ ಶ್...

ಕೂಗೆಲೋ ಮನುಜ | ಶ್ರೀ ವಿಜಯದಾಸರ ಕೃತಿ | Koogelo Manuja | Sri Vijaya Dasara Kruti

Image
ರಚನೆ : ಶ್ರೀ ವಿಜಯ ದಾಸರು Kruti: Sri Vijaya Dasaru ಕೂಗೆಲೋ ಮನುಜ ಕೂಗೆಲೋ ||ಪ|| ಸಾಗರಶಯನನೆ ಜಗಕೆ ದೈವವೆಂದು ||ಅಪ|| ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ ಸಚ್ಚಿದಾನಂದೈಕ ಸರ್ವೋತ್ತಮ ಸಚ್ಚರಿತ ರಂಗ ನಾರಾಯಣ ವೇದ ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು ||೧|| ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿ ಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು ||೨|| ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ ವರದ ಅಪಾರ ಸದ್ಗುಣನಿಲಯ ಮುರಮರ್ದನ ಮಂಜು ಭಾಷಣ ಕೇಶವ ನಿರ್ಮಲ ದೇವ ಭೂವರಾಹಮೂರುತಿಯೆಂದು ||೩|| ನಿಗಮವಂದಿತ ವಾರಿಜನಾಭ ಅನಿರುದ್ಧ ಅಘನಾಶ ಅಪ್ರಾಕೃತ ಶರೀರ ಸುಗುಣ ಸಾಕಾರ ಜಗದತ್ಯಂತ ಭಿನ್ನ ತ್ರಿಗುಣರಹಿತ ನರಮೃಗ ರೂಪಾನೆಂದು ||೪|| ವಟಪತ್ರಶಯನ ಜಗದಂತರ್ಯಾಮಿ ಕಟಕ ಮುತ್ತಿನಹಾರ ಕೌಸ್ತುಭ ವಿಹಾರ ತಟಿತ್ಕೋಟಿ ನಿಭಕಾಯ ಪೀತಾಂಬರಧರ ನಿಟಿಲಲೋಚನ ಬಾಲವಟು ಮೂರುತಿಯೆಂದು ||೫|| ವಿಷ್ಣು ಸಂಕರುಷನ ಮಧುಸೂದನ ಶ್ರೀ ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು ||೬|| ಇಭರಾಜ ಪರಿಪಾಲ ಇಂದಿರೆಯರಸ ನಭ ಗಂಗಾಜನಕ ಜನಾರ್ದನನೆ ವಿಭುವೇ ವಿಶ್ವರೂಪ ವಿಶ್ವನಾಟಕ ಋಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು ||೭|| ವೈಕುಂಠ ವಾಮನ ವಾಸುದೇವ ರಂಗ ಲೋಕೇಶ ನವನೀತ ಚೋರ ಜಾರ  ಗೋಕುಲವಾಸಿ ಗೋವಳರಾಯ ಶ್ರೀಧರ ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು ||೮|...

ಮಾತಾಡೆ ಎನ್ನ ಮೌನದ ಗೌರಿ | ಶ್ರೀ ಶ್ರೀದವಿಠಲ ದಾಸರು | Matade Enna | Sri Sridavithala Dasaru

Image
ರಚನೆ :  ಶ್ರೀ ಶ್ರೀದವಿಠಲ ದಾಸರು  Krithi : Sri Sridavittala Dasaru ಮಾತಾಡೆ ಎನ್ನ ಮೌನದ ಗೌರಿ ಯಾತಕಚಲಮನ ಸೋತವನೊಡನೆ || ಮಾತಾಡೇ ಗೌರಿ ಮಾತಾಡೇ || ಪ || ನಸು ನಗೆ ಮೊಗವಿದು ಬಾಡಿದ ಕೆಂದುಟಿಯು  ಬೆಸೆದಿರಲು ನಾ ನೋಡಿ | ವಸುಧೆಯೊಳಗೆ ನಾ ಜೀವಿಸಲಾರೆ |  ಘಸಘಸವ್ಯಾತಕೆ ತುಂಬಿತು ಅರಗಿಣಿ ||೧|| ಕ್ಷಣಬಿಟ್ಟಿರಲಾರೆ ಅಮ್ಮ  ಷಣ್ಮುಖ ಗಣಪರ ತಾಯೇ ನೀ ಬಾರೇ | ಎನ್ನಪರಾಧವ ಮನ್ನಿಸಿ ಬಾರೇ  ನಿನ್ನಯ ಬಿಟ್ಟರೆ ಗತಿ ಇನ್ಯಾರೇ ||೨|| ಕ್ರೋಧವ್ಯಾತಕೆ ಎನ್ನೊಳು ಗೌರಿ ಎನ್ನಪ- ರಾಧವು ಇದ್ದರು ತಾಳೇ ಶ್ರೀದವಿಠಲನ ಪಾದ ಕಿಂಕಿಣಿಯೇ  ಆದರಿಸುವೆ ನಾ ಆದರಿಸುವೆನೆ ||೩|| mAtADe enna maunada gauri yAtakacalamana sOtavanoDane || maataaDE gouri maataaDE || pa || nasu nage mogavidu bADida keMduTiyu  besediralu nA nODi | vasudheyoLage naa jIvisalAre |  GasaGasavyaatake tuMbitu aragiNi ||1|| kShaNabiTTiralAre amma  ShaNmukha gaNapara tAyE nI bArE | ennaparAdhava mannisi bArE  ninnaya biTTare gati inyArE ||2|| krOdhavyAtake ennoLu gauri ennapa- rAdhavu iddaru taaLE SrIdaviThalana pAda kiMkiNiyE  Adarisuve nA Adarisuvene ||3||

ಅಸುರರನು ಅಳಿಯ ಬಂದೆನು | ಹಯವದನ | Asuraranu Aliya Bandenu | Sri Vadirajaru

Image
ರಚನೆ : ಶ್ರೀ ವಾದಿರಾಜರು  Krithi : Sri Vadirajaru ಅಸುರರನು ಅಳಿಯ ಬಂದೆನು ನಾನು ನಿನ್ನ  ವೈರಿ ದಶರಥ ರಾಮನಾಳೆಂದ ||ಪ|| ಹೊಸ ಕಪಿಯೆ ನೀನು ಬಂದುದೇನು ಕಾರಣವೆನಲು  ದಿಶೆಗೆ ಬಲ್ಲಿದ ಹನುಮ ನಾ ಕೇಳೊ | ನಿ- ನ್ನಸುರ ಪಡೆಯ ಮಡುಹ ಬಂದೆ ನಿನ್ನ  ಎಸೆವ ಪಾದದಲೊದೆಯ ಬಂದೆ ವನದ  ಸಸಿಯ ಕಿತ್ತೀಡ್ಯಾಡಿ ನಿಂದೆ ನಿನ್ನ  ದಶಶಿರವ ಕತ್ತರಿಸಿ ಎಸೆವ ರಾಮರ ಮಡದಿ  ಹಸುಳೆ ಸೀತೆಯ ಅರಸಲು ಬಂದೆ ||೧|| ಎನ್ನ ವೈರಿಗಳು ಇನ್ಯಾರೆಂದು ರಾವಣನು  ಹೊನ್ನಕುಂಡಲದ ಹನುಮನೆ ಕೇಳೊ  ಮುನ್ನವರ ಸಾಹಸವಯೇನೆಂಬೆ ಅವರ  ಪರ್ನಶಾಲೆಯ ಹೊಕ್ಕು ಬಂದೆ ರಾಮ- ಕನ್ಯೆ ಸೀತಾಂಗನೆಯ ತಂದೆ  ತನ್ನ ಬಿಲ್ಲ ತಾ ಹೊತ್ತು ತಿರುಗುವುದ ಕಂಡೆ  ಇನ್ನು ಹೆಮ್ಮೆ ಮಾತ್ಯಾತಕೊ ಕಪಿಯೆ ||೨|| ಕಚ್ಚಿ ಕೀಳಲೊ ಕಣ್ಣು ಹತ್ತು ತಲೆಯನೆ ಹಿಡಿದು  ನುಚ್ಚು ನುರಿ ಮಾಡಿ ಕೊಲ್ಲಲೊ ನಿನ್ನ ಇಷ್ಟು  ಹೆಚ್ಚಿನ ಮಾತ್ಯಾಕೋ ನಿನಗೆ ಬಹಳ  ಕಿಚ್ಚು ತುಂಬಿತು ಕೇಳೋ ಎನಗೆ ಒಂದು  ಮೆಚ್ಚು ಹೇಳುವೆನೊ ರಾಮರಿಗೆ  ಅಚ್ಯುತನ ಬಾಣಕೆ ಮೀಸಲಾಗಿರು ನೀನು  ಎಚ್ಚೆತ್ತು ತಾಳು ತಾಳೊ ||೩|| ಮುನ್ನೂರ ಮೂವತ್ತು ಕೋಟಿ ದೇವತೆಗಳನು  ಇನ್ನು ನಾ ಸೆರೆಯಾಳುತಿಹೆನೋ ಕಪಿಯೇ ಈಗ  ಎನ್ನ ಮ್ಯಾಲೆ ದಂಡೆತ್ತಿ ಬಾಹೊನ್ಯಾರೋ ನೀನು  ಎನ್ನ ಮನೆ ಭಂಡಾರ ನೋಡೋ  ಎನ್ನ ಸಾಹಸಕೆ ಈಡ್ಯಾರೋ  ...

ಮರೆಯದೆ ಸಲಹೆನ್ನನು | ಭೀಮೇಶಕೃಷ್ಣ | Mareyade Salahennanu | Bhimesha Krishna

Image
ಸಾಹಿತ್ಯ : ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ)  Kruti:  Harapanahalli Bhimavva (Bhimesha Krishna) ಮರೆಯದೆ ಸಲಹೆನ್ನನು ಯಾದವಗಿರಿ- ದೊರೆ ಮಂಗರಾಯ ನೀನು ||ಪ|| ಸರ್ವಜೀವೋತ್ತಮನೆ ನಿನ್ನನು ಮೊರೆಯಹೊಕ್ಕೆನು ಮಾರುತಾತ್ಮಜ ಕರೆದು ಭಕುತರಿಗ್ವರವ ನೀಡುವ  ಬಿರುದು ನಿನ್ನದು ಭಾರತೀಶ ||ಅ ಪ|| ಸೀತಾವಲ್ಲಭ ರಾಮರ ಪಾದಾಂಬುಜ ದೂತನೆಂದೆನಿಸಿದೆಯೊ ಮಾತೆಗಿತ್ತು ಮುದ್ರಿಕೆಯನು ಘಾತಕ ರಾವಣನ ಪುರಕೆ ಕಾರ್ತೀಕದುತ್ಸವ ಮಾಡಿ ಮಂಗ- ಳಾರ್ತಿ ಬೆಳಗಿದೆ ಬಾಲದಿಂದ ||೧|| ಬಕ ಹಿಡಿಂಬಕ ಕೀಚಕ ಕಿಮ್ಮೀರ ಮಾಗಧ ಮುಖ್ಯ ಪ್ರಮುಖರನು ಸಕಲ ಅನುಜರ ಸಹಿತ ದುರ್ಯೋಧನನ ಪ್ರಾಣವ ಸೆಳೆದು ಬ್ಯಾಗನೆ ನಕುಲ ಧರ್ಮಜ ಸಾದೇವ ದ್ರೌಪದಿಗೆ ಸುಖ ಸಂತೋಷ ನೀಡಿದೆ ||೨|| ಮಧ್ಯಗೇಹರಲ್ಲಿ ಜನಿಸಿ ಸುಜನರಿಗೆ ಶುದ್ಧಶಾಸ್ತ್ರವ ಬೋಧಿಸಿ ಗೆದ್ದು ಮಾಯಾವಾದಿಗಳನು ಪ್ರ- ಸಿದ್ಧನೆನಿಸಿದೆ ಮಧ್ವಮುನಿವರ  ಮುದ್ದು ಭೀಮೇಶಕೃಷ್ಣನ ಪ್ರ- ಸಿದ್ಧಿ ಮಾಡಿದೆ ಪರಮ ಗುರುವೆ ||೩|| mareyade salahennanu yAdavagiri- dore maMgarAya nInu ||pa|| sarvajIvOttamane ninnanu moreyahokkenu mArutAtmaja karedu Bakutarigvarava nIDuva  birudu ninnadu BAratISa ||a pa|| sItAvallaBa rAmara pAdAMbuja dUtaneMdenisideyo mAtegittu mudrikeyanu GAtaka rAvaNana purake kArtIkadutsava mADi maMga- LArti b...

ಎಷ್ಟು ಸಾಹಸವಂತ | ಶ್ರೀ ವಾದಿರಾಜರ ಕೃತಿ | Eshtu Sahasavanta | Sri Vadirajaru

Image
ರಚನೆ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎಷ್ಟು ಸಾಹಸವಂತ ನೀನೆ ಬಲವಂತ ದಿಟ್ಟಮೂರುತಿ ಭಳಿರೆ ಭಳಿರೆ ಹನುಮಂತ ||ಪ|| ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ||ಅಪ|| ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾಲಂಕೆಯ ಕಂಡೆ ಕಿರೀಟಿ ಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ ||೧|| ದೂರದಿಂದಸುರನ ಪುರವನ್ನು ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ ಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ ||೨|| ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರಿಕೆ ನೀಡಿ ಪ್ರೇಮದಿಂ ಜಾನಕಿ ಕುರುಹನು ಕೊಡಲಾಗ ಆ ಮಹಾ ವನದೊಳು ಫಲವನು ಬೇಡಿ ||೩|| ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು ಹಣ್ಣಿನ ನೆವದಲಿ ಅಸುರರ ಹೊಯ್ದು ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ ಬಣ್ಣಿಸಿ ಅಸುರರ ಬಲವನು ಮುರಿದ್ಯೋ ||೪|| ಶೃಂಗಾರವನದೊಳಗೆ ಇದ್ದ ರಕ್ಕಸರ ಅಂಗವನಳಿಸಿದೆ ಅತಿರಣಶೂರ ನುಂಗಿ ಅಸ್ತ್ರಗಳ ಅಕ್ಷಯಕುವರನ ಭಂಗಿಸಿ ಬಿಸುಟಿಯೊ ಬಂದ ರಕ್ಕಸರ ||೫|| ದೂರು ಪೇಳಿದರೆಲ್ಲ ರಾವಣನೊಡನೆ ಚೀರುತ್ತ ಕರೆಸಿದ ಇಂದ್ರಜಿತುವನೆ ಚೋರಕಪಿಯನು ಹಿಡಿತಹುದೆನ್ನುತ ಶೂರರ ಕಳುಹಿದ ನಿಜಸುತರೊಡನೆ ||೬|| ಪಿಡಿದನು ಇಂದ್ರಜಿತು ಕಡುಕೋಪದಿಂದ ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದೆಡೆಗೆ ||೭|| ಕ...

ಅರಸಿನಂತೆ ಬಂಟನೋ | ಶ್ರೀ ಕನಕದಾಸರು | Arasinante Bantano | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಅರಸಿನಂತೆ ಬಂಟನೋ ಹನುಮರಾಯ ||ಪ|| ಅರಸಿನಂತೆ ಬಂಟನೆಂಬುದ ನೀನು  ಕುರುಹು ತೋರಿದೆ ಮೂರು ಲೋಕಕೆ ಹನುಮ ||ಅಪ|| ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದು ತಡೆಯದೆ ಶ್ರುತಿಯನಜಗಿತ್ತನೆಂದು ಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ- ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ ||೧|| ಮಂದರಧರ ಗೋವರ್ಧನಗಿರಿಯನು ಲೀಲೆ ಯಿಂದಲಿ ನಿಂದು ನೆಗಹಿದನೆಂದು ಸಿಂಧುಬಂಧನಕೆ ಸಮಸ್ತಪರ್ವತಗಳ ತಂದು ನಳನ ಕೈಯೊಳಗಿತ್ತೆ ಹನುಮ ||೨|| ಸಿರಿಧರ ವರ ಕಾಗಿನೆಲೆಯಾದಿಕೇಶವ ಸುರರಿಗಮೃತವನು ಎರದನೆಂದು ವರ ಸಂಜೀವನವ ತಂದು ಸೌಮಿತ್ರಿಗಂದು ಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ ||೩|| arasinaMte baMTanO hanumaraaya ||pa|| arasinaMte baMTaneMbuda nInu  kuruhu tOride mUru lOkake hanuma ||apa|| oDeyanaMbudhiyoLu pokku daityana koMdu taDeyade SrutiyanajagittaneMdu saDagaradiMda Saradhiya daaMTi mahije pe- rmuDiya maaNikava raaGavagitte hanuma ||1|| maMdaradhara gOvardhanagiriyanu lIle yiMdali niMdu negahidaneMdu siMdhubaMdhanake samastaparvatagaLa taMdu naLana kaiyoLagitte hanuma ||2|| siridhara vara kaagineleyaadikESava surarigamRutavanu eradaneMdu vara saMjIvanava taMdu ...

ಕೋರಿ ಕರೆವೆ ಗುರು | ಶ್ರೀ ವಿಠಲೇಶ ದಾಸರ ಕೃತಿ | Kori Kareve Guru | Vithalesha Dasaru

Image
ರಚನೆ : ಶ್ರೀ ವಿಠಲೇಶ ದಾಸರು Kruti: Sri Vithalesha Dasaru ಕೋರಿ ಕರೆವೆ ಗುರು ಶ್ರೀ ರಾಘವೇಂದ್ರನೆ  ಬಾರೋ ಮಹಾಪ್ರಭುವೇ ||ಪ|| ಚಾರು ಚರಣಯುಗ ಸಾರಿ ನಮಿಪೆ ಬೇಗ ಬಾರೋ ಹೃದಯ ಸುಖಸಾರ ರೂಪವ ತೋರೋ ||ಅಪ|| ಎಲ್ಲಿ ನೋಡಲು ಹರಿ ಅಲ್ಲೇ ಕಾಣುವನೆಂದು  ಕ್ಷುಲ್ಲ ಕಂಭವನೊಡೆದು ನಿಲ್ಲದೆ ನರಹರಿ ಚೆಲ್ವಿಕೆ ತೋರಿದ,  ಫುಲ್ಲಲೋಚನ ಶಿಶು, ಪ್ರಹ್ಲಾದನಾಗಿ ಬಾರೋ ||೧|| ದೋಷವ ಕಳೆದು ಸಿಂಹಾಸನವೇರಿದ,  ದಾಸ ಕುಲವ ಪೊರೆವ ಶ್ರೀಶನರ್ಚಕನಾಗಿ ಪೋಷಿಸಿ ಹರಿಮತ,  ವ್ಯಾಸತ್ರಯವಗೈದ ವೇಷ ತಳೆದು ಬಾರೋ ||೨|| ಮೂಜಗ ಮಾನಿತ ತೇಜೋ ವಿರಾಜಿತ  ಮಾಜದ ಮಹಾ ಮಹಿಮ ಓಜೆಗೊಳಿಸಿ ಮತಿ ರಾಜೀವ ಬೋಧದಿ  ಪೂಜೆಗೊಂಬುವ ಗುರುರಾಜ ರೂಪದಿ ಬಾರೋ ||೩|| ಮಂತ್ರ ಸದನದೊಳು ಸಂತ ಸುಜನರಿಗೆ  ಸಂತೋಷ ಸಿರಿಗರೆದು ಕಂತುಪಿತನ ಪಾದ ಸಂತತ ಸೇವಿಪ  ಶಾಂತ ಮೂರುತಿ ಎನ್ನ ಅಂತರಂಗದಿ ಬಾರೋ ||೪|| ಈ ಸಮಯದಿ ನನ್ನಾಸೆ ನಿನ್ನೊಳು ಬಲು  ಸೂಸಿ ಹರಿಯುತಿಹುದು ಕೂಸಿಗೆ ಜನನಿ ನಿರಾಸೆಗೊಳಿಸುವಳೆ  ದೋಷ ಕಳೆದು ವಿಠಲೇಶಾ ಹೃದಯದಿ ಬಾರೋ ||೫|| kOri kareve guru SrI rAGavEMdrane  bArO mahApraBuvE ||pa||   cAru caraNayuga sAri namipe bEga bArO hRudaya suKasAra rUpava tOrO ||apa||   elli nODalu hari allE kANuvaneMdu  kShulla kaMBavanoDedu nillade na...

ನಿದ್ರೆಮಾಡಿದ ರಂಗ | ಹಯವದನ | Nidre Madida Ranga | Sri Vadirajara Kruti

Image
ರಚನೆ : ಶ್ರೀ ವಾದಿರಾಜರು (ಹಯವದನ) Kruti: Sri Vadirajaru (Hayavadana) ನಿದ್ರೆಮಾಡಿದ ರಂಗ ನಿದ್ರೆಮಾಡಿದ ಭದ್ರಹಾಸಿಗೆ ಮೇಲೆ ಸಮುದ್ರರಾಜನ ಮಗಳ ಸಹಿತ ||ಪ|| ವೇದಕದ್ದ ಅಸುರನಿಗಾಗಿ ಆ ಮತ್ಸ್ಯರೂಪವ ಧರಿಸಿ ಸಾಧಿಸಿ ಅಸುರನ ಕೊಂದ ವಾರಿಜಾಕ್ಷ ಬಳಲಿ ಬಂದು ||೧|| ತರಳ ಹಿರಣ್ಯಕಶ್ಯಪನ ಕರುಳ ಬಗೆದು ಕೊರಳೊಳಿಟ್ಟು ನರಮೃಗ ರೂಪವ ತಾಳಿ ನರಸಿಂಹ ಬಳಲಿ ಬಂದು ||೨|| ಬಲಿಯ ದಾನವನ್ನೆ ಬೇಡಿ ನೆಲನ ಮೂರಡಿ ಮಾಡಿ ಒಲಿದು ಬಾಗಿಲನ್ನೆ ಕಾಯ್ದ ವಾಮನನಾದ ಬಳಲಿ ಬಂದು ||೩|| ತಂದೆಯ ಮಾತನ್ನೆ ಕೇಳಿ ತಾಯಿ ಶಿರವನ್ನೆ ಅಳಿದು ಏಳುಮೂರು ಬಾರಿ ಭೂಮಿಯ ಪ್ರದಕ್ಷಿಣೆ ಮಾಡಿ ||೪|| ಸೀತೆಗಾಗಿ ಪಡೆಯ ಸವರಿ ಸೇತುಬಂಧನವ ಮಾಡಿ ದೂತರಾವಣನ್ನ ಕೊಂದು ಸೀತಾರಾಮ ಬಳಲಿ ಬಂದು ||೫|| ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆಲ್ಲ ಕಾಯ್ದು ಗೋಪಸ್ತ್ರೀಯರ ಸೀರೆ ಸೆಳೆದು ಗೋಪಾಲಕೃಷ್ಣ ಬಳಲಿ ಬಂದು ||೬|| ಬತ್ತಲೆ ಕುದುರೆಯನೇರಿ ಮತ್ತೆ ತೇಜಿಯನ್ನೆ ನಡೆಸಿ ಹತ್ತಾವತಾರವ ತಾಳಿ ಮತ್ತೆ ಕಲ್ಕಿರೂಪನಾಗಿ ||೭|| ಧರೆಯಳತ್ಯಧಿಕವಾದ ಶ್ರೀರಂಗಪಟ್ಟಣದಿ ನೆಲೆಸಿ ಕರುಣದಿಂದ ಭಕ್ತರನ್ನು ಸಲಹಬೇಕು ಹಯವದನನೆ ||೮|| nidremaaDida raMga nidremaaDida bhadrahaasige mEle samudraraajana magaLa sahita ||pa|| vEdakadda asuranigaagi A matsyarUpava dharisi saadhisi asurana koMda vaarijaakSha baLali baMdu ||1|| taraLa hiraNyakaSyapana karuLa...

ಇಂದೀವರಾಕ್ಷಗೆ | ಜಯಮಂಗಳಂ ನಿತ್ಯ | ಶ್ರೀ ಪುರಂದರ ವಿಠಲ | Indivarakshage | Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಜಯಮಂಗಳಂ ನಿತ್ಯ ಶುಭಮಂಗಳಂ  ಇಂದೀವರಾಕ್ಷಗೆ ಇಭರಾಜ ವರದಗೆ |  ಇಂದಿರಾರಮಣ ಗೋವಿಂದ ಹರಿಗೆ | ನಂದನ ಕಂದಗೆ ನವನೀತ ಚೋರಗೆ | ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ ||೧||  ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆ |   ಮಾರನ ಪಡೆದ ಮಂಗಳ ಮೂರ್ತಿಗೆ | ಚಾರುಚರಣಗಳಿಂದ ಚೆಲುವ ಗಂಗೆಯ ಪಡೆದ ಕಾರುಣ್ಯ ಮೂರ್ತಿ ಕೌಸ್ತುಭಧಾರಿಗೆ ||೨||  ವ್ಯಾಸಾವತಾರಿಗೆ ವೇದ ಉದ್ಧಾರಗೆ |   ವಾಸಿತಾನಂತ ಪದ ಸಕಲೇಶಗೆ ವಾಸುದೇವ ಮೂರ್ತಿ ಪುರಂದರ ವಿಠಲಗೆ ದಾಸರ ಕಾಯ್ವ ರುಕ್ಮಿಣಿ ರಮಣಗೆ ||೩||  jayamaMgaLaM nithya ShubhamaMgaLaM iMdIvarAkShage iBarAja varadage |  iMdirAramaNa gOviMda harige | naMdana kaMdage navanIta cOrage | vRuMdArakEMdra uDupiya kRuShNage ||1||  kShIrAbdhivAsage kShitijana pAlage | mArana paDeda maMgaLa mUrtige | cArucaraNagaLiMda celuva gaMgeya paDeda kAruNya mUrti kaustuBadhArige ||2||  vyAsAvatArige vEda uddhArage | vAsitAnaMta pada sakalESage vAsudEva mUrti puraMdara viThalage dAsara kAyva rukmiNi ramaNage ||3||

ಬ್ರಹ್ಮಾದಿಗಳು ಕ್ಷೀರ | ಶ್ರೀ ರಾಮ | ಜೋಗುಳದ ಹಾಡು | ಪುರಂದರ ವಿಠಲ | Brahmadigalu Ksheera | Purandara Vithala

Image
ರಚನೆ  : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಬ್ರಹ್ಮಾದಿಗಳು ಕ್ಷೀರ ಸಾಗರಕೆ ಪೋಗಿ ಲಕ್ಷ್ಮೀನಾರಾಯಣರ ಚರಣಕ್ಕೆ ಎರಗಿ ಭೂಭಾರ ಹರಣವನು ಮಾಡಬೇಕಾಗಿ ಇಳೆಯೊಳು ಮನುಜರ ಕೂಡೆ ಅವತಾರವಾಗಿ ಸೂರ್ಯವಂಶದ ರಾಜ ದಶರಥನು ತಾನು ಸಂತಾನವಾಗಬೇಕೆಂದು ಚಿಂತಿಸಿದ ಆಶ್ರಮದಿಂದ ವಸಿಷ್ಠರನೇ ಕರೆಸಿ ಪುತ್ರಕಾಮೇಷ್ಠಿ ಎಂಬ ಯಜ್ಞ ಮಾಡಿಸಿದ ಚೈತ್ರ ಶುದ್ಧ ನವಮಿ ಬುಧವಾರದಲ್ಲಿ ಶ್ರೀ ರಾಮ ಜನಿಸಿದನು ಕೌಸಲ್ಯೆಯಲ್ಲಿ ಆನಂದವಾಯಿತು ಅಯೋಧ್ಯೆಯಲ್ಲಿ ಸುರರು ದುಂದುಭಿ ಭೇರಿ ಮೊಳಗಿದರಲ್ಲಿ ನಾಮಕರಣವ ಮಾಡಿ ಸಂತೋಷ ಪಡುತ ಶ್ರೀ ರಾಮಚಂದ್ರನೆಂಬ ಹೆಸರನ್ನ - ಇಡುತ ನಾಲ್ಕು ವೇದಗಳೆಂಬ ಸರಪಣಿಯ ಹಿಡಿದು ಪುರಂದರ ವಿಠಲನ ಪಾಡಿ ತೂಗಿದರು brahmAdigaLu kShIra sAgarake pOgi lakShmInArAyaNara caraNakke eragi BUBAra haraNavanu mADabEkAgi iLeyoLu manujara kUDe avatAravAgi   sUryavaMSada rAja daSarathanu tAnu saMtAnavAgabEkeMdu ciMtisida ASramadiMda vasiShTharanE karesi putrakAmEShThi eMba yaj~ja mADisida   caitra Suddha navami budhavAradalli SrI rAma janisidanu kausalyeyalli AnaMdavAyitu ayOdhyeyalli suraru duMduBi BEri moLagidaralli   nAmakaraNava mADi saMtOSha paDuta SrI rAmacaMd...

ರಾಮನ ನೋಡಿರೈ | ಶ್ರೀ ಜಗನ್ನಾಥ ವಿಠಲ | Ramana Nodirai | Sri Jagannatha Dasara Kruti

Image
ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ ತಾಮರಸಸಖಸುವಂಶಾಬ್ಧಿಶರತ್ಸೋಮ ಕಮಲಾಧಾಮ ||ಪ|| ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದ ಅಜ ಪೂಜಿಸಿದ ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ ಕಾಮಿತನೆರದ ಭೂತಾಧಿಪನ ಭವನದೊಳಗರ್ಚನೆಗೊಂಡ ಧೃತಕೋದಂಡ ಮಾತಂಗಾರಿವಿರೋಧಿಯ ಜನಕನ ಮೇಧಾಗಾರಕೆ ಪೋದ ||೧|| ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿಕೊಟ್ಟ ಜಗಕತಿದಿಟ್ಟ ನಾಭಿಜನ್ಮನಿಹ ನಗರಸ್ಥಾನಕೆ ಬಂದ ಶುಭಗುಣವೃಂದ ವೈಭವದಿಂದ ಅಯೋಧ್ಯಾನಗರದಿ ಮೆರೆದ ಕಾಮಿತಗರೆದ ಸಾಭಿಮಾನದಲಿ ಸತಿಯಳಿಗಿತ್ತನು ವರವ ದೇವರದೇವ ||೨|| ಜಾಂಬವಂತನಿಗೆ ಜಾನಕಿರಮಣನು ಇತ್ತ ತನ್ನಯಧ್ಯಾತಾ ಸಂಭ್ರಮದಿಂದಲಿ ವೇದಗರ್ಭನೊಡನಾಡ್ದ ಮುಕ್ತಿಯ ನೀಡ್ದ ಕುಂಭಿನೀಶ್ವರನ ಕೋಶದಿ ಬಹುದಿನ ವಾಸವೆಸಗಿದನೀಶ ನಂಬಿ ತುತಿಸುತಿಹ ನರಹರಿ ಮುನಿಪಗೆ ಒಲಿದ ಮೋದದಿ ನಲಿದ ||೩|| ಅಲವಬೋಧಮುನಿ ಅತಿ ಮೋದದಲರ್ಚಿಸಿದ ಸಲೆ ಮೆಚ್ಚಿಸಿದ ಇಳೆಯೊಳು ಬಹುಯತಿಗಳ ಕರಪೂಜಿತನಾದ ಲೀಲಾವಿನೋದ ಬಲು ನಂಬಿದ ಭಕುತರ ಕಲಿ-ಮಲಗಳ ಕಳೆದ ಮನದೊಳು ಪೊಳೆದ ಸುಲಲಿತಗುಣನಿಧಿ ವಸುಧೇಂದ್ರಾರ್ಯರ ಪ್ರೀಯ ಕವಿಜನಗೇಯ ||೪|| ವಾರಿಧಿಬಂಧನ ವಾನರನಾಯಕರಾಳ್ದ ದೈತ್ಯರ ಸೀಳ್ದ ನಾರದ ಮುಖ ಮುನಿನಮಿತಪದಾಂಬುಜನೀತ ತ್ರಿಗುಣಾತೀತ ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವ ದುರಿತವ ತಡೆವ ನೀರಜಾಕ್ಷ ಜಗನ್ನಾಥವಿಠಲ ನಿಶ್ಚಿಂತ ಸೀತಾಕಾಂತ ||೫...

ಕೇಳೇ ಕಮಲಾನನೆ ರಾಮನ | ಶ್ರೀ ಕಮಲೇಶ ವಿಠ್ಠಲ ದಾಸರು | Kele Kamalanane | Sri Kamalesha Vithala Dasaru

Image
ರಚನೆ : ಶ್ರೀ ಕಮಲೇಶ ವಿಠಲ ದಾಸರು Kruti: Sri Kamalesha Vithala Dasaru ಕೇಳೇ ಕಮಲಾನನೆ ರಾಮನ ಕಥೆಯಾ | ಕೊಡುವನು ಸನ್ಮತಿಯಾ ||ಪ|| ಕೇಳು ದಶರಥನೃಪಾಲನುದರದಿ ಸುಲೀಲ ಕರುಣ ವರುಣಾಲಯನುದಿಸಿದ ||ಅಪ|| ಕೌಸಲ್ಯ ದೇವಿಯ ಗರ್ಭದಿಂದ | ಜನಿಸಿ ಮುನಿ ಕುಲೋತ್ತುಂಗನ ಮಖವ ಕಾಯಲು ಬಂದ | ಬರುತಲೆ ತಾಟಕಿ ಹಿಂಸಾ ಮಾಡಿದ ಮುನಿ ಆಜ್ಞದಲಿಂದ ಕಾಯ್ದ ಸುರವೃಂದಾ | ಸಂಸೇವಿತ ಮುನಿ ಹಂಸನ ಸತಿಯಘ ಧ್ವಂಸಗೈದ ಪದ ಪಾಂಸುವ ಮಹಿಮೆಯ ||೧|| ಸೀತೆಯ ಸಹಿತಾಯೋಧ್ಯೆಗೆ ಬಂದ | ಕಿರಿಯಮ್ಮಗಿತ್ತ ಮಾತು ಮನ್ನಿಸಲಾವನ ಕೈ ತಂದ | ಶೂರ್ಪನಖ ಸಹಜಾತನಿಂದವಳನುಪಾಯದಲಿಂದ ಸನ್ಯಾಸಿಯು ಬಂದ | ಪಾತಕ ಮಾರೀಚಾತಿಶಯ ಖಳವ್ರಾತವ ಘಾತಿಸಿದಾತನ ಮಹಿಮೆಯ ||೨|| ಕುಟಿಳಾಳಕಿ ಸೀತಾನ್ವೇಷಣೆಯಿಂದ | ಶ್ರೀ ರಾಮ ಪಂಪಾತಟಕೆ ತರಲು ಮಾರುತಿ ಬಂದ | ಸುಗ್ರೀವಗೆ ಸಂಘಟಿಸಿದಾನಾಪ್ತಾನ್ವೇಷಣೆಯಿಂದ | ವಾಲಿಯ ಕೊಂದ || ಕಠಿಣ ಖಳರ ಕಪಿಕಟಕದಿಂದ ಅಸುಕುಟಿಸಿದ ಕಮಲೇಶ ವಿಠ್ಠಲನ ಮಹಿಮೆಯ ||೩|| kELE kamalAnane rAmana katheyA | koDuvanu sanmatiyA ||pa||   kELu daSarathanRupAlanudaradi sulIla karuNa varuNAlayanudisida ||apa||   kausalya dEviya garBadiMda | janisi muni kulOttuMgana maKava kAyalu baMda | barutale tATaki hiMsA mADida muni Aj~jadaliMda kAyda suravRuMdA | saMsEvita muni haMsana satiyaGa dhva...

ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿ | ಭೀಮೇಶಕೃಷ್ಣ | Nille Nille Kolhapura | Bhimesha Krishna

Image
ಸಾಹಿತ್ಯ : ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ)  Kruti: Harapanahalli Bhimavva (Bhimesha Krishna) ನಿಲ್ಲೆ ನಿಲ್ಲೆ ಕೊಲ್ಹಾಪುರದೇವಿ ಇಲ್ಲೆ ಬಾರೆ ಗೆಜ್ಜೆ ಘಲ್ಲೆನುತ ||ಪ|| ಕರುಣಸಾಗರೆ ಹರಿತರುಣಿಯೆ ನೀ ಕೋಟಿ ಅರುಣ ಕಿರಣ ರತ್ನಾಭರಣವಿಟ್ಟು ಮಣಿಕೌಸ್ತುಭ ವಕ್ಷಸ್ಥಳದೊಳು ಒಪ್ಪುವ ಸು- ಪರ್ಣವಾಹನೆ ಲಕ್ಷ್ಮಿ ಶರಣು ವಂದಿತಳೆ ||೧|| ಪಂಕಜಾಕ್ಷಿ ಪಂಕಜೋದ್ಭವನ ಜನನಿ ಪಂಕಜಮುಖಿ ಪಾಲಿಸೆ ಎನ್ನ ಪಂಕಜನಾಭನ ಅಂಕದಲ್ಲೊಪ್ಪುವ ಪಂಕಜೆ ನಿನ್ನ ಪಾದಪಂಕಜಗೆರಗುವೆ ||೨|| ಮುಗುಳುನಗೆಯ ಮುತ್ತುಗಳ ಜಡಿತ ಕ- ರ್ಣಗಳ ವಾಲೆಯು ಕದಪಿನೊಳು ಹೊಳೆಯೆ ಬಗೆ ಬಗೆ ಸರ ಬಂಗಾರವನಿಟ್ಟು ಮೂ- ರ್ಜಗವ ಮೋಹಿಸೊ ಜಗದಾದಿಪತಿಯ ರಾಣಿ ||೩|| ಸಾಗರದೊಳಗ್ಹುಟ್ಟ್ಯಾಗ ಶ್ರೀನಾಥನ ಬೇಗ ನೋಡಿ ಪರಮೋತ್ಸವದಿ ನಾಗಶಯನ ನಾಗಾರಿವಾಹನನ ಅರ್ಧಾಂಗಿ ಎನಿಸಿದ ಅನಂತ ಮಹಿಮಳೆ ||೪|| ಶೇಷಗಿರಿಯ ಶ್ರೀನಿವಾಸನ ಎದೆಯಲಿ ವಾಸವಾಗಿರಲತಿ ಪ್ರೇಮದಲಿ ಈಶ ನಾರದ ಬ್ರಹ್ಮಾಸುರರೊಡೆಯ ಭೀ- ಮೇಶಕೃಷ್ಣನ ನಿಜ ದಾಸರಿಗೆ ವರವನೀಡೆ ||೫|| nille nille kol~haapuradEvi ille baare gejje Gallenuta ||pa|| karuNasaagare haritaruNiye nI kOTi aruNa kiraNa ratnaabharaNaviTTu maNikaustubha vakShasthaLadoLu oppuva su- parNavaahane lakShmi SaraNu vaMditaLe ||1|| paMkajaakShi paMkajOdbhavana janani paMkajamukhi paalise enna paMkaj...

ಭಜಿಸಿ ಬದುಕಿರೋ ದಿವ್ಯ | ತಂದೆ ವೇಣುಗೋಪಾಲ ವಿಠಲ | Bhajisi Badukiro Divya | Tande Venugopala Vithala

Image
ರಚನೆ : ಶ್ರೀ ತಂದೆ ವೇಣುಗೋಪಾಲ ವಿಠಲ ದಾಸರು Kruti:Sri Tande VenuGopala Vittala Dasaru ಭಜಿಸಿ ಬದುಕಿರೋ ದಿವ್ಯ ರಜವ ಧರಿಸಿರೋ | ಅಜನ ಪಿತನ ಪ್ರಿಯರಾದ ವಿಜಯರಾಯರ ||ಪ|| ಭೋಗ ಪಡದಲೆ ಸುಖಕೆ ಪೋಗಿ ಕೆಡದಲೆ | ನಾಗಶಯನನಾ ಭಜಿಸಿ ಜಾಗು ಮಾಡದೆ ||೧|| ಕುಂಜಸಂಗವ ಬಲು ತ್ಯಜಿಸಿ ವೇಗದಿ | ಭಜನೆ ಮಾಡಿರೋ ನಮ್ಮ ವಿಜಯರಾಯರ ||೨|| ಪೊಂದಿಯಿದ್ದನೋ ಭವದಿಂದ ಗೆದ್ದನೋ | ತಂದೆ ವೇಣುಗೋಪಾಲ ವಿಠಲ ಮನಕೆ ತೋರುವ ||೩|| bhajisi badukirO divya rajava dharisirO | ajana pitana priyarAda vijayarAyara ||pa|| bhOga paDadale suKake pOgi keDadale | naagashayananaa bhajisi jaagu maaDade ||1|| kuMjasaMgava balu tyajisi vEgadi | bhajane maaDirO namma vijayarAyara ||2|| poMdiyiddanO bhavadiMda geddanO | taMde vENugOpaala viThala manake tOruva ||3||

ದಾಸೋಹಂ ತವ ದಾಸೋಹಂ | ಶ್ರೀ ಜಗನ್ನಾಥ ದಾಸರು | Dasoham Tava Dasaoham | Sri Jagannatha Dasaru

Image
ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti: Sri Jagannatha Dasaru (Jagannatha vittala) ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ವಾಸುದೇವ ವಿಗತಾಘ ಸಂಘ ತವ ದಾಸೋಹಂ ದಾಸೋಹಂ ಜೀವಾಂತರ್ಗತ ಜೀವ ನಿಯಾಮಕ, ಜೀವ ವಿಲಕ್ಷಣ ಜೀವನದ || ಜೀವಾಧಾರಕ ಜೀವ ರೂಪ ರಾಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲ ನಿಯಾಮಕ ಕಾಲಾತೀತ ತ್ರಿಕಾಲಜ್ಞ || ಕಾಲ ಪ್ರವರ್ತಕ ಕಾಲ ನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨|| ಕರ್ಮಾಕರ್ಮ ಕೃತ ಕರ್ಮಕೃತಾಗಮ ಕರ್ಮಫಲಪ್ರದ ಕರ್ಮಜಿತ || ಕರ್ಮಬಂಧ ಮಹಾಕರ್ಮ ವಿಮೋಚಕ, ಕರ್ಮನಿಗ್ರಹ ಕರ್ಮ ಸಾಕ್ಷಿ ತವ ||೩|| ಧರ್ಮಯೂಪ ಮಹ ಧರ್ಮವಿವರ್ದನ ಧರ್ಮವಿದೋತ್ತಮ ಧರ್ಮನಿಧೇ || ಧರ್ಮಸೂಕ್ಷ್ಮ ಮಹಧರ್ಮಸಂರಕ್ಷಕ, ಧರ್ಮಸಾಕ್ಷಿ ಯಮಧರ್ಮಪುತ್ರ ತವ ||೪|| ಮಂತ್ರಯಂತ್ರ ಮಹ ಮಂತ್ರಬೀಜ ಮಹ ಮಂತ್ರ ರಾಜಗುರು ಮಂತ್ರಧೃತ || ಮಂತ್ರಮೇಯ ಮಹಾಮಂತ್ರನಿಯಾಮಕ  ಮಂತ್ರದೇವ ಜಗನ್ನಾಥ ವಿಠಲ ತವ ||೫|| dAsOhaM tava dAsOhaM tava dAsOhaM tava dAsOhaM vAsudEva vigatAGa saMGa tava dAsOhaM dAsOhaM   jIvAMtargata jIva niyAmaka, jIva vilakShaNa jIvanada || jIvAdhAraka jIva rUpa rAjIva Bavajanaka jIvESvara tava ||1||   kAlAMtargata kAla niyAmaka kAlAtIta trikAlaj~ja || kAla pravartaka kAla nivartaka kAlOtpAdaka k...

ತೊಳಸದಕ್ಕಿಯ ತಿಂಬ | ಶ್ರೀ ವಿಜಯ ವಿಠಲ | Tolasadakkiya Timba | Sri Vijaya Dasaru

Image
ಸಾಹಿತ್ಯ : ಶ್ರೀ ವಿಜಯ ದಾಸರು  Kruti: Sri Vijaya Dasaru ಜಯಮಂಗಳಂ ನಿತ್ಯ ಶುಭಮಂಗಳಂ ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ ಕೊಳಗದಲಿ ಹಣಗಳನು ಅಳೆಸಿಕೊಂಬ | ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ |  ಎಲ್ಲವನು ಕಸುಕೊಂಬ ಕಳ್ಳದೊರೆಗೆ ||೧|| ತನ್ನ ನೋಡೇನೆಂದು ಮುನ್ನೂರು ಗಾವುದ ಬರೆ | ತನ್ನ ಗುಡಿಯ ಪೊಕ್ಕ ಜನರಿಗೆಲ್ಲ | ಹೊನ್ನು ಹಣಗಳ ಕಸಿದು ತನ್ನ ದರುಶನ ಕೊಡದೆ | ಬೆನ್ನೊಡೆಯ ಹೊಯ್ಯುವ ಅನ್ಯಾಯಕಾರಿಗೆ ||೨|| ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ | ದುಡ್ಡು ಕಾಸುಗಳಿಗೆ ಕೈಯ ನೀಡಿ || ಅಡ್ಡ ಬಿದ್ದ ಜನರ ವಿಡ್ಡೂರಗಳ ಕಳೆದು | ದೊಡ್ಡವರ ಮಾಳ್ಪ ಸಿರಿ ವಿಜಯ ವಿಠ್ಠಲಗೆ ||೩|| ಜಯ ಮಂಗಳಂ jayamaMgaLaM nitya SuBamaMgaLaM   toLasadakkiya tiMba kilubu taLigeyaluMba koLagadali haNagaLanu aLesikoMba | illa kAsu eMdu suLLu mAtADidare |  ellavanu kasukoMba kaLLadorege ||1||   tanna nODEneMdu munnUru gAvuda bare | tanna guDiya pokka janarigella | honnu haNagaLa kasidu tanna daruSana koDade | bennoDeya hoyyuva anyAyakArige ||2||   giDDa hAruvanAgi oDDi dAnava bEDi | duDDu kAsugaLige kaiya nIDi || aDDa bidda janara viDDUragaLa kaLedu | doDDavara mALpa siri vijaya viThThalag...

ಸತ್ಯ ಜಗತಿದು ಪಂಚಭೇದವು | ಶ್ರೀಪುರಂದರ ವಿಠಲ | Satya Jagatidu | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ || ಪ || ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು ಜೀವ ಜಡಕೆ, ಜಡ ಜಡಕೆ ಭೇದ| ಭೇದ ಜಡ ಪರಮಾತ್ಮಗೆ || ೧ || ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು ಪಿತೃ ಅಜಾನಜ ಕರ್ಮಜರು ಉಕ್ತ ಶೇಷ ಶತಸ್ಥರು || ೨ || ಗಣಪಮಿತ್ರರು ಸಪ್ತಋಷಿಗಳು ವಹ್ನಿ ನಾರದ ವರುಣರು ಇನಜಗೆ ಸಮ ಚಂದ್ರ ಸೂರ್ಯರು ಮನುಸತಿಯು ಹೆಚ್ಚು ಪ್ರವಹನು ||  ೩ || ದಕ್ಷ ಸಮ ಅನಿರುದ್ಧ ಗುರು ಶಚಿ ರತಿಸ್ವಾಯಂಭುವರಾರ‍್ವರು ಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು || ೪ || ದೇವೇಂದ್ರನಿಂದಧಿಕ ಮಹರುದ್ರ ರುದ್ರ ಸಮ ಶೇಷ ಗರುಡರು ಗರುಡಶೇಷರಿಗಧಿಕರೆನಿಪರು ದೇವಿ ಭಾರತೀ ಸರಸ್ವತೀ || ೫ || ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು ವಾಯು ಬ್ರಹ್ಮಗೆ ಕೋಟಿ ಗುಣದಿಂದ ಅಧಿಕಶಕ್ತಳು ಶ್ರೀರಮಾ || ೬ || ಅನಂತ ಗುಣದಿಂ ಲಕುಮಿಗಧಿಕನು ಶ್ರೀಪುರಂದರ ವಿಠಲನು ಘನರು ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ || ೭ || satya jagatidu paMchaBEdavu nitya shrI gOviMdana kRutyavaritu taaratamyadi kRuShNanadhikeMdu saarirai || pa || jIva Ishage bhEda sarvatra jIva jIvake bhEdavu jIva jaDa...

ಕೈಯ ತೋರೋ ಕರುಣಿ | ಶ್ರೀ ಪುರಂದರ ವಿಠಲ | Kaiya Toro Karuni | Sri Purandara Dasaru

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕೈಯ ತೋರೋ ಕರುಣಿಗಳರಸನೆ ಕೈಯ ತೋರೊ | ಕೈಯಲಿ ತುಂಬಾ ಬೆಣ್ಣೆಯ ಕೊಳುವ ಕೈಯ || ಪ || ಅಂಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ  ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |ಅಂಗನೆಯರಉತ್ತುಂಗಕುಚದಲಿಟ್ಟ ಕೈಯ ತೋರೊ||1|| ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ |ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ  ಕಡುಹಿರಣ್ಯಾಖ್ಯನ ಒಡಲನು ಬಗೆದ-ಕೈಯ ತೋರೊ |ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ||2|| ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ |ಬಲ್ಲಿದಮಲ್ಲರ ಮರ್ದಿಸಿ ಬಂದ-ಕೈಯ ತೋರೊ ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ |ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ||3|| ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ |ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ ||4|| ಆಕಾಶದ ಚಂದ್ರಮನನು ಕರೆದ-ಕೈಯ ತೋರೊ |ನಾಕಪತಿಗೆ ಅಭಯವನಿತ್ತ-ಕೈಯ ತೋರೊ | ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ |ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ ||5|| Kaiya toro karunigalarasa-kaiya toro |kaiyali benneya muddeya niduve-kaiya||pa|| Guliyolu ponnunguravo...

ಸಂಜೀವನ ಗಿರಿಧರ | ಮೋಹನ ವಿಠ್ಠಲ ದಾಸರು | Sanjeevana Giridhara | Sri Mohana Vithala

Image
ರಚನೆ : ಶ್ರೀ ಮೋಹನ ವಿಠ್ಠಲ ದಾಸರು  Kruti:Sri Mohana Vithala Dasaru ಸಂಜೀವನ ಗಿರಿಧರ ಪಾಹಿಮಾಂ ||ಪ||  ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶ ವಕ್ರಾನನ ಮೂರುತಿ ಪಾಹಿಮಾಂ ||೧||   ಮಂತ್ರ ಮೂಲ ಸ್ಥಿತ ಕಂತು ಪಿತನ ದೂತ ಯಂತ್ರೋದ್ಧಾರಕ ಪಾಹಿಮಾಂ ||೨|| ಮೋಹನ ವಿಠ್ಠಲ ದಾಸ ಪೋಷಕ ಮಾಯಾಮೋಹಕ ಭಂಜಕ ಪಾಹಿಮಾಂ ||೩|| Sanjivana giridhara pahimam || pa || Chakratirtha nivasa sakradyamaradhisha | Vakranana muruti pahimam || 1 || Mamtra mula sthita kantu pitana duta | Yamtroddharaka pahimam || 2 || Mohana viththala dasa poshaka | Maya mohaka Banjaka pahimam || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru