Posts

Showing posts from 2022

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇದೇ ಹಾದಿ ನೀ ಹಿಡಿ | ಶ್ರೀ ವೆಂಕಟೇಶ ವಿಠ್ಠಲ ದಾಸರು | Ide Haadi Ni Hidi | Sri Venkatesha Vithala Dasaru

Image
ರಚನೆ : ಶ್ರೀ ವೆಂಕಟೇಶ ವಿಠಲ ದಾಸರು  Krithi : Sri Venkatesha Vittalal Dasaru ಇದೇ ಹಾದಿ ನೀ ಹಿಡಿ ಹಿಡಿ ನಿ- ನ್ನೆದುರಿಗೆ ವೈಕುಂಠ ನಡಿ ನಡಿ ||ಪ|| ಎದುರಿಗೆ ಕಾಂಬುವುದೇ ಮಾರುತಿ ಗುಡಿ ಬಲಕ್ಕ ಮಾರಿ ಮಾಡಿ ಕುದುರೆ ಹೊಡಿ ||ಅಪ|| ಹಗರಿಹಳ್ಳದ ಮ್ಯಾಲ ಕಳ್ಳರೈದಾರು ಮಂದಿ ಸುಳ್ಳು ಹೇಳಿ ತಪ್ಪಿಸ್ಯಾರೋ ಹಾದಿ ಬಲ್ಲವರ ಸಂಗಡ ಸಂಗವ ಮಾಡುತ ಹಳ್ಳ ದಾಟಿದರೆ ನೀ ಪಾರಾದಿ ||೧|| ಆನೆ ಆಡುತಾವೆ ಏಳೆಂಟು ನಿನಗ್ ಅಡ್ಡ ಬರುತಾವೆ ಮುಗ್ಗಟ್ಟು ಏನು ಹೇಳಲಿ ನಾ ತಿಳಿದಷ್ಟು ನಿನ್ನ ಮನದಾಗ ಇರಲಿ ಈ ಗುಟ್ಟು ||೨|| ಎಂಟು ದಳದ ಕಮಲದ ಒಳಗ ಹದಿ- ನೆಂಟು ಆಡುತಾವ ತಿಳಿಬ್ಯಾಗ ಗಂಟೆ ಹೊಡಿ ನಿನ್ನ ಪುರದಾಗ ವೆಂ- ಕಟೇಶ ವಿಠ್ಠಲ ಕಾಂಬುವ ನಿನಗ ||೩|| idE haadi nI hiDi hiDi ni- nnedurige vaikuMTha naDi naDi ||pa|| edurige kaaMbuvudE maaruti guDi balakka maari maaDi kudure hoDi ||apa|| hagarihaLLada myaala kaLLaraidaaru maMdi suLLu hELi tappisyaarO haadi ballavara saMgaDa saMgava maaDuta haLLa daaTidare nI paaraadi ||1|| Ane ADutaave ELeMTu ninag aDDa barutaave muggaTTu Enu hELali naa tiLidaShTu ninna manadaaga irali I guTTu ||2|| eMTu daLada kamalada oLaga hadi- neMTu ADutaava tiLibyaaga gaMTe hoDi ninna puradaaga veM- kaTE...

ಲಾಲಿ ಲಾಲಿ ತ್ರಿಭುವನ ಲಾಲಿ | ಶ್ರೀ ಮೋಹನ ದಾಸರ ಕೃತಿ | Laali Laali Tribhuvana Laali | Sri Mohana Dasaru

Image
ರಚನೆ : ಶ್ರೀ ಮೋಹನ ದಾಸರು  Krithi: Sri Mohana Dasaru ಲಾಲಿ ಲಾಲಿ ತ್ರಿಭುವನ ಲಾಲಿ ||ಪ|| ಅಂಜನದೇವಿಯ ಕಂದಗೆ ಲಾಲಿ ಕಂಜಾಕ್ಷಿಗೆ ಮುದ್ರಿಕೆಯಿತ್ತಗೆ ಲಾಲಿ ಅಂಜದೆ ಅಸುರರ ಕೊಂದಗೆ ಲಾಲಿ ಸಂಜೀವನ ಗಿರಿ ತಂದಗೆ ಲಾಲಿ ||೧|| ಕುಂತಿಯುದರದಿ ಬಂದಗೆ ಲಾಲಿ ದಂತಿಯ ಗಗನಕ್ಕೆ ಒಗೆದಗೆ ಲಾಲಿ ಭ್ರಾಂತನ ಉದರವ ಬಗೆದಗೆ ಲಾಲಿ ಚಿಂತಾಮಣಿ ಭೀಮರಾಯಗೆ ಲಾಲಿ ||೨|| ಸೋಹಂ ಎಂಬರ ತರಿದಾಗೆ ಲಾಲಿ ದಾಸೋಹಂ ಎಂಬರ ಪೊರೆದಗೆ ಲಾಲಿ ಮೋಹನ್ನ ವಿಠ್ಠಲನ್ನ ಭಜಿಪಗೆ ಲಾಲಿ ಸ್ನೇಹದಿ ಭಕುತರ ಪೊರೆವಗೆ ಲಾಲಿ ||೩|| laali laali tribhuvana laali ||pa|| aMjanadEviya kaMdage laali kaMjaakShige mudrikeyittage laali aMjade asurara koMdage laali saMjIvana giri taMdage laali ||1|| kuMtiyudaradi baMdage laali daMtiya gaganakke ogedage laali bhraaMtana udarava bagedage laali chiMtaamaNi bhImaraayage laali ||2|| sOhaM eMbara taridaage laali daasOhaM eMbara poredage laali mOhanna viThThalanna bhajipage laali snEhadi bhakutara porevage laali ||3||

ಮುತ್ತು ಬಂದಿದೆ ಕೇರಿಗೆ | ಶ್ರೀ ಕನಕದಾಸರ ಕೃತಿ | Muttu Bandide Kerige | Sri Kanaka Dasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಮುತ್ತು ಬಂದಿದೆ ಕೇರಿಗೆ ಜನರೆಲ್ಲ ಕೇಳಿ ||ಪ|| ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ||ಅಪ|| ಥಳಥಳಿಸುವ ಮುತ್ತು ಕಮಲನೇತ್ರದ ಮುತ್ತು ಕಲುಷಪರ್ವತಕಿದು ಕುಲಿಶವಾಗಿಪ್ಪ ಮುತ್ತು ಹಲಧರಾನುಜನೆಂಬ ಪವಿತ್ರ ನಾಮದ ಮುತ್ತು ಒಲಿದು ಭಜಿಪರ ಭವ ತರಿದು ಕಾಯುವ ಮುತ್ತು ||೧|| ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತು ಭಂಜಿಸಿದ ಇತರ ಭಯವ ತೋರುವ ಮುತ್ತು ಸಂಜೀವರಾಯರ ಹೃದಯದೊಳಗಿನ ಮುತ್ತು ಕಂಜಭವಾದಿಗಳು ಶಿರಸಾ ವಹಿಸುವ ಮುತ್ತು ||೨|| ಜ್ಞಾನವೆಂಬೊ ದಾರದಲ್ಲಿ ಪೋಣಿಸುವ ಮುತ್ತು ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು ಆನಂದತೀರ್ಥರ ಮನದಳೊಪ್ಪುವ ಮುತ್ತು ಶ್ರೀನಿಧಿ ಆದಿಕೇಶವನೆಂಬೊ ಆಣಿಮುತ್ತು ||೩|| muttu baMdide kErige janarella kELi ||pa|| bhaktiyuLLavarella kaTTikoLLi seraginalli ||apa|| thaLathaLisuva muttu kamalanEtrada muttu kaluShaparvatakidu kuliSavaagippa muttu haladharaanujaneMba pavitra naamada muttu olidu bhajipara bhava taridu kaayuva muttu ||1|| aMjadiddavarige aMjike tOruva muttu bhaMjisida itara bhayava tOruva muttu saMjIvaraayara hRudayadoLagina muttu kaMjabhavaadigaLu Sirasaa vahisuva muttu ||2|| j~jaanaveMbo daaradalli pONisuva muttu j~...

ಗೋಪಿ ಬಾಲನೆ ಬಹುಗುಣ | ಶ್ರೀ ಇಂದಿರೇಶ ದಾಸರು | Gopi Balane | Sri Indiresha Dasaru

Image
ಸಾಹಿತ್ಯ : ಶ್ರೀ ಇಂದಿರೇಶ ದಾಸರು (ಇಂದಿರೇಶ)  Kruti: Sri Indiresha Dasaru (Indiresha) ಗೋಪಿ ಬಾಲನೆ ಬಹುಗುಣಶೀಲನೆ ಗೋವುಗಳ ಪಾಲನೆ ನೋಡುವೆ ಬಾ ಬಾ ಬಾ ||ಪ|| ಗೋಪ ರೂಪನೆ ಪಾಪ ದೂರನೆ ನೀಪದೊಳು ಕುಳಿತು ಗೋಪೇರ ವಸ್ತ್ರವ ಶ್ರೀಪತಿ ನೀಡಿದೆ ಬಾ ಬಾ ಬಾ ||೧|| ಸಿಂಧು ಮಂದಿರ ಸುಂದರಾಂಬರ ಮಂದಹಾಸವ ಮಾಡಿ ವಂದಾರುಗಳನೆ  ಆನಂದದಿ ನೋಡುವೆ ಬಾ ಬಾ ಬಾ ||೨|| ದೋಷದೂರನೆ ವಾಸುದೇವನೆ ಶೇಷಗಿರಿಯಲಿ ನಿಂತು ದಾಸ ಜನರ ಇಂದಿರೇಶನೆ ಕಾಯುವಿ ಬಾ ಬಾ ಬಾ ||೩|| gOpi baalane bahuguNashIlane gOvugaLa paalane nODuve baa baa baa ||pa|| gOpa rUpane paapa dUrane nIpadoLu kuLitu gOpEra vastrava shrIpati nIDide baa baa baa ||1|| siMdhu maMdira suMdaraaMbara maMdahaasava maaDi vaMdaarugaLane  AnaMdadi nODuve baa baa baa ||2|| dOShadUrane vaasudEvane shEShagiriyali niMtu daasa janara iMdirEshane kaayuvi baa baa baa ||3||

ದಿಮ್ಮಿಸಾಲೆ ರಂಗ | ಶ್ರೀ ವಾದಿರಾಜರ ಕೃತಿ | Dimmisale Ranga | Sri Vadirajaru

Image
ರಚನೆ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ದಿಮ್ಮಿಸಾಲೆ ರಂಗ ದಿಮ್ಮಿಸಾಲೆ ದಿಮ್ಮಿಸಾಲೆನ್ನಿರೊ ಗೋಮಕ್ಕಳೆಲ್ಲ ನೆರೆದು ||ಪ|| ಗೋಪಾಂಗನೇರ ಮೇಲೆ ಒಪ್ಪಿ ಭಸ್ಮ ಸೂಸುತ ||ಅಪ|| ಶಂಖನಾದ ಕೊಳಲು ಭೇರಿ ಪೊಂಕದಿ ಪಂಚಮಹಾವಾದ್ಯದಿ ಅಂಕವತ್ಸಲನ ನಿರಾತಂಕದಿಂದ ಹಿಡಿವ ಬನ್ನಿ ||೧|| ಗಂಧ ಕಸ್ತೂರಿ ಪುನುಗು ಚೆಂದದಿಂದ ಲೇಪ ಮಾಡಿ ನಂದಗೋಪಸುತನ ಮೇಲೆ ತಂದು ಸೂಸಿ ಭಸ್ಮವ ||೨|| ಎರಳೆಗಣ್ಣಿನ ಬಾಲೇರು ಹರುಷದಿಂದ ಬಂದು ನಿಂತು ವರದ ಕೇಶವನ ಮೇಲೆ ಪರಿದು ಸೂಸಿ ಭಸ್ಮವ ||೩|| ಮತ್ತೆ ಕುಶಲದ ಬಾಲೆಯರು ಎತ್ತರದಲಿ ಬಂದು ನಿಂತು ಚಿತ್ತಜನಯ್ಯನ ಮೇಲೆತ್ತಿ ಸೂಸಿ ಭಸ್ಮವ ||೪|| ವಾದಿರಾಜಗೊಲಿದು ಬಂದು ಸೋದೆಪುರದಲ್ಲಿ ನಿಂದ ಮೋದಿ ಹಯವದನನ ಮೇಲೆ ಪರಿದು ಸೂಸಿ ಭಸ್ಮವ ||೫|| dimmisaale raMga dimmisaale dimmisaalenniro gOmakkaLella neredu ||pa|| gOpaaMganEra mEle oppi bhasma sUsuta ||apa|| SaMkhanaada koLalu bhEri poMkadi paMcamahaavaadyadi aMkavatsalana niraataMkadiMda hiDiva banni ||1|| gaMdha kastUri punugu ceMdadiMda lEpa maaDi naMdagOpasutana mEle taMdu sUsi bhasmava ||2|| eraLegaNNina baalEru haruShadiMda baMdu niMtu varada kESavana mEle paridu sUsi bhasmava ||3|| matte kuSalada baaleyaru ettaradali baMdu ...

ದಯಮಾಡೆ ತಾಯೆ ವಾಗ್ದೇವಿ | ಶ್ರೀ ಜಗನ್ನಾಥ ದಾಸರು | Daya Made Taye Vagdevi | Sri Jagannatha Dasaru

Image
ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ದಯಮಾಡೆ ದಯಮಾಡೆ ತಾಯೆ ವಾಗ್ದೇವಿ ||ಪ|| ದಯದಿಂದ ನೀ ಎನ್ನ ನೋಡೇ ವಾಗ್ದೇವಿ ||ಅಪ|| ಹಿತದಿ ಸನ್ಮತಿಯ ಶ್ರೀಮತಿದೇವಿ ನೀ ನೀಡೆ ವ್ರತತಿಜನೇತ್ರೆ ಭಾರತಿ ನೀ ದಯಮಾಡೇ ||೧|| ಸುಮುಖೀ ತ್ವಚ್ಚರಣಾಬ್ಜಧ್ರುಮಛಾಯಾಶ್ರಿತರ ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೇ ||೨|| ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸುಗುಣೆ ಸನ್ಮತಿಕೊಟ್ಟು ಬೇಗೆನ್ನ ಸಲಹೇ ||೩|| dayamaaDe dayamaaDe taaye vaagdEvi ||pa|| dayadiMda nI enna nODE vaagdEvi ||apa|| hitadi sanmatiya SrImatidEvi nI nIDe vratatijanEtre bhaarati nI dayamaaDE ||1|| sumukhI tvaccaraNaabjadhrumaCaayaaSritara sumatigaLoLagiTTu mamateyiM salahE ||2|| jagannaathaviThalanaMGrigaLa sEveyoLu suguNe sanmatikoTTu bEgenna salahE ||3||

ಬಂದೆವಯ್ಯ ಗೋವಿಂದಶೆಟ್ಟಿ | ಶ್ರೀ ಕನಕದಾಸರು | Bandevayya Govinda | Sri Kanaka Dasaru

Image
ರಚನೆ : ಶ್ರೀ ಕನಕದಾಸರು Kruti: Sri Kanakadasaru ಬಂದೆವಯ್ಯ ಗೋವಿಂದಶೆಟ್ಟಿ- ನಿನ್ನ ಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ ||ಪ|| ಅಪ್ಪವು ಅತಿರಸ ತುಪ್ಪವು ಬಿಸಿಹಾಲು ಒಪ್ಪುವ ಯಾಲಕ್ಕಿ ಶುಂಠಿ ಮೆಣಸು ಅಪರೂಪವಾದ ಕಜ್ಜಾಯರಾಶಿಗಳ ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||೧|| ಒಡೆದ ಮಡಕೆ ತಂದು ಅರೆದು ನಾಮವ ಮಾಡಿ ಕೊಡುವೆ ನೀ ಕಾಸಿಗೆ ಒಂದೊಂದನು ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||೨|| ಶೇಷಗಿರಿಯಲ್ಲಿ ವಾಸವಾಗಿಹ ಶೆಟ್ಟಿ ದೇಶದೇಶಕ್ಕೆ ಹೆಸರಾದ ಶೆಟ್ಟಿ ಕಾಸುಕಾಸಿಗೆ ಬಡ್ಡಿಗಳಿಸಿಕೊಂಬ ಆದಿ ಕೇಶವ ನಾರಾಯಣ ತಿಮ್ಮ ಶೆಟ್ಟಿ ||೩|| baMdevayya gOviMdaSeTTi- ninna harivaaNa tIrthaprasaada uMTenalaagi ||pa|| appavu atirasa tuppavu bisihaalu oppuva yaalakki SuMThi meNasu aparUpavaada kajjaayaraaSigaLa Cappanna dESakke maaruva SeTTi ||1|| oDeda maDake taMdu aredu naamava maaDi koDuve nI kaasige oMdoMdanu oDalu tuMbi mikka annava maarisi oDaveya gaLisuva kaDulObhi SeTTi ||2|| SEShagiriyalli vaasavaagiha SeTTi dESadESakke hesaraada SeTTi kaasukaasige baDDigaLisikoMba Adi kESava naaraayaNa timma SeTTi ||3||

ಕೃಷ್ಣಮೂರುತಿ ಕಣ್ಣಮುಂದೆ | ಶ್ರೀ ಪುರಂದರವಿಠಲ | Krishna Mooruthi | Sri Purandara Vithala

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕೃಷ್ಣಮೂರುತಿ ಕಣ್ಣಮುಂದೆ ನಿಂತಂತೆ ಇದೆ ||ಪ||  ಕಷ್ಟಗಳೆಲ್ಲವ ಪರಿಹರಿಸಿ ಮನ- ದಿಷ್ಟಾರ್ಥಗಳನೆಲ್ಲ ಕೊಟ್ಟು ರಕ್ಷಿಸುವ ||ಅಪ||  ಮಸ್ತಕದಲಿ ಮಾಣಿಕ್ಯದ ಕಿರೀಟ |  ಕಸ್ತೂರಿತಿಲಕದಿ ಹೊಳೆವ ಲಲಾಟ |  ಹಸ್ತದಿ ಕೊಳಲೂದುವ ಓರೆನೋಟ |  ಕೌಸ್ತುಭ ಎಡಬಲದಲ್ಲಿ ಓಲ್ಯಾಟ ||೧||  ಮಘಮಘಿಸುವ ಸೊಬಗಿನ ಸುಳಿಗುರುಳು |  ಚಿಗುರುತುಲಸಿವನಮಾಲೆಯ ಕೊರಳು |  ಬಗೆಬಗೆ ಹೊನ್ನುಂಗುರವಿಟ್ಟ ಬೆರಳು |  ಸೊಗಸಿನ ನಾಭಿಯು ತಾವರೆಯರಳು ||೨||  ಉಡುದಾರ ವಡ್ಯಾಣ ಸಕಲಾಭರಣ |  ಬೆಡಗುಪೀತಾಂಬರ ಶತರವಿಕಿರಣ |  ಕಡಗ ಗಗ್ಗಗೆ ಪೆಂಡೆಯನಿಟ್ಟ ಚರಣ |  ಒಡೆಯ ಪುರಂದರವಿಠಲನ ಕರುಣ ||೩|| kRuShNamUruti kaNNamuMde niMtaMte ide ||pa||  kaShTagaLellava pariharisi mana- diShTArthagaLanella koTTu rakShisuva ||apa||  mastakadali mANikyada kirITa |  kastUritilakadi hoLeva lalATa |  hastadi koLalUduva OrenOTa |  kaustuBa eDabaladalli OlyATa ||1||  maGamaGisuva sobagina suLiguruLu |  cigurutulasivanamAleya koraLu |  bagebage honnuMguraviTTa beraLu |...

ಎನ್ನ ಕಂದ ಹಳ್ಳಿಯ ಹನುಮ | ಶ್ರೀ ಕನಕದಾಸರ ಕೃತಿ | Enna Kanda Halliya Hanuma | Sri Kanaka Dasaru

Image
ರಚನೆ : ಶ್ರೀ ಕನಕದಾಸರು Kruti: Sri Kanakadasaru ಎನ್ನ ಕಂದ ಹಳ್ಳಿಯ ಹನುಮ ||ಪ|| ಚೆನ್ನಾಗೈದಾರಾ ಲಕ್ಷ್ಮಣದೇವರು ||ಅಪ|| ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದು ಕರ್ಪೂರ ವೀಳ್ಯವಂದು ಕುರುಕು ಇಂದು ಸುಪ್ಪತ್ತಿಗೆ ಮಂಚವಂದು ಹುಲ್ಲುಹಾಸಿಗೆಯಿಂದು ಶ್ರೀಪತಿ ರಾಘವ ಕ್ಷೇಮದಲೈದಾರೇ  ||೧|| ನವವಸ್ತ್ರಗಳು ಅಂದು ನಾರಸೀರೆಗಳಿಂದು ಹೂವಿನ ಗಂಟು ಅಂದು ಜಡೆಗಳಿಂದು ಜವ್ವಾಜಿಕಸ್ತೂರಿಯಂದು ಭಸಿತ ಧೂಳಿಂದು ಶ್ರೀವರ ರಾಘವ ಕ್ಷೇಮದಲೈದಾರೇ ||೨|| ಕನಕರಥಗಳಂದು ಕಾಲುನಡಿಗೆಯಿಂದು ಘನ ಛತ್ರ ಚಾಮರವಂದು ಬಿಸಿಲು ಇಂದು ಸನಕಾದಿಗಳೋಲೈಪ ಆದಿಕೇಶವ ನಮ್ಮ ಹನುಮೇಶ ರಾಘವ ಕ್ಷೇಮದಲೈದಾರೇ ||೩|| enna kaMda haLLiya hanuma ||pa|| cennaagaidArA lakShmaNadEvaru ||apa|| tuppa paMcaamRutavaMdu aDavigaDDegaLiMdu karpUra vILyavaMdu kuruku iMdu suppattige maMcavaMdu hulluhaasigeyiMdu SrIpati raaGava kShEmadalaidaarE  ||1|| navavastragaLu aMdu naarasIregaLiMdu hUvina gaMTu aMdu jaDegaLiMdu javvaajikastUriyaMdu bhasita dhULiMdu SrIvara raaghava kShEmadalaidaarE ||2|| kanakarathagaLaMdu kaalunaDigeyiMdu Gana Catra caamaravaMdu bisilu iMdu sanakaadigaLOlaipa AdikESava namma hanumESa raaghava kShEmadalaidaarE ||3||

ಲಕ್ಷ್ಮೀ ರಮಣಗೆ ಮಾಡಿದಳು ಉರುಟಾಣಿ | ಶ್ರೀ ವಾದಿರಾಜರು | Lakshmi Ramanage | Sri Vadirajaru

Image
ರಚನೆ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಲಕ್ಷ್ಮೀ ರಮಣಗೆ ಮಾಡಿದಳು ಉರುಟಾಣಿ ||ಪ|| ಇಳೆಯೊಳಗತಿಜಾಣೆ ಸುಂದರ ಫಣಿವೇಣಿ ||ಅಪ|| ಮಚ್ಛ ಕಚ್ಛಪ ಕಿರನೆ ಕೇಸರಿಯಂದದ ಮುಖನೆ ಸ್ವಚ್ಛಮುಖವ ತೋರೈ ಕುಂಕುಮ ಹಚ್ಚುವೆನು ||೧|| ಬಲಿಯ ದಾನವ ಬೇಡಿ ಇಳೆಯ ಈರಡಿ ಮಾಡಿ ಅಳೆದಡಿಗಳ ತೋರೈ ಅರಿಶಿನ ಹಚ್ಚುವೆನು ||೨|| ದುರುಳ ಕ್ಷತ್ರಿಯರನ್ನು ಕೊರಳ ತರಿದ ಹರಿಯೆ ಹರುಷದಿಂ ಕೊರಳ ತೋರೈ ಗಂಧವ ಹಚ್ಚುವೆನು ||೩|| ದಶರಥನಲಿ ಜನಿಸಿ ದಶಮುಖನ ಸಂಹರಿಸಿ ಶಶಿಮುಖಿಯ ತಂದವನೆ ಕುಸುಮ ಮುಡಿಸುವೆನು ||೪|| ಹದಿನಾರು ಸಾಸಿರ ಸುದತಿಯರನಾಳಿದನೆ ಪದುಮ ಕರವ ತೋರೈ ವೀಳ್ಯವ ಕೊಡುವೆನು ||೫|| ವಸನರಹಿತನಾಗಿ ವಸುಧೆಯ ತಿರುಗಿದೆ ಬಿಸಜನಾಭನೆ ನಿನಗೆ ವಸನ ಉಡಿಸುವೆನು ||೬|| ವರ ತುರಗವನೇರಿ ಕಲಿಯ ಸಂಹರಿಸುವಿ ಸಿರಿಹಯವದನನೆ ಆರತಿಯೆತ್ತುವೆನು ||೭|| lakShmI ramaNage maaDidaLu uruTaaNi ||pa|| iLeyoLagatijaaNe suMdara phaNivENi ||apa|| macCa kacCapa kirane kEsariyaMdada mukhane svacCamukhava tOrai kuMkuma haccuvenu ||1|| baliya daanava bEDi iLeya IraDi maaDi aLedaDigaLa tOrai ariSina haccuvenu ||2|| duruLa kShatriyarannu koraLa tarida hariye haruShadiM koraLa tOrai gaMdhava haccuvenu ||3|| daSarathanali janisi daSamukhana saMharisi SaSim...

ವಂದಿಸುವುದಾದಿಯಲಿ | ಶ್ರೀ ಪುರಂದರವಿಠ್ಠಲ | Vandisuvudadiyali | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala)  ವಂದಿಸುವುದಾದಿಯಲಿ ಗಣನಾಥನ ||ಪ|| ಸಂದೇಹ ಸಲ್ಲ ಶ್ರೀಹರಿಯಾಜ್ಞೆಯಿದಕುಂಟು ||ಅಪ|| ಹಿಂದೆ ರಾವಣ ತಾನು ವಂದಿಸದೆ ಗಜಮುಖನ ನಿಂದು ತಪವನು ಗೈದು ವರ ಪಡೆಯಲು ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ ತಂದ ವರಗಳನೆಲ್ಲ ಧರೆಗೆ ಇಳಿಸಿದನು  ||೧|| ಅಂದಿನಾ ಬಗೆಯರಿತು ಹರಿ ಬಂದು ಧರ್ಮಜಗೆ ಮುಂದೆ ಗಣಪನ ಪೂಜಿಸೆಂದು ಪೇಳೆ ಒಂದೆ ಮನದಲಿ ಬಂದು ಪೂಜಿಸಲು ಗಣನಾಥನ ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||೨|| ಇಂದು ಜಗವೆಲ್ಲ ಉಮೆನಂದನನ ಪೂಜಿಸಲು ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು ತಂದೆ ಸಿರಿ ಪುರಂದರವಿಠ್ಠಲನ ಸೇವೆಯೊಳು ಬಂದ ವಿಘ್ನವ ಕಳೆದಾನಂವನು ಕೊಡುವ ||೩|| vaMdisuvudaadiyali gaNanaathana ||pa|| saMdEha salla SrIhariyaaj~jeyidakuMTu ||apa|| hiMde raavaNa taanu vaMdisade gajamukhana niMdu tapavanu gaidu vara paDeyalu oMdu nimiShadi baMdu viGnavanu Acarisi taMda varagaLanella dharege iLisidanu  ||1|| aMdinaa bageyaritu hari baMdu dharmajage muMde gaNapana pUjiseMdu pELe oMde manadali baMdu pUjisalu gaNanaathana hoMdisida nirviGnadiMda raajyavanu ||2|| iMdu jagavella umenaMdanana pUjisalu ceMdadiMd...

ಚಿತ್ತಜನಯ್ಯನ ಚಿಂತಿಸು ಮನವೇ | ಶ್ರೀ ಶ್ರೀಪಾದರಾಜರ ಕೃತಿ | Chittajanayyana Chintisu | Sripadarajara Kruti

Image
ರಚನೆ : ಶ್ರೀ ಶ್ರೀಪಾದರಾಜರು  Krithi : Sripadarajaru ಚಿತ್ತಜನಯ್ಯನ ಚಿಂತಿಸು ಮನವೇ  ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ||ಪ|| ಕಾಲನ ದೂತರು ನೂಲು ಹಗ್ಗವ ತಂದು ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ ಕಾಲಪಾಶದೊಳಿಟ್ಟು ಶೂಲದಿಂದಿರಿವಾಗ ಪಾಲಿಸುವರುಂಟೆ ಜಾಲವ ಮಾಡದೆ  ||೧|| ದಂಡಧರನ ಭಟರು ಚಂಡಕೋಪದಿ ಬಂದು ಕೆಂಡದ ನದಿಯ ತಡಿಗೆ ಕೊಂಡೊಯ್ದು ಖಂಡ ಖಂಡವ ಕಿತ್ತು ಕೆಂಡದೊಳಿಡುವಾಗ ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ||೨|| ಅಂಗಳಿಗೆ ದಬ್ಬಣಂಗಳ ಸೇರಿಸಿ ಎರಡು ಕಂಗಳಿಗೆ ಸೀಸವ ಕಾಸಿ ಪೊಯ್ಯಲು ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ||೩|| cittajanayyana ciMtisu manavE  hottu kaLeyade sarvOttamana nene manave ||pa|| kaalana dUtaru nUlu haggava taMdu kaalu kaigaLa kaTTi myaale kuTTi kaalapaaSadoLiTTu shUladiMdirivaaga paalisuvaruMTe jaalava maaDade  ||1|| daMDadharana bhaTaru caMDakOpadi baMdu keMDada nadiya taDige koMDoydu khaMDa KaMDava kittu keMDadoLiDuvaaga heMDiru makkaLu baMdu biDisaballare maruLe ||2|| aMgaLige dabbaNaMgaLa sErisi eraDu kaMgaLige sIsava kaasi poyyalu taMgi akka baMdu bhaMgava biDisuvare aMgavu sthiravall...

ಜಯಗಳು ಆಗಲಿ ಅಪಜಯ ಪೋಗಲಿ | ಶ್ರೀ ಮೋಹನದಾಸರು | Jayagalu Agali | Sri Mohana Dasaru

Image
ರಚನೆ : ಶ್ರೀ ಮೋಹನ ದಾಸರು  Krithi : Sri Mohana Dasaru ಜಯಗಳು ಆಗಲಿ ಅಪಜಯ ಪೋಗಲಿ  ಜಯದೇವಿ ರಮಣ ಒಲಿಯಲಿ ಕೋಲೆ ಜಯದೇವಿ ರಮಣ ಒಲಿಯಲಿ ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೆ ||೧|| ಹರಿಯೇ ಸರ್ವೋತ್ತಮ ಹರಿಯೇ ಪರದೇವತೆ  ಹರಿದಾಸರೆಂಬೋ ಬಿರುದಿನ ಕೋಲೆ | ಹರಿದಾಸರೆಂಬೋ ಬಿರುದಿನ ಹೆಗ್ಗಾಳೆ ಹಿರಿಬಾಗಿಲೊಳು ನುಡಿಸೇವು ಕೋಲೆ ||೨|| ಪನ್ನಂಗಶಯನ ಸುಪರ್ಣ ಗಿರೀಶ ಸುಪರ್ಣ  ವಾಹನ ಸುಖಪೂರ್ಣ ಕೋಲೆ ಸುಪರ್ಣವಾಹನ ಸುಖಪೂರ್ಣನಾದ  ಮೋಹನ್ನ ವಿಠ್ಠಲ ಕರುಣಿಸು ಕೋಲೆ ||೩|| jayagaLu Agali apajaya pOgali  jayadEvi ramaNa oliyali kOle jayadEvi ramaNa oliyali namma vijayarAyara kIrti mereyali kOle ||1|| hariyE sarvOttama hariyE paradEvate  haridAsareMbO birudina kOle | haridAsareMbO birudina heggALe hiribAgiloLu nuDisEvu kOle ||2|| pannaMgaSayana suparNa girISa suparNa  vAhana suKapUrNa kOle suparNavAhana suKapUrNanAda  mOhanna viThThala karuNisu kOle ||3||

ಈತನೀಗ ನಮ್ಮ ದೇವನು | ಶ್ರೀ ಗೋಪಾಲ ದಾಸರು | Itaneega Namma Devanu | Sri Gopala Dasaru

Image
ರಚನೆ : ಶ್ರೀ ಗೋಪಾಲ ದಾಸರು  Krithi : Sri Gopala Dasaru ಈತನೀಗ ನಮ್ಮ ದೇವನು ||ಪ|| ಪ್ರೀತಿಯಿಂದಲಿ ಸ್ಮರಿಸುವವರ  ಪಾತಕಗಳ ಪರಿಹರಿಪ ||ಅಪ|| ಅಕ್ರೂರನ ಪ್ರೀತನೀತ ಚಕ್ರ ಶಂಖ ಧರಿಸಿದಾತ ನಕ್ರಬಾಧೆಯ ತರಿದು ತನ್ನ  ಭಕ್ತನನ್ನು ಕಾಯ್ದಾತಾ  ||೧|| ಅಜಮಿಳನ ಸಲಹಿದಾತ  ವ್ರಜದ ಗೋವು ಕಾಯ್ದಾತ ಭಜಿಸುವವರ ಬಿಡನು ಪ್ರೀತ  ತ್ರಿಜಗದೊಳಗೆ ಮೆರೆವದಾತ   ||೨|| ಸಕಲಗುಣಪೂರ್ಣನೀತ ಸಕಲದೋಷ ದೂರನೀತ ಸಕಲಾನಂದ ಪೂರ್ಣನೀತ ಭಕುತಿಮಂತ್ರಕೊಲಿವದಾತ   ||೩|| ಅನಾಥ ಬಾಂಧವನೀತಾ ಅನಾದಿ ಕಾಲದವನೀತ ಆ ನಾರಿ ಮೊರೆಯ ಕೇಳಿ  ಆ ನಿಮಿಷದೊಳು ಒದಗಿದಾತ   ||೪|| ಕಮಲಮುಖಿಯ ರಮಣನೀತ  ಕಮಲಾಸನಜನಕನೀತ ಕಮಲಾಕ್ಷ ಗೋಪಾಲವಿಠಲ ಹೃತ್ಕಮಲದೊಳು ನಿಲುವದಾತ  ||೫| ItanIga namma dEvanu ||pa|| prItiyiMdali smarisuvavara  paatakagaLa pariharipa ||apa|| akrUrana prItanIta cakra SaMkha dharisidaata nakrabaadheya taridu tanna  bhaktanannu kaaydaataa  ||1|| ajamiLana salahidaata  vrajada gOvu kaaydaata bhajisuvavara biDanu prIta  trijagadoLage merevadaata   ||2|| sakalaguNapUrNanIta sakaladOSha dUranIta sakalaanaMda pUrNanIta bhakutimaMtra...

ಚೆನ್ನಕೇಶವದೇವರಾಯ | ಶ್ರೀ ವಾದಿರಾಜರು | Chennakeshava Devaraya | Sri Vadirajaru

Image
ರಚನೆ : ಭಾವೀಸಮೀರ ಶ್ರೀ ವಾದಿರಾಜರು  Krithi : Bhavisameera Sri Vadirajaru ಚೆನ್ನಕೇಶವದೇವರಾಯ ಇನ್ನು ಸುಖಿಪೆನೆಂತೆನಗೆ ಅನ್ಯಥ ಗತಿಯಿಲ್ಲ ||ಪ|| ಹೆಣ್ಣಿನಾಸೆ ಮಣ್ಣಿನಾಸೆ ಹೊನ್ನಿನಾಸೆ ಮನೆಯಾಸೆ ಉಣ್ಣಬೇಕೆಂಬ ಬಲುದುರಾಶೆ ಈ ಪುಣ್ಯಹೀನನ ಮನದಿ ಅನುದಿನ ಸಂದಣಿಸೆ ||೧|| ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡದಾಸೆ ಒಡಲ ತುಂಬಬೇಕೆಂಬ ಆಸೆ ಕೊಡದವನ ಬಡಿದು ಜಡಿವಾಸೆ ಬಿಡದಿರಲು ||೨|| ಹಯವದನದೇವ ನಿನ್ನ ನೆನೆಯದಿದ್ದೀಮನಕೆ ಭಯವೆಲ್ಲಿಹುದು ಜಗನ್ನಾಥ ನಿನ್ನ ದಯವನೆ ಬೀರಿ ನಿರ್ದಯನನ್ನುದ್ಧರಿಸೊ ||೩|| cennakESavadEvaraaya innu sukhipeneMtenage anyatha gatiyilla ||pa|| heNNinaase maNNinaase honninaase maneyaase uNNabEkeMba baluduraaSe I puNyahInana manadi anudina saMdaNise ||1|| uDuvaase nuDivaase bEDuvaase koDadaase oDala tuMbabEkeMba Ase koDadavana baDidu jaDivaase biDadiralu ||2|| hayavadanadEva ninna neneyadiddImanake bhayavellihudu jagannaatha ninna dayavane bIri nirdayanannuddhariso ||3||

ನಾರಾಯಣ ನಿನ್ನ ನಾಮದ | ಶ್ರೀ ಪುರಂದರ ದಾಸರು | Narayana Ninna Namada | Sri Purandara Dasara Kruti

Image
ರಚನೆ : ಶ್ರೀ ಪುರಂದರ ದಾಸರು  Krithi : Sri Purandara Dasaru ನಾರಾಯಣ ನಿನ್ನ ನಾಮದ ಸ್ಮರಣೆಯ  ಸಾರಾಮೃತವೆನ್ನ ನಾಲಿಗೆಗೆ ಬರಲಿ ||ಪ|| ಕೂಡುವಾಗಲು ನಿಂತಾಡುವಾಗಲು ಮತ್ತೆ ಹಾಡುವಾಗಲು ಹರಿದಾಡುವಾಗಲು ಖೋಡಿ ವಿನೋದದಿ ನೋಡದೆ ನಾ ಬಲು ಮಾಡಿದ ಪಾಪ ಬಿಟ್ಟೋಡಿ ಹೋಗೊ ಹಾಂಗೆ ||೧|| ಊರಿಗೆ ಹೋಗಲಿ ಊರೊಳಗಿರಲಿ ಕರಣಾರ್ಥಂಗಳೆಲ್ಲ ಕಾದಿರಲಿ ವಾರಿಜನಾಭ ನರಸಾರಥಿ ನಿನ್ನನು ಸಾರಿಸಾರಿಗೆ ನಾ ಬೇಸರದ್ಹಾಂಗೆ ||೨|| ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ ಕಸವಿಸಿಯಿರಲಿ ಹರುಷವಿರಲಿ  ವಸುದೇವಾತ್ಮಜ ಶಿಶುಪಾಲಕ್ಷಯ ಅಸುರಾಂತಕ ನಿನ್ನ ಹೆಸರು ಮರೆಯದ್ಹಾಂಗೆ ||೩|| ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರು ಮತಿಗೆಟ್ಟಿರಲಿ ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾಮಂತ್ರದ ನಾಮದ ||೪|| ಕನಸಿನೊಳಗಾಗಲಿ ಕಳವಳಿಕಾಗಲಿ ಮನಸುಗೊಟ್ಟಿರಲಿ ಮುನಿದಿರಲಿ ಜನಕಜಾಪತಿ ನಿನ್ನ ಚರಣಕಮಲವನು ಮನಸಿನೊಳಗೆ ಒಮ್ಮೆ ನೆನಸಿಕೊಳ್ಳುವ ಹಾಗೆ ||೫|| ಜ್ವರ ಬಂದಾಗಲು ಚಳಿ ಬಂದಾಗಲು ಮರಳಿ ಮರಳಿ ಮತ್ತೆ ನಡುಗುವಾಗ ಹರಿನಾರಾಯಣ ದುರಿತನಿವಾರಣೆಂದು ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ||೬|| ಸಂತತ ಹರಿ ನಿನ್ನ ಸಾಸಿರನಾಮವ ಅಂತರಂಗದಾ ಒಳಗಿರಿಸಿ ಎಂತೋ ಪುರಂದರವಿಟ್ಠಲರಾಯನೆ ಅಂತ್ಯಕಾಲದಲಿ ಚಿಂತಿಸೊ ಹಾಂಗೆ ||೭|| naaraayaNa ninna naamada smaraNeya saaraamRutavenna naaligege barali ||pa|| kUDuvaagalu niMtaaDuvaa...

ಎಚ್ಚರದಲಿ ನಡೆ ಮನವೆ | ಶ್ರೀ ಪುರಂದರ ದಾಸರ ಕೃತಿ | Echcharadali nade | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು  Krithi : Sri Purandara Dasaru ಎಚ್ಚರದಲಿ ನಡೆ ಮನವೆ, ಮುದ್ದು ಅಚ್ಯುತನ ದಾಸರ ಒಡಗೂಡಿ ಬರುವೆ  ||ಪ|| ಅನ್ನದಾನವ ಮಾಡೋದಿಲ್ಲಿ, ಮೃ- ಷ್ಟಾನ್ನವ ತಂದು ಮುಂದಿಡುವರು ಅಲ್ಲಿ ಅನ್ಯಾಯ ಮಾಡುವುದಿಲ್ಲಿ ನಿನ್ನ ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ ||೧|| ತಂದೆ ತಾಯ್ಗಳ ಪೂಜೆಯಲ್ಲಿ ದೇ- ವೇಂದ್ರನ ಸಭೆಯ ತೋರುವರೊ ನಿನಗಲ್ಲಿ ತಂದೆ ತಾಯ್ಗಳ ಬಯ್ವುದಿಲ್ಲಿ ಹುಲ್ಲು ದೊಂದೆಯ ಕಟ್ಟಿ ಸುಡಿಸುವರೊ ಅಲ್ಲಿ ||೨|| ಆಲಯ ದಾನವು ಇಲ್ಲಿ ವಿಶಾಲ ವೈಕುಂಠದೊಳಿಡುವರೊ ಅಲ್ಲಿ ಆಲಯ ಮುರಿಯುವುದಿಲ್ಲಿ ನಿನ್ನ ಶೂಲದ ಮರವನೇರಿಸಿ ಕೊಲ್ವರಲ್ಲಿ ||೩|| ಅತ್ತೆ ಮಾವನ ಸೇವೆಯಿಲ್ಲಿ, ಮತ್ತೆ ಉತ್ತಮ ಪತಿವ್ರತೆಯೆಂಬುವರಲ್ಲಿ ಅತ್ತೆ ಮಾವನ ಬಯ್ಯುವುದಿಲ್ಲಿ, ನಿನ್ನ ಕತ್ತು ಗರಗಸದಲ್ಲಿ ಕೊಯ್ಯುವರಲ್ಲಿ ||೪|| ಗಂಡನ ಭಕ್ತಿಯು ಇಲ್ಲಿ, ನಮ್ಮ ಪುಂಡರೀಕಾಕ್ಷನು ಒಲಿಯುವನಲ್ಲಿ ಗಂಡನ ನಿಂದಿಪುದಿಲ್ಲಿ, ನಿನ್ನ ಖಂಡ ಖಂಡವ ಕತ್ತರಿಸುವರಲ್ಲಿ ||೫|| ಮದ್ದಿಟ್ಟು ಕೊಲ್ಲುವುದಿಲ್ಲಿ,ಒ- ದ್ದೊದ್ದು ಹದ್ದು ಕಾಗೆಗೆ ಹಾಕುವರಲ್ಲಿ ಕ್ಷುದ್ರಬುದ್ಧಿಯ ಮಾಡೋದಿಲ್ಲಿ,ದೊಡ್ಡ ಗುದ್ದಲಿ ಕಾಸಿ ಬೆನ್ನೊಳು ಎಳೆವರಲ್ಲಿ ||೬|| ಯಾಚಕರ ಮನ್ನಿಪುದಿಲ್ಲಿ, ನಿನ್ನ ಯೋಚನೆಯಿಲ್ಲದೆ ಸಲಹುವರಲ್ಲಿ ಯಾಚಕರನು ಬಯ್ವುದಿಲ್ಲಿ, ನಿನ್ನ ನಾಚಿಕೆ ತೆಗೆದು ನಾಲಗೆ ಸೀಳ್ವರಲ್ಲಿ ||೭|| ಧರ್ಮವ ಮಾಡುವುದಿಲ್ಲಿ, ಸು ಧರ್ಮ ಸಭೆಯ ತೋರುವರು ಮುಂದಲ್ಲಿ ಕರ್ಮ ಯೋಚನೆ...

ಗುರು ರಾಘವೇಂದ್ರರ ಚರಣ | ಶ್ರೀ ಗೋಪಾಲ ದಾಸರು | Guru Raghavendrara Charana | Sri Gopala Dasaru

Image
ರಚನೆ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala Dasaru (Gopala vittala) ಗುರು ರಾಘವೇಂದ್ರರ ಚರಣ ಕಮಲವನ್ನು  ಸ್ಮರಿಸುವ ಮನುಜರಿಗೆ ||ಪ|| ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ  ಕರಿಯು ಸಿಂಹನ ಕಂಡ ತೆರನಾಗುವುದಯ್ಯ ||ಅಪ|| ಗುರು ಮಧ್ವಮತವೆಂಬ ವರಕ್ಷೀರಾಂಬುಧಿಯಲ್ಲಿ  ಹರ ಧರಿಸಿದ ಶಶಿಯಂತುದಿಸಿ  ಪರಮತ ತಿಮಿರಕ್ಕೆ ತರಣಿ ಕಿರಣನೆನಿಸಿ  ಪಿರಿದು ಮೆರೆದ ಸಿರಿ ರಾಮನರ್ಚಕರಾದ ||೧|| ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿ,  ಪರಮೇಷ್ಠಿ ಮರುತರೆ ಗುರುಗಳೆಂದು ಗರುಡ ಶೇಷ ರುದ್ರ ಸಮರೆಂದು ಸ್ಥಾಪಿಸಿ  ಸ್ಥಿರ ತಾರತಮ್ಯ ಪಂಚ ಭೇದ ಸತ್ಯವೆಂಬ ||೨|| ಅಂಧಕರಿಗೆ ಚಕ್ಷು, ವಂದ್ಯೆಯರಿಗೆ ಸುತರು  ಬಂದ ಬಂದವರಿಗಭೀಷ್ಟಗಳನಿತ್ತು ಒಂದಾರು ನೂರು ವತ್ಸರ ಬೃಂದಾವನದಲ್ಲಿ  ಚಂದಾಗಿ ನಿಂತು ಮೆರೆವ ಕೃಪಾ ಸಿಂಧು ||೩|| ರಾ ಎನ್ನೆ ದುರಿತ ರಾಶಿಗಳ ದಹಿಸುವ  ಘ ಎನ್ನೆ ಘನಜ್ಞಾನ ಭಕುತಿ ಈವ ವೇಂ ಎನ್ನೆ ವೇಗದಿ ಜನನ ಮರಣ ದೂರ  ದ್ರ ಎನ್ನೆ ದ್ರವಿಣಾರ್ಥ ಶ್ರುತಿಪ್ರತಿಪಾದ್ಯನ ಕಾಂಬ ||೪|| ವರತುಂಗಾ ತೀರ, ಮಂತ್ರಾಲಯ ಪುರದಲ್ಲಿ  ಪರಿಪರಿಸೇವೆ ಭೂಸುರರಿಂದ ಕೊಳುತಾ || ಸಿರಿಯರಮಣ ನಮ್ಮ ಗೋಪಾಲವಿಠಲನ  ಚರಣ ಸೇವಿಸುತಿಪ್ಪ ಗುರು ಶಿಖಾಮಣಿಯಾದ ||೫|| guru rAGavEMdrara caraNa kamalavannu  smarisuva manujarige ||pa|| karekaregoLisuv...

ಮಳೆಯ ದಯ ಮಾಡೋ ಶ್ರೀರಂಗ | ಹೆಳವನಕಟ್ಟೆ ಗಿರಿಯಮ್ಮ | Maleya Daya Mado | Helavanakatte Giriyamma

Image
ರಚನೆ : ಹೆಳವನಕಟ್ಟೆ ಗಿರಿಯಮ್ಮ  Krithi : Helavanakatte Giriyamma ಮಳೆಯ ದಯ ಮಾಡೋ ಶ್ರೀರಂಗ  ನಿಮ್ಮ ಕರುಣೆ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ | ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು || ತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡು  ದೆಶೆದೆಶೆಗೆ ಬಾಯಿ ಬಿಡುತಿಹವಯ್ಯ ಹರಿಯೇ ||೧|| ಧಗೆಯಾಗಿ ಇನ್ನು ದ್ರವಗುಂದದ ಬಾವಿಯ ನೀರು | ಮಗಿಮಗಿದು ಪಾತ್ರೆಯಲಿ ನಾರಿಯರು | ಹಗಲೆಲ್ಲ ತರುತಿಹರು ಯೋಚನೆಯ ಮಾಡುತ  ಬೇಗದಿಂದಲಿ ತರಿಸೋ ವೃಷ್ಟಿಯನು ಹರಿಯೇ ||೨|| ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ  ಬಂದಿದೆ ಭಾದ್ರಪದ ಮಾಸವೀಗ ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೋ ಸಂದೇಹವಿನ್ಯಾಕೆ ಹೆಳವನ ಕಟ್ಟೆ ರಂಗ ||೩|| maLeya daya mADO SrIraMga  nimma karuNe tappidare uLiyadI lOka ||pa||   paSujAti hulle sAraMga mRugagaLu bahaLa | hasidu bAyAri battida kerege baMdu || tRuSheyaDagade tallaNisi mUrCeyagoMDu  deSedeSege bAyi biDutihavayya hariyE ||1|| dhageyAgi innu dravaguMdada bhAviya nIru | magimagidu pAtreyali nAriyaru | hagalella tarutiharu yOcaneya mADuta  bEgadiMdali tarisO vRuShTiyanu hariyE ||2||   saMdu hOdavu jyEShTha AShADha SrAvaNa...

ಬಂದು ನಿಂದಾ ಕಣ್ಣ | ಶ್ರೀ ವಿಜಯ ದಾಸರು | Bandu Ninda Kanna | Sri Vijaya Dasaru

Image
ರಚನೆ : ಶ್ರೀ ವಿಜಯ ದಾಸರು Kruti: Sri Vijaya Dasaru ಬಂದು ನಿಂದಾ ಕಣ್ಣ ಮುಂದೆ ಬಂದು ನಿಂದಾ ||ಪ|| ಬಂದು ನಿಂದ ನಿಂದು ಭಾಗವತರ ಪ್ರಿಯಾ  ಕಂದರ್ಪಜನಕ ಶ್ರೀ ಕರುಣಾ ಸಾಗರ ಮೂರ್ತಿ ||ಅಪ|| ಕುಟಿಲ ಕುಂತಲ ದೇವ ವಟು ವೇಷದಿಂದಲಿ ನಟನೆ ಮಾಡುತ ದಿವ್ಯಪಟು ತರದಲಿ ತಾನು ||೧|| ಮುರಳಿಯನೂದುತ್ತ ಮರುಳುಗೊಳಿಸಿ ಜನರ ಕೊರಳ ಪದಕ ಹಾರ ಧರಿಸಿ ತಾ ನಲಿಯುತ ||೨|| ಸುಜನರ ಪೊರೆಯುವ ಕುಜನರ ತರಿಯುವ ವಿಜಯಸಾರಥಿ ದಿವ್ಯ ವಿಜಯವಿಠಲರೇಯಾ ||೩|| baMdu niMdaa kaNNa muMde baMdu niMdaa ||pa|| baMdu niMda niMdu bhaagavatara priyaa  kaMdarpajanaka shrI karuNaa saagara mUrti ||apa|| kuTila kuMtala dEva vaTu vEShadiMdali naTane maaDuta divyapaTu taradali taanu ||1|| muraLiyanUdutta maruLugoLisi janara koraLa padaka haara dharisi taa naliyuta ||2|| sujanara poreyuva kujanara tariyuva vijayasaarathi divya vijayaviThalarEyaa ||3||

ಕಲಿಯುಗದೊಳು ಹರಿನಾಮವ | ಶ್ರೀಪುರಂದರವಿಠಲ | Kaliyugadolu | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಕಲಿಯುಗದೊಳು ಹರಿನಾಮವ ನೆನೆದರೆ  ಕುಲಕೋಟಿಗಳುದ್ಧರಿಸುವವು ||ಪ|| ಸುಲಭದ ಮುಕ್ತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೆ ||ಅಪ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೆ ||೧|| ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆ ಮನವೆ ||೨|| ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ ಅಪಾರಮಹಿಮ ಶ್ರೀಪುರಂದರವಿಠಲನ ಉಪಾಯದಿಂದಲಿ ನೆನೆ ಮನವೆ ||೩|| kaliyugadoLu harinaamava nenedare  kulakOTigaLuddharisuvavu ||pa|| sulabhada muktige sulabhaneMdenisuva jalaruhanaabhana nene manave ||apa|| snaanavanariyenu maunavanariyenu dhyaanavanariyeneMdenabEDa jaanakivallabha daSarathanaMdana gaanavinOdana nene manave ||1|| arcisalariyenu meccisalariyenu tucCanu naaneMdenabEDa acyutaanaMta gOviMda mukuMdana icCeyiMda nI nene manave ||2|| japavoMdariyenu tapavoMdariyenu upadESavilleMdenabEDa apaaramahima SrIpuraMdaraviThalana upaayadiMdali nene manave |...

ಗರುಡ ಗಮನ ಬಂದನೋ | ಶ್ರೀ ಪುರಂದರ ದಾಸರು | Garuda Gamana Bandano | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಗರುಡ ಗಮನ ಬಂದನೋ ನೋಡಿರೋ ಬೇಗ |  ಗರುಡಗಮನ ಬಂದನೊ || ಗರುಡ ಗಮನ ಬಂದ ಧರಣಿಯಿಂದೊಪ್ಪುತ  ಕರೆದು ಬಾರೆನ್ನುತ ವರಗಳ ನೀಡುತ ||ಪ|| ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ  ಚಿನ್ನವ ಹೋಲುವ ವಿಹಂಗ ರಥದಲಿ | ಘನ್ನ ಮಹಿಮ ಬಂದ ಭಿನ್ನ ಮೂರುತಿ ಬಂದ | ಸಣ್ಣ ಕೃಷ್ಣ ಬಂದ | ಬೆಣ್ಣೆ ಕಳ್ಳ ಬಂದ ||೧|| ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ | ಕುಕ್ಷಿಯೊಳಗೆ ಜಗವನಿಟ್ಟವ ತಾ ಬಂದ | ಸೂಕ್ಷ್ಮ ಸ್ಥೂಲದೊಳು ಇಪ್ಪಾನು ತಾ ಬಂದ ಸಾಕ್ಷೀಭೂತನು ಆವ ಸರ್ವೇಶ್ವರನು ಬಂದಾ ||೨|| ತಂದೆ ಪುರಂದರ ವಿಠಲ ರಾಯ ಬಂದ ಬಂದು ನಿಂದು ನಲಿದಾಡುತಿಹ | ಅಂದೂ ಸಾಂದೀಪನ ನಂದನನ ತಂದಿತ್ತ | ಸಿಂಧುಶಯನ ಆನಂದ ಮೂರುತಿ ಬಂದ ||೩|| garuDa gamana baMdanO nODirO bEga |  garuDagamana baMdano || garuDa gamana baMda dharaNiyiMdopputa  karedu bArennuta varagaLa nIDuta ||pa||   enna rakShipa dore illige tA baMda  cinnava hOluva vihaMga rathadali | Ganna mahima baMda Binna mUruti baMda | saNNa kRuShNa baMda | beNNe kaLLa baMda ||1||   pakShivAhana baMda lakShmIpatiyu baMda | kukShiyoLage jagavaniTTava tA baMda | sUkShma st...

ಓಡಿ ಬಾರಯ್ಯ ವೈಕುಂಠಪತಿ | ಶ್ರೀ ಪುರಂದರ ವಿಠಲ | Odi Barayya Vaikunta pati | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಓಡಿ ಬಾರಯ್ಯ ವೈಕುಂಠಪತಿ ನಿನ್ನ  ನೋಡುವೆ ಮನದಣಿಯೆ ||ಪ|| ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ ಪಾಡಿ ಪೊಗಳುವೆನು ಪರಮ ಪುರುಷ ಹರಿ ||ಅಪ|| ಕೆಂದಾವರೆ ಪೋಲ್ವ ಪಾದಗಳಿಂದ ರಂಗ  ಧಿಂಧಿಮಿ ಧಿಮಿಕೆಂದು ಕುಣಿಯುತಲಿ || ಅಂದುಗೆ ಕಿರುಗೆಜ್ಜೆ ನಲಿದಾಡುತ ಬಾರೋ ಅರ- ವಿಂದ ನಯನ ಗೋವಿಂದ ನೀ ಬಾರೋ ||೧|| ಕೋಟಿ ಸೂರ್ಯ ಪ್ರಕಾಶದಂತೆ ಕಿರೀಟ ಕುಂಡಲ ಬಾವುಲಿ ಪೊಳೆಯೆ  ಲಲಾಟದಿ ಕಸ್ತೂರಿ ತಿಲಕವಿಡುವೆ ರಂಗ ಕೂಟ ಗೋಪಾಲರ ಆಟ ಸಾಕೊ ಈಗ ||೨|| ಎಣ್ಣೂರಿಗತಿರಸ ದಧಿ ಘೃತವೊ ರಂಗ ಎನ್ನಯ್ಯ ನಿನಗೆ ಕೊಡುವೆ ಬಾರೊ ಚಿಣ್ಣರ ಒಡನಾಟ ಸಾಕು ಬಿಡೋ ರಂಗ ಬೆಣ್ಣೆಯ ಮೆಲುವುದು ಬೇಡ ಎನ್ನ ಕಂದ ||೩|| ತುರುಬಿನ ಮೇಲೆ ನಲಿಯುತಲಿರುತಿಹ ಮರುಗ ಮಲ್ಲಿಗೆ ಜಾಜಿ ತುಲಸಿಯ ದಂಡೆ ಕರದಲಿ ಪಿಡಿದು ಪೊಂಗೊಳಲನೆ ಊದುತ ಸರಸದಿಂದಲಿ ನೀ ನಲಿನಲಿದಾಡುತ ||೪|| ಮಂಗಳಾಂಗ ಮೋಹನ ಕಾಯರಂಗ  ಸಂಗೀತಲೋಲ ಸದ್ಗುಣ ಶೀಲ || ಅಂಗನೆಯರಿಗೆಲ್ಲ ಅತಿಪ್ರಿಯನಾದ ಶುಭ- ಮಂಗಳ ಮೂರುತಿ ಪುರಂದರ ವಿಠಲ ||೫|| ODi bArayya vaikuMThapati ninna  nODuve manadaNiye ||pa||   nODi muddADi mAtADi saMtOShadi kUDi pADi pogaLuvenu parama puruSha hari ||apa||   keMdAvare pOlva pAdagaLiMda raMga  dhiMdhim...

ಮುಳ್ಳು ಕೊನೆಯ ಮೇಲೆ | ಶ್ರೀ ಪುರಂದರ ವಿಠಲ | Mullu Koneya Mele | Sri Purandara Dasara Kruti

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ  ಎರಡು ತುಂಬದು ಒಂದು ತುಂಬಲೇ ಇಲ್ಲ ||ಪ|| ತುಂಬಲಿಲ್ಲದ ಕೆರೆಗೆ ಬಂದರು ಮೂವರು ವಡ್ಡರು  ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ ||ಅಪ|| ಕಾಲಿಲ್ಲದ ವಡ್ಡಗೆ ಕೊಟ್ಟರು ಮೂರು ಎಮ್ಮೆಗಳ  ಎರಡು ಬರಡು ಒಂದಕೆ ಕರುವೇ ಇಲ್ಲ || ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ | ಎರಡು ಸವಕಲು ಒಂದು ಸಲ್ಲಲೇ ಇಲ್ಲ ||೧|| ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು | ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ || ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ | ಎರಡು ಹಾಳು ಒಂದಕೆ ಒಕ್ಕಲೇ ಇಲ್ಲ ||೨|| ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ || ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಕೆಗಳ | ಎರಡು ಒಡಕು ಒಂದಕೆ ಬುಡವೇ ಇಲ್ಲ ||೩|| ಬುಡವಿಲ್ಲದ ಮಡಕೆಗೆ ಹಾಕಿದರು ಮೂರಕ್ಕಿ ಕಾಳ  ಎರಡು ಬೇಯದು ಒಂದು ಬೇಯಲೇ ಇಲ್ಲ || ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು  ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ ||೪|| ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ ಎರಡು ತಾಕದು ಒಂದು ತಾಕಲೇ ಇಲ್ಲ || ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯನ್ನು ಈಯಬೇಕು ಪುರಂದರ ವಿಠಲರಾಯ ||೫|| muLLu koneya mEle mUru kere...

ಮುತ್ತಿನ ಮೂಗುತಿ | ಪುರಂದರ ವಿಠಲ | Muttina Muguti | Sri Purandara Dasara Kruti

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಮುತ್ತಿನ ಮೂಗುತಿ ಮುಕ್ತೀಲಿ ಬ್ರಾಹ್ಮಣ ಇಕ್ಕೊ ಈಗಲೆಂದು ಮಾಯವಾದನು ||ಪ|| ಪಂಢರ ಪುರವಂತೆ ಅಲ್ಲಿ ಪಾಂಡುರಂಗನಂತೆ || ತಂಡ ತಂಡದಿ ಹರಿ ಕೀರ್ತನೆ  ಮಾಡುತ ಕಂದನ ಲಗ್ನಕೆ ಪೋಗಬೇಕೆನುತ ||೧|| ಅಂದಿನ ದಿನದಲ್ಲಿ ನಾರಿಯ ಕಂಭಕೆ ಕಟ್ಟಿರಲು |  ಮಂದರೋದ್ಧರನ ಮೊರೆಯಿಟ್ಟು ಕೂಗಲು | ಬಂಧನ ಬಿಡಿಸಿ ಮುಕುತಿಯ ಕೊಟ್ಟನು ||೨|| ಪತಿ ಪತ್ನಿಯರು ಕೂಡಿ ಬಹಳ ಅನ್ನದಾನವ ಮಾಡಿ | ಕನಕಾಭರಣವೀಯಲು ಪತಿವ್ರತೆ |  ಪುರಂದರ ವಿಠಲನ ಪಾದ ಸೇರಿದಳು ||೩|| muttina mUguti muktIli braahmaNa ikko IgaleMdu maayavaadanu ||pa|| paMDhara puravaMte alli paaMDuraMganaMte || taMDa taMDadi hari kIrtane  maaDuta kaMdana lagnake pOgabEkenuta ||1|| aMdina dinadalli naariya kaMbhake kaTTiralu |  maMdarOddharana moreyiTTu kUgalu | baMdhana biDisi mukutiya koTTanu ||2|| pati patniyaru kUDi bahaLa annadaanava maaDi | kanakaabharaNavIyalu pativrate |  puraMdara viThalana paada sEridaLu ||3||

ಇಟ್ಟಿಗೆ ಮೇಲೆ ನಿಂತನಮ್ಮ | ಶ್ರೀ ಪುರಂದರ ವಿಠಲ | Ittige Mele Nintanamma | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಇಟ್ಟಿಗೆ ಮೇಲೆ ನಿಂತನಮ್ಮ ವಿಠಲ ತಾನು|  ಪುಟ್ಟಪಾದ ಊರಿ ನಿಂತ ದಿಟ್ಟ ತಾನು |ಪ| ಪುಟ್ಟ ಪಾದ ಊರಿ ನಿಂತ| ಗಟ್ಟಿಯಾಗಿ ನಿಂತನಮ್ಮ| ಟೊಂಕದ ಮೇಲೆ ಕೈಯ ಕಟ್ಟಿ ಭಕ್ತರು ಬರುವುದ ನೋಡುವನಮ್ಮ |ಅಪ| ಪಂಢರ ಪುರದಲಿ ಇರುವನಂತೆ| ಪಾಂಡುರಂಗ ಎಂಬುವನಂತೆ| ಚಂದ್ರಭಾಗ ಪಿತ ಇವನಂತೆ| ಅರಸಿ ರುಕ್ಮಿಣೀ ಪತಿ ಇವನಂತೆ |೧| ಕನಕದಾಸೆ ಇವಗಿಲ್ಲವಮ್ಮ| ಹಣದ ಆಸೆ ಬೇಕಿಲ್ಲವಮ್ಮ| ನಾದಬ್ರಹ್ಮ ಎಂಬುವನಮ್ಮ| ಭಕುತರ ವಚನಕೆ ಕಾದಿಹನಮ್ಮ |೨| ಕರಿಯ ಕಂಬಳಿ ಹೊದ್ದಿಹನಮ್ಮ| ಹಣೆಗೆ ನಾಮ ಹಚ್ಚಿಹನಮ್ಮ| ತುಳಸಿ ಮಾಲೆ ಹಾಕ್ಯಾನಮ್ಮ| ಪುರಂದರ ವಿಠಲ ಒಲಿದನಮ್ಮ |೩| iTTige mEle niMtanamma viThala tAnu|  puTTapAda Uri niMta diTTa tAnu |pa| puTTa pAda Uri niMta| gaTTiyAgi niMtanamma| ToMkada mEle kaiya kaTTi Baktaru baruvuda nODuvanamma |apa|   paMDhara puradali iruvanaMte| pAMDuraMga eMbuvanaMte| caMdraBAga pita ivanaMte| arasi rukmiNI pati ivanaMte |1|   kanakadAse ivagillavamma| haNada Ase bEkillavamma| nAdabrahma eMbuvanamma| Bakutara vacanake kAdihanamma |2|   kariya kaMbaLi hoddihanamma| haNege nAma haccihanamm...

ಇಟ್ಹಾಂಗೆ ಇರುವೆನು ಹರಿ | ಶ್ರೀ ರಂಗವಿಠಲ | Itthange iruvenu | Sri Ranga Vithala

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಇಟ್ಹಾಂಗೆ ಇರುವೆನು ಹರಿಯೆ ಎನ್ನ ದೊರೆಯೆ ||ಪ|| ಸೃಷ್ಟಿವಂದಿತ ಪಾದ ಪದುಮ ಶ್ರೀ ಹರಿಯೇ  ||ಅಪ|| ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ ಚಿನ್ನದ ಹರಿವಾಣದಲಿ ಭೋಜನ ಘನ್ನ ಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ- ದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೆ ||೧|| ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ ಸೊಂಪಿನಂಚಿನ ಶಾಲು ಹೊದಿಸುವಿಯೋ ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ ಕಪರ್ದಕ ಕೌಪೀನವು ದೊರೆಯದೋ ಹರಿಯೇ ||೨|| ಚಂದ್ರಶಾಲೆಯಲ್ಲಿ ಚಂದ್ರಕಿರಣದಂತೊಪ್ಪುವ   ಚಂದದ ಮಂಚದೊಳು ಮಲಗಿಸುವಿ ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ ಮಂದಿರದೊಳು ತೋಳ್ತಲಗಿಂಬು ಹರಿಯೇ ||೩|| ನರಯಾನದೊಳು ಕ್ಷಣ ನರವರನೆನಿಸುವಿ ವರಛತ್ರ ಚಾಮರ ಹಾಕಿಸುವಿ ಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆ  ಚರಣರಕ್ಷೆಯು ದೊರೆಯದು ಶ್ರೀಹರಿಯೇ ||೪|| ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ ಸಂಗವಿರಲಿ ದುಷ್ಟ ಸಂಗ ಬ್ಯಾಡ ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ ಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ ||೫|| iT~haaMge iruvenu hariye enna doreye ||pa|| sRuShTivaMdita paada paduma shrI hariyE  ||apa|| saNNa shaalyOdana beNNe kaasida tuppa cinnada harivaaNadali bhOjana Ganna mahima ninna karuNa tappid...

ನೀಲಲೋಹಿತ ಡಮರುಗ | ಜಗನ್ನಾಥ ವಿಠಲ | Neelalohita Damaruga | Sri Jagannatha Dasara Kruti

Image
ರಚನೆ  : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha Dasaru (Jagannatha vittala) ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ ||ಪ|| ಫಾಲನಯನ ಶುಂಡಾಲ ಚರ್ಮ ಸುದು ಕೂಲ ಮೃಡ ಸತತ ಪಾಲಿಸು ಕರುಣದಿ  ||ಅಪ|| ನಂದಿವಾಹನ ನಮಿಪೆ ಖಳವೃಂದ ಮೋಹನ ಅಂಧಕರಿಪು ಶಿಖಿಸ್ಯಂದನ ಜನಕ ಸ ನಂದನಾದಿ ಮುನಿ ವಂದಿತ ಪದಯುಗ    ||೧|| ಸೋಮಶೇಖರ ಗಿರಿಜಾಸುತ್ರಾಮ ಲೇಖರಾ ಸ್ತೋಮವಿನುತ ಭವ ಭೀಮ ಭಯಾಂತಕ ಕಾಮರಹಿತ ಗುಣಧಾಮ ದಯಾನಿಧೆ   ||೨|| ನಾಗಭೂಷಣ ವಿಮಲ ಸರಾಗ ಭಾಷಣ ಭೋಗಿಶಯನ ಜಗನ್ನಾಥ ವಿಠಲನ ಯೋಗದಿ ಒಲಿಸುವ ಭಾಗವತರೊಳಿಡೊ     ||೩|| nIlalOhita Damaruga triSUla SObhita ||pa|| phaalanayana SuMDaala carma sudu kUla mRuDa satata paalisu karuNadi  ||apa|| naMdivaahana namipe khaLavRuMda mOhana aMdhakaripu SikhisyaMdana janaka sa- naMdanaadi muni vaMdita padayuga    ||1|| sOmaSEkhara girijaasutraama lEkharaa stOmavinuta bhava bhIma bhayaaMtaka kaamarahita guNadhaama dayaanidhe   ||2|| naagabhUShaNa vimala saraaga bhaaShaNa bhOgiSayana jagannaatha viThalana yOgadi olisuva bhaagavataroLiDo     ||3||

ಶರಣು ಶರಣು ಶರಣ್ಯವಂದಿತ | ಶ್ರೀ ಪುರಂದರ ವಿಠಲ | Sharanu Sharanu | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಶರಣು ಶರಣು ಶರಣ್ಯವಂದಿತ ಶಂಖ ಚಕ್ರ ಗಧಾಧರ ||ಪ|| ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ||ಅಪ|| ಶೀಲದಲಿ ಶಿಶು ನಿನ್ನ ನೆನೆಯಲು ಕಾಲಲೊತ್ತುತ ಖಳರನು ಲೀಲೆಯಿಂದಲಿ ಚಿಟಿಲು ಭುಗಿಭುಗಿಲೆನುತ ಉಕ್ಕಿನ ಕಂಬದಿ ಖೂಳ ದೈತ್ಯನ ತೋಳಿನಿಂದಲಿ ಸೀಳಿ ಹೊಟ್ಟೆಯ ಕರುಳನು ಮಾಲೆಯನು ಕೊರಳೊಳಗೆ ಧರಿಸಿದ ಜ್ವಾಲನರಸಿಂಹ ಮೂರ್ತಿಗೆ ||೧|| ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ಥಳಥಳಾ ಥಳ ಹೊಳೆವ ಮಿಂಚಿನೊಲ್‍ ಹೊಳೆವ ನರಸಿಂಹ ಮೂರ್ತಿಗೆ ||೨|| ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ ಬಾಯಿ ಮೂಗಿನ ಶ್ವಾಸದಿ  ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ  ಸಾರಿಸಾರಿಗೆ ಹೃದಯ ರಕುತವ ಸೂರೆ ಸುರಿಸುರಿದೆರಗುತ ಘೋರರೂಪಗಳಿಂದ ಮೆರೆಯುವ ಧೀರ ನರಹರಿ ಮೂರ್ತಿಗೆ ||೩|| ಹರನು ವಾರಿಜಭವನು ಕರಗಳ ಮುಗಿದು ಜಯ ಜಯವೆನುತಿರೆ ತರಳ ಪ್ರಹ್ಲಾದನಿಗೆ ತಮ್ಮಯ ಶರೀರಬಾಧೆಯ ಪೇಳಲು ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವ ನೀಡುತ ಸಿರಿ ಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿ ಮೂರ್ತಿಗೆ ||೪|| ವರವ ಬೇಡಿದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ಸುರರು ಪುಷ್ಪದ...

ನರಸಿಂಹ ಜಯಂತಿ ಪ್ರಯುಕ್ತ | ನಾರಸಿಂಹನೆಂಬ ದೇವನು | Narasimhanemba Devanu | Sri Purandara Dasara Kruti

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ನಾರಸಿಂಹನೆಂಬ ದೇವನು ನಂಬಿದಂಥ ನರರಿಗೆಲ್ಲ ವರವ ಕೊಡುವನು ||ಪ|| ಆದಿಯಲ್ಲಿ ಲಕ್ಷ್ಮಿ ಸಹಿತದಿ ಮಲಗಿರಲು ಬಂದರಾಗ ಸನತ್‌ಕುಮಾರರು ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದರು ||೧|| ದಿತಿಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ ಹಿರಣ್ಯಕಶಿಪುರೆಂಬ ಭ್ರಾತೃರು ಪೃಥ್ವಿಯನ್ನು ಮುಳುಗಿಸಿದ ಕಾರಣದಿ ಶ್ರೀಹರಿಯು ತೃತೀಯ ರೂಪದಿಂದ ಖಳನ ಕೊಂದು ಧರೆಯನುಳುಹಿದನು ||೨|| ಅನುಜನಾದ ಹಿರಣ್ಯಾಕ್ಷನ ಮರಣವನ್ನು ಕೇಳಿ ಆಗ ನಡೆದ ತಪಸ್ಸಿಗೆ ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ||೩|| ಇಂದ್ರಲೋಕ ಸೂರೆ ಮಾಡಿದ ಮೂರು ಲೋಕಕೆ ಅಸುರ ತನ್ನ ಭಯವ ತೋ- ರಿದ ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ  ಬಂದು ಆಗ ದೈತ್ಯರಾಜ ಹಿರಣ್ಯಕಶಿಪುವಿಗೆ ಒಪ್ಪಿಸಿದನು ||೪|| ನವಮಾಸಗಳು ತುಂಬಲು ಕಯಾದು ಆಗ ಪುತ್ರರತ್ನವನ್ನು ಪಡೆದಳು ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ||೫|| ಬಾಲಚಂದ್ರನಂತೆ ಬೆಳೆಯುತಾ ಇರುತಿರಲು ಐದು ವರ್ಷ ತುಂಬಿತಾಗಲೇ ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ||೬|| ಓಂ ನಮಃ ಶಿವಾಯ ಎನುತಲಿ ಅಸುರ ತನ್ನ ಸುತನ ಬರೆದು ತೋ...

ಆರತಿ ಹಾಡು | ಆನಂದಮಯಗೆ ಚಿನ್ಮಯಗೆ | ಶ್ರೀ ವಾದಿರಾಜರು | Anandamayage Chinmayage | Sri Vadirajaru

Image
ರಚನೆ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ ||ಪ|| ವೇದವ ತಂದು ಬೆಟ್ಟವ ಪೊತ್ತು ಧರಣಿಯ ಸಾಧಿಸಿ ಕಂಭದಿ ಬಂದವಗೆ ಭೂದಾನವ ಬೇಡಿ ನೃಪರ ಸಂಹರಿಸಿದ ಆದಿ ಮೂರುತಿಗೆ ಆರತಿ ಎತ್ತಿರೆ ||೧|| ಇಂದುವದನೆ ಕೂಡಿ ಅರಣ್ಯ ಚಲಿಸಿ ನಂದಗೋಕುಲದಲ್ಲಿ ನಲಿದವಗೆ ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗೆ ಆರತಿ ಎತ್ತಿರೆ ||೨|| ತುರಗವನೇರಿ ದೈತ್ಯರ ಸೀಳಿ ಸುಜನರ ಪೊರೆವ ಮಂಗಳ ಹಯವದನನಿಗೆ ವೇಲಾಪುರದ ಚೆನ್ನಿಗರಾಯನ ಚರಣಕಮಲಕೆ ಆರತಿ ಎತ್ತಿರೆ ||೩|| AnaMdamayage cinmayage shrImannaaraayaNage Arati ettire ||pa|| vEdava taMdu beTTava pottu dharaNiya saadhisi kaMbhadi baMdavage bhUdaanava bEDi nRupara saMharisida Adi mUrutige Arati ettire ||1|| iMduvadane kUDi araNya calisi naMdagOkuladalli nalidavage maMdagamaneyara muMde nirvaaNadi niMda mUrutige Arati ettire ||2|| turagavanEri daityara sILi sujanara poreva maMgaLa hayavadananige vElaapurada chennigaraayana charaNakamalake Arati ettire ||3||

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ | ಶ್ರೀ ಮಧ್ವೇಶ ವಿಠಲ |Baaro Namma Manege | Sri Madhwesha Vittala

Image
ರಚನೆ : ಶ್ರೀ ಮಧ್ವೇಶ ವಿಠಲ ದಾಸರು  Krithi : Sri Madhwesha Vittala Dasaru ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ ||ಪ|| ಬಾರೋ ದು:ಖಾಪಹಾರ ಬಾರೋ ದುರಿತ ದೂರ ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು ||ಅಪ|| ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ ಲೋಲ ಶ್ರೀ ನರಹರಿಯ ಕಾಲ ರೂಪವ ತೋರ್ದ ||೧|| ವ್ಯಾಸ ನಿರ್ಮಿತ ಗ್ರಂಥ ಮಧ್ವ ಕೃತ ಭಾಷ್ಯವ ಬೇಸರದೆ ಓದಿ ಮೆರೆವ ವ್ಯಾಸಮುನಿಯೇ  ||೨|| ಮಂತ್ರ ಗೃಹದೊಳು ನಿಂತ ಸುಯತಿವರ್ಯ ಅಂತ ತಿಳಿಯದೊ ಎನ್ನಂತರಂಗದೊಳು    ||೩|| ಭೂತ ಪ್ರೇತಾದಿಗಳ ಘಾತಿಸಿಬಿಡುವಂತ ಖ್ಯಾತಿಯುತ ಯತಿನಾಥನೆ ಸ್ತುತಿಸುವೆ ||೪|| ಕುಷ್ಟರೋಗಾದಿಗಳ ನಷ್ಟ ಮಾಡುವಂಥ ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೇ ||೫|| ಕರೆದರೆ ಬರುವಿಯೆಂಬೊ ಕೀರುತಿ ಕೇಳಿನಾ ಕರೆದೆನೋ ಕರುಣದಿ ಕರವ ಪಿಡಿಯೋ ಬೇಗ ||೬|| ಭಕ್ತ ವತ್ಸಲನೆಂಬೊ ಬಿರುದು ನಿಂದಾದರೆ ಅಶಕ್ತನ ಮೊರೆ ಕೇಳಿ ಮಧ್ವೇಶ ವಿಠಲ ದಾಸಾ ||೭|| baarO namma manege SrI raaGavEMdra ||pa|| baarO du:Kaapahaara baarO durita dUra baarayya sanmaarga daari tOruva guru ||apa|| baala prahlaadanaagi khULa kaSyapuvige lOla SrI narahariya kaala rUpava tOrda ||1|| vyaasa nirmita graMtha madhva kRuta bhaaShyava bEsarade Odi mereva vyaasamuniyE  ||2|| maMtra gRuhadoLu niMta suyativarya...

ರಾಗಿ ತಂದೀರ್ಯಾ | ಶ್ರೀ ಪುರಂದರವಿಠಲ | Ragi Tandeerya | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ರಾಗಿ ತಂದೀರ್ಯಾ | ಭಿಕ್ಷಕೆ | ರಾಗಿ ತಂದೀರ್ಯಾ ||ಪ|| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಅಪ|| ಅನ್ನ ದಾನವ ಮಾಡುವರಾಗಿ | ಅನ್ನ ಛತ್ರವನಿಟ್ಟವರಾಗಿ | ಅನ್ಯ ವಾರ್ತೆಯ ಬಿಟ್ಟವರಾಗಿ | ಅನುದಿನ ಭಜನೆಯ ಮಾಡುವಿರಾಗಿ ||೧|| ಮಾತಾಪಿತರನು ಸೇವಿಪರಾಗಿ ಪಾಪಕಾರ್ಯವ ಬಿಟ್ಟವರಾಗಿ ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ || ೨ || ಗುರುಕಾರುಣ್ಯವ ಪಡೆದವರಾಗಿ ಗುರುವಾಕ್ಯವನು ಪಾಲಿಪರಾಗಿ ಗುರುವಿನ ಪಾದವ ಸ್ಮರಿಸುವರಾಗಿ ಪರಮ ಪುಣ್ಯವ ಮಾಡುವರಾಗಿ || ೩ || ಶ್ರೀನಿವಾಸನ ಸ್ಮರಿಸುವರಾಗಿ ಪ್ರಾಣರಾಯನ ದಾಸರಾಗಿ ದಾನಕೆಂದು ಬಲು ಹೆದರಿ ಇಂಥ ದೀನವೃತ್ತಿಯಲಿ ಹೀನರಾಗಿ || ೪ || ಪಕ್ಷಮಾಸ ವ್ರತ ಮಾಡುವರಾಗಿ ಪಕ್ಷಿವಾಹನಗೆ ಪ್ರಿಯರಾಗಿ ಕುಕ್ಷಿಲಿ ಕಲ್ಮಷ ಇಲ್ಲದವರಾಗಿ ಭಿಕ್ಷುಕರು ಅತಿ ತುಚ್ಛರಾಗಿ || ೫ || ವೇದ ಪುರಾಣವ ತಿಳಿದವರಾಗಿ ಮೇದಿನಿಯಾಳುವಂಥವರಾಗಿ ಸಾಧು ಧರ್ಮವಾಚರಿಸುವರಾಗಿ ಓದಿ ಗ್ರಂಥಗಳ ಪಂಡಿತರಾಗಿ || ೬ || ಆರು ಮಾರ್ಗವ ಅರಿತವರಾಗಿ ಮೂರು ಮಾರ್ಗವ ತಿಳಿದವರಾಗಿ ಭೂರಿ ತತ್ತ್ವವ ಬೆರೆದವರಾಗಿ ಕ್ರೂರರ ಸಂಗವ ಬಿಟ್ಟವರಾಗಿ || ೭ || ಕಾಮ ಕ್ರೋಧವ ಅಳಿದವರಾಗಿ ನೇಮನಿಷ್ಠೆಗಳ ಮಾಡುವರಾಗಿ ಆ ಮಹಾಪದವಿಲಿ ಸುಖಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ || ೮ || ಸಿರಿ ರಮಣನ ದಿನ ನೆನೆಯುವರಾಗಿ ಗುರುತಿಗೆ ...

ಏಳು ಬೆಳಗಾಯಿತು ಬಾಲಕೃಷ್ಣ | ಶ್ರೀ ಇಂದಿರೇಶ ದಾಸರು | Elu Belagayitu Balakrishna | Sri Indiresha Dasaru

Image
ಸಾಹಿತ್ಯ : ಶ್ರೀ ಇಂದಿರೇಶ ದಾಸರು (ಇಂದಿರೇಶ)  Kruti: Sri Indiresha Dasaru (Indiresha) ಏಳು ಬೆಳಗಾಯಿತು ಬಾಲಕೃಷ್ಣ ಬ- ಹಳ ಮಕ್ಕಳು ನಿನ್ನ ಕೇಳುತಿಹರೋ ||ಪ|| ಬರುವಿ ಮನೆಯೊಳಗೆಂದು ಕರೆದು ಪಾಲನು ರುಚಿರ  ತರುಣಿಯರು ಬಚ್ಚಿಟ್ಟು ಕರಣದೊಳಗೆ ಸರಸ ಮೊಸರನೆ ಕಡೆದು ತ್ವರದಿ ಬೆಣ್ಣೆಯ ತೆಗೆದು ಮರೆಮಾಡಿ ಮೂಲೆಯೊಳು ಸುರಿಸುತಿಹರೋ ||೧|| ತುರುವುಗಳಿಗೆ ಸಣ್ಣ ಕರುವುಗಳನೆ ಬಿಟ್ಟು ಕರೆದುಕೊಂಬುವರಿನ್ನು ಪುರದ ಜನರು ತ್ವರದಿ ಕಣ್ಣನೆ ತೆರೆದು ಒಳಹೊರಗೆ ನೋಡುವರು ಅರುಣ ಉದಯಾಗಿಹುದು ತರಣಿ ಬಂದಾ ||೨|| ಏಸು ಪುಡುಗರು ನಮ್ಮ ವಾಸದೆದುರಿಗೆ ನಿಂತು ಘೋಷದಿಂದಲೆ ವತ್ಸರಾಶಿ ತುರುವಾ ಕೂಸೆ ಕರೆವರು ನಿನ್ನ ಭೂಷಿಸುವೆ ಬೇಗೇಳು ತಾಸು ಹೊರಗ್ಹೋಗಿ ಇಂದಿರೇಶ ಬಾ ಬೇಗ ||೩|| ELu beLagaayitu bAlakRuShNa ba- haLa makkaLu ninna kELutiharO ||pa|| baruvi maneyoLageMdu karedu paalanu ruchira  taruNiyaru bachchiTTu karaNadoLage sarasa mosarane kaDedu twaradi beNNeya tegedu maremaaDi mUleyoLu surisutiharO ||1|| turuvugaLige saNNa karuvugaLane biTTu karedukoMbuvarinnu purada janaru twaradi kaNNane teredu oLahorage nODuvaru aruNa udayaagihudu taraNi baMdaa ||2|| Esu puDugaru namma vaasadedurige niMtu GOShadiMdale vatsarAshi...

ಕಂದುಗೊರಳ ಶಿವ | ಶ್ರೀ ಪ್ರಸನ್ವೆಂಕಟ ದಾಸರು | Kandugorala Shiva | Sri Prasanvenkata Dasaru

Image
ರಚನೆ : ಶ್ರೀ ಪ್ರಸನ್ವೆಂಕಟ ದಾಸರು  Krithi: Sri Prasanvenkata Dasaru ಕಂದುಗೊರಳ ಶಿವ ಸುಂದರೇಶ್ವರನಾ ವಂದಿಸಿ ಬೇಡಾನಂದವ ದಿನ ದಿನಾ  ||ಪ|| ಚಂದ್ರಧರ ಶರಶ್ಚಂದ್ರವದನನೆ ಮಂದಾಕಿನಿಧರ ಭಕ್ತವೃಂದವನೆ ಚಂದದಿ ಸಲಹುವ ನಂದಿಗಮನನೆ ಕುಂದನಳಿದು ಮುಕುಂದನ ತೋರ್ಪನ ನೆನೆ  ||೧|| ಪಾತಾಳೇಶ್ವರ ಪ್ರಪಾತಕಿಳಿದ ಭವಜರ ಎತ್ತಿ ತನ್ನಾತುಮದಿ ಸ್ಥಾನವಿತ್ತು ಪರ ಗತಿ ಸಾಧನ ದಾರಿ ತೋರಿದ ಮುನಿವರ ಚಿತ್ತಜೈಯ್ಯನತಿ ಪ್ರೀತಿಯ ಶಂಕರ  ||೨|| ಮುದದಿ ಶ್ರೀಹರಿ ಮಂಚ ಪದವಿ ಪಡೆದ ವಿಧಿಭವಾದ್ಯರಿಗೆಲ್ಲ ಸರ್ವತ್ರಬೇಕಾದ ಸದ್ಯೋಜಾತಾದಿ ಪವಿತ್ರೈದು ಮೊಗದ ಸ್ಪರ್ಧುನಿಪಿತ ಪ್ರಸನ್ವೆಂಕಟಗೆ ಸಖನಾದ ||೩|| kaMdugoraLa Siva suMdarESvaranaa vaMdisi bEDaanaMdava dina dinaa  ||pa|| caMdradhara SaraScaMdravadanane maMdaakinidhara bhaktavRuMdavane caMdadi salahuva naMdigamanane kuMdanaLidu mukuMdana tOrpana nene  ||1|| paataaLEshvara prapaatakiLida bhavajara etti tannaatumadi sthaanavittu para gati saadhana daari tOrida munivara cittajaiyyanati prItiya SaMkara  ||2|| mudadi SrIhari maMca padavi paDeda vidhibhavaadyarigella sarvatrabEkaada sadyOjaataadi pavitraidu mogada spardhunipita prasanveMkaT...

ನಾರಾಯಣ ಗೋವಿಂದ ಜಯ | ಶ್ರೀ ಪುರಂದರ ವಿಠಲ | Narayana Govinda Jaya | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು  Krithi: Sri Purandara Dasaru ನಾರಾಯಣ ಗೋವಿಂದ ಜಯ ಜಯ ಪರತರ ಪರಮಾನಂದ ||ಪ|| ನಕ್ರಂಚರ ಹರ ನವ್ಯ ಗುಣಾಕರ ನಾರದ ಗಾನ ವಿಲೋಲ ||೧|| ತ್ರಿಪುರ ಸಂಹಾರಕ ವಿಕಲಿತ ರೂಪ ವಿಪುಲ ಕಲ್ಕಿ ಅವತಾರ ||೨|| ದಾಸ ದಾಸ ಶ್ರೀ ಪುರಂದರ ವಿಠಲ ಶೇಷಶಯನ ಸರ್ವೇಶ ||೩|| naaraayaNa gOviMda jaya jaya paratara paramaanaMda ||pa|| nakraMcara hara navya guNaakara naarada gaana vilOla ||1|| tripura saMhaaraka vikalita rUpa vipula kalki avataara ||2|| daasa daasa SrI puraMdara viThala SEShaSayana sarvEsha ||3||

ಹನುಮಂತ ದೇವ ನಮೋ | ಶ್ರೀ ಪುರಂದರ ವಿಠಲ | Hanumantha Deva Namo | Sri Purandara Dasaru

Image
ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara Dasaru (Purandara vittala) ಹನುಮಂತ ದೇವ ನಮೋ ||ಪ|| ವನಧಿಯನು ದಾಟಿ ದಾನವರ ದಂಡಿಸಿದೆ ||ಅಪ|| ಅಂಜನೆಯ ಗರ್ಭದಿಂದುದಿಸಿ ನೀ ಮೆರೆದೆಯೋ  ಕಂಜಸಖಮಂಡಲಕೆ ಕೈ ತುಡುಕಿದೆ  ಭುಂಜಿಸೀರೇಳು ಜಗಂಗಳನು ಉಳುಹಿದೆ   ಭಂಜನಾತ್ಮಕ ಗುರುವೆ ಸರಿಗಾಣೆ ನಿನಗೆ || ೧ || ಹೇಮಕುಂಡಲ ಹೇಮಯಜ್ಞೋಪವೀತಧರ  ಕಟಿಸೂತ್ರ ಕೌಪೀನವನು ಧರಿಸಿ  ರೋಮರೋಮಕೆ ಕೋಟಿಲಿಂಗ ಸರ್ವಾಂಗ ರಾಮಭೃತ್ಯನೆ ನಿನಗೆ ಸರಿಗಾಣೆ ಗುರುವೆ || ೨ || ಅಕ್ಷಯಕುಮಾರನ ನಿಕ್ಕರಿಸಿ ಬಿಸುಟು ನೀ  ರಾಕ್ಷಸರೊಳಗಧಿಕ ರಾವಣನ ರಣದಲ್ಲಿ  ವಕ್ಷಸ್ಥಳ ಒಡೆದು ಮೂರ್ಛಿಸಿ ಬಿಸಾಟೆ ತ್ರಿಜಗ ರಕ್ಷಕನ ಶಿಕ್ಷಕ ಶ್ರೀರಾಮದಳರಕ್ಷ || ೩ || ರಾಮಲಕ್ಷ್ಮಣರ ಕಟ್ಟಾಳಾಗಿ ನೀ ಮೆರೆದೆ |  ಭೂಮಿಜೆಗೆ ಮುದ್ರೆ ಉಂಗುರವನ್ನಿತ್ತೆ ||  ಆ ಮಹಾಲಂಕಾ ನಗರವನ್ನೆಲ್ಲವನು ಸುಟ್ಟು | ಧೂಮಧೂಮವ ಮಾಡಿ ಮೆರೆದೆ ಮಹಾತ್ಮ || ೪ || ಶ್ರೀಮದಾಚಾರ್ಯರ ಕುಲದವನೆಂದೆನಿಸಿ  ಶ್ರೀಮಹಾಲಕುಮಿ ನಾರಾಯಣ ರೂಪ  ಶ್ರೀಮನೋಹರ ಪುರಂದರ ವಿಠಲರಾಯನ ಪ್ರೇಮದಾಳು ಹನುಮಂತ ಬಲವಂತ || ೫ || hanumaMta dEva namO ||pa|| vanadhiyanu dATi dAnavara daMDiside ||apa|| aMjaneya garBadiMdudisi nI meredeyO  kaMjasaKamaMDalake kai tuDukide  BuMjisIrELu jaga...

ಶ್ರೀರಾಮ ಗೋವಿಂದ ಹರೇ | ಶ್ರೀ ಕನಕದಾಸರ ಕೃತಿ | Sri Rama Govinda Hare | Sri Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಶ್ರೀರಾಮ ಗೋವಿಂದ ಹರೇ ಕೃಷ್ಣ ಗೋವಿಂದ ||ಪ|| ದಾಮೋದರ ಹರೇ ವಿಷ್ಣು ಮುಕುಂದ ||ಅಪ|| ಮತ್ಸ್ಯಾವತಾರದೊಳ್ ಆಡಿದನೆ  ಮಂದರಾಚಲ ಬೆನ್ನೊಳು ಆಂತವನೇ  ಅಚ್ಚಸೂಕರನಾಗಿ ಬಾಳಿದನೇ ಮದ  ಹೆಚ್ಚಿದ ಹಿರಣ್ಯಕನ ಸೀಳಿದನೆ ||೧|| ಬಲಿಯೊಳು ದಾನವ ಬೇಡಿದನೇ ಕ್ಷತ್ರಿಯ ಕುಲವ ಬಿಡದೆ ಕ್ಷಯ ಮಾಡಿದನೆ ಜಲನಿಧಿಗೆ ಬಿಲ್ಲ ಹೂಡಿದನೆ ಕಾಮಗೊಲಿದು ಗೊಲ್ಲತಿಯರೊಳು ಆಡಿದನೆ ||೨|| ಸಾಧಿಸಿ ತ್ರಿಪುರರ ಗೆದ್ದವನೆ ಪ್ರತಿ ವಾದಿಸಿ ಹಯವೇರಿ ನಲಿದವನೇ  ಬೇಧಿಸಿ ವಿಶ್ವವ ಗೆಲಿದವನೆ ಬಾಡ-  ದಾದಿ ಕೇಶವ ನಮಗೊಲಿದವನೆ ||೩|| SrIraama gOviMda harE kRuShNa gOviMda ||pa|| daamOdara harE viShNu mukuMda ||apa|| matsyaavataaradoL ADidane  maMdaraacala bennoLu AMtavanE  accasUkaranaagi baaLidanE mada  heccida hiraNyakana sILidane ||1|| baliyoLu daanava bEDidanE kShatriya kulava biDade kShaya maaDidane jalanidhige billa hUDidane kaamagolidu gollatiyaroLu ADidane ||2|| saadhisi tripurara geddavane prati vaadisi hayavEri nalidavanE  bEdhisi viSvava gelidavane baaDa-  daadi kESava namagolidavane ||3||

ಏಕೆ ಬೃಂದಾವನದಿ | ಶ್ರೀ ಕಮಲೇಶ ದಾಸರು | Eke Brundavanadi | Sri Kamalesha Dasaru

Image
ರಚನೆ : ಶ್ರೀ ಕಮಲೇಶ ದಾಸರು  Krithi : Sri Kamalesha Dasaru ಏಕೆ ಬೃಂದಾವನದಿ ನೆಲೆಸಿರುವೆ ಗುರುವೆ ನಾಕ ವಿಲಸಿತ ಕೀರ್ತಿ ಲಾವಣ್ಯ ಮೂರ್ತಿ ||ಪ|| ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು ಏಕಾಂತ ಬಯಸಿದೆಯೋ ರಾಘವೇಂದ್ರಾರ್ಯ ||ಅಪ|| ಹಿಂದೆ ನಿನಗಾಗಿ ನರಹರಿಯು ಕಂಭದಿ ಬಂದ ಮುಂದೆ ನಂದನ ಕಂದ ನಿನ್ನೆದುರು ಕುಣಿದ ಒಂದು ಕ್ಷಣ ಹರಿ ನಿನ್ನ ಬಿಟ್ಟಿರದೆ ಇರಲಾಗಿ ಇಂದಾರ ಒಲಿಸಲೆಂದಿಲ್ಲಿ ತಪಗೈಯುತಿರುವಿ ||೧|| ಇಷ್ಟವಿಲ್ಲದೆ ರಾಜ್ಯ ಆಳಿ ಬಹು ವರುಷಗಳು  ಶಿಷ್ಟ ನೀ ಬಹು ಬಳಲಿ ಆಯಾಸಗೊಂಡೆಯಾ  ದುಷ್ಟವಾದಿಗಳ ವಾಗ್ವಾದದಲಿ ಜಯಿಸುತಲಿ  ಶ್ರೇಷ್ಟ ಗ್ರಂಥವ ಬರೆದು ಬರೆದು ಬೇಸರವಾಯ್ತೇ ||೨|| ಪರಿಪರಿಯಭೀಷ್ಟೆಗಳ ನೀಡೆಂದು ಜನಕಾಡೆ ವರವಿತ್ತು ಸಾಕಾಯ್ತೆ ಜಯ ಕಮಲೇಶ ದಾಸಾ ಧರೆಗೆ ಮರೆಯಾಗಿ ವೃಂದಾವನವ ಸೇರಿದೊಡೆ ಚರಣ ದಾಸರು ನಿನ್ನ ಬಿಡುವರೇನಯ್ಯ ||೩||   Eke bRuMdaavanadi nelesiruve guruve naaka vilasita kIrti laavaNya mUrti ||pa|| SrIkaaMtanolisidudu saakaagalilleMdu EkaaMta bayasideyO raaGavEMdraarya ||apa|| hiMde ninagaagi narahariyu kaMbhadi baMda muMde naMdana kaMda ninneduru kuNida oMdu kShaNa hari ninna biTTirade iralaagi iMdaara olisaleMdilli tapagaiyutiruvi ||1|| iShTavillade raajya ALi bahu varuShaga...

ಮಧುರವು ಮಥುರನಾಥನ ನಾಮ | ಶ್ರೀ ವಿದ್ಯಾಪ್ರಸನ್ನ ತೀರ್ಥರ ಕೃತಿ | Madhuravu Mathura | Sri Vidyaprasanna Teertha

Image
ಸಾಹಿತ್ಯ : ಶ್ರೀ ವಿದ್ಯಾಪ್ರಸನ್ನ ತೀರ್ಥರು  Kruti : Sri Vidyaprasanna Teertharu ಮಧುರವು ಮಥುರನಾಥನ ನಾಮ ||ಪ|| ದಧಿ ಮಧು ದ್ರಾಕ್ಷಾ ಸುಧೆ ರಸಗಳಿಗಿಂತ ||ಅಪ|| ಸುಂದರ ವದನನ ಅರವಿಂದ ನಯನನ ನಂದಕುಮಾರನ ಚೆಂದದನಾಮವು ||೧|| ಯದುಕುಲ ತಿಲಕನ ಸದಮಲ ಚರಿತನ ಮದನ ಪಿತನ ನಾಮ ಮುದದಲಿ ಪಾಡಲು ||೨|| ಗಾನವಿಲೋಲನ ದಾನವ ಕಾಲನ  ಲೀಲೆಗಳನು ಸದಾ ಲಾಲಿಸಿ ಪೊಗಳಲು ||೩|| ಹೇಮವಸನನ ಕೋಮಲರೂಪನ ಭಾಮ ಕಾಂತನ ಪ್ರೇಮದ ನಾಮವು ||೪|| ಪನ್ನಗಶಯನನ ಚಿನ್ಮಯರೂಪನ ಸನ್ನುತಿಸಲಿಕ್ಕೆ ಪ್ರಸನ್ನನನಾಮವು ||೫|| madhuravu mathuranaathana naama ||pa|| dadhi madhu draakShaa sudhe rasagaLigiMta ||apa|| suMdara vadanana araviMda nayanana naMdakumaarana ceMdadanaamavu ||1|| yadukula tilakana sadamala caritana madana pitana naama mudadali paaDalu ||2|| gaanavilOlana daanava kaalana  lIlegaLanu sadaa laalisi pogaLalu ||3|| hEmavasanana kOmalarUpana bhaama kaaMtana prEmada naamavu ||4|| pannagaSayanana cinmayarUpana sannutisalikke prasannananaamavu ||5||

ಮಂಗಳಂ ಮಂಗಳಂ ಶ್ರೀದೇವಾ | ವರದಗೋಪಾಲವಿಠಲ | Mangalam Mangalam | Varada Gopala Vithala

Image
ಸಾಹಿತ್ಯ : ಶ್ರೀ ವರದ ಗೋಪಾಲವಿಠಲ ದಾಸರು  Kruti: Sri VaradaGopalavithala Dasaru ಮಂಗಳಂ ಮಂಗಳಂ ಶ್ರೀದೇವಾ ಮಂಗಳಂ ಮನ್ಮಥ ಕೋಟಿಲಾವಣ್ಯ ||ಪ|| ನಂದ ನಂದನ ಶ್ಯಾಮ ಸುಂದರ ಶುಭಕಾಯ ಇಂದೀವರಾಕ್ಷ ಮುಕುಂದ ಮುರಾರೇ ||೧|| ದೇವ ದೇವೇಶ ದೇಹಿ ಕಲ್ಯಾಣಂ ಶ್ರೀವರ ಶ್ರೀಕರ ಶ್ರೀ ಶ್ರೀನಿವಾಸಾ ||೨|| ರಾಜೀತ ವರದಗೋಪಾಲವಿಠಲ ಮಹಾ ರಾಜ ಭಜಕ ಕಲ್ಪಭೂಜ ಸುತೇಜಾ ||೩|| maMgaLaM maMgaLaM shrIdEvaa maMgaLaM manmatha kOTilaavaNya ||pa|| naMda naMdana shyaama suMdara shubhakaaya iMdIvaraakSha mukuMda murArE ||1|| dEva dEvEsha dEhi kalyaaNaM shrIvara shrIkara shrI shrInivAsaa ||2|| raajIta varadagOpaalaviThala mahaa raaja bhajaka kalpabhUja sutEjaa ||3||

ಹರಿ ನಾಮ ಜಿಹ್ವೆಯೊಳಿರಬೇಕು | ತಂದೆಪುರಂದರ ವಿಠಲ | Hari Nama Jihve | Tande Purandara Vithala

Image
ರಚನೆ :  ಶ್ರೀ ತಂದೆ ಪುರಂದರ ವಿಠಲ ದಾಸರು  Krithi : Sri Tande Purandara Vithala Dasaru ಹರಿ ನಾಮ ಜಿಹ್ವೆಯೊಳಿರಬೇಕು ||ಪ|| ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು ||ಅಪ|| ಭೂತದಯಾಪರನಾಗಿರಬೇಕು ಪಾತಕವೆಲ್ಲ ಕಳೆಯಲಿಬೇಕು ಮಾತು ಮಾತಿಗೆ ಹರಿಯೆನ್ನಬೇಕು ||೧|| ಆರು ವರ್ಗವನಳಿಯಲೇಬೇಕು ಮೂರು ಗುಣಂಗಳ ಮೀರಲಿಬೇಕು ಸೇರಿ ಬ್ರಹ್ಮನೊಳಿರಲೇಬೇಕು  ||೨|| ಅಷ್ಟ ಮದಂಗಳ ತುಳಿಯಲಿಬೇಕು ದುಷ್ಟರ ಸಂಗವ ಬಿಡಲಿಬೇಕು ಕೃಷ್ಣ ಕೇಶವ ಎನಲಿಬೇಕು ||೩|| ವೇದ ಶಾಸ್ತ್ರವನೋದಲಿಬೇಕು ಬೇದ ಅಹಂಕಾರವ ನೀಗಲಿಬೇಕು ಮಾಧವನ ಸ್ಮರಣೆಯೊಳಿರಬೇಕು ||೪|| ಶಾಂತಿ ಕ್ಷಮೆ ದಮೆ ಪ್ರೀತಿಯಲಿರಬೇಕು ಭ್ರಾಂತಿ ಕ್ರೋಧವ ಕಳೆಯಲಿಬೇಕು ಸಂತರ ಸಂಗದೊಳಿರಬೇಕು      ||೫|| ಗುರುವಿನ ಚರಣಕ್ಕೆರಗಲೇಬೇಕು ತರುಣೋಪಾಯವನರಿಯಲೇಬೇಕು ವಿರಕ್ತಿ ಮಾರ್ಗದೊಳಿರಬೇಕು    ||೬|| ಬಂದದ್ದನುಂಡು ಸುಖಿಸಲೆಬೇಕು ನಿಂದಾಸ್ತುತಿಗಳ ತಾಳಲಿಬೇಕು ತಂದೆ ಪುರಂದರ ವಿಠಲ ಎನಬೇಕು ||೭|| hari naama jihveyoLirabEku ||pa|| naranaada mEle harinaama jihveyoLirabEku ||apa|| bhUtadayaaparanaagirabEku paatakavella kaLeyalibEku maatu maatige hariyennabEku ||1|| Aru vargavanaLiyalEbEku mUru guNaMgaLa mIralibEku sEri brahmanoLiralEbEku  ||2|| aShTa madaMgaLa tuLiyalibEku ...

ರಂಗನಾಥನೆ ನಿಮ್ಮ ಕಾಣದೆ | ಶ್ರೀ ವಾದಿರಾಜರ ಕೃತಿ | Ranganathane Nimma | Sri Vadirajaru

Image
ರಚನೆ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ರಂಗನಾಥನೆ ನಿಮ್ಮ ಕಾಣದೆ ಭಂಗ ಪಟ್ಟೆನು ಬಹುದಿನಾ   ||ಪ|| ಮಂಗಾಳಂಗ ನಿಮ್ಮ ಪಾದವ ಎನ್ನ ಕಂಗಳಿಗೇ ತೋರೋ ||ಅಪ|| ಕರಿಯ ಮೊರೆ ಲಾಲಿಸಿದಿ ಬೇಗನೆ ನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತೇ  ಅಡವಿಯಲಿ ಅಹಲ್ಯೆಯ ಸಲಹಿದಿ  ಮುಚುಕುಂದನ ರಕ್ಷಿಸಿದೀ ||೧|| ಪುಟ್ಟ ಪ್ರಹ್ಲಾದನ ಸಲಹಿದಿ  ಪಟ್ಟವನು ವಿಭೀಷಣನಿಗೆ ಸಲ್ಲಿಸಿದಿ  ದಟ್ಟ ಅಡವಿಲಿ ಬಂದ ಧ್ರುವನ ಆದರಿಸಿ ಕಾಯ್ದ ರಂಗನಾಥ ||೨|| ಎಷ್ಟು ಹೇಳಲಿ ನಿಮ್ಮ ಮಹಿಮೆಯ ಸೃಷ್ಠಿ ಸ್ಥಿತಿ ಲಯವನ್ನು ಅಳೆದೆ ರಂಗನಾಥ  ಈ ಪುಟ್ಟ ಪಾದವ ಎನ್ನ ಮನದಲಿ  ಇಟ್ಟು ದಯಮಾಡೊ ಕೃಷ್ಣಾ ||೩|| ದಕ್ಷಿಣ ಮುಖವಾಗಿ ಪವಡಿಸಿದೆ ನೀ ದೇವಶಿಖಾಮಣೀ ಏಳೈ ಬಂದ ಭಕ್ತರಿಗೆಲ್ಲಾಭಯ ಹಸ್ತವ  ಕೊಡುವಿ ರಾಜೀವನೇತ್ರ ಹಯವದನ ||೪||      raMganaathane nimma kaaNade bhaMga paTTenu bahudinaa   ||pa|| maMgaaLaMga nimma paadava enna kaMgaLigE tOrO ||apa|| kariya more laalisidi bEgane nereda sabheyali draupadige abhayavanittE  aDaviyali ahalyeya salahidi  mucukuMdana rakShisidI ||1|| puTTa prahlaadana salahidi  paTTavanu vibhIShaNanige sallisidi  daTTa aDavili b...

ನಡೆದು ಬಾರಯ್ಯ ಕೃಷ್ಣ | ಭೀಮೇಶ ಕೃಷ್ಣ | Nadedu Barayya Krishna | Bhimesha Krishna

Image
ರಚನೆ : ಶ್ರೀ ಹರಪನಹಳ್ಳಿ ಭೀಮವ್ವ  Krithi : Sri Harapanahalli Bhimavva ನಡೆದು ಬಾರಯ್ಯ ಕೃಷ್ಣ ನಡೆದು ಬಾರಯ್ಯ ಕೃಷ್ಣ ॥ ಪ  ॥ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ  ಕುಕ್ಷಿಯೊಳಗೆ  ಜಗ ರಕ್ಷಿಸುವಾತನೆಂದು  ವಕ್ಷಸ್ಥಳದಿ ಶ್ರೀ ಮಾಲಕ್ಷ್ಮಿಧರಿಸಿ ಪಾಂಡು ಪಕ್ಷನೆನಿಸಿ ನೀ ಪರೀಕ್ಷಕನುಳುಹಿದಂ- -ತಕ್ಷದಿ ನೋಡುತ ಅಧೋಕ್ಷಜ ಹರಿಯೆ  ॥ ೧  ॥ ಗಜರಾಜ ವರದನೆ ತ್ರಿಜಗದೊಡೆಯ ನಿನ್ನ  ಧ್ವಜ ವಜ್ರಾಂಕುಶ ಪಾದ ಭಜಕರೆನಿಸುವಂಥ ಸುಜನರ್ ವಂದಿತನಾದ  ಕುಜನ ಕುಠಾರಿಯೇ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ  ನಿಜವಾಗಿ ನೊಡೆನ್ನ ರಜತಮ ಕಳೆಯುತ  ॥ ೨  ॥ ಕಡಲಶಯನನಾದ ಉಡುರಾಜ್ವದನ ಬಿಟ್ಟು ಬಿಡಿಯ ಭೀಮೇಶ ಕೃಷ್ಣ ನಿನ್ನೊಡೆಯನೆನುತ ಬಂದ ಬಡವ ಸುಧಾಮಗಿಟ್ಟ ಹಿಡಿ ಹಿಡೀಯೆಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ  ಕೊಡು ಕೊಡು ವರಗಳ ಪೊಡವಿ ಪಾಲಿಪನೆ  || ೩ || Nadedu baarayya krishna nadedu baarayya krishna  || pa || Pakshivaahana parapekshaarahitha ninna Kukshiyolage jaga rakshisuvaathanendu Vakshasthaladi shree malakshmidharisi paandu Pakshanenisi nee pareekshakanuluhidan- -thakshadi Nodutha adhokshaja hariye || 1 || Gajaraaja varadane trijagadodeya ninna Dhwaja vajraank...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru