ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇಟ್ಟಿಗೆ ಮೇಲೆ ನಿಂತನಮ್ಮ | ಶ್ರೀ ಪುರಂದರ ವಿಠಲ | Ittige Mele Nintanamma | Sri Purandara Dasaru


ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಇಟ್ಟಿಗೆ ಮೇಲೆ ನಿಂತನಮ್ಮ ವಿಠಲ ತಾನು| 
ಪುಟ್ಟಪಾದ ಊರಿ ನಿಂತ ದಿಟ್ಟ ತಾನು |ಪ|

ಪುಟ್ಟ ಪಾದ ಊರಿ ನಿಂತ| ಗಟ್ಟಿಯಾಗಿ ನಿಂತನಮ್ಮ|
ಟೊಂಕದ ಮೇಲೆ ಕೈಯ ಕಟ್ಟಿ ಭಕ್ತರು ಬರುವುದ ನೋಡುವನಮ್ಮ |ಅಪ|

ಪಂಢರ ಪುರದಲಿ ಇರುವನಂತೆ| ಪಾಂಡುರಂಗ ಎಂಬುವನಂತೆ|
ಚಂದ್ರಭಾಗ ಪಿತ ಇವನಂತೆ| ಅರಸಿ ರುಕ್ಮಿಣೀ ಪತಿ ಇವನಂತೆ |೧|

ಕನಕದಾಸೆ ಇವಗಿಲ್ಲವಮ್ಮ| ಹಣದ ಆಸೆ ಬೇಕಿಲ್ಲವಮ್ಮ|
ನಾದಬ್ರಹ್ಮ ಎಂಬುವನಮ್ಮ| ಭಕುತರ ವಚನಕೆ ಕಾದಿಹನಮ್ಮ |೨|

ಕರಿಯ ಕಂಬಳಿ ಹೊದ್ದಿಹನಮ್ಮ| ಹಣೆಗೆ ನಾಮ ಹಚ್ಚಿಹನಮ್ಮ|
ತುಳಸಿ ಮಾಲೆ ಹಾಕ್ಯಾನಮ್ಮ| ಪುರಂದರ ವಿಠಲ ಒಲಿದನಮ್ಮ |೩|

iTTige mEle niMtanamma viThala tAnu| 
puTTapAda Uri niMta diTTa tAnu |pa|

puTTa pAda Uri niMta| gaTTiyAgi niMtanamma|
ToMkada mEle kaiya kaTTi Baktaru baruvuda nODuvanamma |apa|
 
paMDhara puradali iruvanaMte| pAMDuraMga eMbuvanaMte|
caMdraBAga pita ivanaMte| arasi rukmiNI pati ivanaMte |1|
 
kanakadAse ivagillavamma| haNada Ase bEkillavamma|
nAdabrahma eMbuvanamma| Bakutara vacanake kAdihanamma |2|
 
kariya kaMbaLi hoddihanamma| haNege nAma haccihanamma|
tuLasi mAle hAkyAnamma| puraMdara viThala olidanamma |3|

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru