ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏಕೆ ಬೃಂದಾವನದಿ | ಶ್ರೀ ಕಮಲೇಶ ದಾಸರು | Eke Brundavanadi | Sri Kamalesha Dasaru


ರಚನೆ : ಶ್ರೀ ಕಮಲೇಶ ದಾಸರು 
Krithi : Sri Kamalesha Dasaru


ಏಕೆ ಬೃಂದಾವನದಿ ನೆಲೆಸಿರುವೆ ಗುರುವೆ
ನಾಕ ವಿಲಸಿತ ಕೀರ್ತಿ ಲಾವಣ್ಯ ಮೂರ್ತಿ ||ಪ||

ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯೋ ರಾಘವೇಂದ್ರಾರ್ಯ ||ಅಪ||

ಹಿಂದೆ ನಿನಗಾಗಿ ನರಹರಿಯು ಕಂಭದಿ ಬಂದ
ಮುಂದೆ ನಂದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಹರಿ ನಿನ್ನ ಬಿಟ್ಟಿರದೆ ಇರಲಾಗಿ
ಇಂದಾರ ಒಲಿಸಲೆಂದಿಲ್ಲಿ ತಪಗೈಯುತಿರುವಿ ||೧||

ಇಷ್ಟವಿಲ್ಲದೆ ರಾಜ್ಯ ಆಳಿ ಬಹು ವರುಷಗಳು 
ಶಿಷ್ಟ ನೀ ಬಹು ಬಳಲಿ ಆಯಾಸಗೊಂಡೆಯಾ 
ದುಷ್ಟವಾದಿಗಳ ವಾಗ್ವಾದದಲಿ ಜಯಿಸುತಲಿ 
ಶ್ರೇಷ್ಟ ಗ್ರಂಥವ ಬರೆದು ಬರೆದು ಬೇಸರವಾಯ್ತೇ ||೨||

ಪರಿಪರಿಯಭೀಷ್ಟೆಗಳ ನೀಡೆಂದು ಜನಕಾಡೆ
ವರವಿತ್ತು ಸಾಕಾಯ್ತೆ ಜಯ ಕಮಲೇಶ ದಾಸಾ
ಧರೆಗೆ ಮರೆಯಾಗಿ ವೃಂದಾವನವ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯ ||೩||  

Eke bRuMdaavanadi nelesiruve guruve
naaka vilasita kIrti laavaNya mUrti ||pa||

SrIkaaMtanolisidudu saakaagalilleMdu
EkaaMta bayasideyO raaGavEMdraarya ||apa||

hiMde ninagaagi narahariyu kaMbhadi baMda
muMde naMdana kaMda ninneduru kuNida
oMdu kShaNa hari ninna biTTirade iralaagi
iMdaara olisaleMdilli tapagaiyutiruvi ||1||

iShTavillade raajya ALi bahu varuShagaLu 
SiShTa nI bahu baLali AyAsagoMDeyaa 
duShTavaadigaLa vaagvaadadali jayisutali 
SrEShTa graMthava baredu baredu bEsaravaaytE ||2||

paripariyabhIShTegaLa nIDeMdu janakaaDe
varavittu saakaayte jaya kamalESa daasaa
dharege mareyaagi vRuMdaavanava sEridoDe
caraNa daasaru ninna biDuvarEnayya ||3|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru