ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಲಾಲಿ ಲಾಲಿ ತ್ರಿಭುವನ ಲಾಲಿ | ಶ್ರೀ ಮೋಹನ ದಾಸರ ಕೃತಿ | Laali Laali Tribhuvana Laali | Sri Mohana Dasaru


ರಚನೆ : ಶ್ರೀ ಮೋಹನ ದಾಸರು 
Krithi: Sri Mohana Dasaru


ಲಾಲಿ ಲಾಲಿ ತ್ರಿಭುವನ ಲಾಲಿ ||ಪ||

ಅಂಜನದೇವಿಯ ಕಂದಗೆ ಲಾಲಿ
ಕಂಜಾಕ್ಷಿಗೆ ಮುದ್ರಿಕೆಯಿತ್ತಗೆ ಲಾಲಿ
ಅಂಜದೆ ಅಸುರರ ಕೊಂದಗೆ ಲಾಲಿ
ಸಂಜೀವನ ಗಿರಿ ತಂದಗೆ ಲಾಲಿ ||೧||

ಕುಂತಿಯುದರದಿ ಬಂದಗೆ ಲಾಲಿ
ದಂತಿಯ ಗಗನಕ್ಕೆ ಒಗೆದಗೆ ಲಾಲಿ
ಭ್ರಾಂತನ ಉದರವ ಬಗೆದಗೆ ಲಾಲಿ
ಚಿಂತಾಮಣಿ ಭೀಮರಾಯಗೆ ಲಾಲಿ ||೨||

ಸೋಹಂ ಎಂಬರ ತರಿದಾಗೆ ಲಾಲಿ
ದಾಸೋಹಂ ಎಂಬರ ಪೊರೆದಗೆ ಲಾಲಿ
ಮೋಹನ್ನ ವಿಠ್ಠಲನ್ನ ಭಜಿಪಗೆ ಲಾಲಿ
ಸ್ನೇಹದಿ ಭಕುತರ ಪೊರೆವಗೆ ಲಾಲಿ ||೩||

laali laali tribhuvana laali ||pa||

aMjanadEviya kaMdage laali
kaMjaakShige mudrikeyittage laali
aMjade asurara koMdage laali
saMjIvana giri taMdage laali ||1||

kuMtiyudaradi baMdage laali
daMtiya gaganakke ogedage laali
bhraaMtana udarava bagedage laali
chiMtaamaNi bhImaraayage laali ||2||

sOhaM eMbara taridaage laali
daasOhaM eMbara poredage laali
mOhanna viThThalanna bhajipage laali
snEhadi bhakutara porevage laali ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru