ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹನುಮಂತ ದೇವ ನಮೋ | ಶ್ರೀ ಪುರಂದರ ವಿಠಲ | Hanumantha Deva Namo | Sri Purandara Dasaru


ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಹನುಮಂತ ದೇವ ನಮೋ ||ಪ||

ವನಧಿಯನು ದಾಟಿ ದಾನವರ ದಂಡಿಸಿದೆ ||ಅಪ||

ಅಂಜನೆಯ ಗರ್ಭದಿಂದುದಿಸಿ ನೀ ಮೆರೆದೆಯೋ 
ಕಂಜಸಖಮಂಡಲಕೆ ಕೈ ತುಡುಕಿದೆ 
ಭುಂಜಿಸೀರೇಳು ಜಗಂಗಳನು ಉಳುಹಿದೆ  
ಭಂಜನಾತ್ಮಕ ಗುರುವೆ ಸರಿಗಾಣೆ ನಿನಗೆ || ೧ ||

ಹೇಮಕುಂಡಲ ಹೇಮಯಜ್ಞೋಪವೀತಧರ 
ಕಟಿಸೂತ್ರ ಕೌಪೀನವನು ಧರಿಸಿ 
ರೋಮರೋಮಕೆ ಕೋಟಿಲಿಂಗ ಸರ್ವಾಂಗ
ರಾಮಭೃತ್ಯನೆ ನಿನಗೆ ಸರಿಗಾಣೆ ಗುರುವೆ || ೨ ||

ಅಕ್ಷಯಕುಮಾರನ ನಿಕ್ಕರಿಸಿ ಬಿಸುಟು ನೀ 
ರಾಕ್ಷಸರೊಳಗಧಿಕ ರಾವಣನ ರಣದಲ್ಲಿ 
ವಕ್ಷಸ್ಥಳ ಒಡೆದು ಮೂರ್ಛಿಸಿ ಬಿಸಾಟೆ ತ್ರಿಜಗ
ರಕ್ಷಕನ ಶಿಕ್ಷಕ ಶ್ರೀರಾಮದಳರಕ್ಷ || ೩ ||

ರಾಮಲಕ್ಷ್ಮಣರ ಕಟ್ಟಾಳಾಗಿ ನೀ ಮೆರೆದೆ | 
ಭೂಮಿಜೆಗೆ ಮುದ್ರೆ ಉಂಗುರವನ್ನಿತ್ತೆ || 
ಆ ಮಹಾಲಂಕಾ ನಗರವನ್ನೆಲ್ಲವನು ಸುಟ್ಟು |
ಧೂಮಧೂಮವ ಮಾಡಿ ಮೆರೆದೆ ಮಹಾತ್ಮ || ೪ ||

ಶ್ರೀಮದಾಚಾರ್ಯರ ಕುಲದವನೆಂದೆನಿಸಿ 
ಶ್ರೀಮಹಾಲಕುಮಿ ನಾರಾಯಣ ರೂಪ 
ಶ್ರೀಮನೋಹರ ಪುರಂದರ ವಿಠಲರಾಯನ
ಪ್ರೇಮದಾಳು ಹನುಮಂತ ಬಲವಂತ || ೫ ||

hanumaMta dEva namO ||pa||

vanadhiyanu dATi dAnavara daMDiside ||apa||

aMjaneya garBadiMdudisi nI meredeyO 
kaMjasaKamaMDalake kai tuDukide 
BuMjisIrELu jagaMgaLanu uLuhide  
BaMjanAtmaka guruve sarigANe ninage || 1 ||

hEmakuMDala hEmayaj~jOpavItadhara 
kaTisUtra kaupInavanu dharisi 
rOmarOmake kOTiliMga sarvAMga
rAmaBRutyane ninage sarigANe guruve || 2 ||

akShayakumArana nikkarisi bisuTu nI 
rAkShasaroLagadhika rAvaNana raNadalli 
vakShasthaLa oDedu mUrCisi bisATe trijaga
rakShakana SikShaka SrIrAmadaLarakSha || 3 ||

rAmalakShmaNara kaTTALAgi nI merede | 
BUmijege mudre uMguravannitte || 
A mahAlaMkA nagaravannellavanu suTTu |
dhUmadhUmava mADi merede mahAtma || 4 ||

SrImadAcAryara kuladavaneMdenisi 
SrImahAlakumi nArAyaNa rUpa 
SrImanOhara puraMdara viThalarAyana
prEmadALu hanumaMta balavaMta || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru