ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಲಕ್ಷ್ಮೀ ರಮಣಗೆ ಮಾಡಿದಳು ಉರುಟಾಣಿ | ಶ್ರೀ ವಾದಿರಾಜರು | Lakshmi Ramanage | Sri Vadirajaru


ರಚನೆ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಲಕ್ಷ್ಮೀ ರಮಣಗೆ ಮಾಡಿದಳು ಉರುಟಾಣಿ ||ಪ||

ಇಳೆಯೊಳಗತಿಜಾಣೆ ಸುಂದರ ಫಣಿವೇಣಿ ||ಅಪ||

ಮಚ್ಛ ಕಚ್ಛಪ ಕಿರನೆ ಕೇಸರಿಯಂದದ ಮುಖನೆ
ಸ್ವಚ್ಛಮುಖವ ತೋರೈ ಕುಂಕುಮ ಹಚ್ಚುವೆನು ||೧||

ಬಲಿಯ ದಾನವ ಬೇಡಿ ಇಳೆಯ ಈರಡಿ ಮಾಡಿ
ಅಳೆದಡಿಗಳ ತೋರೈ ಅರಿಶಿನ ಹಚ್ಚುವೆನು ||೨||

ದುರುಳ ಕ್ಷತ್ರಿಯರನ್ನು ಕೊರಳ ತರಿದ ಹರಿಯೆ
ಹರುಷದಿಂ ಕೊರಳ ತೋರೈ ಗಂಧವ ಹಚ್ಚುವೆನು ||೩||

ದಶರಥನಲಿ ಜನಿಸಿ ದಶಮುಖನ ಸಂಹರಿಸಿ
ಶಶಿಮುಖಿಯ ತಂದವನೆ ಕುಸುಮ ಮುಡಿಸುವೆನು ||೪||

ಹದಿನಾರು ಸಾಸಿರ ಸುದತಿಯರನಾಳಿದನೆ
ಪದುಮ ಕರವ ತೋರೈ ವೀಳ್ಯವ ಕೊಡುವೆನು ||೫||

ವಸನರಹಿತನಾಗಿ ವಸುಧೆಯ ತಿರುಗಿದೆ
ಬಿಸಜನಾಭನೆ ನಿನಗೆ ವಸನ ಉಡಿಸುವೆನು ||೬||

ವರ ತುರಗವನೇರಿ ಕಲಿಯ ಸಂಹರಿಸುವಿ
ಸಿರಿಹಯವದನನೆ ಆರತಿಯೆತ್ತುವೆನು ||೭||

lakShmI ramaNage maaDidaLu uruTaaNi ||pa||

iLeyoLagatijaaNe suMdara phaNivENi ||apa||

macCa kacCapa kirane kEsariyaMdada mukhane
svacCamukhava tOrai kuMkuma haccuvenu ||1||

baliya daanava bEDi iLeya IraDi maaDi
aLedaDigaLa tOrai ariSina haccuvenu ||2||

duruLa kShatriyarannu koraLa tarida hariye
haruShadiM koraLa tOrai gaMdhava haccuvenu ||3||

daSarathanali janisi daSamukhana saMharisi
SaSimukhiya taMdavane kusuma muDisuvenu ||4||

hadinaaru saasira sudatiyaranaaLidane
paduma karava tOrai vILyava koDuvenu ||5||

vasanarahitanaagi vasudheya tirugide
bisajanaabhane ninage vasana uDisuvenu ||6||

vara turagavanEri kaliya saMharisuvi
sirihayavadanane Aratiyettuvenu ||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru