ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶರಣು ಶರಣು ಶರಣ್ಯವಂದಿತ | ಶ್ರೀ ಪುರಂದರ ವಿಠಲ | Sharanu Sharanu | Sri Purandara Dasaru


ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಶರಣು ಶರಣು ಶರಣ್ಯವಂದಿತ ಶಂಖ ಚಕ್ರ ಗಧಾಧರ ||ಪ||

ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ||ಅಪ||

ಶೀಲದಲಿ ಶಿಶು ನಿನ್ನ ನೆನೆಯಲು ಕಾಲಲೊತ್ತುತ ಖಳರನು
ಲೀಲೆಯಿಂದಲಿ ಚಿಟಿಲು ಭುಗಿಭುಗಿಲೆನುತ ಉಕ್ಕಿನ ಕಂಬದಿ
ಖೂಳ ದೈತ್ಯನ ತೋಳಿನಿಂದಲಿ ಸೀಳಿ ಹೊಟ್ಟೆಯ ಕರುಳನು
ಮಾಲೆಯನು ಕೊರಳೊಳಗೆ ಧರಿಸಿದ ಜ್ವಾಲನರಸಿಂಹ ಮೂರ್ತಿಗೆ ||೧||

ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ
ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು
ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು
ಥಳಥಳಾ ಥಳ ಹೊಳೆವ ಮಿಂಚಿನೊಲ್‍ ಹೊಳೆವ ನರಸಿಂಹ ಮೂರ್ತಿಗೆ ||೨||

ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ ಬಾಯಿ ಮೂಗಿನ ಶ್ವಾಸದಿ 
ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ 
ಸಾರಿಸಾರಿಗೆ ಹೃದಯ ರಕುತವ ಸೂರೆ ಸುರಿಸುರಿದೆರಗುತ
ಘೋರರೂಪಗಳಿಂದ ಮೆರೆಯುವ ಧೀರ ನರಹರಿ ಮೂರ್ತಿಗೆ ||೩||

ಹರನು ವಾರಿಜಭವನು ಕರಗಳ ಮುಗಿದು ಜಯ ಜಯವೆನುತಿರೆ
ತರಳ ಪ್ರಹ್ಲಾದನಿಗೆ ತಮ್ಮಯ ಶರೀರಬಾಧೆಯ ಪೇಳಲು
ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವ ನೀಡುತ
ಸಿರಿ ಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿ ಮೂರ್ತಿಗೆ ||೪||

ವರವ ಬೇಡಿದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ
ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ
ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ
ಸಿರಿಯ ಸುಖವನು ಮರೆದಹೋಬಲವರದ ಪುರಂದರ ವಿಠಲಗೆ ||೫||

sharaNu sharaNu sharaNyavaMdita shaMkha cakra gadhaadhara ||pa||

sharaNu sarvEshvara ahObala sharaNa salahO narahari ||apa||

shIladali shishu ninna neneyalu kaalalottuta KaLaranu
lIleyiMdali ciTilu bhugibhugilenuta ukkina kaMbadi
KULa daityana tOLiniMdali sILi hoTTeya karuLanu
maaleyanu koraLoLage dharisida jvaalanarasiMha mUrtige ||1||

khaLaKaLaa KaLaneMdu kUgalu kOTi siDilina raBasadi
jaladhi guLaguLaneddu ukkalu jvalita kulagiri uruLalu
nelanu baLabaLaneMdu biriyalu keLage diggaja naDugalu
thaLathaLaa thaLa hoLeva miMcinol^ hoLeva narasiMha mUrtige ||2||

kOre keMjeDe kaNNu kivi tere baayi mUgina shvaasadi 
mErugiri migimigilu mikkuva tOra kiDigaLa sUsuta 
saarisaarige hRudaya rakutava sUre surisurideraguta
ghOrarUpagaLiMda mereyuva dhIra narahari mUrtige ||3||

haranu vaarijabhavanu karagaLa mugidu jaya jayavenutire
taraLa prahlaadanige tammaya sharIrabaadheya pELalu
karuNi ennanu karuNisennalu tvaradalabhayava nIDuta
siri baralu toDeyalli dharisida shaaMta narahari mUrtige ||4||

varava bEDidaniruva taMdeya pariyanellava baNNisi
nirutadali ninneraDu toDeyali sharIraviraleMdenutali
suraru puShpada vRuShTigareyalu sarasijaakShanu shaaMtadi
siriya suKavanu maredahObalavarada puraMdara viThalage ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru