ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏಳು ಬೆಳಗಾಯಿತು ಬಾಲಕೃಷ್ಣ | ಶ್ರೀ ಇಂದಿರೇಶ ದಾಸರು | Elu Belagayitu Balakrishna | Sri Indiresha Dasaru


ಸಾಹಿತ್ಯ : ಶ್ರೀ ಇಂದಿರೇಶ ದಾಸರು (ಇಂದಿರೇಶ) 
Kruti: Sri Indiresha Dasaru (Indiresha)


ಏಳು ಬೆಳಗಾಯಿತು ಬಾಲಕೃಷ್ಣ ಬ-
ಹಳ ಮಕ್ಕಳು ನಿನ್ನ ಕೇಳುತಿಹರೋ ||ಪ||

ಬರುವಿ ಮನೆಯೊಳಗೆಂದು ಕರೆದು ಪಾಲನು ರುಚಿರ 
ತರುಣಿಯರು ಬಚ್ಚಿಟ್ಟು ಕರಣದೊಳಗೆ
ಸರಸ ಮೊಸರನೆ ಕಡೆದು ತ್ವರದಿ ಬೆಣ್ಣೆಯ ತೆಗೆದು
ಮರೆಮಾಡಿ ಮೂಲೆಯೊಳು ಸುರಿಸುತಿಹರೋ ||೧||

ತುರುವುಗಳಿಗೆ ಸಣ್ಣ ಕರುವುಗಳನೆ ಬಿಟ್ಟು
ಕರೆದುಕೊಂಬುವರಿನ್ನು ಪುರದ ಜನರು
ತ್ವರದಿ ಕಣ್ಣನೆ ತೆರೆದು ಒಳಹೊರಗೆ ನೋಡುವರು
ಅರುಣ ಉದಯಾಗಿಹುದು ತರಣಿ ಬಂದಾ ||೨||

ಏಸು ಪುಡುಗರು ನಮ್ಮ ವಾಸದೆದುರಿಗೆ ನಿಂತು
ಘೋಷದಿಂದಲೆ ವತ್ಸರಾಶಿ ತುರುವಾ
ಕೂಸೆ ಕರೆವರು ನಿನ್ನ ಭೂಷಿಸುವೆ ಬೇಗೇಳು
ತಾಸು ಹೊರಗ್ಹೋಗಿ ಇಂದಿರೇಶ ಬಾ ಬೇಗ ||೩||

ELu beLagaayitu bAlakRuShNa ba-
haLa makkaLu ninna kELutiharO ||pa||

baruvi maneyoLageMdu karedu paalanu ruchira 
taruNiyaru bachchiTTu karaNadoLage
sarasa mosarane kaDedu twaradi beNNeya tegedu
maremaaDi mUleyoLu surisutiharO ||1||

turuvugaLige saNNa karuvugaLane biTTu
karedukoMbuvarinnu purada janaru
twaradi kaNNane teredu oLahorage nODuvaru
aruNa udayaagihudu taraNi baMdaa ||2||

Esu puDugaru namma vaasadedurige niMtu
GOShadiMdale vatsarAshi turuvaa
kUse karevaru ninna bhUShisuve bEgELu
taasu horag~hOgi iMdirEsha bA bEga ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru