ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಚೆನ್ನಕೇಶವದೇವರಾಯ | ಶ್ರೀ ವಾದಿರಾಜರು | Chennakeshava Devaraya | Sri Vadirajaru


ರಚನೆ : ಭಾವೀಸಮೀರ ಶ್ರೀ ವಾದಿರಾಜರು 
Krithi : Bhavisameera Sri Vadirajaru


ಚೆನ್ನಕೇಶವದೇವರಾಯ
ಇನ್ನು ಸುಖಿಪೆನೆಂತೆನಗೆ ಅನ್ಯಥ ಗತಿಯಿಲ್ಲ ||ಪ||

ಹೆಣ್ಣಿನಾಸೆ ಮಣ್ಣಿನಾಸೆ ಹೊನ್ನಿನಾಸೆ ಮನೆಯಾಸೆ
ಉಣ್ಣಬೇಕೆಂಬ ಬಲುದುರಾಶೆ ಈ
ಪುಣ್ಯಹೀನನ ಮನದಿ ಅನುದಿನ ಸಂದಣಿಸೆ ||೧||

ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡದಾಸೆ
ಒಡಲ ತುಂಬಬೇಕೆಂಬ ಆಸೆ
ಕೊಡದವನ ಬಡಿದು ಜಡಿವಾಸೆ ಬಿಡದಿರಲು ||೨||

ಹಯವದನದೇವ ನಿನ್ನ ನೆನೆಯದಿದ್ದೀಮನಕೆ
ಭಯವೆಲ್ಲಿಹುದು ಜಗನ್ನಾಥ ನಿನ್ನ
ದಯವನೆ ಬೀರಿ ನಿರ್ದಯನನ್ನುದ್ಧರಿಸೊ ||೩||

cennakESavadEvaraaya
innu sukhipeneMtenage anyatha gatiyilla ||pa||

heNNinaase maNNinaase honninaase maneyaase
uNNabEkeMba baluduraaSe I
puNyahInana manadi anudina saMdaNise ||1||

uDuvaase nuDivaase bEDuvaase koDadaase
oDala tuMbabEkeMba Ase
koDadavana baDidu jaDivaase biDadiralu ||2||

hayavadanadEva ninna neneyadiddImanake
bhayavellihudu jagannaatha ninna
dayavane bIri nirdayanannuddhariso ||3||

Popular posts from this blog