ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗರುಡ ಗಮನ ಬಂದನೋ | ಶ್ರೀ ಪುರಂದರ ದಾಸರು | Garuda Gamana Bandano | Sri Purandara Dasaru


ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಗರುಡ ಗಮನ ಬಂದನೋ ನೋಡಿರೋ ಬೇಗ | 
ಗರುಡಗಮನ ಬಂದನೊ ||
ಗರುಡ ಗಮನ ಬಂದ ಧರಣಿಯಿಂದೊಪ್ಪುತ 
ಕರೆದು ಬಾರೆನ್ನುತ ವರಗಳ ನೀಡುತ ||ಪ||

ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ 
ಚಿನ್ನವ ಹೋಲುವ ವಿಹಂಗ ರಥದಲಿ |
ಘನ್ನ ಮಹಿಮ ಬಂದ ಭಿನ್ನ ಮೂರುತಿ ಬಂದ |
ಸಣ್ಣ ಕೃಷ್ಣ ಬಂದ | ಬೆಣ್ಣೆ ಕಳ್ಳ ಬಂದ ||೧||

ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ |
ಕುಕ್ಷಿಯೊಳಗೆ ಜಗವನಿಟ್ಟವ ತಾ ಬಂದ |
ಸೂಕ್ಷ್ಮ ಸ್ಥೂಲದೊಳು ಇಪ್ಪಾನು ತಾ ಬಂದ
ಸಾಕ್ಷೀಭೂತನು ಆವ ಸರ್ವೇಶ್ವರನು ಬಂದಾ ||೨||

ತಂದೆ ಪುರಂದರ ವಿಠಲ ರಾಯ ಬಂದ
ಬಂದು ನಿಂದು ನಲಿದಾಡುತಿಹ |
ಅಂದೂ ಸಾಂದೀಪನ ನಂದನನ ತಂದಿತ್ತ |
ಸಿಂಧುಶಯನ ಆನಂದ ಮೂರುತಿ ಬಂದ ||೩||

garuDa gamana baMdanO nODirO bEga | 
garuDagamana baMdano ||
garuDa gamana baMda dharaNiyiMdopputa 
karedu bArennuta varagaLa nIDuta ||pa||
 
enna rakShipa dore illige tA baMda 
cinnava hOluva vihaMga rathadali |
Ganna mahima baMda Binna mUruti baMda |
saNNa kRuShNa baMda | beNNe kaLLa baMda ||1||
 
pakShivAhana baMda lakShmIpatiyu baMda |
kukShiyoLage jagavaniTTava tA baMda |
sUkShma sthUladoLu ippAnu tA baMda
sAkShIBUtanu Ava sarvESvaranu baMdA ||2||
 
taMde puraMdara viThala rAya baMda
baMdu niMdu nalidADutiha |
aMdU sAMdIpana naMdanana taMditta |
siMdhuSayana AnaMda mUruti baMda ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru