ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಗಿ ತಂದೀರ್ಯಾ | ಶ್ರೀ ಪುರಂದರವಿಠಲ | Ragi Tandeerya | Sri Purandara Dasaru


ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ರಾಗಿ ತಂದೀರ್ಯಾ | ಭಿಕ್ಷಕೆ | ರಾಗಿ ತಂದೀರ್ಯಾ ||ಪ||

ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಅಪ||

ಅನ್ನ ದಾನವ ಮಾಡುವರಾಗಿ | ಅನ್ನ ಛತ್ರವನಿಟ್ಟವರಾಗಿ |
ಅನ್ಯ ವಾರ್ತೆಯ ಬಿಟ್ಟವರಾಗಿ | ಅನುದಿನ ಭಜನೆಯ ಮಾಡುವಿರಾಗಿ ||೧||

ಮಾತಾಪಿತರನು ಸೇವಿಪರಾಗಿ ಪಾಪಕಾರ್ಯವ ಬಿಟ್ಟವರಾಗಿ
ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ || ೨ ||

ಗುರುಕಾರುಣ್ಯವ ಪಡೆದವರಾಗಿ ಗುರುವಾಕ್ಯವನು ಪಾಲಿಪರಾಗಿ
ಗುರುವಿನ ಪಾದವ ಸ್ಮರಿಸುವರಾಗಿ ಪರಮ ಪುಣ್ಯವ ಮಾಡುವರಾಗಿ || ೩ ||

ಶ್ರೀನಿವಾಸನ ಸ್ಮರಿಸುವರಾಗಿ ಪ್ರಾಣರಾಯನ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ ದೀನವೃತ್ತಿಯಲಿ ಹೀನರಾಗಿ || ೪ ||

ಪಕ್ಷಮಾಸ ವ್ರತ ಮಾಡುವರಾಗಿ ಪಕ್ಷಿವಾಹನಗೆ ಪ್ರಿಯರಾಗಿ
ಕುಕ್ಷಿಲಿ ಕಲ್ಮಷ ಇಲ್ಲದವರಾಗಿ ಭಿಕ್ಷುಕರು ಅತಿ ತುಚ್ಛರಾಗಿ || ೫ ||

ವೇದ ಪುರಾಣವ ತಿಳಿದವರಾಗಿ ಮೇದಿನಿಯಾಳುವಂಥವರಾಗಿ
ಸಾಧು ಧರ್ಮವಾಚರಿಸುವರಾಗಿ ಓದಿ ಗ್ರಂಥಗಳ ಪಂಡಿತರಾಗಿ || ೬ ||

ಆರು ಮಾರ್ಗವ ಅರಿತವರಾಗಿ ಮೂರು ಮಾರ್ಗವ ತಿಳಿದವರಾಗಿ
ಭೂರಿ ತತ್ತ್ವವ ಬೆರೆದವರಾಗಿ ಕ್ರೂರರ ಸಂಗವ ಬಿಟ್ಟವರಾಗಿ || ೭ ||

ಕಾಮ ಕ್ರೋಧವ ಅಳಿದವರಾಗಿ ನೇಮನಿಷ್ಠೆಗಳ ಮಾಡುವರಾಗಿ
ಆ ಮಹಾಪದವಿಲಿ ಸುಖಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ || ೮ ||

ಸಿರಿ ರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆಕರೆ ಭವವನು ನೀಗುವರಾಗಿ ಪುರಂದರವಿಠಲನ ಸೇವಿಪರಾಗಿ || ೯ ||

rAgi taMdIryA | BikShake | rAgi taMdIryA ||pa||
 
yOgyarAgi BOgyarAgi BAgyavaMtarAgi nIvu ||apa||
 
anna dAnava mADuvarAgi | anna CatravaniTTavarAgi |
anya vArteya biTTavarAgi | anudina Bajaneya mADuvirAgi ||1||

maataapitaranu sEviparaagi paapakaaryava biTTavaraagi
rItiya baaLanu baaLuvaraagi nItimaargadali Kyaataraagi || 2 ||

gurukaaruNyava paDedavaraagi guruvaakyavanu paaliparaagi
guruvina paadava smarisuvaraagi parama puNyava maaDuvaraagi || 3 ||

shrInivaasana smarisuvaraagi praaNaraayana dAsaraagi
daanakeMdu balu hedari iMtha dInavRuttiyali hInaraagi || 4 ||

pakShamaasa vrata maaDuvaraagi pakShivaahanage priyaraagi
kukShili kalmaSha illadavaraagi bhikShukaru ati tucCharaagi || 5 ||

vEda puraaNava tiLidavaraagi mEdiniyaaLuvaMthavaraagi
saadhu dharmavaacarisuvaraagi Odi graMthagaLa paMDitaraagi || 6 ||

Aru maargava aritavaraagi mUru maargava tiLidavaraagi
bhUri tattvava beredavaraagi krUrara saMgava biTTavaraagi || 7 ||

kaama krOdhava aLidavaraagi nEmaniShThegaLa maaDuvaraagi
A mahaapadavili suKisuvaraagi prEmadi kuNikuNidaaDuvaraagi || 8 ||

siri ramaNana dina neneyuvaraagi gurutige baahOraMthavaraagi
karekare bhavavanu nIguvaraagi puraMdaraviThalana sEviparaagi || 9 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru