ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಈತನೀಗ ನಮ್ಮ ದೇವನು | ಶ್ರೀ ಗೋಪಾಲ ದಾಸರು | Itaneega Namma Devanu | Sri Gopala Dasaru


ರಚನೆ : ಶ್ರೀ ಗೋಪಾಲ ದಾಸರು 
Krithi : Sri Gopala Dasaru


ಈತನೀಗ ನಮ್ಮ ದೇವನು ||ಪ||

ಪ್ರೀತಿಯಿಂದಲಿ ಸ್ಮರಿಸುವವರ 
ಪಾತಕಗಳ ಪರಿಹರಿಪ ||ಅಪ||

ಅಕ್ರೂರನ ಪ್ರೀತನೀತ
ಚಕ್ರ ಶಂಖ ಧರಿಸಿದಾತ
ನಕ್ರಬಾಧೆಯ ತರಿದು ತನ್ನ 
ಭಕ್ತನನ್ನು ಕಾಯ್ದಾತಾ  ||೧||

ಅಜಮಿಳನ ಸಲಹಿದಾತ 
ವ್ರಜದ ಗೋವು ಕಾಯ್ದಾತ
ಭಜಿಸುವವರ ಬಿಡನು ಪ್ರೀತ 
ತ್ರಿಜಗದೊಳಗೆ ಮೆರೆವದಾತ   ||೨||

ಸಕಲಗುಣಪೂರ್ಣನೀತ
ಸಕಲದೋಷ ದೂರನೀತ
ಸಕಲಾನಂದ ಪೂರ್ಣನೀತ
ಭಕುತಿಮಂತ್ರಕೊಲಿವದಾತ   ||೩||

ಅನಾಥ ಬಾಂಧವನೀತಾ
ಅನಾದಿ ಕಾಲದವನೀತ
ಆ ನಾರಿ ಮೊರೆಯ ಕೇಳಿ 
ಆ ನಿಮಿಷದೊಳು ಒದಗಿದಾತ   ||೪||

ಕಮಲಮುಖಿಯ ರಮಣನೀತ 
ಕಮಲಾಸನಜನಕನೀತ
ಕಮಲಾಕ್ಷ ಗೋಪಾಲವಿಠಲ
ಹೃತ್ಕಮಲದೊಳು ನಿಲುವದಾತ  ||೫|

ItanIga namma dEvanu ||pa||

prItiyiMdali smarisuvavara 
paatakagaLa pariharipa ||apa||

akrUrana prItanIta
cakra SaMkha dharisidaata
nakrabaadheya taridu tanna 
bhaktanannu kaaydaataa  ||1||

ajamiLana salahidaata 
vrajada gOvu kaaydaata
bhajisuvavara biDanu prIta 
trijagadoLage merevadaata   ||2||

sakalaguNapUrNanIta
sakaladOSha dUranIta
sakalaanaMda pUrNanIta
bhakutimaMtrakolivadaata   ||3||

anaatha baaMdhavanItaa
anaadi kaaladavanIta
aa naari moreya kELi 
A nimiShadoLu odagidaata   ||4||

kamalamukhiya ramaNanIta 
kamalaasanajanakanIta
kamalaakSha gOpaalaviThala
hRutkamaladoLu niluvadaata  ||5|

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru