ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಓಡಿ ಬಾರಯ್ಯ ವೈಕುಂಠಪತಿ | ಶ್ರೀ ಪುರಂದರ ವಿಠಲ | Odi Barayya Vaikunta pati | Sri Purandara Dasaru


ರಚನೆ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಓಡಿ ಬಾರಯ್ಯ ವೈಕುಂಠಪತಿ ನಿನ್ನ 
ನೋಡುವೆ ಮನದಣಿಯೆ ||ಪ||

ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ
ಪಾಡಿ ಪೊಗಳುವೆನು ಪರಮ ಪುರುಷ ಹರಿ ||ಅಪ||

ಕೆಂದಾವರೆ ಪೋಲ್ವ ಪಾದಗಳಿಂದ ರಂಗ 
ಧಿಂಧಿಮಿ ಧಿಮಿಕೆಂದು ಕುಣಿಯುತಲಿ ||
ಅಂದುಗೆ ಕಿರುಗೆಜ್ಜೆ ನಲಿದಾಡುತ ಬಾರೋ ಅರ-
ವಿಂದ ನಯನ ಗೋವಿಂದ ನೀ ಬಾರೋ ||೧||

ಕೋಟಿ ಸೂರ್ಯ ಪ್ರಕಾಶದಂತೆ
ಕಿರೀಟ ಕುಂಡಲ ಬಾವುಲಿ ಪೊಳೆಯೆ 
ಲಲಾಟದಿ ಕಸ್ತೂರಿ ತಿಲಕವಿಡುವೆ ರಂಗ
ಕೂಟ ಗೋಪಾಲರ ಆಟ ಸಾಕೊ ಈಗ ||೨||

ಎಣ್ಣೂರಿಗತಿರಸ ದಧಿ ಘೃತವೊ ರಂಗ
ಎನ್ನಯ್ಯ ನಿನಗೆ ಕೊಡುವೆ ಬಾರೊ
ಚಿಣ್ಣರ ಒಡನಾಟ ಸಾಕು ಬಿಡೋ ರಂಗ
ಬೆಣ್ಣೆಯ ಮೆಲುವುದು ಬೇಡ ಎನ್ನ ಕಂದ ||೩||

ತುರುಬಿನ ಮೇಲೆ ನಲಿಯುತಲಿರುತಿಹ
ಮರುಗ ಮಲ್ಲಿಗೆ ಜಾಜಿ ತುಲಸಿಯ ದಂಡೆ
ಕರದಲಿ ಪಿಡಿದು ಪೊಂಗೊಳಲನೆ ಊದುತ
ಸರಸದಿಂದಲಿ ನೀ ನಲಿನಲಿದಾಡುತ ||೪||

ಮಂಗಳಾಂಗ ಮೋಹನ ಕಾಯರಂಗ 
ಸಂಗೀತಲೋಲ ಸದ್ಗುಣ ಶೀಲ ||
ಅಂಗನೆಯರಿಗೆಲ್ಲ ಅತಿಪ್ರಿಯನಾದ ಶುಭ-
ಮಂಗಳ ಮೂರುತಿ ಪುರಂದರ ವಿಠಲ ||೫||

ODi bArayya vaikuMThapati ninna 
nODuve manadaNiye ||pa||
 
nODi muddADi mAtADi saMtOShadi kUDi
pADi pogaLuvenu parama puruSha hari ||apa||
 
keMdAvare pOlva pAdagaLiMda raMga 
dhiMdhimi dhimikeMdu kuNiyutali ||
aMduge kirugejje nalidADuta bArO ara-
viMda nayana gOviMda nI bArO ||1||

kOTi sUrya prakaaSadaMte
kirITa kuMDala baavuli poLeye 
lalaaTadi kastUri tilakaviDuve raMga
kUTa gOpaalara ATa saako Iga ||2||

eNNUrigatirasa dadhi GRutavo raMga
ennayya ninage koDuve baaro
ciNNara oDanaaTa saaku biDO raMga
beNNeya meluvudu bEDa enna kaMda ||3||

turubina mEle naliyutalirutiha
maruga mallige jaaji tulasiya daMDe
karadali piDidu poMgoLalane Uduta
sarasadiMdali nI nalinalidaaDuta ||4||
 
maMgaLAMga mOhana kAyaraMga 
saMgItalOla sadguNa SIla ||
aMganeyarigella atipriyanAda SuBa-
maMgaLa mUruti puraMdara viThala ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru