ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಂದುಗೊರಳ ಶಿವ | ಶ್ರೀ ಪ್ರಸನ್ವೆಂಕಟ ದಾಸರು | Kandugorala Shiva | Sri Prasanvenkata Dasaru


ರಚನೆ : ಶ್ರೀ ಪ್ರಸನ್ವೆಂಕಟ ದಾಸರು 
Krithi: Sri Prasanvenkata Dasaru


ಕಂದುಗೊರಳ ಶಿವ ಸುಂದರೇಶ್ವರನಾ
ವಂದಿಸಿ ಬೇಡಾನಂದವ ದಿನ ದಿನಾ  ||ಪ||

ಚಂದ್ರಧರ ಶರಶ್ಚಂದ್ರವದನನೆ
ಮಂದಾಕಿನಿಧರ ಭಕ್ತವೃಂದವನೆ
ಚಂದದಿ ಸಲಹುವ ನಂದಿಗಮನನೆ
ಕುಂದನಳಿದು ಮುಕುಂದನ ತೋರ್ಪನ ನೆನೆ  ||೧||

ಪಾತಾಳೇಶ್ವರ ಪ್ರಪಾತಕಿಳಿದ ಭವಜರ
ಎತ್ತಿ ತನ್ನಾತುಮದಿ ಸ್ಥಾನವಿತ್ತು ಪರ
ಗತಿ ಸಾಧನ ದಾರಿ ತೋರಿದ ಮುನಿವರ
ಚಿತ್ತಜೈಯ್ಯನತಿ ಪ್ರೀತಿಯ ಶಂಕರ  ||೨||

ಮುದದಿ ಶ್ರೀಹರಿ ಮಂಚ ಪದವಿ ಪಡೆದ
ವಿಧಿಭವಾದ್ಯರಿಗೆಲ್ಲ ಸರ್ವತ್ರಬೇಕಾದ
ಸದ್ಯೋಜಾತಾದಿ ಪವಿತ್ರೈದು ಮೊಗದ
ಸ್ಪರ್ಧುನಿಪಿತ ಪ್ರಸನ್ವೆಂಕಟಗೆ ಸಖನಾದ ||೩||

kaMdugoraLa Siva suMdarESvaranaa
vaMdisi bEDaanaMdava dina dinaa  ||pa||

caMdradhara SaraScaMdravadanane
maMdaakinidhara bhaktavRuMdavane
caMdadi salahuva naMdigamanane
kuMdanaLidu mukuMdana tOrpana nene  ||1||

paataaLEshvara prapaatakiLida bhavajara
etti tannaatumadi sthaanavittu para
gati saadhana daari tOrida munivara
cittajaiyyanati prItiya SaMkara  ||2||

mudadi SrIhari maMca padavi paDeda
vidhibhavaadyarigella sarvatrabEkaada
sadyOjaataadi pavitraidu mogada
spardhunipita prasanveMkaTage sakhanaada ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru