ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹರಿ ನಾಮ ಜಿಹ್ವೆಯೊಳಿರಬೇಕು | ತಂದೆಪುರಂದರ ವಿಠಲ | Hari Nama Jihve | Tande Purandara Vithala


ರಚನೆ :  ಶ್ರೀ ತಂದೆ ಪುರಂದರ ವಿಠಲ ದಾಸರು 
Krithi : Sri Tande Purandara Vithala Dasaru


ಹರಿ ನಾಮ ಜಿಹ್ವೆಯೊಳಿರಬೇಕು ||ಪ||
ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು ||ಅಪ||

ಭೂತದಯಾಪರನಾಗಿರಬೇಕು
ಪಾತಕವೆಲ್ಲ ಕಳೆಯಲಿಬೇಕು
ಮಾತು ಮಾತಿಗೆ ಹರಿಯೆನ್ನಬೇಕು ||೧||

ಆರು ವರ್ಗವನಳಿಯಲೇಬೇಕು
ಮೂರು ಗುಣಂಗಳ ಮೀರಲಿಬೇಕು
ಸೇರಿ ಬ್ರಹ್ಮನೊಳಿರಲೇಬೇಕು  ||೨||

ಅಷ್ಟ ಮದಂಗಳ ತುಳಿಯಲಿಬೇಕು
ದುಷ್ಟರ ಸಂಗವ ಬಿಡಲಿಬೇಕು
ಕೃಷ್ಣ ಕೇಶವ ಎನಲಿಬೇಕು ||೩||

ವೇದ ಶಾಸ್ತ್ರವನೋದಲಿಬೇಕು
ಬೇದ ಅಹಂಕಾರವ ನೀಗಲಿಬೇಕು
ಮಾಧವನ ಸ್ಮರಣೆಯೊಳಿರಬೇಕು ||೪||

ಶಾಂತಿ ಕ್ಷಮೆ ದಮೆ ಪ್ರೀತಿಯಲಿರಬೇಕು
ಭ್ರಾಂತಿ ಕ್ರೋಧವ ಕಳೆಯಲಿಬೇಕು
ಸಂತರ ಸಂಗದೊಳಿರಬೇಕು      ||೫||

ಗುರುವಿನ ಚರಣಕ್ಕೆರಗಲೇಬೇಕು
ತರುಣೋಪಾಯವನರಿಯಲೇಬೇಕು
ವಿರಕ್ತಿ ಮಾರ್ಗದೊಳಿರಬೇಕು    ||೬||

ಬಂದದ್ದನುಂಡು ಸುಖಿಸಲೆಬೇಕು
ನಿಂದಾಸ್ತುತಿಗಳ ತಾಳಲಿಬೇಕು
ತಂದೆ ಪುರಂದರ ವಿಠಲ ಎನಬೇಕು ||೭||

hari naama jihveyoLirabEku ||pa||
naranaada mEle harinaama jihveyoLirabEku ||apa||

bhUtadayaaparanaagirabEku
paatakavella kaLeyalibEku
maatu maatige hariyennabEku ||1||

Aru vargavanaLiyalEbEku
mUru guNaMgaLa mIralibEku
sEri brahmanoLiralEbEku  ||2||

aShTa madaMgaLa tuLiyalibEku
duShTara saMgava biDalibEku
kRuShNa kEshava enalibEku ||3||

vEda SaastravanOdalibEku
bEda ahaMkaarava nIgalibEku
maadhavana smaraNeyoLirabEku ||4||

SaaMti kShame dame prItiyalirabEku
bhraaMti krOdhava kaLeyalibEku
saMtara saMgadoLirabEku  ||5||

guruvina caraNakkeragalEbEku
taruNOpaayavanariyalEbEku
virakti maargadoLirabEku ||6||

baMdaddanuMDu sukhisalebEku
niMdaastutigaLa taaLalibEku
taMde puraMdara viThala enabEku ||7||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru