ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗುರು ರಾಘವೇಂದ್ರರ ಚರಣ | ಶ್ರೀ ಗೋಪಾಲ ದಾಸರು | Guru Raghavendrara Charana | Sri Gopala Dasaru


ರಚನೆ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ)
Kruti:Sri Gopala Dasaru (Gopala vittala)


ಗುರು ರಾಘವೇಂದ್ರರ ಚರಣ ಕಮಲವನ್ನು 
ಸ್ಮರಿಸುವ ಮನುಜರಿಗೆ ||ಪ||

ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ 
ಕರಿಯು ಸಿಂಹನ ಕಂಡ ತೆರನಾಗುವುದಯ್ಯ ||ಅಪ||

ಗುರು ಮಧ್ವಮತವೆಂಬ ವರಕ್ಷೀರಾಂಬುಧಿಯಲ್ಲಿ 
ಹರ ಧರಿಸಿದ ಶಶಿಯಂತುದಿಸಿ 
ಪರಮತ ತಿಮಿರಕ್ಕೆ ತರಣಿ ಕಿರಣನೆನಿಸಿ 
ಪಿರಿದು ಮೆರೆದ ಸಿರಿ ರಾಮನರ್ಚಕರಾದ ||೧||

ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿ, 
ಪರಮೇಷ್ಠಿ ಮರುತರೆ ಗುರುಗಳೆಂದು
ಗರುಡ ಶೇಷ ರುದ್ರ ಸಮರೆಂದು ಸ್ಥಾಪಿಸಿ 
ಸ್ಥಿರ ತಾರತಮ್ಯ ಪಂಚ ಭೇದ ಸತ್ಯವೆಂಬ ||೨||

ಅಂಧಕರಿಗೆ ಚಕ್ಷು, ವಂದ್ಯೆಯರಿಗೆ ಸುತರು 
ಬಂದ ಬಂದವರಿಗಭೀಷ್ಟಗಳನಿತ್ತು
ಒಂದಾರು ನೂರು ವತ್ಸರ ಬೃಂದಾವನದಲ್ಲಿ 
ಚಂದಾಗಿ ನಿಂತು ಮೆರೆವ ಕೃಪಾ ಸಿಂಧು ||೩||

ರಾ ಎನ್ನೆ ದುರಿತ ರಾಶಿಗಳ ದಹಿಸುವ 
ಘ ಎನ್ನೆ ಘನಜ್ಞಾನ ಭಕುತಿ ಈವ
ವೇಂ ಎನ್ನೆ ವೇಗದಿ ಜನನ ಮರಣ ದೂರ 
ದ್ರ ಎನ್ನೆ ದ್ರವಿಣಾರ್ಥ ಶ್ರುತಿಪ್ರತಿಪಾದ್ಯನ ಕಾಂಬ ||೪||

ವರತುಂಗಾ ತೀರ, ಮಂತ್ರಾಲಯ ಪುರದಲ್ಲಿ 
ಪರಿಪರಿಸೇವೆ ಭೂಸುರರಿಂದ ಕೊಳುತಾ ||
ಸಿರಿಯರಮಣ ನಮ್ಮ ಗೋಪಾಲವಿಠಲನ 
ಚರಣ ಸೇವಿಸುತಿಪ್ಪ ಗುರು ಶಿಖಾಮಣಿಯಾದ ||೫||

guru rAGavEMdrara caraNa kamalavannu 
smarisuva manujarige ||pa||

karekaregoLisuva durita duShkRutavella 
kariyu siMhana kaMDa teranAguvudayya ||apa||
 
guru madhvamataveMba varakShIrAMbudhiyalli 
hara dharisida SaSiyaMtudisi 
paramata timirakke taraNi kiraNanenisi 
piridu mereda siri rAmanarcakarAda ||1||
 
hariyE sarvOttama siriyu Atana rANi, 
paramEShThi marutare gurugaLeMdu
garuDa SESha rudra samareMdu sthApisi 
sthira taaratamya paMca bhEda satyaveMba ||2||
 
aMdhakarige cakShu, vaMdyeyarige sutaru 
baMda baMdavarigaBIShTagaLanittu
oMdAru nUru vatsara bRuMdAvanadalli 
caMdAgi niMtu mereva kRupA siMdhu ||3||
 
rA enne durita rASigaLa dahisuva 
Ga enne Ganaj~jAna Bakuti Iva
vEM enne vEgadi janana maraNa dUra 
dra enne draviNArtha SrutipratipAdyana kAMba ||4||
 
varatuMgA tIra, maMtrAlaya puradalli 
pariparisEve BUsurariMda koLutA ||
siriyaramaNa namma gOpAlaviThalana 
charaNa sEvisutippa guru SiKAmaNiyAda ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru