ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತಾರಮ್ಮಯ್ಯ ಯದುಕುಲ | ಪುರಂದರ ವಿಠ್ಠಲ | Tarammayya Yadukula | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ ||ಪ||
ಮಾರ ಜನಕನ ಮೋಹನಾಂಗನ | 
ಸೇರಿ ಸುಖಿಸೇ ಹಾರೈಸಿ ಬಂದೆವು ||ಅಪ||

ಬಿಲ್ಲು ಹಬ್ಬಗಳಂತೆ ಅಲ್ಲಿ ಬೀದಿ ಶೃಂಗಾರವಂತೆ |
ಮಲ್ಲರ ಕಾಳಗ ಮದ್ದಾನೆಯಂತೆ 
ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ||೧||

ಮಧುರಾಪುರವಂತೆ ಅಲ್ಲಿ ಮಾವ ಕಂಸನಂತೆ |
ಒದಗಿದ ಮದಗಜ ತುರಗ ಸಾಲಿನಲ್ಲಿ 
ಮದನ ಮೋಹನ ಕೃಷ್ಣ ಮಧುರೆಗೆ ತೆರಳಿದ ||೨||

ಅತ್ತೆ ಮಾವನ ಬಿಟ್ಟು ಬಂದೆವು ಹಿತ್ತಲ ಬಾಗಿಲಿಂದ 
ಭಕ್ತವತ್ಸನಲ ಬಹು ನಂಬಿದೆವು 
ಉತ್ಸಾಹ ಭಂಗವ ಮಾಡಿದನಮ್ಮ ||೩||

ರಂಗನ ನೆರೆನಂಬಿ ಬಂದೆವು ಸಂಗ ಸುಖವ ಬಯಸಿ |
ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ 
ಮಂಗಳ ಮೂರುತಿ ಮದನ ಗೋಪಾಲನ ||೪||

ಶೇಷಗಿರಿಯ ಮೇಲೆ ಹರಿ ತಾ ವಾಸವಾಗಿಹ ಕಾಣೆ ||
ಸಾಸಿರ ನಾಮದ ಒಡೆಯನೆಂದೆನಿಸಿದ 
ಶ್ರೀಶ ಪುರಂದರ ವಿಠ್ಠಲರಾಯನ ||೫||

tArammayya yadukula vAridhi chaMdramana ||pa||
mAra janakana mOhanAMgana | 
sEri suKisE hAraisi baMdevu ||apa||
 
billu habbagaLaMte alli bIdi SRuMgAravaMte |
mallara kALaga maddAneyaMte 
PullAkShanu tAnallige teraLida ||1||
 
madhurApuravaMte alli mAva kaMsanaMte |
odagida madagaja turaga sAlinalli 
madana mOhana kRuShNa madhurege teraLida ||2||
 
atte mAvana biTTu baMdevu hittala bAgiliMda 
Baktavatsanala bahu naMbidevu 
utsAha BaMgava mADidanamma ||3||
 
raMgana nerenaMbi baMdevu saMga suKava bayasi |
BaMgisi nammanu hyAMge pOdanamma 
maMgaLa mUruti madana gOpAlana ||4||
 
SEShagiriya mEle hari tA vAsavAgiha kANe ||
sAsira nAmada oDeyaneMdenisida 
SrISa puraMdara viThThalarAyana ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru