ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪಾಲಿಸೆನ್ನ ಗೋಪಾಲಕೃಷ್ಣ | ಜಗನ್ನಾಥ ವಿಠಲ | Palisenna Gopalakrishna | Jagannatha Vithala


 

ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)

Kruti:Sri Jagannatha dasaru (Jagannatha vittala)


ಪಾಲಿಸೆನ್ನ ಗೋಪಾಲಕೃಷ್ಣ ||ಪ||

ಪಾಲಿಸೆನ್ನ ದಧಿಪಾಲ ಮುಖರ 
ಗೋಪಾಲ ಬಾಲ ಕೃಪಾಲಯ ಹರಿಯೇ ||ಅಪ||

ಪುಂಡರೀಕ ಭವ ರುಂಡ ಮಾಲಾ 
ಮೇಷಾಂಡ ಪ್ರಮುಖ ಸುರಷಂಡ ಮಂಡಿತನೇ ||೧||

ಗೋಪ ಗೋಪಿ ಗೋಪಾಲ ವೃಷ್ಣಿ ಕುಲದೀಪ 
ಶ್ರೀಪತ ಶಿವಚಾಪ ಭಂಜನ ||೨||

ಅಂಡಜಾಧಿಪ ಪ್ರಕಾಂಡ ಪೀಠ 
ಕೋದಂಡ ಪಾಣಿ ಬ್ರಹ್ಮಾಂಡನಾಯಕ ||೩||

ವ್ಯಾಪ್ತ ಗೋಪ್ತ ಜಗದಾಪ್ತ ದೋಷ 
ನಿರ್ಲಿಪ್ತ ಪ್ರಾಪ್ತ ಗತ ಸುಪ್ತ ಸುಷುಪ್ತಾ ||೪||

ವೇದ ವೇದ್ಯ ಬ್ರಹ್ಮಾದಿ ವಂದ್ಯ 
ಸುಖಬೋಧ ಪೂರ್ಣ ಬ್ರಹ್ಮೋದನ ಭೋಕ್ತ ||೫||

ಅದ್ವರೇಶ ಲೋಕೋದ್ಧರ ಪಾಣಿ 
ಸರಿದ್ವರಪಿತ ಗುರು ಮಧ್ವ ವಲ್ಲಭ ||೬||

ಪೋತವೇಷಧರ ಪೂತನಾರಿ 
ಪುರುಹೂತ ಮದಹ ಜಗನ್ನಾಥ ವಿಠಲ ||೭||

pAlisenna gOpAlakRuShNa ||pa||

pAlisenna dadhipAla muKara 
gOpAla bAla kRupAlaya hariyE ||apa||

puMDarIka Bava ruMDa mAlA 
mEShAMDa pramuKa suraShaMDa maMDitanE ||1||

gOpa gOpi gOpAla vRuShNi kuladIpa 
SrIpata SivacApa BaMjana ||2||

aMDajAdhipa prakAMDa pITha 
kOdaMDa pANi brahmAMDanAyaka ||3||

vyApta gOpta jagadApta dOSha 
nirlipta prApta gata supta suShuptA ||4||

vEda vEdya brahmAdi vaMdya 
suKabOdha pUrNa brahmOdana BOkta ||5||

advarESa lOkOddhara pANi 
saridvarapita guru madhva vallaBa ||6||

pOtavEShadhara pUtanAri 
puruhUta madaha jagannAtha viThala ||7||

Comments

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru