ಒಲ್ಲೇ ದುರಿತಗಳ ನಾ ಒಲ್ಲೆ | ಹಯವದನ | Olle Duritagala song | Hayavadana
- Get link
- X
- Other Apps
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)
ಒಲ್ಲೇ ದುರಿತಗಳ ನಾ ಒಲ್ಲೆ ಹರಿಯೇ
ಫುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ ||ಪ||
ದುರ್ಜನ ಸಂಗವ, ಎಂದೆಂದಿಗೂ ಒಲ್ಲೆ,
ಸಜ್ಜನ ವಿರಸಗಳ ಒಲ್ಲೆ ಒಲ್ಲೆನೋ ಸ್ವಾಮಿ ||
ಅರ್ಜುನ ಸಖ ನಿನ್ನ ಸೇವೆಯ ಬಿಡಲೊಲ್ಲೆ,
ಅಬ್ಜ ಬಾಣನ ಮೇಳ ಒಲ್ಲೆ ಒಲ್ಲೆನೋ ಸ್ವಾಮಿ ||೧||
ಬಲ್ಲಿದ ಹರಿಪಾದ ಸೇವೆಯ ಬಿಡಲೊಲ್ಲೆ
ಸಲ್ಲದ ಸುಖಗಳ ಒಲ್ಲೆ ಒಲ್ಲೆನೋ ಸ್ವಾಮಿ ||
ಅಲ್ಲದ ಕರ್ಮಗಳ ಆಚರಿಸಲೊಲ್ಲೆ,
ಕ್ಷುಲ್ಲ ದೈವದ ಪೂಜೆ ಎಂದೆಂದಿಗೂ ಒಲ್ಲೆ ||೨||
ಹರಿನಾಮ ಸ್ಮರಣೆಯ ಮನದಿ ಬಿಟ್ಟಿರಲೊಲ್ಲೆ,
ದುರ್ವಿಷಯದಿ ಹರುಷ ಒಲ್ಲೆ ಒಲ್ಲೆನೋ ಸ್ವಾಮಿ ||
ಕರುಣಿ ಹಯವದನನ ಕಾಣದೆ ಇರಲೊಲ್ಲೆ
ಹರಿಯೇ ನೀನಲ್ಲದ ಅನ್ಯ ದೈವವ ಒಲ್ಲೇ ||೩||
ollE duritagaLa nA olle hariyE
PullanABana smaraNe illade iralolle ||pa||
durjana saMgava, eMdeMdigU olle,
sajjana virasagaLa olle ollenO svAmi ||
arjuna saKa ninna sEveya biDalolle,
abja bANana mELa olle ollenO svAmi ||1||
ballida haripAda sEveya biDalolle
sallada sukhagaLa olle ollenO svAmi ||
allada karmagaLa Acarisalolle,
kShulla daivada pUje eMdeMdigU olle ||2||
harinAma smaraNeya manadi biTTiralolle,
durviShayadi haruSha olle ollenO svAmi ||
karuNi hayavadanana kANade iralolle
hariyE nInallada anya daivava ollE ||3||
- Get link
- X
- Other Apps