ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಈ ಮುದ್ದು ಕೃಷ್ಣನ | ಹಯವದನ | Ee Muddu Krishnana | Vadirajaru


 

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಈ ಮುದ್ದು ಕೃಷ್ಣನ ಈ ಕ್ಷಣದ ಸುಖವೆ ಸಾಕು
ಶ್ರೀ ಮಧ್ವ ಮುನಿಯ ಮನದೈವ ಉಡುಪಿನ ಕೃಷ್ಣಾ ||ಪ||

ಚೆಲುವ ಚರಣ ದ್ವಂದ್ವ ಜಂಘೆ ಜಾನೂರು ಕಟಿ, 
ವಳಿಪಂಕ್ತಿ ಜಠರ ವಕ್ಷ ಕಂಬುಕಂದರದಿ ||
ನಳಿತೋಳು ಮುದ್ದು ಮುಖ ನಯನ ನಾಸಿಕ ಕರ್ಣ 
ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು ||೧||

ಕಿರುಗೆಜ್ಜೆ ಕಡೆಪೆಂಡೆ ಗಂಟೆ ಕಟಿಸೂತ್ರ, 
ವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ ||
ಉರುಮುದ್ರೆ ಕಂಕಣಾಂಗದ ಕುಂಡಲ ಪ್ರಭೆಯ, 
ಸಿರಿನಾಮ ಮಕುಟ, ನಾಸಿಕದ ವರಮಣಿಯ ||೨||

ಸಕಲ ದೇವೋತ್ತಮನೆ ಸರ್ವಗುಣ ಪೂರ್ಣನೆ, 
ಅಕಳಂಕ ಅಖಿಳಾಗಮ ಸ್ತುತನೆ ಅಪ್ರಾಕೃತನೆ ||
ಅಖಿಳಾ ಜೀವೋತ್ತಮರ ಭಿನ್ನ ಹಯವದನನೆ 
ಮುಕುರ ಕಡೆಗೋಲು ನೇಣುಗಳ ಪಿಡಿದಿಪ್ಪನೆ ||೩||

I muddu kRuShNana I kShaNada suKave sAku
SrI madhva muniya manadaiva uDupina kRuShNA ||pa||

cheluva caraNa dvaMdwa jaMGe jAnUru kaTi, 
vaLipaMkti jaThara vakSha kaMbukaMdaradi ||
naLitOLu muddu muKa nayana nAsika karNa 
suLiguruLu mastakada naLinanABana sobagu ||1||
 
kirugejje kaDepeMDe gaMTe kaTisUtra, 
varahAra padaka SrIvatsa kaustuBaratna ||
urumudre kaMkaNAMgada kuMDala praBeya, 
sirinAma makuTa, nAsikada varamaNiya ||2||
 
sakala dEvOttamane sarvaguNa pUrNane, 
akaLaMka aKiLAgama stutane aprAkRutane ||
aKiLA jIvOttamara bhinna hayavadanane 
mukura kaDegOlu nENugaLa piDidippane ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru