ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರಯ್ಯ ರಂಗ ಬಾರಯ್ಯ ಕೃಷ್ಣ | ಪುರಂದರವಿಠಲ | Baarayya Ranga | Purandara Vithala


 

ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ಬಾರಯ್ಯ ರಂಗ ಬಾರಯ್ಯ ಕೃಷ್ಣ 
ಬಾರಯ್ಯ ಸ್ವಾಮಿ ಬಾರಯ್ಯ ||ಪ||
ವಾರಣ ಭಯವ ನಿವಾರಣ ಮಾಡಿದ ಕಾರುಣ್ಯ 
ನಿಧಿ ಎನ್ನ ಹೃದಯ ಮಂದಿರಕೆ ||ಅಪ||

ಮೊದಲಿಂದ ಬರಬಾರದೆ ನಾನು ಬಂದೆ    
ತುದಿ ಮೊದಲಿಲ್ಲದೊಂದದು ಅಪನಿಂದೆ  
ಇದು ಗೆದ್ದು ಕಳೆದು ಪೋಪುದು ಹೇಗೆ ಮುಂದೆ  
ಪದುಮನಾಭನೆ ತಪ್ಪು ಕ್ಷಮಿಸಯ್ಯಾ ತಂದೆ ||೧||

ಹೆಣ್ಣು ಹೊನ್ನು ಮಣ್ಣಿನಾಸೆಯೊಳಿದ್ದು  
ಪುಣ್ಯ ಪಾಪಂಗಳ ನಾನರಿತಿದ್ದು 
ಅನ್ಯಾಯವಾಯಿತು ಇದಕೇನು ಮದ್ದು  
ನಿನ್ನ ಧ್ಯಾನವ ಕೊಡು ಹೃದಯದೊಳಿದ್ದು ||೨||

ಇಂದೆನ್ನ ಪೂರ್ವ ಪಾಪಂಗಳ ಕಳೆದು 
ಮುಂದೆನ್ನ ಜನ್ಮ ಸಫಲವನ್ನು ಗೈದು  
ತಂದೆ ಪುರಂದರ ವಿಠಲ ನೀನೊಲಿದು  
ಎಂದೆಂದಿಗಾನಂದ ಸುಖವನ್ನು ಸುರಿದು ||೩||

bArayya raMga bArayya kRuShNa 
bArayya svAmi bArayya ||pa||
vAraNa Bayava nivAraNa mADida kAruNya 
nidhi enna hRudaya maMdirake ||apa||

modaliMda barabArade nAnu baMde    
tudi modalilladoMdadu apaniMde  
idu geddu kaLedu pOpudu hEge muMde  
padumanABane tappu kShamisayyA taMde ||1||

heNNu honnu maNNinAseyoLiddu  
puNya pApaMgaLa nAnaritiddu 
anyAyavAyitu idakEnu maddu  
ninna dhyAnava koDu hRudayadoLiddu ||2||

iMdenna pUrva pApaMgaLa kaLedu 
muMdenna janma saPalavannu gaidu  
taMde puraMdara viThala nInolidu  
eMdeMdigAnaMda suKavannu suridu ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru