ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀನಿವಾಸ ನೀನೇ ಪಾಲಿಸೋ | ಪುರಂದರ ವಿಠಲ | Srinivasa Neene Paliso | Purandara Vithala



ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ಶ್ರೀನಿವಾಸ ನೀನೇ ಪಾಲಿಸೋ |
ಆಶ್ರಿತ ಜನಪಾಲ ಗಾನ ಲೋಲ ಶ್ರೀ ಮುಕುಂದನೆ ||ಪ||

ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ |
ವೇಣುಗೋಪಾಲ ಮುಕುಂದ ವೇದ ವೇದ್ಯ ನಿತ್ಯಾನಂದ ||ಅಪ||

ಎಂದಿಗೆ ನಿನ್ನಯ ಪಾದವ ಪೊಂದುವ
ಸುಖ ಎಂದಿಗೆ ಲಭ್ಯವೋ ಮಾಧವ ||
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನು |
ಅಂದದಿಂ ಭವಾಬ್ಧಿಯೊಳು ಮಿಂದು ನೊಂದೆನೋ ಮುಕುಂದ ||೧||

ಎಷ್ಟು ದಿನ ಕಷ್ಟ ಪಡುವುದೋ
ಯಶೋದೆ ಕಂದ ದೃಷ್ಟಿಯಿಂದ ನೋಡಲಾಗದೆ ||
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರ ಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೂ ಇಷ್ಟನಾಗಿ ಕೈಯ್ಯ ಪಿಡಿದು ||೨||

ಅನುದಿನ ಅನೇಕ ರೋಗಂಗಳ
ಅನುಭವಿಸುವೆನು ಘನ್ನ ಮಹಿಮನೆ ಕೇಳಯ್ಯ ||
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮಧೀಶ ಪುರಂದರ ವಿಠಲನೆ ಕೈಯ್ಯ ಪಿಡಿದು ||೩||

SrInivAsa nInE pAlisO |
ASrita janapAla gAna lOla SrI mukuMdane ||pa||

dhyAna mALpa sajjanara mAnadiM paripAlipa |
vENugOpAla mukuMda vEda vEdya nityAnaMda ||apa||

eMdige ninnaya pAdava poMduva
suKa eMdige laByavO mAdhava ||
aMdhakAraNyadalli niMdu tattarisutihenu |
aMdadiM BavAbdhiyoLu miMdu noMdenO mukuMda ||1||

eShTu dina kaShTa paDuvudO
yaSOde kaMda dRuShTiyiMda nODalAgade ||
muTTi ninna BajisalAre keTTa nara janmadava
duShTa kArya mADidAgyU iShTanAgi kaiyya piDidu ||2||

anudina anEka rOgaMgaLa
anuBavisuvenu Ganna mahimane kELayya ||
tanuvinalli balavilla neneda mAtra salahuva
hanumadhISa puraMdara viThalane kaiyya piDidu ||3||

Comments

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru