ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಂದನಲ್ಲೆ ಭಾಗ್ಯ ನಿಧಿ | ಹಯವದನ | Bandanalle Bhagyanidhi | Sri Vadirajaru


 

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)

Kruti:Sri Vadirajaru (Hayavadana)


ಬಂದನಲ್ಲೆ ಭಾಗ್ಯ ನಿಧಿ| 
ಬಂದನಲ್ಲೇ ಕೃಪಾ ಸಿಂಧು| 
ಬಂದನಲ್ಲೇ ರಮಣಿ ನಿನ್ನರಮನೆಗೆ || ಪ ||

ನಂದಗೋಪ ಕಂದನಾಗಿ ಬೃಂದಾವನದೊಳಗಾಡಿ| 
ಇಂದಿರಾರಮಣ ಬಂದ ಮಂದರೋದ್ಧಾರ|
ಇಂದ್ರಾದಿ ಸುರರಿಗಾನಂದ ಅಭಯವಿತ್ತು| 
ಬಂದ ಸಿರಿ ಹಯವದನ ದೇವ ಕಾಣಮ್ಮಾ || ೧ ||

ಮುತ್ತು ಮಾಣಿಕ್ಯ ನವರತ್ನದ ಕಿರೀಟ ತೊಟ್ಟು| 
ಸಪ್ತ ಸೂರ್ಯ ಮಂಟಪದಿ ಬರುವನ್ಯಾರಮ್ಮಾ|
ಕತ್ತಲೆ ನಿವಾರಿಸು ಕಸ್ತೂರಿ ತಿಲಕವಿಟ್ಟು| 
ಕೌಸ್ತುಭ ಹಯವದನ ದೇವ ಕಾಣಮ್ಮಾ || ೨ ||

ಕಾಲಲಂದುಗೆ ಕಡಗ ನೀಲದುಡುಗೆಯ ತೊಟ್ಟು| 
ನೀಲವರ್ಣ ದೇಹದಿಂದ ಬರುವನ್ಯಾರಮ್ಮ|
ಸಾಲು ಸಾಲು ಸಾಲು ಎಂಬ ಯತಿಗಳಾ ಸಂದಣಿಯಿಂದ| 
ಮೇಲಾಗಿ ಒಲಿದ ಹಯವದನ ಕಾಣಮ್ಮಾ || ೩ ||

ಚಿನ್ನ ತುರಗ ಮಿಂಚುತ್ತ ರನ್ನ ತೊಡೆಯು ಹೊಳೆಯುತ್ತಾ| 
ಉನ್ನಂತ ಗಾಂಭೀರ್ಯದಿಂದ ಬರುವನ್ಯಾರಮ್ಮಾ|
ಕನ್ನೆ ಮಹಾಲಕುಮಿಯ ಮನವ ಸೂರೆಗೊಂಡಿಹ| 
ಚೆನ್ನಿಗ ಹಯವದನ ದೇವ ಕಾಣಮ್ಮಾ || ೪ ||

ಉರದಲ್ಲಿ ಶ್ರೀವತ್ಸ ಕೊರಳ ಕೌಸ್ತುಭ ಹಾರ| 
ಸರಿಹೆಜ್ಜೆ ಇಕ್ಕುತ ಬರುವನ್ಯಾರಮ್ಮಾ|
ಗುರು ವಾದಿರಾಜರಿಗೊಲಿದು ಸೋದೆ ಪುರದಲ್ಲಿ ನಿಂದ| 
ವರದ ಶ್ರೀ ಹಯವದನ ದೇವ ಕಾಣಮ್ಮಾ || ೫ ||

baMdanalle BAgya nidhi| 
baMdanallE kRupA siMdhu| 
baMdanallE ramaNi ninnaramanege || pa ||

naMdagOpa kaMdanAgi bRuMdAvanadoLagADi| 
iMdirAramaNa baMda maMdarOddhAra|
iMdrAdi surarigAnaMda aBayavittu| 
baMda siri hayavadana dEva kANammA || 1 ||

muttu mANikya navaratnada kirITa toTTu| 
sapta sUrya maMTapadi baruvanyArammA|
kattale nivArisu kastUri tilakaviTTu| 
kaustuBa hayavadana dEva kANammA || 2 ||

kAlalaMduge kaDaga nIladuDugeya toTTu| 
nIlavarNa dEhadiMda baruvanyAramma|
sAlu sAlu sAlu eMba yatigaLA saMdaNiyiMda| 
mElAgi olida hayavadana kANammA || 3 ||

cinna turaga miMcutta ranna toDeyu hoLeyuttA| 
unnaMta gAMBIryadiMda baruvanyArammA|
kanne mahAlakumiya manava sUregoMDiha| 
cenniga hayavadana dEva kANammA || 4 ||

uradalli SrIvatsa koraLa kaustuBa hAra| 
sarihejje ikkuta baruvanyArammA|
guru vAdirAjarigolidu sOde puradalli niMda| 
varada SrI hayavadana dEva kANammA || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru