ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗಜಮುಖ ಗಣಪತಿಗೆ ನಮೋ | ಹರಪನಹಳ್ಳಿ ಭೀಮವ್ವ | Gajamukha Ganapatige Namo | Harapana halli Bheemavva


ಸಾಹಿತ್ಯ :    ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ) 
Kruti: Harapanahalli Bhimavva (Bhimesha Krishna)

ಗಜಮುಖ ಗಣಪತಿಗೆ ನಮೋ ನಮೋ
ತ್ರಿಜಗದೊಳ್ ಪೂಜಿಪಗೆ ನಮೋ ನಮೋ
ಗಣಪತಿಗೆ ನಮೋ || ಪ ||

ಸಿದ್ಧಿವಿನಾಯಕ ವಿದ್ಯಾಪ್ರದಾಯಕ| 
ಸಿದ್ಧಿವಿನಾಯಕಗೆ ನಮೋ ನಮೋ 
ವಿದ್ಯಾಪ್ರದಾಯಕಗೆ ನಮೋ ನಮೋ
ಲಡ್ಡಿಗೆ ಮೋದಕ ನೈವೇದ್ಯ ನಿನಗೆ| 
ಲಡ್ಡಿಗೆ ಮೋದಕವ ನಮೋ ನಮೋ 
ನೈವೇದ್ಯಕರ್ಪಿಸುವೆ ನಮೋ ನಮೋ || ೧ ||

ಹರನ ಕುಮಾರನೆ ಗಿರಿಜೆಯ ವರಪುತ್ರ| 
ಹರನ ಕುಮಾರನೆ ನಮೋ ನಮೋ 
ಗಿರಿಜೆಯ ವರಪುತ್ರನೆ ನಮೋ ನಮೋ|
ಹರಿಕಥೆಗಳ ಪೇಳ್ವೆ ವರಮತಿ ಪಾಲಿಸೋ| 
ಹರಿಕಥೆಗಳ ಪೇಳ್ವೆನೋ ನಮೋ ನಮೋ 
ವರಮತಿ ಪಾಲಿಸೋ ನಮೋ ನಮೋ || ೨ ||

ಆಕಾಶಕ್ಕಭಿಮಾನಿ ಮೂಷಿಕವಾಹನ| 
ಆಕಾಶಕ್ಕಭಿಮಾನಿಗೆ ನಮೋ ನಮೋ 
ಮೂಷಿಕ ವಾಹನಗೆ ನಮೋ ನಮೋ|
ಭೀಮೇಶ ಕೃಷ್ಣ ಕಥೆ ಸಂತೋಷದಿ ಪೇಳ್ವೆ| 
ಭೀಮೇಶ ಕೃಷ್ಣ ಕಥೆ ನಮೋ ನಮೋ 
ಸಂತೋಷದಿ ಪೇಳ್ವೆನು ನಮೋ ನಮೋ || ೩ ||

gajamuKa gaNapatige namO namO
trijagadoL pUjipage namO namO
gaNapatige namO || pa ||
 
siddhivinAyaka vidyApradAyaka| 
siddhivinAyakage namO namO 
vidyApradAyakage namO namO
laDDige mOdaka naivEdya ninage| 
laDDige mOdakava namO namO 
naivEdyakarpisuve namO namO || 1 ||
 
harana kumArane girijeya varaputra| 
harana kumArane namO namO 
girijeya varaputrane namO namO|
harikathegaLa pELve varamati pAlisO| 
harikathegaLa pELvenO namO namO 
varamati pAlisO namO namO || 2 ||
 
AkASakkaBimAni mUShikavAhana| 
AkASakkaBimAnige namO namO 
mUShika vAhanage namO namO|
BImESa kRuShNa kathe saMtOShadi pELve| 
BImESa kRuShNa kathe namO namO 
saMtOShadi pELvenu namO namO || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru