ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಯಗು ತನಕ ಆಟ | ಕಾಗಿನೆಲೆಯಾದಿ ಕೇಶವ | Bayagu Tanaka Aata | Kaginele Adikeshava


 

ಸಾಹಿತ್ಯ : ಶ್ರೀ ಕನಕದಾಸರು

Kruti: Sri Kanaka Dasaru


ಬಯಗು ತನಕ ಆಟ ಕೂಟ ಊಟದ ಕೆಲಸ
ಉಂಡ ಮೇಲೆ ಶಯನ ||ಪ||
ಬಯಲಾಯಿತು ಈ ಒಗತನವೆಲ್ಲ ರಕ್ಷಿಸಯ್ಯ ರಘುಕುಲ ತಿಲಕ ||ಅಪ||

ಪುರಾಣವಿಲ್ಲ ಪುಣ್ಯಕಥೆಯಿಲ್ಲ ಪಾರಾಯಣದಿ ಮನಸಿಲ್ಲ
ತರೋಣ ಬರೋಣ ತಿನ್ನೋಣ ಮಲಗೋಣ ಮತ್ತೇಳೋಣ ||೧||

ಕಣ್ಣಿಗೆ ಜೊಂಪು ಹತ್ತುವ ತನಕ ಅನ್ಯ ವಿಷಯ ಮಾತುಕತೆಯಾಟ
ಹೆಣ್ಣು ಹೊನ್ನು ಮಣ್ಣು ಮಮಕಾರದಿ ಒಳಹೊರಗಿಣುಕಾಟ ||೨||

ಹೀಗಾಗಿ ನಿನ್ನಲ್ಲಿಗೆ ಬಂದೆ ಇನ್ನಾದರು ಸಲಹೋ
ಸಿರಿ ಕಾಗಿನೆಲೆಯಾದಿ ಕೇಶವ ಶಿರಬಾಗಿ ಬೇಡಿಕೊಂಬೆ ||೩||

bayagu tanaka aaTa kUTa ooTada kelasa
uMDa mEle shayana ||pa||
bayalaayitu I ogatanavella rakShisayya raghukula tilaka ||apa||

puraaNavilla puNyakatheyilla paaraayaNadi manasilla
tarONa barONa tinnONa malagONa mattELONa ||1||

kaNNige joMpu hattuva tanaka anya viShaya maatukateyaaTa
heNNu honnu maNNu mamakaaradi oLahoragiNukaaTa ||2||

hIgaagi ninnallige baMde innaadaru salahO
siri kaagineleyaadi kEshava shirabaagi bEDikoMbe ||3||


Comments

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru