ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬೈಲಿಗೆ ಬೈಲಾಯಿತು ಬೈಲೊಳಗೆ | ಪುರಂದರ ವಿಠಲ | Bailige Bailayitu | Purandara Vithala


 
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)

ಬೈಲಿಗೆ ಬೈಲಾಯಿತು ಬೈಲೊಳಗೆ ||ಪ||

ಸೂತ್ರ ಬೊಂಬೆಯು ಮಾಡಿ ಹರಿ ಸೂತ್ರದಿಂ ಕುಣಿಸ್ಯಾಡಿ
ಸೂತ್ರ ಹರಿಯಿತು ಬೊಂಬೆ ಮುರಿಯಿತು ಆಟ ನಿಂತಿತು ಕೇಳೋ ಮನುಜ ||೧||

ಚಂದಾಗಿ ಜ್ಯೋತಿಯು ಬೆಳಗಿ | ಎಣ್ಣೆಯು ಬತ್ತಿಯು ಹಾಕಿ ||
ಎಣ್ಣೆ ಮುಗಿಯಿತು ಬತ್ತಿ ಕಡಿಯಿತು ಕತ್ತಲು ಆಯಿತು ಕೇಳೋ ಮನುಜ ||೨||

ನೆಂಟರಿಷ್ಟರು ಕೂಡಿ, ಅವರು ಸಂತೆಗೋಸ್ಕರವಾಗಿ
ಸಂತೆ ಮುಗಿಯಿತು ಚಿಂತೆ ಹತ್ತಿತು ಭ್ರಾಂತಿ ಆಯಿತು ಕೇಳೋ ಮನುಜ ||೩||

ಬಾಲೆಯೊಬ್ಬಳು ಕೂಡಿ ಅವಳು ನೀರಿಗೋಸ್ಕರ ಪೋಗಿ
ನೀರು ತುಂಬಿತು ಕಾಲು ಜಾರಿತು ಕೊಡವು ಒಡೆಯಿತು ಕೇಳೋ ಮನುಜ ||೪||

ಪರಿಪರಿ ವಿಧದಲ್ಲಿ ನಾನು ಪರಮಾತ್ಮನ ಸ್ತುತಿಯು ಮಾಡಿ ಪರಮ
ಮೂರುತಿ ಪುರಂದರ ವಿಠಲನೆ ಕರುಣಿಸೊ | ಪಾಲಿಸೊ ಪರಮ ದಯಾಳೋ ||೫||

bailige bailAyitu bailoLage ||pa||

sUtra boMbeyu mADi hari sUtradiM kuNisyADi
sUtra hariyitu boMbe muriyitu ATa niMtitu kELO manuja ||1||

chaMdAgi jyOtiyu beLagi | eNNeyu battiyu hAki ||
eNNe mugiyitu batti kaDiyitu kattalu Ayitu kELO manuja ||2||

neMTariShTaru kUDi, avaru saMtegOskaravAgi
saMte mugiyitu chiMte hattitu BrAMti Ayitu kELO manuja ||3||

bAleyobbaLu kUDi avaLu nIrigOskara pOgi
nIru tuMbitu kAlu jAritu koDavu oDeyitu kELO manuja ||4||

paripari vidhadalli nAnu paramAtmana stutiyu mADi parama
mUruti puraMdara viThalane karuNiso | pAliso parama dayALO ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru