ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎನ್ನನುದ್ಧರಿಸಲಾಗದೇ ಚೆನ್ನರಾಯ | ಹಯವದನ | Ennanuddharisalaagade Chenna | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಎನ್ನನುದ್ಧರಿಸಲಾಗದೇ ಚೆನ್ನರಾಯ ||ಪ||

ಎನ್ನನುದ್ಧರಿಸಲಾಗದೇ ಚೆನ್ನರಾಯ ಬಿನ್ನೈಸುವೆ 
ಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣ ಕಮಲದಾಣೆ ||ಅಪ||

ಶರಣಜನರ ಪಾಲ ಕಲ್ಪತರು ಗುರುಸ್ವರೂಪನೆಂದು 
ಧರೆಯೊಳಖಿಳ ನಿಗಮ ಉಸುರುತಿರಲು ನಿನ್ನ ಚರಣವನ್ನು 
ಶಿರದೊಳಾಂತೆ ಎನ್ನ ಮೇಲಣ ಕರುಣವಿಲ್ಲದು 
ಅದೇನು ಕಾರಣ ಸಲಹಬೇಕು ಸುರರ ಮಸ್ತಕದ ಸುಭೂಷಣ ||೧||

ಹಿಂದೆ ನಾನನಾಥನಾಗಿ ಒಂದೆರಡಲ್ಲಾನೇಕ ಜನ್ಮದಿ ಬಂದು 
ನರಕಯಾತನೆಯಲ್ಲಿ ನೊಂದು ಬೆಂದು ಬಾಯ ಬಿಡುತ ಬಂದೆ 
ನಿನ್ನ ಪೆಸರುಗೊಂಡೆನೊ ಸನಾಥನಾಗಿ ಮುಂದೆ ನಾಮ ಸುಧೆಯನ್ನುಂಡೆನೊ 
ನೀ ಕೃಪಾಳು ಎಂದು ನುಡಿವರನ್ನು ಕಂಡೆನೊ ||೨||

ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನ ಸಲಿಗೆಯೊಳೀ 
ಬಿನ್ನಪವನು ಸಲಿಸುತಿಹೆನು ಮುಂದಕಿನ್ನು ಜಲುಮ ಬಾರದಂತೆ 
ವರವನು ಇತ್ತು ಎನ್ನ ಸಲಹೋ ದೊರೆಯೇ ನಿನ್ನ 
ಕರೆವೆನು ಮುಂದೆ ಮುಕುತಿ ಲಲನೆಯೊಡನೆ ಸುಖದಲಿರುವೆನು ||೩||

ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊಯಿಸಿ 
ತಿರುಗುತಿರಲು ಮೋಹಪಾಶವೆನ್ನ ಸುತ್ತಿಕೊಂಡು ಘಾಸಿ ಮಾಡುತಿರಲು 
ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ 
ಸಲಹೋ ಸರ್ವೇಶ ನಂಬಿದವನ ಕೆಡಿಸದೆ ||೪||

ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದು 
ಮನ್ನಿಸಿದರೆ ಲೋಕದೊಳಗೆ ಧನ್ಯನಹೆನು ಜನುಮವೆತ್ತಿ 
ಉನ್ನತಾಹುದು ನಿನ್ನ ಕೀರುತಿ ನಾಶವಹುದು ಎನ್ನ ಭವದ 
ಬಹಳ ಧಾವತಿ ಸಲಹೊ ಚೆನ್ನ ಹಯವದನ ಮೂರುತಿ ||೫||

ennanuddharisalAgadE chennarAya ||pa||

ennanuddharisalAgadE chennarAya binnaisuve 
innu bEre gatiya kANe ninna charaNa kamaladANe ||apa||

SaraNajanara pAla kalpataru gurusvarUpaneMdu 
dhareyoLaKiLa nigama usurutiralu ninna charaNavannu 
SiradoLAMte enna mElaNa karuNavilladu 
adEnu kAraNa salahabEku surara mastakada suBUShaNa ||1||

hiMde nAnanAthanAgi oMderaDallAnEka janmadi baMdu 
narakayAtaneyalli noMdu beMdu bAya biDuta baMde 
ninna pesarugoMDeno sanAthanAgi muMde nAma sudheyannuMDeno 
nI kRupALu eMdu nuDivarannu kaMDeno ||2||

halavu mAtanADalEnu olivudinnu hariye ninna saligeyoLI 
binnapavanu salisutihenu muMdakinnu jaluma bAradaMte 
varavanu ittu enna salahO doreyE ninna 
karevenu muMde mukuti lalaneyoDane suKadaliruvenu ||3||

dESavariye nAnu ninna dAsaneMdu DaMguravanu hoyisi 
tirugutiralu mOhapASavenna suttikoMDu GAsi mADutiralu 
biDisade iruva paMthavAsiyEnu innu alesade 
salahO sarvESa naMbidavana keDisade ||4||

enna durguNavannu maredu ninna sadguNadi poredu 
mannisidare lOkadoLage dhanyanahenu janumavetti 
unnatAhudu ninna kIruti nASavahudu enna Bavada 
bahaLa dhAvati salaho cenna hayavadana mUruti ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru