ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಬಾರಯ್ಯ ಯದುಕುಲ ತಿಲಕ | ಹಯವದನ | Barayya yadukula Tilaka | Hayavadana


 

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)

Kruti:Sri Vadirajaru (Hayavadana)



ಬಾರಯ್ಯ ಯದುಕುಲ ತಿಲಕ | ತೋರಯ್ಯ ನಿನ್ನ ಮುದ್ದು ಮುಖವ | 
ಓರಂತೆ ಮುದ್ದಿಸಿ ಯಶೋದೆ ಕುಮಾರನೇ ಬಾರೆಂದಳೈ ||ಪ||

ಅಂದವಾದ ನಿನ್ನ ಮುದ್ದು ಮುಖದ ಚೆಂದವನ್ನು ತಾ ನೋಡಿ | 
ಕಂದಿ ಕುಂದಿ ಇಂದಿರೆಯು ಮರುಳಾಗಿ ಕಂದ ನಿನ್ನ ಪೊಂದೇನೆಂದಳೈ ||೧||

ಕೃಷ್ಣ ನಿನ್ನ ಮಕ್ಕಳಾಟಿಕೆ ಶ್ರೇಷ್ಠರಿಗೆ ಮೋಹವಾಯಿತು | 
ದುಷ್ಟಮತ ಮಾತಂಗಕ್ಕೆ ಅಟ್ಟುವ ಸಿಂಹದ ಮರಿಯೆ ||೨||

ಇಂಥ ಹಯವದನನ | ಇಂಥ ದೇವರ ನಾ ಕಾಣೆ | 
ಪಂಥವೇನೋ ಎನ್ನ ಕೂಡೆ ದಿನಮಣಿ ತಿಂತಿಣಿಯ ಬಾರೆಂದಳೈ ||೩||

bArayya yadukula tilaka | tOrayya ninna muddu muKava | 
OraMte muddisi yaSOde kumAranE bAreMdaLai ||pa||

aMdavAda ninna muddu muKada ceMdavannu tA nODi | 
kaMdi kuMdi iMdireyu maruLAgi kaMda ninna poMdEneMdaLai ||1||

kRuShNa ninna makkaLATike SrEShTharige mOhavAyitu | 
duShTamata mAtaMgakke aTTuva siMhada mariye ||2||

iMtha hayavadanana | iMtha dEvara nA kANe | 
paMthavEnO enna kUDe dinamaNi tiMtiNiya bAreMdaLai ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru