ಹರಿ ಬಾರನೇ ನರಹರಿ | ಹಯವದನ | Hari Baarane Narahari | Hayavadana
- Get link
- X
- Other Apps
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)
ಹರಿ ಬಾರನೇ ನರಹರಿ ಬಾರನೇ
ಕರಿಭಯಹರ ಮುರಾರಿ ಬಾರನೆ || ಪ ||
ವೃಂದಾವನದ ಗೋವಿಂದ ಬಾರನೇ
ಕಂದರ್ಪನ ತಂದೆ ಮುಕುಂದ ಬಾರನೇ || ೧ ||
ಎಂದು ಕಾಂಬೆವೊ ನಾವವನನೆಂದು ಕಾಂಬೆವೊ
ಇಂದಿರೆಯರಸನನೆಂದು ಕಾಂಬೆವೊ || ೨ ||
ಧನ ನಿತ್ಯವೇ ಯೌವ್ವನ ನಿತ್ಯವೇ
ಜನ ನಿತ್ಯವೇ ಕರಣ ನಿತ್ಯವೇ || ೩ ||
ಭವಗೊಲಿದ ಪಾಂಡವಗೊಲಿದ
ಧ್ರುವಗೊಲಿದ ಮಾಧವ ಒಲಿದ || ೪ ||
ಇಂದುವರ್ಣದ ಹಯವದನನಾದ
ಮಂದರಧರನ ಸಖಿ ತಂದು ತೋರೆನಗೆ || ೫ ||
hari baaranE narahari baaranE
karibhayahara muraari baarane || pa ||
vruMdaavanada gOviMda baaranE
kaMdarpana taMde mukuMda baaranE || 1 ||
eMdu kaaMbevo naavavananeMdu kaaMbevo
iMdireyarasananeMdu kaaMbevo || 2 ||
dhana nityavE youvvana nityavE
jana nityavE karaNa nityavE || 3 ||
bhavagolida paaMDavagolida
dhruvagolida maadhava olida || 4 ||
iMduvarNada hayavadananaada
maMdaradharana saKi taMdu tOrenage || 5 ||
- Get link
- X
- Other Apps
Comments
Post a Comment