ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆವ ಕಡೆಯಿಂದ ಬಂದೆ | ಹಯವದನ | Ava Kadeyinda Bande | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಆವ ಕಡೆಯಿಂದ ಬಂದೆ ವಾಜಿವದನನೆ |
ಭಾವಿಸುವ ವಾದಿರಾಜ ಮುನಿಯ ಕಾಣುತ ||ಪ||

ನೇವರಿಸಿ ಮೈಯ ತಡವಿ ಸ್ನೇಹದಿಂದಲಿ 
ಮೇಲು ನೈವೇದ್ಯವನ್ನು ಇತ್ತು ಭಜಿಸುವೆ ||ಅಪ||

ಭಕುತಿ ಕಡಲೆ ಜ್ಞಾನ ವೈರಾಗ್ಯ ಬೆಲ್ಲದ |
ಮುಕುತಿ ಆನಂದ ಸುಖದ ಕ್ಷೀರ ಲಡ್ಡಿಗೆ ||
ಯುಕುತಿ ಧ್ಯಾನ ಕೊಟ್ಟು ನೀನು ಎಲ್ಲ ಮಾತಲಿ |
ಶಕುತಿ ಸಂತೋಷ ಮಹಿಮೆ ತೋರ ಬಂದೆಯ ||೧||

ಹೆತ್ತ ತುಪ್ಪ ಸಕ್ಕರೆಯ ಮಾಡಿ ಮುದ್ದೆಯ |
ತುತ್ತು ಮಾಡಿಕೊಡಲು ಅದನು ಮೆಲುತ ಮೆಚ್ಚುತ ||
ಅತ್ಯಂತ ಸಂತೋಷ ನೀನು ಆಟ ತೋರುತ |
ಭೃತ್ಯ ವಾದಿರಾಜ ಮುನಿಯ ಸಲಹ ಬಂದೆಯಾ ||೨||

ಫಲವ ಕೊಟ್ಟು ರಕ್ಷಿಸಿದಿ ವಾಜಿ ವದನನೆ |
ನಿಲುವೋ ಜ್ಞಾನ ಭಕ್ತಿಯನ್ನು ನೀಡ ಬಂದೆಯ ||
ಸುಲಭ ಸುಮುಖ ಸುಪ್ರಸನ್ನ ಹಯವದನನೆ |
ಚೆಲುವ ಚಿನ್ಮಯ ಮೂರ್ತಿ ನಮ್ಮ ಸಲಹ ಬಂದೆಯಾ ||೩||

Ava kaDeyiMda baMde vAjivadanane |
BAvisuva vAdirAja muniya kANuta ||pa||
 
nEvarisi maiya taDavi snEhadiMdali 
mElu naivEdyavannu ittu Bajisuve ||apa||
 
Bakuti kaDale j~jAna vairAgya bellada |
mukuti AnaMda suKada kShIra laDDige ||
yukuti dhyAna koTTu nInu ella mAtali |
Sakuti saMtOSha mahime tOra baMdeya ||1||
 
hetta tuppa sakkareya mADi muddeya |
tuttu mADikoDalu adanu meluta meccuta ||
atyaMta saMtOSha nInu ATa tOruta |
BRutya vAdirAja muniya salaha baMdeyA ||2||
 
Palava koTTu rakShisidi vAji vadanane |
niluvO j~jAna Baktiyannu nIDa baMdeya ||
sulaBa sumuKa suprasanna hayavadanane |
celuva cinmaya mUrti namma salaha baMdeyA ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru