VIDEO
ಶ್ರೀ ಮದಾನಂದತೀರ್ಥ ವಿರಚಿತ ದ್ವಾದಶ ಸ್ತೋತ್ರದ ಕನ್ನಡ ಅನುವಾದ
Kannada translation of Dwadasha Stotra by Srimad Ananda Teerthacharya
ಕನ್ನಡಕ್ಕೆ : ಶ್ರೀ ಬನ್ನಂಜೆ ಗೋವಿಂದಾಚಾರ್ಯ
Kannada Translation : Sri Bannanje Govindacharya
ಜಗವೆ ಮಣಿವ ಹಿರಿಯ ಸುರರ ಗಡಣದಿಂದ ವಂದನ
ಹೆಗಲ ತುಂಬ ಕಂಪು ಬಳಿದ ಸೊಗದ ಗಂಧ ಚಂದನ
ಜಗದ ತಾಯ ಚಪಲವಾದ ಕಣ್ಣ ನೋಟದಾರತಿ
ನಗುತ ಮಂದರಾದ್ರಿ ಹೊತ್ತ ತುಂಬು ತೋಳ ಮೂರುತಿ
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೧ ||
ಜಗದ ಹುಟ್ಟು ಸಾವು ಎಲ್ಲ ಇವನಿಗೊಂದು ಆಟವು
ಸುಗುಣಗಳದೆ ಗಡಣವಂತೆ ಇವನ ಮೈಯ ಮಾಟವು
ಬೀಗಿದಂಥ ಕೆಟ್ಟ ಜನರ ಹುಟ್ಟು ತರಿವ ದೇವನು
ಬಾಗಿ ನಡೆದ ಹೃಷ್ಟ ಪುಷ್ಟ ಶಿಷ್ಟ ಜನರ ಕಾವನು
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೨ ||
ಹಿರಿಯ ಮಂದಿ ಬಯಸಿದಂಥ ಬಯಕೆಗಳನು ಈವನು
ಹರಿಯ ಚರಣಕ್ಕೆರಗಿ ಮುಕುತಿ ಪಡೆಯದವನು ಯಾವನು
ಪರಿಯ ಪರಿಯ ತಿಳಿವು ಕರ್ಮ ಕರುಣಿಪಾತ ಎನುವರು
ಅರಿವು ಜನರು ದೇವರಿಲ್ಲ ಉಂಟು ಎಂದು ಬಡಿವರು
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೩ ||
ವೇದವಾದ ನಿರತ ವಿಪ್ರ ವೃಂದದಿಂದ ಪೂಜಿತ
ಕಾದುವಂಥ ಕ್ಷಾತ್ರ ವೀರರಿಂದ ನೀರಾಜಿತ
ಓದಿಗೆಟುಕದಂಥ ವಿಮಲ ಹಿರಿಯ ತಿಳಿವಿನಾಗರ
ಮೋದ ರೂಪ ಮುಪ್ಪು ಬರದ ಪರಮ ತೇಜ ಸಾಗರ
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೪ ||
ಎಲ್ಲು ಕೂಡ ಯಾರು ಕೂಡ ಇವನ ಮೀರಲಾರರು
ಎಲ್ಲ ಹಿರಿಯರಿವನ ಹಿರಿಮೆ ನಂಬಿ ನಡೆವ ದಾಸರು
ಎಲ್ಲಕ್ಕಿಂತ ಹಿರಿಯನೊಬ್ಬ ಸ್ವಾಮಿ ಸತ್ಯ ಕಾಮನು
ಬಲ್ಲ ಜನರು ವೇದದಿಂದ ಹೊಗಳುತಿರುವ ಭೂಮನು
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೫ ||
ಬಿಂಬ ರೂಪ ಕಂಡ ಜನರ ದುಃಖ ಮೂಲ ತರಿವನು
ಕಾಂಬುದೆಂದು ನಿನ್ನನೆಂದು ಬ್ರಹ್ಮರುದ್ರವಿನುತನು
ನಂಬದವರ ಬಳಿಗೆ ಬಾರ ಎಲ್ಲರಂತರ್ಯಾಮಿಯು
ತುಂಬಿದೊಲುಮೆಯಿಂದ ಸಾಧು ಜನರಿಗೊಲಿದ ಸ್ವಾಮಿಯು
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೬ ||
ಜಗದ ತಂದೆ ಬ್ರಹ್ಮ ಕೂಡ ಇವನ ಮೊದಲ ಕಂದನು
ಸೊಗದ ಎಲ್ಲ ಗುಣಗಳಿಂದ ರೂಪದಾಳಿ ಬಂದನು
ಮಗನ ಮೊದಲ ಮಗನು ಇವಗೆ ಹಿರಿಯ ದೈವ ಗಿರೀಶನು
ಸುಗುಣರಿವನ ಭಜಿಪರೀತ ಸುರರಿಗೆಲ್ಲಾ ಈಶನು
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೭ ||
ಬಿಡದೆ ಗುಣಗಳಿಂದ ಪೂರ್ಣ ಎಲ್ಲ ಕಾಲದಲ್ಲಿಯೂ
ಎಡೆಯೆ ಇಲ್ಲ ದೋಷಗಳಿಗೆ ಇವನೊಳೆಲ್ಲೆಲ್ಲಿಯೂ
ನುಡಿಯುತಿಹುದು ವೇದವಾಣಿ ನಿತ್ಯನಾದ ದೇವನ
ಅಡಿಗೆ ಎರಗುತಿಹುದು ಬ್ರಹ್ಮ ಶಂಕರಾದಿ ಸುರಗಣ
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೮ ||
ಮುನ್ನ ಬ್ರಹ್ಮ ರುದ್ರ ಇಂಥ ಎಲ್ಲ ಜಗದಧಾರಕ
ತನ್ನ ನೆನೆವ ಎಲ್ಲ ಜನರ ದುಃಖ ರಾಶಿ ತಾರಕ
ಅನ್ಯರಿಂದ ಮಾಡಲಾಗದಂಥದ್ದನ್ನು ಮಾಡುವ
ಸಂಜ್ಞೆಯಿಂದಲ್ಲೆಲ್ಲ ಜಗದ ಕಜ್ಜವನ್ನು ನಡೆಸುವ
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೯ ||
ಅಂತರಂಗ ಶುದ್ಧಿ ಪಡೆದ ಇವನ ಭಕ್ತವೃಂದವು
ಅಂತು ನೆನೆದರೂನು ಸಾಕು ಇಲ್ಲ ಭವದ ಬಂಧವು
ಚಿಂತೆಯೇಕೆ ಸುರರಿಗೆಲ್ಲಾ ಮುಕುತಿಯೀವ ಸುರತರು
ಸಂತ ಜನರು ಇವನ ಒಲಿಸಲೆಂದೇ ಕರ್ಮ ನಿರತರು
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೧೦ ||
ಅವನ ಚರಣಕ್ಕೊಪ್ಪಿಸಿರುವ ಕರ್ಮವಪ್ಪುದಕ್ಷಯ
ಅವನ ನಾಮ ಜಪಿಸೆ ದುಃಖ ನಾಶವಹುದು ನಿಶ್ಚಯ
ಸಾವು ಇರದ ಮುಪ್ಪು ಇರದ ನಿತ್ಯ ಮುಕ್ತ ಚಿನ್ಮಯ
ಭುವನಕೆಲ್ಲ ಸುರರಿಗೆಲ್ಲ ಇವನ ಒಡಲೇ ಆಶ್ರಯ
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೧೧ ||
ಮುದದಿ ಮೋದ ರೂಪಿ ದೇವನನ್ನು ಮನದಿ ನೆನೆಯುತಾ
ನಂದಿತೀರ್ಥರೆಂಬ ಹೆಸರು ಹೊತ್ತ ನಾವು ಸಂತತ
ಮಂದಹಾಸ ಬೆರೆತ ಕಣ್ಣ ನೋಟದಿಂದ ಸಲಹುವ
ತಂದೆ ಎಲ್ಲ ದೇವಗಣಕೆ ಸೊಗದ ಪದವನೀಯುವ
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ
ಎಲ್ಲ ದೇವತೆಗಳಿಗು ಮಿಗಿಲಾದ ಭೂಷಣಂ
ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೧೨ ||
jagave maNiva hiriya surara gaDaNadiMda vaMdana
hegala tuMba kaMpu baLida sogada gaMdha caMdana
jagada taaya capalavaada kaNNa nOTadaarati
naguta maMdaraadri hotta tuMbu tOLa mUruti
olisuvevu olisuvevu shrI vaasudEvanaM || 1 ||
jagada huTTu saavu ella ivanigoMdu ATavu
suguNagaLade gaDaNavaMte ivana maiya maaTavu
bIgidaMtha keTTa janara huTTu tariva dEvanu
baagi naDeda hRuShTa puShTa shiShTa janara kaavanu
olisuvevu olisuvevu shrI vaasudEvanaM || 2 ||
hiriya maMdi bayasidaMtha bayakegaLanu Ivanu
hariya caraNakkeragi mukuti paDeyadavanu yaavanu
pariya pariya tiLivu karma karuNipaata enuvaru
arivu janaru dEvarilla uMTu eMdu baDivaru
olisuvevu olisuvevu shrI vaasudEvanaM || 3 ||
vEdavaada nirata vipra vRuMdadiMda pUjita
kaaduvaMtha kShaatra vIrariMda nIraajita
OdigeTukadaMtha vimala hiriya tiLivinaagara
mOda rUpa muppu barada parama tEja saagara
olisuvevu olisuvevu shrI vaasudEvanaM || 4 ||
ellu kUDa yaaru kUDa ivana mIralaararu
ella hiriyarivana hirime naMbi naDeva daasaru
ellakkiMta hiriyanobba svaami satya kaamanu
balla janaru vEdadiMda hogaLutiruva bhUmanu
olisuvevu olisuvevu shrI vaasudEvanaM || 5 ||
biMba rUpa kaMDa janara duHKa mUla tarivanu
kaaMbudeMdu ninnaneMdu brahmarudravinutanu
naMbadavara baLige baara ellaraMtaryaamiyu
tuMbidolumeyiMda saadhu janarigolida svaamiyu
olisuvevu olisuvevu shrI vaasudEvanaM || 6 ||
jagada taMde brahma kUDa ivana modala kaMdanu
sogada ella guNagaLiMda rUpadaaLi baMdanu
magana modala maganu ivage hiriya daiva girIshanu
suguNarivana bhajiparIta surarigellaa Ishanu
olisuvevu olisuvevu shrI vaasudEvanaM || 7 ||
biDade guNagaLiMda pUrNa ella kaaladalliyU
eDeye illa dOShagaLige ivanoLellelliyU
nuDiyutihudu vEdavaaNi nityanaada dEvana
aDige eragutihudu brahma shaMkaraadi suragaNa
olisuvevu olisuvevu shrI vaasudEvanaM || 8 ||
munna brahma rudra iMtha ella jagadadhaaraka
tanna neneva ella janara duHKa raashi taaraka
anyariMda maaDalaagadaMthaddannu maaDuva
saMj~jeyiMdallella jagada kajjavannu naDesuva
olisuvevu olisuvevu shrI vaasudEvanaM || 9 ||
aMtaraMga shuddhi paDeda ivana bhaktavRuMdavu
aMtu nenedarUnu saaku illa bhavada baMdhavu
ciMteyEke surarigellaa mukutiyIva surataru
saMta janaru ivana olisaleMdE karma nirataru
olisuvevu olisuvevu shrI vaasudEvanaM || 10 ||
avana caraNakkoppisiruva karmavappudakShaya
avana naama japise duHKa naashavahudu nishcaya
saavu irada muppu irada nitya mukta cinmaya
bhuvanakella surarigella ivana oDalE Ashraya
olisuvevu olisuvevu shrI vaasudEvanaM || 11 ||
mudadi mOda rUpi dEvanannu manadi neneyutaa
naMditIrthareMba hesaru hotta naavu saMtata
maMdahaasa bereta kaNNa nOTadiMda salahuva
taMde ella dEvagaNake sogada padavanIyuva
olisuvevu olisuvevu shrI vaasudEvanaM
ella dEvategaLigu migilaada bhUShaNaM
olisuvevu olisuvevu shrI vaasudEvanaM || 12 ||